ಭಾರತೀಯ ಚಿತ್ರರಂಗದ ಹಿರಿಯ ನಟಿ ಆಶಾ ಪಾರೇಖ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ (Dada Saheb Phalke Award) ಘೋಷಣೆಯಾಗಿದೆ. ಭಾರತ ಸರ್ಕಾರದ ವತಿಯಿಂದ ಈ ಪ್ರಶಸ್ತಿ ನೀಡಲಾಗುತ್ತದೆ. 2019ನೇ ಸಾಲಿನ ಈ ಗೌರವ ರಜಿನಿಕಾಂತ್ ಅವರಿಗೆ ಸಂದಿತ್ತು. 2020ನೇ ವರ್ಷದ ಪ್ರಶಸ್ತಿಯನ್ನು ನಟಿ ಆಶಾ ಪಾರೇಖ್ ಅವರಿಗೆ ನೀಡಲಾಗುತ್ತಿದೆ.
ಭಾರತೀಯ ಚಿತ್ರರಂಗಕ್ಕೆ ನಟಿ ಆಶಾ ಪಾರೇಖ್ ಅವರು ಸಾಕಷ್ಟು ಕೊಡುಗೆ ನೀಡಿದ್ದು ಈಗಾಗಲೇ ಹಲವು ಗೌರವಗಳಿಗೆ ಪಾತ್ರರಾಗಿದ್ದಾರೆ. ಅವರ ಸಾಧನೆಯನ್ನು ಗುರುತಿಸಿ 'ಪದ್ಮಶ್ರೀ', 'ಫಿಲ್ಮ್ಫೇರ್' ಸೇರಿದಂತೆ ಅನೇಕ ಗೌರವಗಳು ಸಿಕ್ಕಿದ್ದು, ಅವುಗಳ ಸಾಲಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಕೂಡ ಸೇರ್ಪಡೆ ಆಗಿದೆ.
-
Dadasaheb Phalke Award to be given to veteran actress Asha Parekh this year
— ANI (@ANI) September 27, 2022 " class="align-text-top noRightClick twitterSection" data="
(File Pic) pic.twitter.com/lGj5Kl92Oa
">Dadasaheb Phalke Award to be given to veteran actress Asha Parekh this year
— ANI (@ANI) September 27, 2022
(File Pic) pic.twitter.com/lGj5Kl92OaDadasaheb Phalke Award to be given to veteran actress Asha Parekh this year
— ANI (@ANI) September 27, 2022
(File Pic) pic.twitter.com/lGj5Kl92Oa
ಚಿತ್ರರಂಗದಲ್ಲಿ 1952ರಲ್ಲಿ ಆಶಾ ಪಾರೇಖ್ ಅವರು ಅಭಿನಯ ಆರಂಭಿಸಿದರು. ಆಸ್ಮಾನ್ ಸಿನಿಮಾ ಮೂಲಕ ಬಾಲ ನಟಿಯಾಗಿ ಗುರುತಿಸಿಕೊಂಡ ಅವರನ್ನು ಬೇಬಿ ಆಶಾ ಪಾರೇಖ್ ಎಂದು ಕರೆಯಲಾಗುತ್ತಿತ್ತು. ಬಳಿಕ 1959ರಲ್ಲಿ 'ದಿಲ್ ದೇಕೆ ದೇಖೋ' ಚಿತ್ರದ ಮೂಲಕ ಹೀರೋಯಿನ್ ಆಗಿ ಶೈನ್ ಆದರು. ಆ ಸಿನಿಮಾದಲ್ಲಿ ಅವರು ಶಮ್ಮಿ ಕಪೂರ್ಗೆ ಜೋಡಿಯಾಗಿ ನಟಿಸಿದ್ದರು. ಮೊದಲ ಚಿತ್ರದಲ್ಲಿ ಭರ್ಜರಿ ಯಶಸ್ಸು ಪಡೆದುಕೊಂಡು, ನಂತರ ಅನೇಕ ಸಿನಿಮಾಗಳಲ್ಲಿ ನಟಿಸಿ ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ.
