ಕಿರುತೆರೆಯ ಜನಪ್ರಿಯ ಕಾರ್ಯಕ್ರಮಗಳಲ್ಲಿ ಜೀ ಕನ್ನಡ ವಾಹಿನಿಯ 'ವೀಕೆಂಡ್ ವಿತ್ ರಮೇಶ್' ಕೂಡ ಒಂದು. ಈಗಾಗಲೇ ಸೀಸನ್ 5 ರಲ್ಲಿ 10 ಸಾಧಕರು ಬಂದಿದ್ದು, 11ನೆಯ ಅತಿಥಿಯಾಗಿ ನೃತ್ಯ ಸಾಧಕ ಚಿನ್ನಿ ಪ್ರಕಾಶ್ ಆಗಮಿಸಿದ್ದಾರೆ. ಆಕರ್ಷಕವಾಗಿರುವ ಕೆಂಪು ಸೀಟ್ನಲ್ಲಿ ಕುಳಿತು ಬಾಲ್ಯ, ಶಿಕ್ಷಣ, ಉದ್ಯೋಗ, ಸಿನಿಮಾ, ಕುಟುಂಬ, ಸ್ನೇಹಿತರು ಹೀಗೆ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸಾಕಷ್ಟು ಸಾಧನೆಗೈದ ಇವರು ತಮ್ಮ ಜೀವನದ ಕಥೆಯನ್ನು ಎಲ್ಲರ ಮುಂದೆ ತೆರೆದಿಟ್ಟಿದ್ದಾರೆ.
ಡ್ಯಾನ್ಸ್ ಮಾಸ್ಟರ್ ಆದದ್ದು ಹೇಗೆ?: ಭಾರತದ ಸ್ಟೈಲಿಶ್ ಕೊರಿಯೋಗ್ರಾಫರ್ ಚಿನ್ನಿ ಪ್ರಕಾಶ್ ಪರಿಚಯ ಸಾಮಾನ್ಯವಾಗಿ ಬಹುತೇಕರಿಗಿದೆ. ನೃತ್ಯ ಲೋಕದ ಸ್ಟಾರ್ ತಮ್ಮ ಜೀವನದಲ್ಲಿ ಅನೇಕ ಏಳು-ಬೀಳುಗಳನ್ನು ಕಂಡಿದ್ದಾರೆ. ಅವರು ವೇದಿಕೆಯಲ್ಲಿ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರನ್ನು ನೆನಪಿಸಿಕೊಂಡರು. ಅವರು ನಾನು ಇಲ್ಲದೇ ಸಾಂಗ್ಗಳನ್ನೇ ಮಾಡ್ತಾ ಇರಲಿಲ್ಲ ಎಂದು ಹೇಳಿದರು.
-
ನೃತ್ಯ ಲೋಕದ ಲೆಜೆಂಡ್ ಚಿನ್ನಿ ಪ್ರಕಾಶ್; ನಡೆದಾಡುವ ಗ್ರಂಥಾಲಯ ನಾ.ಸೋಮೇಶ್ವರ ಈ ವೀಕೆಂಡ್ ಅತಿಥಿಗಳು!
— Zee Kannada (@ZeeKannada) May 9, 2023 " class="align-text-top noRightClick twitterSection" data="
ವೀಕೆಂಡ್ ವಿತ್ ರಮೇಶ್-5 | ಶನಿ-ಭಾನು ರಾತ್ರಿ 9ಕ್ಕೆ.#WeekendWithRameshSeason5 #WeekendWithRamesh #WWR #WWR5 #RameshAravind #NSomeswara #ChinniMaster #ZeeKannada #BayasidaBaagiluTegeyona pic.twitter.com/DgnUaYdMHr
">ನೃತ್ಯ ಲೋಕದ ಲೆಜೆಂಡ್ ಚಿನ್ನಿ ಪ್ರಕಾಶ್; ನಡೆದಾಡುವ ಗ್ರಂಥಾಲಯ ನಾ.ಸೋಮೇಶ್ವರ ಈ ವೀಕೆಂಡ್ ಅತಿಥಿಗಳು!
