ETV Bharat / entertainment

'ಬೆಂಕಿಯಿಲ್ಲದೆ ಹೊಗೆ ಇಲ್ಲ': ಹೊಂಬಾಳೆ ನಿರ್ಮಾಣದ 'ಧೂಮಂ' ಫಸ್ಟ್​ ಲುಕ್​​ ಔಟ್​ - ಈಟಿವಿ ಭಾರತ ಕನ್ನಡ

ಹೊಂಬಾಳೆ ಫಿಲ್ಮ್ಸ್​ ನಿರ್ಮಾಣದ ಪ್ಯಾನ್​ ಇಂಡಿಯಾ ಸಿನಿಮಾ 'ಧೂಮಂ' ಫಸ್ಟ್​ ಲುಕ್​ ಬಿಡುಗಡೆಯಾಗಿದೆ.

Dhoomam
'ಧೂಮಂ' ಫಸ್ಟ್​ ಲುಕ್​​ ಔಟ್​
author img

By

Published : Apr 17, 2023, 12:53 PM IST

ಕೆಜಿಎಫ್​, ಕೆಜಿಎಫ್​ 2, ಕಾಂತಾರದಂತಹ ಸೂಪರ್​ ಹಿಟ್​ ಯಶಸ್ವಿ ಸಿನಿಮಾಗಳನ್ನು ನೀಡುವ ಮೂಲಕ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಹೊಂಬಾಳೆ ಫಿಲ್ಮ್ಸ್​​ ಅಡಿ 12ನೇ ಪ್ಯಾನ್​ ಇಂಡಿಯಾ ಸಿನಿಮಾ ತಯಾರಾಗುತ್ತಿದೆ. ನಿರ್ಮಾಪಕ ವಿಜಯ್​ ಕಿರಂಗದೂರು ಅವರು ಮಲಯಾಳಂ ನಟ ಫಹಾದ್​ ಫಾಸಿಲ್​ ಜೊತೆ ಧೂಮಂ ಸಿನಿಮಾ ಮಾಡುತ್ತಿರುವುದು ಗೊತ್ತಿರುವ ವಿಚಾರ. ಅದರಂತೆ ಇದೀಗ 'ಧೂಮಂ' ಚಿತ್ರದ ಫಸ್ಟ್​ ಲುಕ್​ ಬಿಡುಗಡೆಯಾಗಿದೆ.

ಹೊಂಬಾಳೆ ಫಿಲ್ಮ್ಸ್​ ಟ್ವಿಟರ್​ನಲ್ಲಿ ಫಸ್ಟ್​ ಲುಕ್​ ಪೋಸ್ಟರ್​ ಅನ್ನು ಶೇರ್​ ಮಾಡಿಕೊಂಡಿದೆ. 'ಬೆಂಕಿಯಿಲ್ಲದೇ ಹೊಗೆ ಇಲ್ಲ, ಮೊದಲ ಕಿಡಿ ಇಲ್ಲಿದೆ' ಎಂಬ ಕ್ಯಾಪ್ಶನ್​ ಬರೆದುಕೊಂಡಿದೆ. ಪೋಸ್ಟರ್​ ಅನ್ನು ವಿಭಿನ್ನವಾಗಿ ಡಿಸೈನ್​ ಮಾಡಲಾಗಿದೆ. ಫಸ್ಟ್​ ಲುಕ್​ ಕುತೂಹಲಭರಿತವಾಗಿದ್ದು, ಸಿನಿಮಾ ಬಗೆಗಿನ ಪ್ರೇಕ್ಷಕರ​ ನಿರೀಕ್ಷೆ ಹೆಚ್ಚಾಗಿದೆ. ಪೋಸ್ಟರ್​​ ನೋಡಿದ ನೆಟ್ಟಿಗರು ಎಮೋಜಿನೊಂದಿಗೆ ಬಗೆ ಬಗೆಯ ಬರಹಗಳಿಂದ ಕಮೆಂಟ್​ ವಿಭಾಗವನ್ನು ತುಂಬುತ್ತಿದ್ದಾರೆ. ಚಿತ್ರತಂಡಕ್ಕೆ ಆಲ್​ ದಿ ಬೆಸ್ಟ್​ ತಿಳಿಸುತ್ತಿದ್ದಾರೆ.

ಈಗಾಗಲೇ ಲೂಸಿಯಾ, ಯೂ-ಟರ್ನ್​ ರೀತಿಯ ಸಿನಿಮಾ ಮೂಲಕ ನಿರ್ದೇಶಕ ಪವನ್​ ಕುಮಾರ್​ ತಮ್ಮ ಸಾಮರ್ಥ್ಯ ಏನು ಎಂಬುದನ್ನು ಸಾಬೀತು ಪಡಿಸಿದ್ದಾರೆ. ಇನ್ನು ಫಹಾದ್​ ಫಾಸಿಲ್​ ಬಹುಭಾಷಾ ಪ್ರಸಿದ್ಧ ನಟ. ಈ ಪ್ರತಿಭಾವಂತರಿಬ್ಬರು ಕೈ ಜೋಡಿಸಿರುವುದು ಈಗ ಸಿನಿಮಾ ರಂಗ ಮತ್ತು ಪ್ರೇಕ್ಷಕರಲ್ಲಿ ನಿರೀಕ್ಷೆ ಹುಟ್ಟು ಹಾಕಿದೆ. ಚಿತ್ರಕ್ಕೆ ನಾಯಕಿಯಾಗಿ ರಾಷ್ಟ್ರ ಪ್ರಶಸ್ತಿ ವಿಜೇತೆ ನಟಿ ಅಪರ್ಣಾ ಬಾಲಮುರಳಿ ನಟಿಸುತ್ತಿದ್ದಾರೆ. ಜೊತೆಗೆ ಅಚ್ಯುತ್​ ಕುಮಾರ್​, ಜಾಯ್​ ಮ್ಯಾಥ್ಯೂ, ದೇವ್​ ಮೋಹನ್​, ಅನು ಮೋಹನ್​ ಮುಂತಾದವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸಿನಿಮಾಗೆ ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ ಮತ್ತು ಪ್ರೀತಾ ಜಯರಾಮನ್​ ಅವರ ಛಾಯಾಗ್ರಹಣವಿದೆ. ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ಅನೀಸ್ ನಾಡೋಡಿ (ಪ್ರೊಡಕ್ಷನ್​ ಡಿಸೈನ್​) ಮತ್ತು ಪೂರ್ಣಿಮಾ ರಾಮಸ್ವಾಮಿ (ವಸ್ತ್ರ ವಿನ್ಯಾಸ)ವಿರಲಿದೆ. ಧೂಮಂ ಪ್ಯಾನ್​ ಇಂಡಿಯಾ ಚಿತ್ರವಾಗಿದ್ದು, ಮಲಯಾಳಂ, ಕನ್ನಡ, ತಮಿಳು, ತೆಲುಗು ಬಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ.

