ETV Bharat / entertainment

ಪ್ರತಿಷ್ಟಿತ ಆಸ್ಕರ್​ ಸಮಾರಂಭಕ್ಕೆ ಕ್ಷಣಗಣನೆ: ಅಮೆರಿಕಕ್ಕೆ ತೆರಳಿದ ದೀಪಿಕಾ ಪಡುಕೋಣೆ

ಆಸ್ಕರ್​ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಳ್ಳಲು ನಟಿ ದೀಪಿಕಾ ಪಡುಕೋಣೆ ಇಂದು ಬೆಳಗ್ಗೆ ಮುಂಬೈನಿಂದ ಲಾಸ್​ ಏಂಜಲೀಸ್​ಗೆ ಪ್ರಯಾಣಿಸಿದರು.

deepika padukone
ದೀಪಿಕಾ ಪಡುಕೋಣೆ
author img

By

Published : Mar 10, 2023, 12:20 PM IST

ಆಸ್ಕರ್​ 2023 ಪ್ರಶಸ್ತಿ ಪ್ರದಾನ ಸಮಾರಂಭ ಬಂದೇ ಬಿಡ್ತು. ಪ್ರತಿಷ್ಟಿತ​ ಪ್ರಶಸ್ತಿಯ ಪ್ರೆಸೆಂಟರ್​ ಆಗಿ ಬಾಲಿವುಡ್​​ ತಾರೆ ದೀಪಿಕಾ ಪಡುಕೋಣೆ ಭಾರತ ದೇಶವನ್ನು ಪ್ರತಿನಿಧಿಸಲಿದ್ದಾರೆ. ಇದಕ್ಕಾಗಿ ದೀಪಿಕಾ ಇಂದು ಬೆಳಗ್ಗೆ ಮುಂಬೈ ವಿಮಾನ ನಿಲ್ದಾಣದಿಂದ ಅಮೆರಿಕ್ಕೆ ತೆರಳಿದರು. ವಿಮಾನ ನಿಲ್ದಾಣದಲ್ಲಿ ಕ್ಯಾಮರಾ ಕಣ್ಣಿನಲ್ಲಿ 'ಬಾಲಿವುಡ್​ ಮಸ್ತಾನಿ' ಸೆರೆಯಾಗಿದ್ದು, ಎಂದಿನಂತೆ ಸಿಂಪಲ್​ ಕ್ಯಾಶುವಲ್​ ಲುಕ್​ನಲ್ಲಿ ಕಾಣಿಸಿಕೊಂಡರು. ಪತಿ, ನಟ ರಣ್​ವೀರ್​ ಸಿಂಗ್​ ಬೀಳ್ಕೊಡಲು ಏರ್​ಪೋರ್ಟ್​ಗೆ ಆಗಮಿಸಿದ್ದರು.

ಫೋಟೋಗ್ರಾಫರ್‌ಗಳು ಪಡುಕೋಣೆಗೆ ಶುಭ ಕೋರಿ, ಮೆಚ್ಚುಗೆಯ ಮಾತುಗಳನ್ನಾಡಿದರು. ಮುದ್ದಾಗಿ ಕಾಣುತ್ತಿದ್ದೀರಾ ಎಂದು ಓರ್ವ ಹೇಳಿದಾಗ ಪಿಸುನಕ್ಕ ನಟಿ ಲಾಸ್​ ಏಂಜಲೀಸ್​ಗೆ ತೆರಳಿದರು. ಅಕಾಡೆಮಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಹಲವು ಖ್ಯಾತ ತಾರೆಯರ ಪೈಕಿ ವಿಶ್ವದ ಒಂಭತ್ತನೇ ಸುಂದರಿ ಎಂಬ ಖ್ಯಾತಿ ದೀಪಿಕಾ ಪಡುಕೋಣೆ ಅವರಿಗಿದೆ.

ಸಮಾರಂಭದಲ್ಲಿ ಪೆಡ್ರೊ ಪಾಸ್ಕಲ್, ಕೇಟ್ ಹಡ್ಸನ್, ಹ್ಯಾರಿಸನ್ ಫೋರ್ಡ್, ಹಾಲೆ ಬೆರ್ರಿ, ಪೌಲ್ ಡಾನೋ, ಕಾರಾ ಡೆಲಿವಿಂಗ್ನೆ, ಮೈಂಡಿ ಕಲಿಂಗ್, ಇವಾ ಲಾಂಗೋರಿಯಾ, ಜೂಲಿಯಾ ಲೂಯಿಸ್ ಡ್ರೇಫಸ್, ಆಂಡಿ ಮ್ಯಾಕ್‌ಡೊವೆಲ್, ಎಲಿಜಬೆತ್ ಓಲ್ಸೆನ್ ಮತ್ತು ಜಾನ್ ಟ್ರಾವೊಲ್ಟಾ ಸೇರಿದಂತೆ ಕೆಲ ಹಾಲಿವುಡ್ ತಾರೆಯರ ತಂಡಕ್ಕೆ ಈ ಭಾರತೀಯ ನಟಿ ಸೇರಿಕೊಳ್ಳಲಿದ್ದಾರೆ.

