ETV Bharat / entertainment

28 ವರ್ಷ ಪೂರೈಸಿದ 'ದಿಲ್​ವಾಲೆ ದುಲ್ಹನಿಯೇ ಲೇ ಜಾಯೇಂಗೆ'; ಚಿತ್ರದ ನೆನಪುಗಳನ್ನು ಮರುಸೃಷ್ಟಿಸಿದ ಕಾಜಲ್​​

1995ರ ಅಕ್ಟೋಬರ್​ 20ರಂದು ಬಿಡುಗಡೆಯಾದ 'ದಿಲ್​ವಾಲೆ ದುಲ್ಹನಿಯೇ ಲೇ ಜಾಯೇಂಗೆ' ಚಿತ್ರ 28 ವರ್ಷಗಳನ್ನು ಪೂರೈಸಿದೆ

DDLJ Completed 28 years Kajol, Anupam refresh memories of 'Dilwale Dulhaniya Le Jayenge'
28 ವರ್ಷ ಪೂರೈಸಿದ 'ದಿಲ್​ವಾಲೆ ದುಲ್ಹನಿಯೇ ಲೇ ಜಾಯೇಂಗೆ'; ಚಿತ್ರದ ನೆನಪುಗಳನ್ನು ಮರುಸೃಷ್ಟಿಸಿದ ಕಾಜಲ್​​
author img

By ETV Bharat Karnataka Team

Published : Oct 21, 2023, 5:19 PM IST

'ದಿಲ್​ವಾಲೆ ದುಲ್ಹನಿಯೇ ಲೇ ಜಾಯೇಂಗೆ' ಚಿತ್ರ ಇಂದಿಗೂ ಜನರ ನೆನಪಿನಲ್ಲಿ ಹಾಗೆಯೇ ಉಳಿದುಕೊಂಡಿದೆ. ಸಿನಿಮಾ ಕಥೆಯಿಂದ ಹಿಡಿದು ಕಾಸ್ಟಿಂಗ್​ ಮತ್ತು ಡೈಲಾಗ್​ಗಳನ್ನು ಜನರು ಮರೆತಿಲ್ಲ. ಅದರಲ್ಲೂ ಚಿತ್ರದ ಹಾಡುಗಳನ್ನಂತೂ ಜನರು ಆಗಾಗ ಗುನುಗುತ್ತಿರುತ್ತಾರೆ. ಈ ಬ್ಲಾಕ್​ಬಸ್ಟರ್​ ಚಿತ್ರ 28 ವರ್ಷಗಳನ್ನು ಪೂರೈಸಿದೆ.

ಈ ಹಿನ್ನೆಲೆ 'ದಿಲ್​ವಾಲೆ ದುಲ್ಹನಿಯೇ ಲೇ ಜಾಯೇಂಗೆ' ಚಿತ್ರದ ನಟಿ ಕಾಜೋಲ್​ ಹಾಗೂ ಪೋಷಕ ಪಾತ್ರದಲ್ಲಿ ನಟಿಸಿರುವ ಅನುಪಮ್​ ಖೇರ್​ ಮತ್ತು ಚಿತ್ರ ನಿರ್ಮಾಣ ಸಂಸ್ಥೆ ಯಶ್​ ರಾಜ್​ ಫಿಲಂಸ್​ ಸೇರಿ 28ನೇ ವರ್ಷವನ್ನು ಸಂಭ್ರಮಿಸಿದೆ. ಚಿತ್ರದಿಂದ ಕಾಜೋಲ್​ ತಮ್ಮ ನೋಟವನ್ನು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 'DDLJ' ನ ಹಳೆಯ ನೆನಪುಗಳನ್ನು ಮರುಸೃಷ್ಟಿಸಿದ್ದಾರೆ. ಚಿತ್ರದ ಸೆಟ್​ನಿಂದ ಕೆಲವು ಫೋಟೋಗಳು, ವಿಡಿಯೋಗಳನ್ನು ಶೇರ್​ ಮಾಡಿದ್ದಾರೆ.

'DDLJ' ಎಂದೇ ಕರೆಯಲ್ಪಡುವ 'ದಿಲ್​ವಾಲೆ ದುಲ್ಹನಿಯೇ ಲೇ ಜಾಯೇಂಗೆ' ಚಿತ್ರ 1995ರ ಅಕ್ಟೋಬರ್​ 20ರಂದು ಬಿಡುಗಡೆಯಾಯಿತು. ಇದು ಆದಿತ್ಯ ಚೋಪ್ರಾ ಅವರ ರೊಮ್ಯಾಂಟಿಕ್​ ಡ್ರಾಮಾ ಚಿತ್ರವಾಗಿದ್ದು, ಯಶ್​ ಚೋಪ್ರಾ ಅವರು ಯಶ್​ ರಾಜ್​ ಫಿಲಂಸ್ ಮೂಲಕ ನಿರ್ಮಿಸಿದ್ದಾರೆ. ಬಾಲಿವುಡ್​ ಸೂಪರ್​ಸ್ಟಾರ್​ ಶಾರುಖ್​ ಖಾನ್​ ಮತ್ತು ಬಹುಬೇಡಿಕೆಯ ನಟಿ ಕಾಜಲ್​ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಭಾರತ, ಲಂಡನ್​ ಮತ್ತು ಸ್ವಿಟ್ಜರ್ಲೆಂಡ್​ನಲ್ಲಿ ಸಿನಿಮಾವನ್ನು ಚಿತ್ರೀಕರಿಸಲಾಗಿತ್ತು.