— Zee Kannada (@ZeeKannada) May 9, 2023
ವೀಕೆಂಡ್ ವಿತ್ ರಮೇಶ್-5 | ಶನಿ-ಭಾನು ರಾತ್ರಿ 9ಕ್ಕೆ.#WeekendWithRameshSeason5 #WeekendWithRamesh #WWR #WWR5 #RameshAravind #NSomeswara #ChinniMaster #ZeeKannada #BayasidaBaagiluTegeyona pic.twitter.com/DgnUaYdMHrನೃತ್ಯ ಲೋಕದ ಲೆಜೆಂಡ್ ಚಿನ್ನಿ ಪ್ರಕಾಶ್; ನಡೆದಾಡುವ ಗ್ರಂಥಾಲಯ ನಾ.ಸೋಮೇಶ್ವರ ಈ ವೀಕೆಂಡ್ ಅತಿಥಿಗಳು!
— Zee Kannada (@ZeeKannada) May 9, 2023
ವೀಕೆಂಡ್ ವಿತ್ ರಮೇಶ್-5 | ಶನಿ-ಭಾನು ರಾತ್ರಿ 9ಕ್ಕೆ.#WeekendWithRameshSeason5 #WeekendWithRamesh #WWR #WWR5 #RameshAravind #NSomeswara #ChinniMaster #ZeeKannada #BayasidaBaagiluTegeyona pic.twitter.com/DgnUaYdMHr
"ನನ್ನ ತಂದೆಗೆ ನನ್ನನ್ನು ಹೀರೋ ಆಗಿ ನೋಡಬೇಕೆಂಬ ಆಸೆ ಇತ್ತು. ಆ ಕಾರಣಕ್ಕಾಗಿಯೇ ನಾನು ರಹಸ್ಯ ರಾತ್ರಿ ಎಂಬ ಸಿನಿಮಾ ಮಾಡಿದ್ದೆ. ಆದರೆ ಅದು ಸಕ್ಸಸ್ ಕಾಣದೇ ಕೈಯಲ್ಲಿರುವ ದುಡ್ಡೆಲ್ಲ ಖಾಲಿಯಾಯಿತು. ಮುಂದೆ ಬೇರೇನೂ ಮಾಡಲು ತೋಚದೇ ಡ್ಯಾನ್ಸ್ ಕೊರಿಯೋಗ್ರಾಫರ್ ಆದೆ. 1981ರಲ್ಲಿ ಮೊದಲ ಬಾರಿಗೆ ಮಿಸ್ಟರ್ ವಿಜಯ್ ಎಂಬ ಸಿನಿಮಾಗೆ ಕೊರಿಯೋಗ್ರಾಫರ್ ಆಗಿ ಸೇರಿಕೊಂಡೆ."
"ಆದರೆ, ಆ ಸಿನಿಮಾವೂ ನನ್ನ ಕೈ ಹಿಡಿಯಲಿಲ್ಲ. ಚಿತ್ರದ ಶೂಟಿಂಗ್ ಊಟಿಯಲ್ಲಿ ನಡೆಯುತ್ತಿರಬೇಕಾದ್ರೆ ಪರ್ವತದ ಮೇಲಿಂದ ನನಗೊಂದು ಶಾಟ್ ಬೇಕಿತ್ತು. ಅದಕ್ಕೆ ನಟಿಯನ್ನು ಸ್ಟೂಲ್ ಮೇಲೆ ನಿಂತು ಹಾರಲು ಹೇಳಿದೆ. ಅವರು ಹಾರುತ್ತಿದ್ದಂತೆ ಕೆಳಗೆ ಬಿದ್ದು, ಕಾಲು ಮುರಿದುಕೊಂಡರು. ಅಲ್ಲಿಗೆ ನನಗೆ ಸಿಕ್ಕಿದ ಅವಕಾಶವನ್ನೂ ಕಳೆದುಕೊಂಡೆ."
