ತೆಲುಗು ಚಿತ್ರರಂಗದ ನ್ಯಾಚುರಲ್ ಸ್ಟಾರ್ ನಾನಿ ಅಭಿನಯದ ಮೊದಲ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ 'ದಸರಾ' ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿದೆ. ತೆರೆಕಂಡ ಆರು ದಿನಗಳಲ್ಲಿ ದಸರಾ 100 ಕೋಟಿ ಕ್ಲಬ್ ಸೇರಿದೆ. ಹೌದು, ಟಾಲಿವುಡ್ನ ಬಹು ನಿರೀಕ್ಷಿತ ಚಿತ್ರವಾಗಿದ್ದ ‘ದಸರಾ’, ಅಭಿಮಾನಿಗಳನ್ನು ತಲುಪಿದ್ದು, ವಿಶ್ವಾದ್ಯಂತ 100 ಕೋಟಿ ರೂಪಾಯಿಗಳನ್ನು ಗಳಿಸಿದೆ.
ವಿದೇಶದಲ್ಲೂ ಒಳ್ಳೆ ಗಳಿಕೆ: 100 ಕೋಟಿ ಕ್ಲಬ್ ಸೇರುವ ಈ ಮೈಲಿಗಲ್ಲು ಸಾಧಿಸಿದ ನಾನಿ ಅವರ ಮೊದಲ ಚಿತ್ರ ಕೂಡ ಹೌದು. ಈ ಚಲನಚಿತ್ರವು ದೇಶೀಯ ಮಾರುಕಟ್ಟೆಯಲ್ಲಿ ಮಾತ್ರವಲ್ಲದೇ ಸಾಗರೋತ್ತರ ಸಿನಿಮಾ ಮಾರುಕಟ್ಟೆಗಳಲ್ಲಿಯೂ ತನ್ನ ಛಾಪು ಮೂಡಿಸಿದೆ. ವಿಶೇಷವಾಗಿ ಅಮೆರಿಕದಲ್ಲಿ ಎರಡು ಮಿಲಿಯನ್ ಡಾಲರ್‌ಗಳನ್ನು ತಲುಪುವ ಸಾಧ್ಯತೆಗಳಿವೆ.
-
Our effort. Your gift 🙏🏼
— Nani (@NameisNani) April 5, 2023 " class="align-text-top noRightClick twitterSection" data="
Cinema wins ♥️#Dasara pic.twitter.com/Rn0VR6nFkL
">Our effort. Your gift 🙏🏼
— Nani (@NameisNani) April 5, 2023
Cinema wins ♥️#Dasara pic.twitter.com/Rn0VR6nFkLOur effort. Your gift 🙏🏼
— Nani (@NameisNani) April 5, 2023
Cinema wins ♥️#Dasara pic.twitter.com/Rn0VR6nFkL
ನ್ಯಾಚುರಲ್ ಸ್ಟಾರ್ ನಾನಿ ಟ್ವೀಟ್: ಇತ್ತೀಚಿಗೆ ಬಿಡುಗಡೆಯಾಗಿರುವ ಹಲವು ಬಾಲಿವುಡ್ ಚಿತ್ರಗಳಿಗೆ 'ದಸರಾ' ಚಿತ್ರ ಕಠಿಣ ಸ್ಪರ್ಧೆ ನೀಡಿದೆ ಎಂದು ಕಲೆಕ್ಷನ್ ಸಾಬೀತು ಪಡಿಸಿದೆ. ಪ್ರೇಕ್ಷಕರಿಗೆ ಟ್ವಿಟರ್ ಖಾತೆಯಲ್ಲಿ ನಾನಿ ಕೃತಜ್ಞತೆ ಸಲ್ಲಿಸಿದ್ದಾರೆ. "ನಮ್ಮ ಪ್ರಯತ್ನ, ನಿಮ್ಮ ಕೊಡುಗೆ, ಸಿನಿಮಾ ಗೆಲ್ಲುತ್ತದೆ" ಎಂದು ಬರೆದುಕೊಂಡಿದ್ದಾರೆ.