ಇದನ್ನೂ ಓದಿ: ಭಾರತದಾದ್ಯಂತ ಪೊನ್ನಿಯಿನ್ ಸೆಲ್ವನ್ 2 ಪ್ರಚಾರ: ಪ್ರೈವೆಟ್ ಜೆಟ್​ನಲ್ಲಿ ಹೊರಟ ಚಿತ್ರತಂಡ

ಬೇರೆ ಭಾಷೆಗಳ ಸಿನಿಮಾ ಜವಾಬ್ದಾರಿ ಹೊತ್ತ ಹೊಂಬಾಳೆ: ಕೆಜಿಎಫ್​, ಕಾಂತಾರದಂತಹ ಹಿಟ್​ ಸಿನಿಮಾಗಳನ್ನು ನೀಡಿದ ಕೀರ್ತಿ ಹೊಂಬಾಳೆ ಫಿಲ್ಮ್ಸ್​ಗೆ ಸಲ್ಲುತ್ತದೆ. ಕನ್ನಡ ಮಾತ್ರವಲ್ಲದೇ ಬಹುಭಾಷೆಗಳ ಸಿನಿಮಾವನ್ನು ವಿಜಯ್​ ಕಿರಗಂದೂರ್ ನಿರ್ಮಾಣ ಮಾಡುತ್ತಿದ್ದಾರೆ. ಬಹುನಿರೀಕ್ಷಿತ ಕಾಂತಾರ 2 ಪ್ರಿ ಪ್ರೊಡಕ್ಷನ್​ ಹಂತದಲ್ಲಿದೆ. ನವರಸ ನಾಯಕ ಜಗ್ಗೇಶ್​ ಅಭಿನಯದ ರಾಘವೇಂದ್ರ ಸ್ಟೋರ್​ ಸಿನಿಮಾ ಶೀಘ್ರದಲ್ಲೇ ತೆರೆ ಕಾಣಲಿದೆ. ಕೆಜಿಎಫ್​ ಖ್ಯಾತಿಯ ಪ್ರಶಾಂತ್​ ನೀಲ್​ ನಿರ್ದೇಶನದಲ್ಲಿ 'ಸಲಾರ್'​ ಸಿನಿಮಾ ನಿರ್ಮಾಣ ಹಂತದಲ್ಲಿದೆ.

ಡಾ. ರಾಜ್​ಕುಮಾರ್​ ಕುಟುಂಬದ ಕುಡಿ ಯುವ ರಾಜ್​ಕುಮಾರ್​ ಅವರ ಮೊದಲ ಚಿತ್ರ 'ಯುವ' ನಿರ್ಮಾಣವಾಗುತ್ತಿರುವುದು ಇದೇ ಹೊಂಬಾಳೆ ಫಿಲ್ಮ್ಸ್​ ಸಂಸ್ಥೆಯಿಂದಲೇ. ಅದಲ್ಲದೇ ಉಗ್ರಂ ಖ್ಯಾತಿಯ ಶ್ರೀ ಮುರಳಿ ನಟನೆಯ 'ಬಘೀರ', ಲೂಸಿಯಾ ಪವನ್​ ನಿರ್ದೇಶನದಲ್ಲಿ ಧೂಮಂ ಸಿದ್ಧಗೊಳ್ಳುತ್ತಿದೆ. ಚಾರ್ಲಿ ಖ್ಯಾತಿಯ ರಕ್ಷಿತ್​ ಶೆಟ್ಟಿ ಅವರ ರಿಚರ್ಡ್​ ಆ್ಯಂಟನಿಗೆ ಹೊಂಬಾಳೆ ಫಿಲ್ಮ್ಸ್​ ಬಂಡವಾಳ ಹೂಡಿದೆ. ಕೀರ್ತಿ ಸುರೇಶ್​ ಅಭಿನಯದಲ್ಲಿ ರಘು ತಾತ ಸಿನಿಮಾವನ್ನು ಘೋಷಿಸಿದೆ. ಪೃಥ್ವಿರಾಜ್​ ಸುಕುಮಾರನ್​ ಅಭಿನಯದ ಟೈಸನ್​ ಸಿನಿಮಾವು ಈ ಸಾಲಿಗೆ ಸೇರಿದೆ.

ಇದನ್ನೂ ಓದಿ: 'ನಾನಿ 30' ಫಸ್ಟ್​ ಪೋಸ್ಟರ್​ ರಿಲೀಸ್​: ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.