ಇದನ್ನೂ ಓದಿ: ಗಣಪತ್ ಕಲೆಕ್ಷನ್​​: ಟೈಗರ್ ಶ್ರಾಫ್ - ಕೃತಿ ಸನೋನ್ ಸಿನಿಮಾಗೆ ಹಿನ್ನೆಡೆ!

ಚಿತ್ರಕಥೆ: ಯುರೋಪ್ ಪ್ರವಾಸದಲ್ಲಿ ಭೇಟಿಯಾಗಿ ಪ್ರೀತಿಸುವ ರಾಜ್ ಮತ್ತು ಸಿಮ್ರಾನ್ ಸುತ್ತ ಕಥೆ ಸುತ್ತುತ್ತದೆ. ಚಿತ್ರವು ಸ್ಮರಣೀಯ ಸಂಗೀತ, ಸುಂದರವಾದ ಸ್ಥಳಗಳು ಮತ್ತು ಶಾರುಖ್ ಖಾನ್ ಮತ್ತು ಕಾಜೋಲ್ ನಡುವಿನ ಆನ್-ಸ್ಕ್ರೀನ್ ಕೆಮಿಸ್ಟ್ರಿಗೆ ಹೆಸರುವಾಸಿಯಾಗಿದೆ. 'DDLJ' 1995ರ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಲನಚಿತ್ರ ಮತ್ತು ಚಿತ್ರರಂಗದ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಸಿನಿಮಾಗಳಲ್ಲಿ ಒಂದಾಗಿದೆ.

ಇನ್​ಸ್ಟಾಗ್ರಾಮ್​ನಲ್ಲಿ 28 ವರ್ಷಗಳ ಹಿಂದಿನ 'DDLJ' ಸಿನಿಮಾದ ಕುರಿತು ಪೋಸ್ಟ್​ ಹಂಚಿಕೊಂಡಿರುವ ಕಾಜಲ್​, "ಈಗಲೂ ಹಸಿರು ಬಣ್ಣದ ದಿರಿಸು ಧರಿಸುತ್ತೇನೆ. ಆದರೆ, ಆಗಿನ ಶೇಡ್​ ಬರಲು ಸಾಧ್ಯವಿಲ್ಲ ಎಂದು ಅನಿಸುತ್ತದೆ. 28 ವರ್ಷಗಳ ನಂತರವೂ DDLJ ನಿಮಗೆ ಸೇರಿದೆ. ನಮ್ಮ ಎಲ್ಲಾ ಅಭಿಮಾನಿಗಳು ಮತ್ತು ಜನರು ಇದನ್ನು ಒಂದು ಪರಂಪರೆಯನ್ನಾಗಿ ಮಾಡಿಕೊಂಡಿದ್ದಾರೆ. ಅದು ನಾವು ಊಹಿಸಿರುವುದಕ್ಕಿಂತಲೂ ಹೆಚ್ಚಿನದಾಗಿದೆ. ನಿಮಗೆಲ್ಲರಿಗೂ ದೊಡ್ಡ ಜಯಘೋಷ" ಎಂದು ಬರೆದುಕೊಂಡಿದ್ದಾರೆ.

ಚಿತ್ರದಲ್ಲಿ ಶಾರುಖ್ ಖಾನ್ ಮತ್ತು ಕಾಜೋಲ್ ಮುಖ್ಯ ಭೂಮಿಕೆಯಲ್ಲಿದ್ದರು. ಚಿತ್ರವನ್ನು ಭಾರತ, ಲಂಡನ್ ಮತ್ತು ಸ್ವಿಟ್ಜರ್ಲೆಂಡ್‌ನಲ್ಲಿ ಚಿತ್ರೀಕರಿಸಲಾಗಿದೆ. ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ 1995 ರ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಲನಚಿತ್ರ ಮತ್ತು ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಭಾರತೀಯ ಚಲನಚಿತ್ರಗಳಲ್ಲಿ ಒಂದಾಗಿದೆ.

ಇದನ್ನೂ ಓದಿ: ಟೈಗರ್ 3: ಕತ್ರಿನಾ ಕೈಫ್ ಸ್ಟೈಲಿಶ್ ಫೋಟೋ ಹಂಚಿಕೊಂಡ ಸಲ್ಮಾನ್​ ಖಾನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.