ಅಭಿಮಾನಿಗಳ ಪ್ರತಿಕ್ರಿಯೆ... ನಟ ನಾನಿ ಅವರ ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಅಭಿಮಾನಿಗಳು, ಅಭಿನಂದನೆ ಸಲ್ಲಿಸಿದ್ದಾರೆ. ಅಭಿಮಾನಿಯೊಬ್ಬರು "ಈ ಚಿತ್ರದಲ್ಲಿ ನಿಮ್ಮ ಡೆಡಿಕೇಷನ್ ಸ್ಪಷ್ಟವಾಗಿ ಕಾಣುತ್ತಿದೆ, 100 ಕೋಟಿ ಕ್ಲಬ್‌ಗೆ ಸೇರಿದ್ದಕ್ಕೆ ಅಭಿನಂದನೆಗಳು" ಎಂದಿದ್ದಾರೆ. "ಅಭಿನಂದನೆಗಳು, ಆದರೆ ಇದು ಸಾಕಾಗುವುದಿಲ್ಲ, ಈ ಚಲನಚಿತ್ರವು ಹೆಚ್ಚಿನದ್ದಕ್ಕೆ ಅರ್ಹವಾಗಿದೆ" ಎಂದು ಮತ್ತೊಬ್ಬ ಸಾಮಾಜಿಕ ಜಾಲತಾಣ ಬಳಕೆದಾರರು ಬರೆದಿದ್ದಾರೆ. "ನಾನಿ ನಿಮ್ಮ ನಟನೆ, ಆ್ಯಕ್ಷನ್, ನೃತ್ಯ, ಎಲ್ಲಕ್ಕಿಂತ ಹೆಚ್ಚಾಗಿ ನೀವು ಅಜೇಯರಾಗಿದ್ದೀರಿ" ಎಂದು ಅಭಿಮಾನಿಯೊಬ್ಬರು ಮೆಚ್ಚುಗೆಯ ಮಳೆಯನ್ನೇ ಸುರಿಸಿದ್ದಾರೆ.
ಇದನ್ನೂ ಓದಿ: ರಾಕಿಂಗ್ ಸ್ಟಾರ್ ಯಶ್ ಸಿನಿಮಾ ನಿರ್ಮಿಸಲಿದ್ದಾರೆ ತೆಲುಗಿನ ದಿಲ್ ರಾಜು
'ದಸರಾ' ಸಿನಿಮಾ ಯಶಸ್ಸಿನ ಕಾರ್ಯಕ್ರಮವು ತೆಲಂಗಾಣದ ಕರೀಂನಗರದಲ್ಲಿ ಅದ್ಧೂರಿಯಾಗಿ ನಡೆಯಿತು. ಪರ ಭಾಷೆಗಳಲ್ಲಿ ಈ ಚಿತ್ರ ನಿಧಾನವಾಗಿ ಯಶಸ್ಸು ಕಾಣುತ್ತಿದ್ದರೂ ಕೂಡ ಸದ್ಯ ಸಿನಿಮಾದ ಬಗ್ಗೆ ಪಾಸಿಟಿವ್ ಟಾಕ್ ಆಗುತ್ತಿದೆ. ತೆಲಂಗಾಣದ ಕೊಲ್ಲಿಯರಿ ಹಳ್ಳಿಯಲ್ಲಿ ಈ ಚಿತ್ರ ಸೆಟ್ಟೇರಿತ್ತು. ಸದ್ಯ ದಸರಾ ಯಶಸ್ಸಿನ ಅಲೆಯಲ್ಲಿ ತೇಲುತ್ತಿದೆ. ಉತ್ತಮ ಕಥೆ ಹೇಳಿದ ರೀತಿ, ಅತ್ಯುತ್ತಮ ನಿರ್ದೇಶನ ಮತ್ತು ಪ್ರತಿಭಾವಂತ ನಟರ ಶಕ್ತಿ ಪ್ರದರ್ಶಿಸಿದೆ.
ಇದನ್ನೂ ಓದಿ: ರಾಕಿಂಗ್ ಸ್ಟಾರ್ ಯಶ್ ಸಿನಿಮಾ ನಿರ್ಮಿಸಲಿದ್ದಾರೆ ತೆಲುಗಿನ ದಿಲ್ ರಾಜು
ಎಸ್‌ಎಲ್‌ವಿ ಸಿನಿಮಾಸ್ ಬ್ಯಾನರ್ ಅಡಿ ಬಿಗ್ ಬಜೆಟ್ನಲ್ಲಿ ಸುಧಾಕರ್ ಚೆರುಕುರಿ ನಿರ್ಮಿಸಿರುವ ಈ ಚಿತ್ರವನ್ನು ಶ್ರೀಕಾಂತ್ ಒಡೆಲಾ ನಿರ್ದೇಶಿಸಿದ್ದಾರೆ. ಶ್ರೀಕಾಂತ್ ಒಡೆಲಾ ನಿರ್ದೇಶನದ ಚೊಚ್ಚಲ ಚಿತ್ರವಿದು. ನಾನಿ ಜೋಡಿಯಾಗಿ ನಟಿ ಕೀರ್ತಿ ಸುರೇಶ್ ಮಿಂಚಿದ್ದಾರೆ. ದೀಕ್ಷಿತ್ ಶೆಟ್ಟಿ, ಸಮುದ್ರಕನಿ, ಸಾಯಿಕುಮಾರ್, ಜರೀನಾ ವಹಾಬ್ ಸೇರಿದಂತೆ ಹಲವರು ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ತೆಲಂಗಾಣ ರಾಜ್ಯದ ವೀರ್ಲಪಲ್ಲಿ, ಸಿಂಗರೇಣಿ ಕಲ್ಲಿದ್ದಲಿನ ಪ್ರಪಂಚವನ್ನು ಈ ಸಿನಿಮಾದಲ್ಲಿ ಅನಾವರಣಗೊಳಿಸಲಾಗಿದೆ.