ETV Bharat / entertainment

'ಬಜಾರ್' ಹುಡುಗನ ಹುಟ್ದಬ್ಬ: ಧನ್ವೀರ್ ಗೌಡ ನಟನೆಯ ಹೊಸ ಸಿನಿಮಾ ಘೋಷಣೆ - Dhanveer Gowda movies

Dhanveer Gowda's new movie: ಇಂದು ನಟ ಧನ್ವೀರ್ ಗೌಡ ಅವರ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಅವರ ಮುಂದಿನ ಸಿನಿಮಾ ಅನೌನ್ಸ್​ ಆಗಿದೆ.

Dhanveer Gowda starrer new movie
ಧನ್ವೀರ್ ಗೌಡ ನಟನೆಯ ಹೊಸ ಸಿನಿಮಾ ಅನೌನ್ಸ್
author img

By ETV Bharat Karnataka Team

Published : Sep 8, 2023, 12:27 PM IST

'ಬಜಾರ್' ಚಿತ್ರದ ಮೂಲಕ‌ ಕನ್ನಡ ಚಿತ್ರರಂಗದಲ್ಲಿ ಗಮನ ಸೆಳೆದ ನಟ ಧನ್ವೀರ್ ಗೌಡ. ಸದ್ಯ 'ವಾಮನ' ಚಿತ್ರದಲ್ಲಿ ಬ್ಯುಸಿಯಾಗಿರುವ ಇವರು ಹೆಸರಿಡದ‌ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಧನ್ವೀರ್ ನಾಯಕರಾಗಿ ನಟಿಸುತ್ತಿರುವ ನೂತನ ಚಿತ್ರ ಅವರ ಹುಟ್ಟುಹಬ್ಬದ ವಿಶೇಷ ಸಂದರ್ಭದಲ್ಲಿ ಘೋಷಣೆಯಾಗಿದೆ‌‌‌.

ಹ್ಯಾಪಿ ಬರ್ತ್​ಡೇ ಧನ್ವೀರ್ ಗೌಡ!: ನಟ ಧನ್ವೀರ್ ಗೌಡ​ ಇಂದು 28ನೇ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನಟನಿಗೆ ಕುಟುಂಬ ಸದಸ್ಯರು, ಆಪ್ತರು, ಸಿನಿ ಸ್ನೇಹಿತರು ಸೇರಿದಂತೆ ಚಿತ್ರರಂಗದವರು ಶುಭ ಕೋರುತ್ತಿದ್ದಾರೆ. ಈ ಸಂದರ್ಭದಲ್ಲಿ ನಟನ ಮುಂದಿನ ಸಿನಿಮಾ ಘೋಷಣೆ ಮಾಡಿ ಚಿತ್ರತಂಡ ವಿಶೇಷವಾಗಿ ಶುಭಕೋರಿದೆ. ಅಭಿಮಾನಿಗಳು ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ. ಚಿತ್ರದ ಶೀರ್ಷಿಕೆ ಇನ್ನಷ್ಟೇ ಸಿದ್ಧಗೊಳ್ಳಬೇಕಿದೆ.

Dhanveer Gowda starrer new movie
ಧನ್ವೀರ್ ಗೌಡ ನಟನೆಯ ಹೊಸ ಸಿನಿಮಾ ಅನೌನ್ಸ್

ಧನ್ವೀರ್ ಗೌಡರ 5ನೇ ಚಿತ್ರ: ಇದು ಧನ್ವೀರ್ ಗೌಡ ನಾಯಕ ನಟನಾಗಿ ನಟಿಸುತ್ತಿರುವ ಐದನೇ ಸಿನಿಮಾ. ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರಕ್ಕೆ ಯುವ ನಿರ್ದೇಶಕ ರಘುಕುಮಾರ್ ಓ ಆರ್ ಆ್ಯಕ್ಷನ್​ ಕಟ್​ ಹೇಳಲಿದ್ದಾರೆ. ಕಥೆಯನ್ನು ಸ್ವತಃ ನಿರ್ದೇಶಕರೇ ರೆಡಿ ಮಾಡಿಕೊಂಡಿದ್ದಾರೆ. ಇದು ರಘುಕುಮಾರ್ ಓ ಆರ್​​ ನಿರ್ದೇಶನದ ಚೊಚ್ಚಲ ಚಿತ್ರ. ಸಾವಿರಾರು ತಲೆ ಬುರುಡೆಗಳ ರಾಶಿಯ ನಡುವೆ ಧನ್ವೀರ್ ಗೌಡ ರಿವಾಲ್ವರ್ ಹಿಡಿದು ನಿಂತಿದ್ದಾರೆ. ಈ ಪೋಸ್ಟರ್‌ ಮೂಲಕ ಇದೊಂದು ರಿವೆಂಜ್ ಸ್ಟೋರಿ ಅನ್ನೋದು ಗೊತ್ತಾಗುತ್ತದೆ.

