ETV Bharat / entertainment

'ಟಗರು ಪಲ್ಯ' ಸಿನಿಮಾ ವೀಕ್ಷಣೆಗೆ ಸಿಎಂ ಸಿದ್ದರಾಮಯ್ಯರನ್ನು ಆಹ್ವಾನಿಸಿದ ಡಾಲಿ ಧನಂಜಯ್​ - etv bharat kannada

'ಟಗರು ಪಲ್ಯ' ಸಿನಿಮಾ ಅ.27ರಂದು ಬಿಡುಗಡೆಯಾಗಲಿದ್ದು, ಡಾಲಿ ಧನಂಜಯ್ ಅವರು ಸಿಎಂ ಸಿದ್ದರಾಮಯ್ಯರನ್ನು ​ಚಿತ್ರ ವೀಕ್ಷಣೆಗೆ ಆಹ್ವಾನಿಸಿದ್ದಾರೆ.

Daali Dhananjay met CM Siddaramaiah and invited him to watch his production movie tagaru palya
'ಟಗರು ಪಲ್ಯ' ಸಿನಿಮಾ ವೀಕ್ಷಣೆಗೆ ಸಿಎಂ ಸಿದ್ದರಾಮಯ್ಯರನ್ನು ಆಹ್ವಾನಿಸಿದ ಡಾಲಿ ಧನಂಜಯ್​
author img

By ETV Bharat Karnataka Team

Published : Oct 20, 2023, 10:49 PM IST

ಕನ್ನಡ ಚಿತ್ರರಂಗದ ಜನಪ್ರಿಯ ನಟ ಡಾಲಿ ಧನಂಜಯ್​​ ಪ್ರೇಕ್ಷಕರಿಗೆ ಉತ್ತಮ ಸಿನಿಮಾಗಳನ್ನು ಕೊಡುವ ಮೂಲಕ ಯಶಸ್ವಿ ವೃತ್ತಿಜೀವನ ನಡೆಸುತ್ತಿದ್ದಾರೆ. ಡಾಲಿ ಕೇವಲ ನಟನಾಗಿ ಮಾತ್ರವಲ್ಲದೇ, ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದಾರೆ. ಇವರ ಚಲನಚಿತ್ರ ನಿರ್ಮಾಣ ಸಂಸ್ಥೆಯ ಹೆಸರು 'ಡಾಲಿ ಪಿಕ್ಷರ್ಸ್'. ಈ ತಂಡದ ಮೂರನೇ ಪ್ರಯತ್ನವೇ 'ಟಗರು ಪಲ್ಯ'. ಸೆಟ್ಟೇರಿದ ದಿನದಿಂದಲೂ ಭಾರೀ ಸದ್ದು ಮಾಡುತ್ತಿರುವ ಈ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.

ಉಮೇಶ್​​ ಕೆ.ಕೃಪ ಆ್ಯಕ್ಷನ್​ ಕಟ್​ ಹೇಳಿರುವ 'ಟಗರು ಪಲ್ಯ'ಗೆ ಸ್ಯಾಂಡಲ್​ವುಡ್​ನ ಪ್ರತಿಭಾವಂತ ನಟ ನಾಗಭೂಷಣ್​ ನಾಯಕನಾಗಿದ್ದಾರೆ. ಈ ಸಿನಿಮಾ ಮೂಲಕ ಕನ್ನಡಿಗರಿಗೆ ನಾಯಕ ನಟಿಯಾಗಿ ಅಮೃತಾ ಪ್ರೇಮ್ ಪರಿಚಿತರಾಗಲಿದ್ದಾರೆ. ಕಳೆದ ಡಿಸೆಂಬರ್​​ನಲ್ಲಿ ಚಿತ್ರೀಕರಣ ಆರಂಭಿಸಿದ್ದು, ಇತ್ತೀಚೆಗಷ್ಟೇ ಶೂಟಿಂಗ್​ ಪೂರ್ಣಗೊಳಿಸಿತ್ತು. ಬಿಡುಗಡೆಗೆ ತಯಾರಿ ಆರಂಭಗೊಂಡಿದ್ದು, ಸಿನಿಮಾ ಪ್ರಮೋಶನ್​​ ಕೂಡ ಶುರುವಾಗಿದೆ. 'ಟಗರು ಪಲ್ಯ' ಇದೇ 27ಕ್ಕೆ ಬಿಡುಗಡೆಯಾಗಲಿದ್ದು, ಡಾಲಿ ಧನಂಜಯ್ ಅವರು ಸಿಎಂ ಸಿದ್ದರಾಮಯ್ಯರನ್ನು ​ಚಿತ್ರ ವೀಕ್ಷಣೆಗೆ ಆಹ್ವಾನಿಸಿದ್ದಾರೆ. ಈ ವೇಳೆ ನಟಿ ತಾರಾ ಜೊತೆಗಿದ್ದರು.

