ಮುಂಬೈ: ತಮ್ಮ ಬಹುನಿರೀಕ್ಷಿತ ಆಕ್ಷನ್ ಥ್ರಿಲ್ಲರ್ ಚಿತ್ರ 'ಫೈಟರ್'ಗಾಗಿ ಬಾಲಿವುಡ್ ಬೆಡಗಿ ದೀಪಿಕಾ ಪಡುಕೊಣೆ ವಿದೇಶಕ್ಕೆ ತೆರಳಿದ್ದಾರೆ. ವಿಮಾನ ನಿಲ್ದಾಣದಲ್ಲಿ ಲೇಡಿಬಾಸ್ ಲುಕ್ನಲ್ಲಿ ಕಂಡ ಪಿಕು ನಟಿ, ಕಪ್ಪು-ಬಿಳುಪಿನ ಉಡುಗೆಯಲ್ಲಿ ಗಮನಸೆಳೆದರು.
ಇತ್ತೀಚೆಗಷ್ಟೇ ನಟಿ ಹೃತಿಕ್ ರೋಷನ್ 'ಫೈಟರ್' ಚಿತ್ರದ ಶೂಟಿಂಗ್ ಕಾರ್ಯಾರಂಭದ ಕುರಿತು ತಮ್ಮ ಇನ್ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಸದ್ಯ ಈ ತಂಡವನ್ನು ಈಗ ನಟಿ ದೀಪಿಕಾ ಪಡುಕೋಣೆ ಸೇರಿದ್ದಾರೆ. ಈ ಸಿನಿಮಾವನ್ನು ಸಿದ್ದಾರ್ಥ್ ಆನಂದ್ ನಿರ್ದೇಶನ ಮಾಡುತ್ತಿದ್ದಾರೆ.
ದಿಪೀಕಾ - ಹೃತಿಕ್ ಹೊರತಾಗಿ ಚಿತ್ರದಲ್ಲಿ ಅನಿಲ್ ಕಪೂರ್ ಕೂಡ ಲೀಡ್ ರೋಲ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಭಾರತದ ಮೊದಲ ಏರಿಯಲ್ ಆಕ್ಷನ್ ಥ್ರಿಲ್ಲರ್ ಸಿನಿಮಾವಾಗಿದೆ
ಈ ಚಿತ್ರದ ಮೊದಲ ಫೋಸ್ಟರ್ ಅನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿತ್ತು. 2024ರ ಜನವರಿಯಲ್ಲಿ ಈ ಚಿತ್ರ ಬಿಡುಗಡೆ ಕಾಣಲಿದೆ. ಈ ಚಿತ್ರದ ಮೂಲಕ ಇದೇ ಮೊದಲ ಬಾರಿಗೆ ದೀಪಿಕಾ - ಹೃತಿಕ್ ತೆರೆ ಹಂಚಿಕೊಳ್ಳುತ್ತಿದ್ದಾರೆ.
ಹೃತಿಕ್ ಅಭಿನಯದ ತಮಿಳು ರಿಮೇಕ್ ಆಧಾರಿತ 'ವಿಕ್ರಮ್ ವೇದಾ' ಚಿತ್ರ ಬಿಡುಗಡೆಯಾಗಿತ್ತು. ಈ ಚಿತ್ರಕ್ಕೆ ಪ್ರೇಕ್ಷಕರು ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದರು. ಈ ಸಿನಿಮಾದ ಜೊತೆಯಲ್ಲಿಯೇ ಸಿದ್ಧಾರ್ಥ್ ಆನಂದ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ 'ಪಾಠಾಣ್'ನಲ್ಲೂ ದೀಪಿಕಾ ಕಾಣಿಸಿಕೊಳ್ಳಲಿದ್ದಾರೆ. ಶಾರುಖ್ ಖಾನ್, ಜಾನ್ ಅಬ್ರಹಾಂ ಜೊತೆ ಡಿಂಪಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರ ಮುಂದಿನ ವರ್ಷ ಜನವರಿಗೆ ಅಂದರೆ, 2023ರ ಜನವರಿ 25ಕ್ಕೆ ಬಿಡುಗಡೆಯಾಗಲಿದೆ.
ಇದನ್ನೂ ಓದಿ: ಈ ಕ್ರಿಕೆಟ್ ಆಟಗಾರ್ತಿಗೆ ಅನುಷ್ಕಾ ಶರ್ಮಾ ಅಂದ್ರೆ ಅಚ್ಚುಮೆಚ್ಚಂತೆ