ETV Bharat / entertainment

ಹೊಂಬಾಳೆ ಫಿಲ್ಮ್ಸ್​ನಿಂದ ಹೊಸ ಸಿನಿಮಾ: ಪವನ್ - ಫಹಾದ್​ ಕಾಂಬಿನೇಶನ್​​ನಲ್ಲಿ ಬರಲಿದೆ 'ಧೂಮಂ' - Dhoomam shooting

ನಿರ್ದೇಶಕ ಪವನ್​ ಕುಮಾರ್​ ಮತ್ತು ಮಲಯಾಳಂ ನಟ ಫಹಾದ್​ ಫಾಸಿಲ್​ ಕಾಂಬೋದ ಹೊಸ ಚಲನಚಿತ್ರ 'ಧೂಮಂ'ಗೆ ಹೊಂಬಾಳೆ ಫಿಲ್ಮ್ಸ್​ ಬಂಡವಾಳ ಹೂಡುತ್ತಿದೆ.

Dhoomam movie from Homabale films
ಹೊಂಬಾಳೆ ಫಿಲ್ಮ್ಸ್​ನಿಂದ ಧೂಮಂ ಸಿನಿಮಾ
author img

By

Published : Sep 30, 2022, 12:06 PM IST

ಕೆಜಿಎಫ್, ಕೆಜಿಎಫ್​ 2, ರಾಜಕುಮಾರದಂತಹ ಸೂಪರ್​ ಹಿಟ್ ಸಿನಿಮಾಗಳು ಸೇರಿ ಸದ್ಯ ಸದ್ದು ಮಾಡುತ್ತಿರುವ ಕಾಂತಾರದಂತಹ ಯಶಸ್ವಿ ಸಿನಿಮಾಗಳನ್ನು ನೀಡಿರುವ ಸಿನಿಮಾ ಪ್ರೊಡಕ್ಷನ್​ ಹೌಸ್ ಹೊಂಬಾಳೆ ಫಿಲ್ಮ್ಸ್​ ನಿಂದ ಹೊಸ ಘೋಷಣೆ ಮಾಡಲಾಗಿದೆ. ನಿರ್ದೇಶಕ ಪವನ್​ ಕುಮಾರ್​ ಮತ್ತು ಮಲಯಾಳಂ ನಟ ಫಹಾದ್​ ಫಾಸಿಲ್​ ಕಾಂಬೋದ ಹೊಸ ಚಲನಚಿತ್ರಕ್ಕೆ ಹೊಂಬಾಳೆ ಫಿಲ್ಮ್ಸ್​ ಬಂಡವಾಳ ಹೂಡುತ್ತಿದೆ. ಈ ಚಿತ್ರಕ್ಕೆ ಧೂಮಂ (Dhoomam movie) ಎಂದು ಶೀರ್ಷಿಕೆ ಇಡಲಾಗಿದ್ದು, ಶೀರ್ಷಿಕೆ ವಿನ್ಯಾಸದ ಪೋಸ್ಟರ್​ ಬಿಡುಗಡೆ ಮಾಡುವ ಮೂಲಕ ಸಿನಿಪ್ರಿಯರಲ್ಲಿ ಕೌತುಕ ಮೂಡಿಸಲಾಗಿದೆ.

ಈಗಾಗಲೇ ಲೂಸಿಯಾ, ಯು - ಟರ್ನ್ ರೀತಿಯ ಸಿನಿಮಾಗಳ ಮೂಲಕ ನಿರ್ದೇಶಕ ಪವನ್ ಕುಮಾರ್ ತಮ್ಮ ಸಾಮರ್ಥ್ಯ ಏನು ಎಂಬುದನ್ನು ಸಾಬೀತು ಪಡಿಸಿದ್ದಾರೆ. ಇನ್ನು ಫಹಾದ್​​ ಫಾಸಿಲ್ ಬಹುಭಾಷಾ ಪ್ರಸಿದ್ಧ ನಟ. ಈ ಪ್ರತಿಭಾವಂತರಿಬ್ಬರು ಕೈ ಜೋಡಿಸಿರುವುದು ಈಗ ಸಿನಿಮಾ ರಂಗ ಮತ್ತು ಪ್ರೇಕ್ಷಕರಲ್ಲಿ ನಿರೀಕ್ಷೆ ಹುಟ್ಟುಹಾಕಿದೆ.

ಅಕ್ಟೋಬರ್​ 9ರಿಂದ ಧೂಮಂ ಶೂಟಿಂಗ್​ ಶುರುವಾಗಲಿದೆ. ಫಹಾದ್​ ಫಾಸಿಲ್​ಗೆ ನಾಯಕಿಯಾಗಿ ಅಪರ್ಣಾ ಬಾಲಮುರಳಿ ಬಣ್ಣ ಹಚ್ಚಲಿದ್ದಾರೆ. ಸೂರರೈ ಪೋಟ್ರು ಸಿನಿಮಾದಲ್ಲಿ ಅಭಿನಯಿಸಿ ಜನಮನ ಗೆದ್ದಿರುವ ಅವರಿಗೆ ಈಗ ಫಹಾದ್​ ಜತೆ ನಟಿಸುವ ಚಾನ್ಸ್​ ಸಿಕ್ಕಿದೆ. ಮಲಯಾಳಂ, ಕನ್ನಡ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ಧೂಮಂ ಚಿತ್ರ ಮೂಡಿಬರಲಿದೆ.

ಇದನ್ನೂ ಓದಿ: ಕಾಂತಾರ ನೋಡಿ ಮೆಚ್ಚಿದ ರಮ್ಯಾ, ರಿಷಬ್ ಅಪ್ಪಿಕೊಂಡು ಭಾವುಕರಾದ ರಕ್ಷಿತ್​

ಇಂದು ಕಾಂತಾರ ಚಿತ್ರ ಬಿಡುಗಡೆಯಾಗಿ ಭರ್ಜರಿ ಮೆಚ್ಚುಗೆ ಗಳಿಸಿಕೊಂಡಿದೆ. ಇದೇ ಬ್ಯಾನರ್​ನಿಂದ ಸಲಾರ್​, ಬಘೀರ, ರಾಘವೇಂದ್ರ ಸ್ಟೋರ್ಸ್​ ಮುಂತಾದ ಸಿನಿಮಾಗಳು ಮೂಡಿಬರುತ್ತಿವೆ. ಅದರ ಜೊತೆಗೆ ಈಗ ಹೊಸ ಸಿನಿಮಾ ಧೂಮಂ ಸೇಪರ್ಡೆ ಆಗಿದೆ.​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.