ETV Bharat / entertainment

'ಮನಸ್ಸಿನ ಒಳಗೊಂದು, ಹೊರಗೊಂದು ಸಾಧ್ಯವಿಲ್ಲ; ದರ್ಶನ್ ಬಳಿ ಕೇಳಲು ಎರಡ್ಮೂರು ಪ್ರಶ್ನೆಗಳಿವೆ': ಬರ್ತ್ ಡೇ ಬಾಯ್ ಧ್ರುವ ಸರ್ಜಾ! - Dhruva Sarja birthday

35ನೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಆ್ಯಕ್ಷನ್​​ ಪ್ರಿನ್ಸ್​​ ಧ್ರುವ ಸರ್ಜಾ ಚಾಲೆಂಜಿಂಗ್​ ಸ್ಟಾರ್ ದರ್ಶನ್​ ಬಗ್ಗೆ ಮಾತನಾಡಿದ್ದಾರೆ.

Dhruva Sarja Speaks about Darshan
ದರ್ಶನ್ ಬಗ್ಗೆ ಧ್ರುವ ಸರ್ಜಾ ಮಾತು
author img

By ETV Bharat Karnataka Team

Published : Oct 6, 2023, 11:37 AM IST

Updated : Oct 6, 2023, 12:19 PM IST

ದರ್ಶನ್ ಬಗ್ಗೆ ಧ್ರುವ ಸರ್ಜಾ ಮಾತು...

ಅದ್ಧೂರಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಬಹದ್ದೂರ್ ಆಗಿ ಅಭಿಮಾನಿಗಳ ಹೃದಯ ಕದ್ದ ಸ್ಯಾಂಡಲ್​ವುಡ್​ ನಟ - ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ. ಸದ್ಯ ಮಾರ್ಟಿನ್ ಹಾಗೂ ಕೆ.ಡಿ ಚಿತ್ರದಲ್ಲಿ ಬ್ಯುಸಿಯಾಗಿರೋ ಧ್ರುವ ಸರ್ಜಾ ಅವರಿಂದು ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. 35ನೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ನಟನಿಗೆ ಕುಟುಂಬಸ್ಥರು, ಆತ್ಮೀಯರು, ಸಿನಿ ಸ್ನೇಹಿತರು, ಚಿತ್ರರಂಗದವರೂ ಸೇರಿದಂತೆ ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ.

ಧ್ರುವ ಸರ್ಜಾ ಬರ್ತ್ ಡೇ ಸೆಲೆಬ್ರೇಶನ್​: ಕೆಲ ಕಾರಣಗಳ ಹಿನ್ನೆಲೆ, ಕಳೆದ ಮೂರು ವರ್ಷಗಳಿಂದ ನಟ ಧ್ರುವ ಸರ್ಜಾ ಅಭಿಮಾನಿಗಳ ಜೊತೆ ಹುಟ್ಟು ಹಬ್ಬ ಆಚರಿಸಿಕೊಂಡಿರಲಿಲ್ಲ. 35ನೇ ವಸಂತಕ್ಕೆ ಕಾಲಿಟ್ಟಿರೋ ನಟ ನಿನ್ನೆ ರಾತ್ರಿ ಕೆ.ಆರ್ ರಸ್ತೆಯಲ್ಲಿರೋ ತಮ್ಮ ನಿವಾಸದಲ್ಲಿ ಅಭಿಮಾನಿಗಳ ಜೊತೆ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಂಡರು. ಆ್ಯಕ್ಷನ್​​ ಪ್ರಿನ್ಸ್​​ ಜನ್ಮದಿನದ ಸಲುವಾಗಿ ನಟನ ನಿವಾಸ ಮಧುವಣಗಿತ್ತಿಯಂತೆ ಸಿಂಗಾರಗೊಂಡಿತ್ತು. ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದ ತಮ್ಮ ನಿವಾಸದಲ್ಲಿ ಧ್ರುವ ನಿನ್ನೆ ರಾತ್ರಿ 12ಗಂಟೆಗೆ ಅಭಿಮಾನಿಗಳ ಜೊತೆ ಬರ್ತ್ ಡೇ ಸೆಲೆಬ್ರೇಶನ್ ಮಾಡಿಕೊಂಡಿದ್ದಾರೆ.

