ETV Bharat / entertainment

ಹೆಣಗಳ ರಾಶಿ ಮಧ್ಯೆ 'ಕ್ಯಾಪ್ಟನ್​ ಮಿಲ್ಲರ್': ಧನುಷ್​-ಶಿವಣ್ಣ ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ಗರಿಗೆದರಿದ ನಿರೀಕ್ಷೆ​ - ಜೈಲರ್

ಧನುಷ್​ ಮತ್ತು ಶಿವರಾಜ್​ಕುಮಾರ್​ ನಟನೆಯ 'ಕ್ಯಾಪ್ಟನ್​ ಮಿಲ್ಲರ್' ಸಿನಿಮಾದ ಫಸ್ಟ್​ ಲುಕ್​ ಬಿಡುಗಡೆಯಾಗಿದೆ.

captain miller
ಕ್ಯಾಪ್ಟನ್​ ಮಿಲ್ಲರ್​
author img

By

Published : Jul 1, 2023, 12:51 PM IST

ಕಾಲಿವುಡ್​ ಸ್ಟಾರ್​ ನಟ ಧನುಷ್​ ಎಂತಹದ್ದೇ ಪಾತ್ರ ಕೊಟ್ಟರೂ, ಒಪ್ಪಿಕೊಂಡು ಸಿನಿಮಾ ಮಾಡುತ್ತಾರೆ. ಕಠಿಣ ಪಾತ್ರಗಳನ್ನು ಸುಲಭವಾಗಿ ಸ್ವೀಕರಿಸಿ, ಪ್ರೇಕ್ಷಕರ ಹೃದಯವನ್ನು ಗೆಲ್ಲುತ್ತಾರೆ. ಇದೀಗ ಅವರು 'ಕ್ಯಾಪ್ಟನ್​ ಮಿಲ್ಲರ್​' ಮೂಲಕ ಮಿಂಚಲು ಸಜ್ಜಾಗಿದ್ದಾರೆ. ಚಿತ್ರತಂಡ ಸಿನಿಮಾದ ಫಸ್ಟ್​ ಲುಕ್​ ಬಿಡುಗಡೆಗೊಳಿಸಿದೆ. ಇದರಲ್ಲಿ ಧನುಷ್​ ಅವತಾರ ನೋಡಿದ ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ.

'ಕ್ಯಾಪ್ಟನ್​ ಮಿಲ್ಲರ್​' ಫಸ್ಟ್​ ಲುಕ್​: ಧನುಷ್​ ನಟನೆಯ 'ಕ್ಯಾಪ್ಟನ್​ ಮಿಲ್ಲರ್​' ಸಿನಿಮಾದ ಮೊದಲ ನೋಟ ರಿಲೀಸ್​ ಆಗಿದೆ. ಪೋಸ್ಟರ್​ನಲ್ಲಿ ಹೆಣಗಳ ರಾಶಿ ಮಧ್ಯೆ ಧನುಷ್​ ನಿಂತಿರುವುದನ್ನು ಕಾಣಬಹುದು. ಅವರ ಕೈಯಲ್ಲಿ ಗನ್​ ಇದೆ. ಅದನ್ನು ನೋಡಿದರೆ, ಇದು ರೆಟ್ರೋ ಕಾಲದ ಕಥೆ ಎಂಬುದು ಸ್ಪಷ್ಟವಾಗುತ್ತದೆ. ಹಿಂಭಾಗದಲ್ಲಿ ಒಂದಷ್ಟು ವಾಹನಗಳು ಇವೆ. 'ಗೌರವವೇ ಸ್ವಾತಂತ್ರ್ಯ' ಎಂದು ಈ ಫಸ್ಟ್​ ಲುಕ್​ ಪೋಸ್ಟರ್​ಗೆ ಧನುಷ್​ ಕ್ಯಾಪ್ಶನ್​ ನೀಡಿದ್ದಾರೆ.

ಇದಕ್ಕೆ ಹ್ಯಾಟ್ರಿಕ್​ ಹೀರೋ ಶಿವರಾಜ್​ಕುಮಾರ್​ ಕೂಡ ಮೆಚ್ಚುಗೆ ಸೂಚಿಸಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟರ್​ ಹಂಚಿಕೊಂಡಿರುವ ಅವರು, ಧನುಷ್​ ಹೊಸ ಅವತಾರವನ್ನು ಮೆಚ್ಚಿಕೊಂಡಿದ್ದಾರೆ. ಜೊತೆಗೆ ಇಡೀ ತಂಡಕ್ಕೆ ಶುಭಹಾರೈಸಿದ್ದಾರೆ. ಈಗಾಗಲೇ ತಿಳಿದಿರುವಂತೆ ಶಿವಣ್ಣ ಕೂಡ ಈ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

ಇದನ್ನೂ ಓದಿ: ವಿಡಿಯೋ: ಅಮೃತ್​ಸರದ ಸಚ್‌ಖಂದ್​​ ಶ್ರೀ ಹರ್ಮಂದಿರ್ ಸಾಹಿಬ್‌ಗೆ ರಾಘವ್​ ಪರಿಣಿತಿ ಭೇಟಿ

