ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಮ್ಮ ಫ್ಯಾಷನ್ ಸೆನ್ಸ್ನಿಂದಲೇ ಎಲ್ಲರ ಗಮನ ಸೆಳೆಯುತ್ತಾರೆ. ಸೋಮವಾರ ಮುಂಜಾನೆ ಅವರು ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಪ್ರತಿ ಬಾರಿಯೂ ತಮ್ಮ ಟ್ರೆಂಡಿ ಬಟ್ಟೆಗಳಿಂದ ಎಲ್ಲರನ್ನೂ ಆಶ್ಚರ್ಯಗೊಳಿಸುತ್ತಾರೆ. ಈ ಬಾರಿಯೂ ಸ್ಟೈಲಿಶ್ ಅವತಾರದಲ್ಲಿ ಗಮನ ಸೆಳೆದರು. ಪಾಪರಾಜಿಗಳ ಕೋರಿಕೆಯ ಮೇರೆಗೆ ನಟಿ ತನ್ನ ಮಿಲಿಯನ್ ಡಾಲರ್ ಸ್ಮೈಲ್ ಅನ್ನು ನೀಡಿದರು. ಬಳಿಕ ತಮ್ಮ ಬಾಕಿ ಉಳಿದಿರುವ ಕೆಲಸಗಳನ್ನು ಪೂರ್ಣಗೊಳಿಸಲು ನಗರದಿಂದ ತೆರಳಿದರು.
ಸೋಮವಾರ ನಸುಕಿನಲ್ಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ದೀಪಿಕಾ ಜಾಲಿ ಮೂಡ್‌ನಲ್ಲಿ ಎಂದಿನಂತೆ ಸುಂದರವಾಗಿ ಕಾಣುತ್ತಿದ್ದರು. ಪಾಪರಾಜಿಗಳೊಂದಿಗೆ ಮಾತುಕತೆ ನಡೆಸಿದ ನಟಿ ಮಿಲಿಯನ್ ಡಾಲರ್ ಸ್ಮೈಲ್ನೊಂದಿಗೆ ಕಾಣಿಸಿಕೊಂಡರು. ಪಾಪ್ಗಳ ಒತ್ತಾಯದ ಮೇರೆಗೆ ಚಂದನೆಯ ನಗು ಬೀರಿ ಹೊರಟು ಹೋದರು. ವಿಡಿಯೋವನ್ನು ಮುಂಬೈ ಮೂಲದ ಪಾಪ್ ಹಂಚಿಕೊಂಡಿದ್ದಾರೆ.
ದೀಪಿಕಾ ಪಡುಕೋಣೆ ನಗು ಮುಖ ಅವರ ಅಭಿಮಾನಿಗಳ ಮನಸ್ಸನ್ನು ಪ್ರಶಾಂತಗೊಳಿಸಿತು. ಹೃದಯದ ಎಮೋಜಿನೊಂದಿಗೆ ಫ್ಯಾನ್ಸ್ ಕಮೆಂಟ್ ವಿಭಾಗವನ್ನು ತುಂಬಿದರು. ದೀಪಿಕಾರ ಅಂದ ಚೆಂದವನ್ನು ಹಾಡಿ ಹೊಗಳಿದ್ದಾರೆ. ಅಂತೆಯೇ ಪಾಪರಾಜಿಗಳು ಇಷ್ಟು ಅದ್ಭುತ ವಿಡಿಯೋ ತೆಗೆದಿದ್ದಕ್ಕಾಗಿ ಅವರನ್ನು ಶ್ಲಾಘಿಸಿದ್ದಾರೆ. ದೃಶ್ಯದಲ್ಲಿ ನಟಿ ಬೂದು ಮತ್ತು ನೀಲಿ ಸ್ವೆಟರ್ ಅನ್ನು ಧರಿಸಿದ್ದರು. ಕಂದು ಬಣ್ಣದ ಟೋಟ್ ಬ್ಯಾಗ್ ಜೊತೆ ತಮ್ಮ ನೋಟವನ್ನು ಪೂರ್ಣಗೊಳಿಸಿದರು. ಕೂದಲನ್ನು ಬಿಗಿಯಾಗಿ ಕಟ್ಟಿ, ಕನಿಷ್ಠ ಮೇಕಪ್ನೊಂದಿಗೆ ಕಾಣಿಸಿಕೊಂಡರು.
