ETV Bharat / entertainment

ತಮ್ಮ ಬಗ್ಗೆ ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡ ದೀಪಿಕಾ ಪಡುಕೋಣೆ - ದೀಪಿಕಾ ಪಡುಕೋಣೆ

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಮ್ಮ ಬಗೆಗಿನ ಆಸಕ್ತಿದಾಯಕ ವಿಷಯಗಳನ್ನು ವೀಕ್ಷಕರಲ್ಲಿ ಹಂಚಿಕೊಂಡಿದ್ದಾರೆ.

deepika-padukone-spills-a-secret-about-herself
ತಮ್ಮ ಬಗ್ಗೆ ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡ ದೀಪಿಕಾ ಪಡುಕೋಣೆ
author img

By

Published : Aug 6, 2022, 8:54 AM IST

ದೀಪಿಕಾ ಪಡುಕೋಣೆ ಸದ್ಯ ಬಾಲಿವುಡ್​​​​​ನಲ್ಲಿ ಬಹುಬೇಡಿಕೆಯ ನಟಿ. ಸದ್ಯ ಮನೋರಂಜನಾ ಕ್ಷೇತ್ರದಲ್ಲಿ ತಮ್ಮದೇ ಆದ ರೀತಿಯಲ್ಲಿ ಗುರುತಿಸಿಕೊಂಡಿರುವ ದೀಪಿಕಾ, ಇತ್ತೀಚೆಗೆ ಮುಂಬೈ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ತಮ್ಮ ಬಗ್ಗೆ ಕೆಲವು ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಕಾರ್ಯಕ್ರಮಕ್ಕೆ ಆಗಮಿಸಿದ್ದ ದೀಪಿಕಾ ಪಡುಕೋಣೆ ಕಪ್ಪು ಸಾರಿಯಲ್ಲಿ ಮಿಂಚುತ್ತಿದ್ದರು. ಈ ಸಂದರ್ಭದಲ್ಲಿ ತಮ್ಮ ಬಗೆಗಿನ ಕೆಲವು ವಿಷಯಗಳನ್ನು ವೀಕ್ಷಕರೊಂದಿಗೆ ಹಂಚಿಕೊಂಡಿದ್ದಾರೆ. ದೀಪಿಕಾ ಪಡುಕೋಣೆಯವರಿಗೆ ಅನ್ನ ರಸಂ ಎಂದರೆ ತುಂಬಾ ಇಷ್ಟ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಜೊತೆಗೆ ಇವರು ಒಂದು ವೇಳೆ ನಟನೆಯಲ್ಲಿ ಇಲ್ಲದಿರುತ್ತಿದ್ದರೆ ,ನಾನು ಬ್ಯಾಡ್ಮಿಂಟನ್ ಆಟಗಾರ್ತಿಯಾಗಿ ಅಥವಾ ಇಂಟೀರಿಯರ್ ಡಿಸೈನರ್ ಆಗಲು ಇಷ್ಟಪಡುತ್ತಿದ್ದೆ ಎಂದು ಹೇಳಿದ್ದಾರೆ.

ಜೊತೆಗೆ ತಮ್ಮ ನೆಚ್ಚಿನ ಸಿನೆಮಾವನ್ನು ತಿಳಿಸುವಂತೆ ಕೇಳಿದಾಗ 2015ರಲ್ಲಿ ತೆರೆಕಂಡ ಚೀಕು ತಮ್ಮ ನೆಚ್ಚಿನ ಸಿನೆಮಾ ಎಂದು ಹೇಳಿದ್ದಾರೆ. ಇದರ ಜೊತೆಗೆ ಇನ್ನೊಂದು ವಿಷಯವನ್ನು ಬಹಿರಂಗ ಪಡಿಸಿದ್ದಾರೆ. ನಾನು ಮಲ್ಟಿ ಟಾಸ್ಕಿಂಗ್ ನಲ್ಲಿ ಮತ್ತು ಸಮಯಪಾಲನೆಯಲ್ಲಿ ಉತ್ತಮವಾಗಿದ್ದೇನೆ. ಇದರ ಜೊತೆಗೆ ಚೆನ್ನಾಗಿ ಅಡುಗೆ ಮಾಡುತ್ತೇನೆ ಎಂದು ದೀಪಿಕಾ ಹೇಳಿದ್ದಾರೆ.

ಸದ್ಯ ಇವರ ಸಿನೆಮಾದ ಬಗ್ಗೆ ಮಾತನಾಡುವುದಾದರೆ, ಸೂಪರ್ ಸ್ಟಾರ್ ಶಾರುಖ್ ಖಾನ್ ಮತ್ತು ಜಾನಿ ಅಬ್ರಹಾಂ ನಟನೆಯ ಪಠಾಣ್ ಸಿನೆಮಾದಲ್ಲಿ ಇವರು ನಟಿಸುತ್ತಿದ್ದಾರೆ. ಜೊತೆಗೆ ಹೃತಿಕ್ ರೋಷನ್ ಅಭಿನಯದ ಫೈಟರ್ ಸಿನೆಮಾದಲ್ಲಿಯೂ ದೀಪಿಕಾ ಕಾಣಿಸಿಕೊಳ್ಳಲಿದ್ದಾರೆ.

ಓದಿ : ಪ್ರೆಗ್ನೆನ್ಸಿ ಬೈಬಲ್ ಪುಸ್ತಕ ವಿವಾದ: ಸರ್ಕಾರದ ಮೂಲಕ ದೂರು ದಾಖಲಿಸಿ ಎಂದ ಹೈಕೋರ್ಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.