ETV Bharat / entertainment

'ನಾಯಕ್​ ನಹೀ ಖಳ್​ ನಾಯಕ್​'..'ತಲ್ವಾರ್​' ಹಿಡಿದ 'ಕ್ಯಾಟ್ಬರೀಸ್' ಧರ್ಮ ಕೀರ್ತಿರಾಜ್​ - ಈಟಿವಿ ಭಾರತ ಕನ್ನಡ

Talvaar Movie U/A certificate: ಧರ್ಮ ಕೀರ್ತಿರಾಜ್ ನಟನೆಯ 'ತಲ್ವಾರ್'​ ಚಿತ್ರಕ್ಕೆ ಸೆನ್ಸಾರ್​ ಮಂಡಳಿ ಯು/ಎ ಪ್ರಮಾಣ ಪತ್ರ ನೀಡಿದೆ.

dharma keerthiraj starrer talvaar movie
ತಲ್ವಾರ್
author img

By

Published : Aug 21, 2023, 12:27 PM IST

ಸ್ಯಾಂಡಲ್​ವುಡ್​ನಲ್ಲಿ ವಿಭಿನ್ನ ಕಥೆಯ ಚಿತ್ರಗಳನ್ನು ಮಾಡುತ್ತಾ ತನ್ನದೇ ಬೇಡಿಕೆ ಹೊಂದಿರುವ ನಟ ಧರ್ಮ ಕೀರ್ತಿರಾಜ್​. ಸದ್ಯ 'ತಲ್ವಾರ್'​ ಚಿತ್ರದ ಜಪ ಮಾಡುತ್ತಿರುವ ಹ್ಯಾಂಡ್ಸಮ್​ ಹಂಕ್​ಗೆ ಸೆನ್ಸಾರ್​ ಮಂಡಳಿ ಗುಡ್​ ನ್ಯೂಸ್​ ಕೊಟ್ಟಿದೆ. ಯಾವುದೇ ಕಟ್ಸ್​ ಮತ್ತು ಮ್ಯೂಟ್ಸ್​ ಇಲ್ಲದೇ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ನೀಡಿದೆ.

'ತಲ್ವಾರ್​' ಅನ್ನೋದು ವಿಭಿನ್ನ ರೌಡಿಸಂ ಕಥಾಹಂದರ ಹೊಂದಿರುವ ಸಿನಿಮಾ. ಈ ಚಿತ್ರದಲ್ಲಿ 'ಕ್ಯಾಟ್ಬರೀಸ್'​ ಎಂದೇ ಫೇಮಸ್​ ಆಗಿರುವ ಧರ್ಮ ಕೀರ್ತಿರಾಜ್ ಖಳನಟನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಮೂಲಕ ಹೊಸ ಇಮೇಜ್​ ಸಿಗುತ್ತದೆ ಅನ್ನೋ ಭರವಸೆ ನಟನಿಗಿದೆ. ಚಿತ್ರದಲ್ಲಿ ಧರ್ಮ ಕೀರ್ತಿರಾಜ್​ ಜೋಡಿಯಾಗಿ ಅದಿತಿ ಅಭಿನಯಿಸಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ರಾಘವ ಮುರಳಿ ಆ್ಯಕ್ಷನ್​ ಕಟ್​ ಹೇಳಿದ್ದಾರೆ.

dharma keerthiraj
ಧರ್ಮ ಕೀರ್ತಿರಾಜ್

ಈ ಹಿಂದೆ 'ಮುಮ್ತಾಜ್'​ ಚಿತ್ರವನ್ನು ನಿರ್ದೇಶಿಸಿದ್ದ ರಾಘವ ಮುರಳಿ ಮತ್ತು ಧರ್ಮ ಕೀರ್ತಿರಾಜ್​ ಕಾಂಬಿನೇಷನ್​ನಲ್ಲಿ ಮೂಡಿ ಬರುತ್ತಿರುವ ಎರಡನೇ ಸಿನಿಮಾ ಇದಾಗಿದೆ. ಇನ್ನು ಈ ಚಿತ್ರದಲ್ಲಿ ಮಜಾ ಭಾರತ ಖ್ಯಾತಿಯ ಮಿನಿ ದರ್ಶನ್​ ಎಂದೇ ಕರೆಸಿಕೊಳ್ಳುವ ಅವಿನಾಶ್​ ಕೂಡ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಅವರು ಪ್ರವೇಶಿಸುವುದರೊಂದಿಗೆ ತಲ್ವಾರ್​ನಲ್ಲಿ ಮುಖ್ಯ ಪಾತ್ರ ನಿರ್ವಹಿಸಿದ್ದಾರೆ.