ಇದನ್ನೂ ಓದಿ: ಬಹುನಿರೀಕ್ಷಿತ 'ಟೈಗರ್ 3' ಬಿಡುಗಡೆಗೆ ಮುಹೂರ್ತ ಫಿಕ್ಸ್; 'ಜವಾನ್' ಬಿಡುಗಡೆಯಂದೇ ಟೀಸರ್ ರಿಲೀಸ್
ದೀಪಿಕಾ ಅವರ ಸಿನಿಮಾ ವಿಚಾರವಾಗಿ ನೋಡುವುದಾದರೆ ಬಹುನಿರೀಕ್ಷಿತ 'ಕಲ್ಕಿ 2898 ಎಡಿ' ('Kalki 2898 AD') ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜಗತ್ತನ್ನು ಕತ್ತಲೆ ಆವರಿಸಿದಾಗ ಶಕ್ತಿಯೊಂದು ಹೊರಹೊಮ್ಮುತ್ತದೆ. ಅಂತ್ಯ ಶುರುವಾಗಲಿದೆ ಎಂಬ ಹಿನ್ನೆಲೆಯಲ್ಲಿ ಚಿತ್ರಕಥೆ ಸಾಗಲಿದೆ. ಈಗಾಗಲೇ ರಿಲೀಸ್ ಆಗಿರುವ ಫಸ್ಟ್ ಗ್ಲಿಂಪ್ಸ್ನಲ್ಲಿ ಸಿನಿಮಾ ಕುರಿತು ಭಾರಿ ನಿರೀಕ್ಷೆ ಮೂಡಿಸುವ ಸಾಹಸ ದೃಶ್ಯಗಳಿವೆ. ದೃಶ್ಯಗಳು ರೋಮಾಂಚಕವಾಗಿದ್ದು, ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅವರ ನೋಟ ಅದ್ಭುತವಾಗಿದೆ.
ಕೆಲವು ದಿನಗಳ ಹಿಂದೆ ಅಮೆರಿಕದಲ್ಲಿ ನಡೆದ ಪ್ರತಿಷ್ಠಿತ 'ಸ್ಯಾನ್ ಡಿಯಾಗೋ ಕಾಮಿಕ್ ಕಾನ್' ಸಮಾರಂಭದಲ್ಲಿ ಚಿತ್ರತಂಡ ಫಸ್ಟ್ ಗ್ಲಿಂಪ್ಸ್ ಅನಾವರಣಗೊಳಿಸಿ, ಚಿತ್ರದ ಅಂತಿಮ, ಅಧಿಕೃತ ಶೀರ್ಷಿಕೆಯನ್ನು ಬಹಿರಂಗಗೊಳಿಸಿತು. ವಿಶ್ವದ ಪ್ರತಿಷ್ಟಿತ ಸಮಾರಂಭದಲ್ಲಿ ಸಿನಿಮಾ ಪ್ರಚಾರ ಮಾಡಿರುವ ಮೊದಲ ಭಾರತೀಯ ಚಲನಚಿತ್ರ ಇದಾಗಿದೆ. ನಾಗ್ ಅಶ್ವಿನ್ ನಿರ್ದೇಶನದ ಸಿನಿಮಾವನ್ನು ವೈಜಯಂತಿ ಮೂವೀಸ್ ನಿರ್ಮಾಣ ಮಾಡುತ್ತಿದೆ. 600 ಕೋಟಿ ಬಜೆಟ್‌ನಲ್ಲಿ ಚಿತ್ರ ನಿರ್ಮಾಣಗೊಳ್ಳುತ್ತಿದ್ದು, ಪ್ರಭಾಸ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್, ದಿಶಾ ಪಟಾನಿ ನಟಿಸಿದ್ದಾರೆ. ಜನವರಿ 12, 2024ರಂದು ಚಿತ್ರವನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.
ಇದನ್ನೂ ಓದಿ: Kalki 2898 AD: ಡಾರ್ಲಿಂಗ್ ಪ್ರಭಾಸ್ ಲುಕ್ಗೆ ಮೆಚ್ಚುಗೆ ಸೂಚಿಸಿದ ಸ್ಟಾರ್ ನಿರ್ದೇಶಕ ರಾಜಮೌಳಿ