ಆಸ್ಕರ್​ ಪ್ರೆಸೆಂಟರ್ 2023: ಡ್ವೇನ್ ಜಾನ್ಸನ್, ಅರಿಯಾನಾ ಡಿಬೋಸ್, ಜೊನಾಥನ್ ಮೇಜರ್ಸ್, ಆಂಡ್ರ್ಯೂ ಗಾರ್ಫೀಲ್ಡ್, ಫ್ಲಾರೆನ್ಸ್ ಪಗ್ ಮತ್ತು ಹಾಲೆ ಬೈಲಿ ಅವರಂತಹ ಪ್ರೆಸೆಂಟರ್​​ಗಳೊಂದಿಗೆ ಸೇರಿಕೊಳ್ಳಲಿದ್ದಾರೆ. ಆಂಟೋನಿಯೊ ಬಂಡೆರಾಸ್, ಎಲಿಜಬೆತ್ ಬ್ಯಾಂಕ್ಸ್, ಜೆಸ್ಸಿಕಾ ಚಸ್ಟೈನ್, ಜಾನ್ ಚೋ, ಹಗ್ ಗ್ರಾಂಟ್, ದನೈ ಗುರಿರಾ, ಸಲ್ಮಾ ಹಯೆಕ್ ಪಿನೌಲ್ಟ್, ನಿಕೋಲ್ ಕಿಡ್‌ಮನ್, ಸಿಗೌರ್ನಿ ವೀವರ್, ರಿಜ್ ಅಹ್ಮದ್, ಎಮಿಲಿ ಬ್ಲಂಟ್, ಗ್ಲೆನ್ ಕ್ಲೋಸ್, ಜೆನ್ನಿಫರ್ ಕೊನ್ನೆಲ್ಲಿ, ಸ್ಯಾಮ್ಯುಯೆಲ್ ಎಲ್ ಜಾಕ್ಸನ್, ಜೆ. ಟ್ರಾಯ್ ಕೋಟ್ಸುರ್, ಮೆಲಿಸ್ಸಾ ಮೆಕಾರ್ಥಿ, ಜಾನೆಲ್ಲೆ ಮೊನೆ, ಕ್ವೆಸ್ಟ್‌ಲೋವ್, ಜೊಯಿ ಸಲ್ಡಾನಾ ಮತ್ತು ಡೊನ್ನಿ ಯೆನ್-ಇದು ಪ್ರೆಸೆಂಟರ್​ಗಳ ಸಂಪೂರ್ಣ ಪಟ್ಟಿ.

ಇದನ್ನೂ ಓದಿ: 'ಒಂದೊಳ್ಳೆ ಸಿನಿಮಾಗೆ ಭಾಷೆಯ ಹಂಗಿಲ್ಲ': ಅಮೆರಿಕದಲ್ಲಿ ರಾಮ್ ​ಚರಣ್​​ ಮಾತು

ದೀಪಿಕಾ ಪಡುಕೋಣೆ ಮೊದಲ ಬಾರಿಗೆ ಆಸ್ಕರ್‌ ವೇದಿಕೆ ಮೇಲೇರಲಿದ್ದಾರೆ. ಸುದೀರ್ಘ ವೃತ್ತಿಜೀವನದಲ್ಲಿ ಆಸ್ಕರ್​ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾಗುತ್ತಿರುವುದು ಇದೇ ಮೊದಲು. ಈ ಸಾಲಿನ ಆಸ್ಕರ್‌ ಸಮಾರಂಭದಲ್ಲಿ ಹಲವು ಪ್ರಸಿದ್ಧ ವ್ಯಕ್ತಿಗಳು ಇರಲಿದ್ದಾರೆ. ಎಸ್‌.ಎಸ್.ರಾಜಮೌಳಿ ಮತ್ತು ಆರ್‌ಆರ್‌ಆರ್ ಚಿತ್ರತಂಡ ಕೂಡ ಪ್ರಶಸ್ತಿ ಕಾರ್ಯಕ್ರಮಕ್ಕೆ ಹಾಜರಾಗಲು ಸಜ್ಜಾಗಿದೆ. ಆಸ್ಕರ್‌ಗೆ ನಾಮನಿರ್ದೇಶನಗೊಂಡ ನಾಟು ನಾಟು ಹಾಡಿನ ಲೈವ್ ಪ್ರದರ್ಶನ ಕೂಡ ಇರಲಿದೆ.

ಇದನ್ನೂ ಓದಿ: RRR​ ಪ್ರಚಾರಕ್ಕಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿದ್ರಾ ರಾಜಮೌಳಿ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.