"ಅದಾಗಿ ನನಗೆ ಎಲ್ಲಿಯೂ ಕೆಲಸವೇ ಸಿಗಲಿಲ್ಲ. ಡ್ಯಾನ್ಸ್ ಮಾಡೋಕೆ ಬಂದಿದ್ದಾನಾ? ಅಥವಾ ಫೈಟ್ ಮಾಡೋಕೆ ಬಂದಿದ್ದಾನಾ? ಎಂದೆಲ್ಲಾ ಕೇಳಲು ಶುರು ಮಾಡಿದರು. ಆದರೆ ನನಗೆ ಏನಾದರೂ ಸಾಧಿಸಲೇಬೇಕೆಂಬ ಹಠವಿತ್ತು. ಎಲ್ಲರೂ ಡ್ಯಾನ್ಸ್ ಮಾಡ್ತಾರೆ, ನಾನೇನಾದ್ರೂ ಡಿಫರೆಂಟ್ ಆಗಿ ಮಾಡ್ಬೇಕು ಅಂತ ಅವಕಾಶಕ್ಕಾಗಿ ಬಹಳಷ್ಟು ಅಲೆದಾಡಿದೆ."
"ನನ್ನ ತಂದೆ ಕೊರಿಯೋಗ್ರಾಫರ್, ಆದ್ರೆ ಅವರ ಮಗನಾಗಿ ನನಗೆ ಒಂದೇ ಒಂದು ಚಾನ್ಸ್ ಕೂಡ ಸಿಗಲಿಲ್ಲ. ಸಿಕ್ಕ ಸಿಕ್ಕ ನಿರ್ದೇಶಕರ ಕಾಲು ಹಿಡಿದಿದ್ದೇನೆ. ಆಗೆಲ್ಲಾ ನನ್ನ ಜೀವನದಲ್ಲಿ ಗುರಿ ಅಂದ್ರೆ ಡ್ಯಾನ್ಸ್ ಅಂತಾನೇ ಇತ್ತು. ನನ್ನ ಕುಟುಂಬಕ್ಕೆ ಸಹಾಯ ಮಾಡಬೇಕು, ನನ್ನ ಸಹೋದರಿಯರಿಗೆ ಮದುವೆ ಮಾಡಬೇಕು ಎನ್ನುವುದಷ್ಟೇ ನನ್ನ ತಲೆಯಲ್ಲಿ ಇತ್ತು. ಇವತ್ತು ಇಷ್ಟು ದೊಡ್ಡ ಸ್ಥಾನ ಪಡೀಬೇಕಂದ್ರೆ ಬಹಳಷ್ಟು ಕಷ್ಟ ಪಟ್ಟಿದ್ದೇನೆ" ಎಂದು ಎಲ್ಲವನ್ನೂ ನೆನಪಿಸಿಕೊಂಡರು.
ಬಿಗ್ ಬಿ ಹೃದಯ ಗೆದ್ದ ಚಿನ್ನಿ ಮಾಸ್ಟರ್: ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರ ನಟನೆಯ ಹಮ್ ಸಿನಿಮಾ 1991 ರಲ್ಲಿ ರಿಲೀಸ್ ಆಯಿತು. ರಜನಿಕಾಂತ್, ಗೋವಿಂದ, ಶಿಲ್ಪಾ ಶಿರ್ಡೋರ್ಕರ್, ಅನುಪಮ್ ಖೇರ್ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದರು. ಹಮ್ ಸಿನಿಮಾದ ಜುಮ್ಮಾ ಚುಮ್ಮಾ ದೇ ದೇ... ಹಾಡು ಸೂಪರ್ ಹಿಟ್ ಆಯಿತು. ಈ ಹಾಡಿಗೆ ಕೊರಿಯೋಗ್ರಫಿ ಮಾಡಿದ್ದು ಕನ್ನಡದ ಚಿನ್ನಿ ಪ್ರಕಾಶ್. ಈ ಸುಂದರ ದಿನಗಳ ನೆನಪುಗಳನ್ನು ಅವರು ವೇದಿಕೆಯಲ್ಲಿ ಹಂಚಿಕೊಂಡರು.
ಇದನ್ನೂ ಓದಿ: ಪ್ರಿಯಾಂಕಾ ಚೋಪ್ರಾ 'ಮಿಸ್ ವರ್ಲ್ಡ್' ಕಿರೀಟ ಮುಡಿಗೇರಿಸಿಕೊಂಡಾಗ ಗಂಡ ನಿಕ್ ವಯಸ್ಸು ಜಸ್ಟ್ 7 ವರ್ಷ!