ETV Bharat / entertainment

ಭರತ್, ತಾಂಡವ್​ ಕಾಂಬಿನೇಶನ್​ನ 'ದೇವನಾಂಪ್ರಿಯ' ಫಸ್ಟ್ ಲುಕ್ ರಿವೀಲ್​

ಭರತ್ ಎಸ್ ನಾವುಂದ ಮತ್ತು ತಾಂಡವ್ ರಾಮ್ ಅವರ 'ದೇವನಾಂಪ್ರಿಯ' ಸಿನಿಮಾದ ಫಸ್ಟ್ ಲುಕ್ ಅನಾವರಣಗೊಂಡಿದೆ.

'Devanampriya' first look
'ದೇವನಾಂಪ್ರಿಯ' ಫಸ್ಟ್ ಲುಕ್
author img

By ETV Bharat Karnataka Team

Published : Jan 16, 2024, 2:37 PM IST

ಕನ್ನಡ ಚಿತ್ರರಂಗದಲ್ಲಿ 'ಅಡಚಣೆಗಾಗಿ ಕ್ಷಮಿಸಿ' ಮತ್ತು 'ಮುಗಿಲ್ ಪೇಟೆ' ಸಿನಿಮಾಗಳಿಗೆ ಆ್ಯಕ್ಷನ್​ ಕಟ್​ ಹೇಳಿದ್ದ ಭರತ್ ಎಸ್ ನಾವುಂದ ಅವರೀಗ ಮೂರನೇ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಈ ಸಿನಿಮಾದ ಮೂಲಕ 'ಜೋಡಿಹಕ್ಕಿ' ಧಾರಾವಾಹಿ ಖ್ಯಾತಿಯ ನಟ ತಾಂಡವ್ ರಾಮ್ ಅವರು ನಾಯಕನಟನಾಗಿ ಕನ್ನಡ ಹಿರಿತೆರೆ ಪ್ರವೇಶಿಸಲು ಸಜ್ಜಾಗುತ್ತಿದ್ದಾರೆ. ಭರತ್​​ - ತಾಂಡವ್ ಕಾಂಬಿನೇಶನ್​ನ​​ ಹೊಸ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ಸುಗ್ಗಿ ಹಬ್ಬದ ವಿಶೇಷವಾಗಿ ಅನಾವರಣಗೊಂಡಿದೆ.

'Devanampriya' first look
'ದೇವನಾಂಪ್ರಿಯ' ಫಸ್ಟ್ ಲುಕ್

ದೇವತೆಗಳಿಗೆ ಪ್ರಿಯನಾದವನು.... 'ಮುಗಿಲ್ ಪೇಟೆ' ಸಿನಿಮಾ ಮೂಲಕ ಈಗಾಗಲೇ ಪ್ರೇಕ್ಷಕರಲ್ಲಿ ಭರವಸೆ ಮೂಡಿಸಿರುವ ಭರತ್ ಹಾಗೂ ಜೋಡಿಹಕ್ಕಿ ಧಾರಾವಾಹಿ ಮೂಲಕ ಖ್ಯಾತಿ ಗಳಿಸಿರುವ ತಾಂಡವ್ ರಾಮ್ ಕಾಂಬೋದಲ್ಲಿ ಮೂಡಿ ಬರಲಿರುವ ಸಿನಿಮಾಗೆ 'ದೇವನಾಂಪ್ರಿಯ' ಎಂಬ ಶೀರ್ಷಿಕೆ ಇಡಲಾಗಿದೆ. ದೇವನಾಂಪ್ರಿಯ ಅಂದರೆ ದೇವತೆಗಳಿಗೆ ಪ್ರಿಯನಾದವನು.

ಮೊದಲ ನೋಟ: 'ದೇವನಾಂಪ್ರಿಯ' ಫಸ್ಟ್ ಲುಕ್ ಪೋಸ್ಟರ್ ಸಖತ್ ಇಂಪ್ರೆಸಿವ್ ಆಗಿದ್ದು, ನಾನಾ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪೋಸ್ಟರ್ ಅನ್ನು ಸೂಕ್ಷ್ಮವಾಗಿ ಗಮನಿಸಿದರೆ ಕಿಚ್ಚು ಹಾಯಿಸುತ್ತಿರುವ ನಾಯಕ, ವೀರಭದ್ರ ಸ್ವಾಮಿ, ನಾಯಕನ ಬೆನ್ನಿಂದ ಮಹಿಳೆಯ ಆಕೃತಿ, ಎರಡು ಗ್ರಾಮಗಳು ಹೀಗೆ ನಾನಾ ವಿಷಯಗಳು ಕಾಣ ಸಿಗುತ್ತವೆ.

