ಮುಂಬೈ: ಬಾಲಿವುಡ್ನ ಸ್ಟಾರ್ ದಂಪತಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ 2023ರ ಅತ್ಯುತ್ತಮ ನಟಿ ಮತ್ತು ನಟ ಗೌರವಕ್ಕೆ ಪಾತ್ರರಾಗಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ ಅವರ ಗಂಗೂಬಾಯಿ ಕಥಿವಾಡಿ ಚಿತ್ರದ ಗಂಗೂಬಾಯಿ ಪಾತ್ರಕ್ಕಾಗಿ ಆಲಿಯಾ ಭಟ್ ಮತ್ತು ಬ್ರಹ್ಮಾಸ್ತ್ರದ ನಟನೆಗಾಗಿ ರಣಬೀರ್ ಕಪೂರ್ ಅತ್ಯುತ್ತಮ ನಟ ಪ್ರಶಸ್ತಿ ದೊರೆತಿದೆ. ಕಾಂತಾರದ ಶಿವನ ಪಾತ್ರದಕ್ಕಾಗಿ ರಿಷಬ್ ಶೆಟ್ಟಿ ಅವರಿಗೆ ಭರವಸೆಯ ನಟ ಎಂಬ ಗೌರವ ಸಂದಿದೆ.
-
Congratulations @AnupamPKher on winning the “Most Versatile Actor” award at the #DadaSahebPhalkeAwards2023 @Dpiff_official !
— Mihir Vora (@theMihirV) February 21, 2023 " class="align-text-top noRightClick twitterSection" data="
Happy to be a a part of the function on behalf of @MaxLifeIns !! pic.twitter.com/crCxS7BzmT
">Congratulations @AnupamPKher on winning the “Most Versatile Actor” award at the #DadaSahebPhalkeAwards2023 @Dpiff_official !
— Mihir Vora (@theMihirV) February 21, 2023
Happy to be a a part of the function on behalf of @MaxLifeIns !! pic.twitter.com/crCxS7BzmTCongratulations @AnupamPKher on winning the “Most Versatile Actor” award at the #DadaSahebPhalkeAwards2023 @Dpiff_official !
— Mihir Vora (@theMihirV) February 21, 2023
Happy to be a a part of the function on behalf of @MaxLifeIns !! pic.twitter.com/crCxS7BzmT
ಸೋಮವಾರ ಮುಂಬೈನ ಪಂಚತಾರಾ ಹೋಟೆಲ್‌ನಲ್ಲಿ ನಡೆದ ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ 2023 ಪ್ರದಾನ ಕಾರ್ಯಕ್ರಮ ನಡೆಯಿತು. ಭೇದಿಯ ಚಿತ್ರಕ್ಕಾಗಿ ವರುಣ್ ಧವನ್ ವಿಮರ್ಶಕರ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದರು. ವಿವೇಕ್ ಅಗ್ನಿಹೋತ್ರಿ ಅವರ ದಿ ಕಾಶ್ಮೀರ್ ಫೈಲ್ಸ್ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಆರ್ಆರ್ಆರ್ ಚಿತ್ರಕ್ಕೆ ವರ್ಷದ ಚಲನಚಿತ್ರ ಪ್ರಶಸ್ತಿ ಸಂದಿದೆ. ಆರ್ ಬಾಲ್ಕಿ ಅವರಿಗೆ ಚುಪ್: ರಿವೆಂಜ್ ಆಫ್ ದಿ ಆರ್ಟಿಸ್ಟ್ ಚಿತ್ರಕ್ಕೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಸಿಕ್ಕಿದೆ.
ದಿ ಕಾಶ್ಮೀರ್ ಫೈಲ್ಸ್ ಚಿತ್ರಕ್ಕಾಗಿ, ಅನುಪಮ್ ಖೇರ್ ವರ್ಷದ ಬಹುಮುಖ ನಟ ಪ್ರಶಸ್ತಿಯನ್ನು ಪಡೆದರು. ನೀತು ಕಪೂರ್ ಅವರು, 'ನಮ್ಮ ಮನೆಗೆ ಎರಡು ಪ್ರಶಸ್ತಿಗಳು ಬಂದಿರುವುದು ಹೆಮ್ಮೆಯ ಕ್ಷಣವಾಗಿದೆ' ಎಂದು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಆಲಿಯಾ ಭಟ್ ಮತ್ತು ನೀತು ಅವರು ರೆಡ್ ಕಾರ್ಪೆಟ್ ಮೇಲೆ ಇರುವ ಫೋಟೋ ವನ್ನು ಹಂಚಿಕೊಂಡಿದ್ದಾರೆ.
ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ಟ್ವಿಟ್ಟರ್ನಲ್ಲಿ ಪ್ರಶಸ್ತಿ ಪಡೆದವರ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ವರುಣ್ ಧವನ್, ರೋನಿತ್ ರಾಯ್, ಶ್ರೇಯಸ್ ತಲ್ಪಾಡೆ, ಆರ್ ಬಾಲ್ಕಿ, ಸಾಹಿಲ್ ಖಾನ್, ನತಾಲಿಯಾ ಬರುಲಿಚ್, ಜಯಂತಿಲಾಲ್ ಗಡ, ಸ್ಯಾಚೆಟ್, ಪರಂಪರಾ, ವಿವೇಕ್ ಅಗ್ನಿಹೋತ್ರಿ, ರಿಷಬ್ ಶೆಟ್ಟಿ ಮತ್ತು ಹರಿಹರನ್ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.
ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ:
ಅತ್ಯುತ್ತಮ ಚಿತ್ರ: ದಿ ಕಾಶ್ಮೀರ್ ಫೈಲ್ಸ್
ಅತ್ಯುತ್ತಮ ನಿರ್ದೇಶಕ: ಆರ್ ಬಾಲ್ಕಿ ಚುಪ್: ರಿವೆಂಜ್ ಆಫ್ ದಿ ಆರ್ಟಿಸ್ಟ್
ಅತ್ಯುತ್ತಮ ನಟ: ಬ್ರಹ್ಮಾಸ್ತ್ರಕ್ಕಾಗಿ ರಣಬೀರ್ ಕಪೂರ್: ಭಾಗ 1
ಅತ್ಯುತ್ತಮ ನಟಿ: ಗಂಗೂಬಾಯಿ ಕಥಿಯಾವಾಡಿಗಾಗಿ ಆಲಿಯಾ ಭಟ್
ಭರವಸೆಯ ನಟ: ಕಾಂತಾರ ಚಿತ್ರಕ್ಕಾಗಿ ರಿಷಬ್ ಶೆಟ್ಟಿ
ಚಲನಚಿತ್ರೋದ್ಯಮದಲ್ಲಿ ಅತ್ಯುತ್ತಮ ಕೊಡುಗೆಗಾಗಿ ದಾದಾಸಾಹೇಬ್ ಫಾಲ್ಕೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿಗಳು 2023: ರೇಖಾ
ಅತ್ಯುತ್ತಮ ವೆಬ್ ಸರಣಿ: ರುದ್ರ: ದಿ ಎಡ್ಜ್ ಆಫ್ ಡಾರ್ಕ್ನೆಸ್
ವಿಮರ್ಶಕರ ಅತ್ಯುತ್ತಮ ನಟ: ಭೇದಿಯ ಚಿತ್ರಕ್ಕಾಗಿ ವರುಣ್ ಧವನ್
ವರ್ಷದ ಚಲನಚಿತ್ರ: ಆರ್ಆರ್ಆರ್
ವರ್ಷದ ದೂರದರ್ಶನ ಸರಣಿ: ಅನುಪಮಾ
ವರ್ಷದ ಬಹುಮುಖ ನಟ: ದಿ ಕಾಶ್ಮೀರ್ ಫೈಲ್ಸ್‌ಗಾಗಿ ಅನುಪಮ್ ಖೇರ್
ದೂರದರ್ಶನ ಸರಣಿಯಲ್ಲಿ ಅತ್ಯುತ್ತಮ ನಟ: ಫನಾ- ಇಷ್ಕ್ ಮೇ ಮಾರ್ಜಾವಾನ್‌ಗಾಗಿ ಜೈನ್ ಇಮಾಮ್
ಅತ್ಯುತ್ತಮ ಪುರುಷ ಗಾಯಕ: ಮೈಯ್ಯ ಮೈನುಗಾಗಿ ಸ್ಯಾಚೆಟ್ ಟಂಡನ್
ಅತ್ಯುತ್ತಮ ಮಹಿಳಾ ಗಾಯಕಿ: ಮೇರಿ ಜಾನ್‌ಗಾಗಿ ನೀತಿ ಮೋಹನ್
ಅತ್ಯುತ್ತಮ ಛಾಯಾಗ್ರಾಹಕ: ವಿಕ್ರಮ್ ವೇದ ಚಿತ್ರಕ್ಕಾಗಿ ಪಿ.ಎಸ್.ವಿನೋದ್
ಸಂಗೀತ ಉದ್ಯಮದಲ್ಲಿ ಅತ್ಯುತ್ತಮ ಕೊಡುಗೆಗಾಗಿ ದಾದಾಸಾಹೇಬ್ ಫಾಲ್ಕೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿಗಳು 2023: ಹರಿಹರನ್
ಇದನ್ನೂ ಓದಿ: "ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವ ಪ್ರಶಸ್ತಿ"ಯನ್ನು ಮೇರು ನಿರ್ದೇಶಕ ಭಗವಾನ್ಗೆ ಅರ್ಪಿಸಿದ ರಿಷಬ್ ಶೆಟ್ಟಿ