ಈ ಸಿನಿಮಾಗೂ ಮೊದಲು ಸೂಪರ್​ ಸ್ಟಾರ್​ ರಜನಿಕಾಂತ್​ ಜೊತೆ 'ಜೈಲರ್' ತಮಿಳು​ ಸಿನಿಮಾದಲ್ಲೂ ನಟಿಸಿದ್ದಾರೆ. ಇದೀಗ 'ಕ್ಯಾಪ್ಟನ್​ ಮಿಲ್ಲರ್' ಮೂಲಕ ಮತ್ತೊಂದು ತಮಿಳು ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಷ್ಟು ವರ್ಷಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಛಾಪು ಮೂಡಿಸಿರುವ ಶಿವಣ್ಣ ಇತ್ತೀಚಿನ ದಿನಗಳಲ್ಲಿ ಪರಭಾಷೆಯ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಧನುಷ್​ ಜೊತೆ ನಟಿಸುತ್ತಿರುವ ಈ ಬಹುನಿರೀಕ್ಷಿತ ಸಿನಿಮಾದಲ್ಲಿ ಶಿವಣ್ಣ ಪಾತ್ರ ಹೇಗಿರಲಿದೆ? ಎಂಬ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಗರಿಗೆದರಿದೆ.

ಚಿತ್ರತಂಡ ಹೀಗಿದೆ.. 'ಕ್ಯಾಪ್ಟನ್​ ಮಿಲ್ಲರ್​' ಸಿನಿಮಾದಲ್ಲಿ ಧನುಷ್​ಗೆ ನಾಯಕಿಯಾಗಿ ಪ್ರಿಯಾಂಕಾ ಮೋಹನ್​ ನಟಿಸಿದ್ದಾರೆ. ಇವರಲ್ಲದೇ ಸಂದೀಪ್​ ಕಿಶನ್​, ಶಿವರಾಜ್​ಕುಮಾರ್​, ನಿವೇದಿತಾ ಸತೀಶ್​, ಜಾನ್​ ಕೊಕ್ಕೆನ್​ ಮತ್ತು ಮೂರ್​ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾವು ತಮಿಲು, ತೆಲುಗು ಮತ್ತು ಹಿಂದಿ ಭಾಷೆಯಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ. ಚಿತ್ರವನ್ನು ಅರುಣ್​ ಮಾಥೇಶ್ವರನ್​ ನಿರ್ದೇಶಿಸಿದ್ದಾರೆ. ಜಿವಿ ಪ್ರಕಾಶ್​ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದ ಛಾಯಾಗ್ರಹಣ ಮತ್ತು ಸಂಕಲನವನ್ನು ಶ್ರೇಯಸ್​ ಕೃಷ್ಣ ಮತ್ತು ನಾಗರೂನ್​ ಮಾಡಿದ್ದಾರೆ.

ಇದನ್ನೂ ಓದಿ: TAALI: 'ಚಪ್ಪಾಳೆ ಹೊಡೆಯಲ್ಲ, ಹೊಡೆಸಿಕೊಳ್ಳುತ್ತೇವೆ': ತೃತೀಯಲಿಂಗಿ ಪಾತ್ರದಲ್ಲಿ ಮಾಜಿ ವಿಶ್ವಸುಂದರಿ ಸುಶ್ಮಿತಾ ಸೇನ್

ಸಾಲು ಸಾಲು ಸಿನಿಮಾಗಳಲ್ಲಿ ಶಿವಣ್ಣ ಬ್ಯುಸಿ: ಸತತ ಸಿನಿಮಾಗಳನ್ನು ಮಾಡುತ್ತಿರುವ ಕರುನಾಡ ಚಕ್ರವರ್ತಿ 2022ರಲ್ಲಿ ಕೊನೆಯದಾಗಿ ಪ್ಯಾನ್​ ಇಂಡಿಯಾ ಸಿನಿಮಾ 'ವೇದ'ದಲ್ಲಿ ಕಾಣಿಸಿಕೊಂಡಿದ್ದರು. ಬಳಿಕ 'ಘೋಸ್ಟ್'​ ಸಿನಿಮಾವಾಗಿ ಬ್ಯುಸಿಯಾದರು. ಅದಲ್ಲದೇ ಯೋಗರಾಜ್​ ಭಟ್​ ನಿದೇಶನದ 'ಕರಟಕ ದಮನಕ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದರ ಬೆನ್ನಲ್ಲೇ 'ಮಫ್ತಿ' ಸಿನಿಮಾದ ಸೀಕ್ವೆಲ್​ ಆದ 'ಬೈರತಿ ರಣಗಲ್'​ನಲ್ಲೂ ಶಿವರಾಜ್​ಕುಮಾರ್​ ಬಣ್ಣ ಹಚ್ಚುತ್ತಿದ್ದಾರೆ. ಅರ್ಜುನ್​ ಜನ್ಯ ಜೊತೆ '45' ಸಿನಿಮಾ ಮಾಡುತ್ತಿದ್ದಾರೆ. ತಮಿಳು ಸಿನಿಮಾ ಜೈಲರ್​ ಇನ್ನೇನು ಬಿಡುಗಡೆಯಾಗಿದೆ. ಜೊತೆಗೆ 'ಕ್ಯಾಪ್ಟನ್​ ಮಿಲ್ಲರ್​' ನಲ್ಲೂ ನಟಿಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.