ಎರಡು ಭಾಷೆಯಲ್ಲಿ ನಿರ್ಮಾಣ: ಫ್ಯಾಮಿಲಿ ಹಾಗೂ ರೀವೆಂಜ್ ಕಥಾಹಂದರ ಹೊಂದಿರುವ ದೇವನಾಂಪ್ರಿಯ ಸಿನಿಮಾ ಕನ್ನಡ ಹಾಗೂ ತೆಲುಗು ಸೇರಿ ಎರಡು ಭಾಷೆಯಲ್ಲಿ ನಿರ್ಮಾಣವಾಗಲಿದೆ. ಬಹುತಾರಾಗಣ ಈ ಚಿತ್ರದಲ್ಲಿರಲಿದೆ. ಎ ಕ್ಯೂಬ್ ಫಿಲ್ಮ್ಸ್ ಸಂಸ್ಥೆ ಅಡಿ ಈ ಚಿತ್ರ ಮೂಡಿಬರಲಿದೆ. ಮುಂದಿನ ವಾರದಿಂದ ಈ ಸಿನಿಮಾದ ಚಿತ್ರೀಕರಣ ಶುರುವಾಗಲಿದೆ. ಸಿನಿಮಾ ಕುರಿತು ಹೆಚ್ಚಿನ ಮಾಹಿತಿಯನ್ನು ಚಿತ್ರತಂಡ ಹಂತಹಂತವಾಗಿ ಕೊಡಲಿದೆ.

ಇದನ್ನೂ ಓದಿ: ಫಿಲ್ಮ್‌ಫೇರ್ ಪ್ರಶಸ್ತಿ 2024: ನಾಮನಿರ್ದೇಶನಗಳ ಪಟ್ಟಿ; 19 ವಿಭಾಗಗಳಲ್ಲಿ 'ಅನಿಮಲ್'​ಗೆ ಸ್ಥಾನ

ಕನ್ನಡ ಚಿತ್ರರಂಗದಲ್ಲಿ ಉತ್ತಮ ಕಥಾಹಂದರವುಳ್ಳ ಸಿನಿಮಾಗಳು ನಿರ್ಮಾಣಗೊಳ್ಳುತ್ತಿವೆ. ಹೊಸ ಪ್ರತಿಭೆಗಳ ಆಗಮನ ಆಗುತ್ತಿದೆ. ವಿಭಿನ್ನ ಜಾನರ್​ಗಳ ಸಿನಿಮಾಗಳು ಮೂಡಿ ಬರುತ್ತಿವೆ. 2023ರಲ್ಲಿ ನೂರಾರು ಚಿತ್ರಗಳು ತೆರೆಕಂಡು ಸಿನಿಪ್ರಿಯರನ್ನು ರಂಜಿಸಿವೆ. ಮನರಂಜನಾ ಉದ್ಯಮದ ಬೆಳವಣಿಗೆಯಲ್ಲಿ ಕನ್ನಡ ಚಿತ್ರರಂಗದ ಕೊಡುಗೆ ಕೂಡ ಅಪಾರ. ಈಗಾಗಲೇ ಕಂಟೆಂಟ್​, ಮೇಕಿಂಗ್​​ ಮೂಲಕ ಹಲವು ಸಿನಿಮಾಗಳು ಗೆದ್ದು ಬೀಗಿವೆ. ಪ್ರೇಕ್ಷಕರನ್ನು ರಂಜಿಸುವ ನಿಟ್ಟಿನಲ್ಲಿ ಹಲವು ಸಿನಿಮಾಗಳು ನಿರ್ಮಾಣಗೊಳ್ಳುತ್ತಿವೆ. ಈ ನಿಟ್ಟಿನಲ್ಲಿ ಈಗಾಗಲೇ ವೀಕ್ಷಕರಿಗೆ ಪರಿಚಿತರಾಗಿರುವ ಭರತ್ ಎಸ್ ನಾವುಂದ ಮತ್ತು ತಾಂಡವ್ ರಾಮ್ ಕಾಂಬಿನೇಶನ್​ನ ಸಿನಿಮಾ ಮೇಲೆ ಪ್ರೇಕ್ಷಕರು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಶ್ರೇಯಸ್ ರಾಜ್ ಶೆಟ್ಟಿ ಚೊಚ್ಚಲ ಚಿತ್ರ ಕುಲದಲ್ಲಿ ಕೀಳ್ಯಾವುದೋ ಸಿನಿಮಾಗೆ ಸಿಕ್ತು ಗುರುಗಳ ಸಾಥ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.