''ಆಶಾ ಪರೇಖ್ ಅವರಿಗೆ 2020ರ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು. ಇದು ಭಾರತೀಯ ಸಿನಿಮಾ ಕ್ಷೇತ್ರದ ಅತ್ಯುನ್ನತ ಮನ್ನಣೆಯಾಗಿದೆ'' ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಇಂದು ತಿಳಿಸಿದ್ದಾರೆ. ಶುಕ್ರವಾರ ನಡೆಯಲಿರುವ 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 79 ವರ್ಷದ ಆಶಾ ಪಾರೇಖ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಇದನ್ನೂ ಓದಿ: ಆಸ್ಕರ್ ಅವಾರ್ಡ್ 2022.. ನಿರ್ದೇಶಕ ಪವನ್ ಒಡೆಯರ್ಗೆ ಜ್ಯೂರಿ ಸ್ಥಾನ
ಆಶಾ ಭೋಂಸ್ಲೆ, ಹೇಮಾ ಮಾಲಿನಿ, ಪೂನಂ ಧಿಲ್ಲೋನ್, ಉದಿತ್ ನಾರಾಯಣ್ ಮತ್ತು ಟಿಎಸ್ ನಾಗಾಭರಣ ಅವರನ್ನೊಳಗೊಂಡ ಐದು ಸದಸ್ಯರ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸಮಿತಿಯು ಆಶಾ ಪಾರೇಖ್ ಅವರ ಹೆಸರನ್ನು ಈ ಗೌರವಕ್ಕೆ ನಿರ್ಧರಿಸಿದೆ. ಹಿರಿಯ ನಟಿಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಘೋಷಿಸುವುದು ಸಚಿವಾಲಯಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದು ಸಚಿವರು ಹಿಮಾಚಲ ಪ್ರದೇಶದ ಹಮೀರ್‌ಪುರದಲ್ಲಿ ತಿಳಿಸಿದರು.
ಆಶಾ ಪಾರೇಖ್ ಹಿರಿಯ ಚಿತ್ರರಂಗದ ಪ್ರಭಾವಿ ನಟಿ. 95ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅದ್ಭುತ ಅಭಿನಯ ಮಾಡಿರುವ ಕೀರ್ತಿ ಹೊಂದಿದ್ದಾರೆ. 1998-2001 ರವರೆಗೆ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC)ನ ಮೊದಲ ಮಹಿಳಾ ಅಧ್ಯಕ್ಷೆಯಾಗಿಯೂ ಸೇವೆ ಸಲ್ಲಿಸಿದ್ದಾರೆ.
ಆಶಾ ಪಾರೇಖ್ ಅವರಿಗೆ ಈ ಪ್ರತಿಷ್ಠಿತ ಫಾಲ್ಕೆ ಪ್ರಶಸ್ತಿ ಸಿಕ್ಕಿರುವುದು ಚಿತ್ರರಂಗ, ಅಭಿಮಾನಿಗಳಿಗೆ ಮತ್ತು ಆಪ್ತರಿಗೆ ಸಂತಸ ತಂದಿದೆ. ಎಲ್ಲರೂ ಅವರಿಗೆ ಅಭಿನಂದನೆ ತಿಳಿಸುತ್ತಿದ್ದಾರೆ. ಆಶಾ ಪಾರೇಖ್ ನಟಿಸಿದ ಗಮನಾರ್ಹ ಸಿನಿಮಾಗಳನ್ನು ನೆನಪು ಮಾಡಿಕೊಳ್ಳಲಾಗುತ್ತಿದೆ. ಹಿಂದಿ ಸಿನಿಮಾ ಮಾತ್ರವಲ್ಲದೇ ಪಂಜಾಬಿ ಭಾಷೆಯ ಚಿತ್ರಗಳಲ್ಲೂ ನಟಿಸಿದ್ದ ಅವರು 1999ರ ಬಳಿಕ ಅವರು ಯಾವುದೇ ಸಿನಿಮಾದಲ್ಲಿ ಬಣ್ಣ ಹಚ್ಚಿಲ್ಲ.