ಇದನ್ನೂ ಓದಿ: ನ್ಯೂಯಾರ್ಕ್‌ನಲ್ಲಿ 41ನೇ 'ಇಂಡಿಯಾ ಡೇ ಪರೇಡ್‌': ಗೌರವ ಅತಿಥಿಯಾಗಿ ನಟಿಯರಾದ ಸಮಂತಾ, ಜಾಕ್ವೆಲಿನ್ ಭಾಗಿ

ಈ ಚಿತ್ರದ ಮತ್ತೊಂದು ವಿಶೇಷತೆ ಏನಂದ್ರೆ ಜಯರಾಮ್​ ಕಾರ್ತಿಕ್​ (ಜೆಕೆ) ಕಲ್ಕಿಯಾಗಿ ಕಾಣಿಸಿಕೊಂಡಿದ್ದಾರೆ. ಇವರು ಮಂಗಳೂರಿನ ರೌಡಿ ಕಲ್ಕಿ ಎಂಬ ಪಾತ್ರ ನಿರ್ವಹಿಸುತ್ತಿರುವುದು ಚಿತ್ರದ ವಿಶೇಷತೆಗಳಲ್ಲೊಂದು. ಈ ಚಿತ್ರ ಟಚ್​ ಸ್ಟೋನ್​ ಪಿಕ್ಚರ್​ ಬ್ಯಾನರ್​ ಅಡಿ ನಿರ್ಮಾಣವಾಗಿದ್ದು, ಸುರ್ನಳ್ಳಿ ಜಯರಾಮ್​ ಅರ್ಪಿಸಿದ್ದಾರೆ. ಈ ಚಿತ್ರಕ್ಕೆ ಸುರೇಶ್​ ಬೈರಸಂದ್ರ ಬಂಡವಾಳ ಹೂಡಿದ್ದಾರೆ.

dharma keerthiraj
ಧರ್ಮ ಕೀರ್ತಿರಾಜ್

ಶ್ರೀನಗರ ಕಿಟ್ಟಿ ಅಭಿನಯದ ಬಹುಪರಾಕ್​ ಚಿತ್ರಕ್ಕೆ ಸಹ ನಿರ್ಮಾಪಕರಾಗಿದ್ದ ಇವರು ಈ ಚಿತ್ರವನ್ನು ತಮ್ಮ ಸ್ವಂತ ಬ್ಯಾನರ್​ ಅಡಿ ನಿರ್ಮಾಣ ಮಾಡಿದ್ದಾರೆ. ಇವರ ಛಾಯಾಗ್ರಾಹಕರು ಕೂಡ ಆಗಿರುವುದರಿಂದ ಈ ಚಿತ್ರಕ್ಕೆ ತಾವೇ ಕ್ಯಾಮರಾಮೆನ್​ ಆಗಿ ಕೆಲಸ ಮಾಡಿದ್ದಾರೆ. ಇನ್ನೂ ಚಿತ್ರಕ್ಕೆ ಕೆ.ಬಿ ಪ್ರವೀಣ್​ ಸಂಗೀತ ನೀಡಿದ್ದು, ಒಟ್ಟು ನಾಲ್ಕು ಹಾಡುಗಳಿವೆ. ಈ ಚಿತ್ರದ ಹಾಡುಗಳ ಹಕ್ಕುಗಳನ್ನು ಈಗಾಗಲೇ ಸರಿಗಮ ಆಡಿಯೋ ಕಂಪನಿ ದೊಡ್ಡ ಮೊತ್ತಕ್ಕೆ ಖರೀದಿಸಿದೆ.

dharma keerthiraj
ಧರ್ಮ ಕೀರ್ತಿರಾಜ್

ಈ ಚಿತ್ರದಲ್ಲಿ 5 ಸಾಹಸ ದೃಶ್ಯಗಳಿವೆ. ವಿನೋದ್​, ಡ್ಯಾನಿ ಮತ್ತು ಕುಂಫು ಚಂದ್ರು ಸಾಹಸ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಮತ್ತೊಂದು ವಿಶೇಷತೆ ಅಂದ್ರೆ 'ರೋಜ್ ಹಿಡಿದು ಲವ್ ಮಾಡಿದ್ರೆ ಪ್ರೀತಿಸಿದ ಇಬ್ಬರು ನೋವು ಪಡ್ತಾರೆ, ಆದರೆ ಲಾಂಗ್ ಇಡ್ಕೊಂಡು ಜೀವನ ಮಾಡಿದ್ರೆ ಆ ಲಾಂಗ್ ನಿಂದ ಅದೆಷ್ಟೋ ಫ್ಯಾಮಿಲಿ ಹಾಳಾಗ್ತವೆ' ಎಂಬ ಅದ್ಭುತ ಸಂದೇಶವನ್ನು ಈ ಚಿತ್ರದಲ್ಲಿ ಹೇಳಲಾಗಿದೆ. ಇದು ರಕ್ತ ಹರಿಸುವ ರೌಡಿಸಂ ಚಿತ್ರವಾಗಿದ್ದರೂ, ಅಲ್ಲಲ್ಲಿ ಎಮೋಷನಲ್​ ಟಚ್​ ನೀಡುತ್ತದೆ. ಅತೀ ಶೀಘ್ರದಲ್ಲಿ ತಲ್ವಾರ್​ ತೆರೆ ಕಾಣಲಿದೆ.

dharma keerthiraj
ಧರ್ಮ ಕೀರ್ತಿರಾಜ್

ಇದನ್ನೂ ಓದಿ: ಟೈಮ್ಸ್ ಸ್ಕ್ವೇರ್​ನಲ್ಲಿ ಕಿಂಗ್ ಆಫ್ ಕೋಥಾ ಟ್ರೇಲರ್​ ಪ್ರದರ್ಶನ.. ಉತ್ಸಾಹ ತಡೆಯಲು ಸಾಧ್ಯವಾಗುತ್ತಿಲ್ಲವೆಂದ ದುಲ್ಕರ್​ ಸಲ್ಮಾನ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.