ಯುವ ನಿರ್ದೇಶಕ ರಘುಕುಮಾರ್ ಕುರಿತು...: ರಘುಕುಮಾರ್ ಒಳ್ಳೆಯ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಇದೆ. ಕೆಲ ವರ್ಷಗಳಿಂದ ಚಿತ್ರರಂಗದಲ್ಲಿ ಕೆಲಸ ಮಾಡಿರುವ ಅನುಭವ ಇವರಿಗಿದೆ. "ಕೋಟಿಗೊಬ್ಬ 3" ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. 'ದಿ ಬೆಲ್' ಎಂಬ ಕಿರುಚಿತ್ರ ನಿರ್ಮಿಸಿ, ನಿರ್ದೇಶಿಸಿದ್ದಾರೆ. ದಿ ಬೆಲ್ ಕಿರುಚಿತ್ರ ಪಿ ಆರ್ ಕೆ ಆಡಿಯೋ ಯೂಟ್ಯೂಬ್ ಅಲ್ಲಿ ಬಿಡುಗಡೆಯಾಗಿದ್ದು, ಪ್ರಶಂಸೆ ಗಳಿಸಿಕೊಂಡಿದೆ. ಶಾರ್ಟ್ ಫಿಲ್ಮ್ ಫೆಸ್ಟಿವಲ್ಸ್​ನಲ್ಲಿ ಮೆಚ್ಚುಗೆ ಪಡೆದು ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ.

ಇದನ್ನೂ ಓದಿ: ಹಿಂದಿ ಚಿತ್ರರಂಗದ ಈವರೆಗಿನ ಬಾಕ್ಸ್​ ಆಫೀಸ್​ ದಾಖಲೆ ಮುರಿದ 'ಜವಾನ್​'!

ಚಿತ್ರತಂಡ: ಚಿತ್ರದಲ್ಲಿ ರಂಗಾಯಣ ರಘು, ರವಿಶಂಕರ್, ತಬಲನಾಣಿ, ಸಾಧುಕೋಕಿಲ ಸೇರಿದಂತೆ ಇನ್ನಿತರೆ ಕಲಾವಿದರು ನಟಿಸುತ್ತಿದ್ದಾರೆ. ಛಾಯಾಗ್ರಾಹಕರಾಗಿ ಕಾರ್ತಿಕ್ ಎಸ್, ಹಿನ್ನೆಲೆ ಸಂಗೀತ ಜುಡಾ ಸ್ಯಾಂಡಿ, ಶಬ್ದ ವಿನ್ಯಾಸ ರಾಜನ್ ಹಾಗೂ ಸಂಕಲನದ ಕೆಲಸವನ್ನು ಉಮೇಶ್ ಆರ್.ಬಿ ಮಾಡುತ್ತಿದ್ದಾರೆ. ಸಮೃದ್ಧಿ ಫಿಲಂಸ್​ ಲಾಂಛನದಲ್ಲಿ ಸಿನಿಮಾ ನಿರ್ಮಾಣವಾಗಲಿದೆ. ಶೀಘ್ರದಲ್ಲೇ ಚಿತ್ರೀಕರಣ ಪ್ರಾರಂಭಿಸಲಿದ್ದೇವೆ ಎಂದು ಸಮೃದ್ಧಿ ಫಿಲಂಸ್ ನಿರ್ಮಾಣ ಸಂಸ್ಥೆ ತಿಳಿಸಿದೆ.

ಇದನ್ನೂ ಓದಿ: ಅಭಿಮಾನಿಗಳ ಮೇಲೆ ಪ್ರೀತಿಯ ಧಾರೆಯೆರೆದ ಶಾರುಖ್​ ಖಾನ್​​...ಜವಾನ್​ ನಟನ ಫ್ಯಾನ್ಸ್ ಫುಲ್​ ಖುಷ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.