ಅಭಿಮಾನಿಗಳ ಜೊತೆ ರಾಜಮಾರ್ತಾಂಡ ವೀಕ್ಷಣೆ: ಇಂದು ಅಣ್ಣ ಚಿರು ಅಭಿನಯದ ರಾಜಮಾರ್ತಾಂಡ ಸಿನಿಮಾ ಬಿಡುಗಡೆ ಆಗಿದೆ. ಈ ಹಿನ್ನೆಲೆಯಲ್ಲಿ ದೂರದೂರಿನಿಂದ ಬರುವ ಅಭಿಮಾನಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ರಕ್ತದಾನ ಶಿಬಿರ ಆಯೋಜಿಸಲಾಗಿದೆ. ರೇಷನ್ ಕಿಟ್, ನೋಟ್ ಬುಕ್ ವಿತರಣೆ ಮಾಡಲಿದ್ದಾರೆ‌. ಜೊತೆಗೆ ಧ್ರುವ ಸರ್ಜಾ ಅಭಿಮಾನಿಗಳ ಜೊತೆ ರಾಜಮಾರ್ತಾಂಡ ಸಿನಿಮಾ ವೀಕ್ಷಿಸಲಿದ್ದಾರೆ.

ಇದನ್ನೂ ಓದಿ: ವಿಡಿಯೋ: ರಸ್ತೆ ಬದಿ ಹೃದಯಾಘಾತಕ್ಕೊಳಗಾದ ಅಪರಿಚಿತ: ಎದೆ ಒತ್ತಿ ಜೀವ ಉಳಿಸಿದ ನಟ ಗುರ್ಮೀತ್ ಚೌಧರಿ!

ದರ್ಶನ್ ಜೊತೆ ಮನಸ್ತಾಪ, ಮೌನ ಮುರಿದ ಧ್ರುವ: ಕಾವೇರಿ ಹೋರಾಟ - ಕರ್ನಾಟಕ ಬಂದ್ ದಿನದಂದು ಚಾಲೆಂಜಿಂಗ್​​ ಸ್ಟಾರ್ ದರ್ಶನ್ ಜೊತೆ ಮಾತನಾಡದ ವಿಚಾರಕ್ಕೆ‌ ಪ್ರತಿಕ್ರಿಯಿಸಿದ ನಟ ಧ್ರುವ ಸರ್ಜಾ, ದರ್ಶನ್ ಜೊತೆಗಿನ ಮನಸ್ತಾಪ ಒಪ್ಪಿಕೊಂಡರು. ಮನಸ್ಸಿನ ಒಳಗೊಂದು, ಹೊರಗೊಂದು ಇರಲು ಆಗಲ್ಲ. ದರ್ಶನ್ ಅವರಲ್ಲಿ ಕೇಳಲು ನನ್ನ ಬಳಿ ಎರಡು ಪ್ರಶ್ನೆಗಳಿವೆ. ಆ ಪ್ರಶ್ನೆಗಳನ್ನು ವೈಯಕ್ತಿಕವಾಗಿ ನಾನು ದರ್ಶನ್ ಅವರ ಬಳಿ ಕೇಳಿ ಸ್ಪಷ್ಟನೆ ತೆಗೆದುಕೊಳ್ಳುತ್ತೇನೆ. ಮನಸ್ತಾಪ ಏನೇ ಇರಲಿ, ದರ್ಶನ್ ಅವರು ನಮ್ಮ ಸೀನಿಯರ್. ಅವರಿಗೆ ನಾವು ಗೌರವ ಕೊಟ್ಟೆ ಕೊಡುತ್ತೇವೆ. ನಮ್ಮ ಚಿತ್ರಕ್ಕೆ ಅವರು ಸಪೋರ್ಟ್ ಮಾಡಿದ್ದಾರೆ. ಆದರೆ ನನ್ನ ಹೆಸರಲ್ಲಿ ಕೆಲವರು ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಏನೇನೋ ಪೋಸ್ಟ್ ಹಾಕುತ್ತಿದ್ದಾರೆ. ಅವರಿಗೆ ನಾನು ಹೇಳುವುದು ಇಷ್ಟೇ, ಆ ರೀತಿಯ ಕೆಲಸ ಮಾಡಬೇಡಿ. ಒಂದು ವೇಳೆ ಮಾಡೇ ಮಾಡುತ್ತೇನೆ ಅಂದ್ರೆ ದಯವಿಟ್ಟು ತಗಲಾಕೋಬೇಡಿ ಎಂದು ಕೆಲ ಕಿಡಿಗೇಡಿಗಳಿಗೆ ಎಚ್ಚರಿಕೆಯನ್ನೂ ಕೊಟ್ಟರು.

ಇದನ್ನೂ ಓದಿ: ಧೋನಿಯನ್ನು ಬಿಗಿದಪ್ಪಿ ಮುತ್ತಿಕ್ಕಿದ ರಣ್​ವೀರ್​​; ಕ್ಯಾಪ್ಟನ್‌ ಕೂಲ್‌ ಜೊತೆ ರಾಮ್ ​​ಚರಣ್

Last Updated : Oct 6, 2023, 12:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.