ಎಕ್ಸ್​ನಲ್ಲಿ ಡಾಲಿ ಭೇಟಿಯ ಕುರಿತು ಫೋಟೋಗಳನ್ನು ಹಂಚಿಕೊಂಡಿರುವ ಸಿಎಂ, "ಕನ್ನಡ ಚಿತ್ರರಂಗದ ಖ್ಯಾತ ನಟ ಡಾಲಿ ಧನಂಜಯ ಅವರು ಇಂದು ನನ್ನನ್ನು ಭೇಟಿ ಮಾಡಿ "ಟಗರು ಪಲ್ಯ" ಸಿನಿಮಾ ವೀಕ್ಷಣೆಗೆ ಆಗಮಿಸುವಂತೆ ಆಹ್ವಾನಿಸಿದರು. ನಟಿ ತಾರಾ ಅವರು ಈ ವೇಳೆ ಜೊತೆಗಿದ್ದರು" ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಧನಂಜಯ್​, "ತುಂಬು ಹೃದಯದ ಧನ್ಯವಾದಗಳು ಸರ್. ತಮ್ಮ ಆಗಮನಕ್ಕಾಗಿ ಇಡೀ ತಂಡ ಕಾಯುತ್ತಿದೆ" ಎಂದಿದ್ದಾರೆ.

ಇದನ್ನೂ ಓದಿ: 'ಹಾಕೊ ಸ್ಟೆಪ್ ಹ್ಯಾಂಗಾರ ಇರ್ಲಿ, ಹಾಡು ಟಗರುಪಲ್ಯದಾಗಿರ್ಲಿ.. ನಿಮ್ದು ಒಂದು ರೀಲ್ ಬರ್ಲಿ'

ಟ್ರೇಲರ್​ ರಿಲೀಸ್​: 'ಟಗರು ಪಲ್ಯ'ದ ಟ್ರೇಲರ್​ ಬಿಡುಗಡೆ ಕಾರ್ಯಕ್ರಮವನ್ನು ಇತ್ತೀಚೆಗೆ ಬೆಂಗಳೂರಿನ ಕಲಾವಿದರ ಸಂಘದಲ್ಲಿ ಹಮ್ಮಿಕೊಳ್ಳಲಾಗಿತ್ತು. ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಟ್ರೇಲರ್​ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು. ಹಿರಿಯ ನಟರಾದ ತಾರಾ ಅನುರಾಧ, ರಂಗಾಯಣ ರಘು, ಡಾಲಿ ಧನಂಜಯ್​, ಅಮೃತಾ, ನಾಗಭೂಷಣ್ ಸೇರಿದಂತೆ ನೀನಾಸಂ ಸತೀಶ್ ಹಾಗೂ ನೆನಪಿರಲಿ ಪ್ರೇಮ್ ಈ ವೇಳೆ ಉಪಸ್ಥಿತರಿದ್ದರು.

ಚಿತ್ರತಂಡ: ಚಿತ್ರದಲ್ಲಿ ನಾಗಭೂಷಣ್​, ಅಮೃತಾ ಪ್ರೇಮ್​ ಜೊತೆಗೆ ರಂಗಾಯಣ ರಘು ತಾರಾ, ಶರತ್ ಲೋಹಿತಾಶ್ವ, ವೈಜನಾಥ್ ಬಿರಾದಾರ್ ಸೇರಿದಂತೆ ದೊಡ್ಡ ತಾರಾಬಳಗವಿದೆ. ಉಮೇಶ್ ಕೆ. ಕೃಪ ನಿರ್ದೇಶನದ ಚೊಚ್ಚಲ ಚಿತ್ರವಿದು. ಟಗರು ಪಲ್ಯ ಕಟೆಂಟ್ ಆಧಾರಿತ ಸಿನಿಮಾವಾಗಿದ್ದು, ವಾಸುಕಿ ವೈಭವ್ ಸಂಗೀತ ನಿರ್ದೇಶನ, ಎಸ್.ಕೆ ರಾವ್ ಕ್ಯಾಮರಾ ವರ್ಕ್ ಇದೆ. ಡಾಲಿ ಧನಂಜಯ್ ಅವರ ಡಾಲಿ ಪಿಕ್ಚರ್ಸ್ ಅಡಿ ನಿರ್ಮಾಣಗೊಂಡಿದೆ. ಈ ಬಾರಿ ಹೊಸ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ನೀಡಲಾಗಿದೆ. ಚಿತ್ರವು ಅಕ್ಟೋಬರ್ 27ರಂದು ಪ್ರೇಕ್ಷಕರ ಎದುರು ಬರಲಿದೆ.

ಇದನ್ನೂ ಓದಿ: 'ಟಗರು ಪಲ್ಯ' ಟ್ರೇಲರ್​ ಬಿಡುಗಡೆ: ಡಾಲಿ ಪಿಕ್ಚರ್ಸ್​ನಡಿ ನನಗೂ ಅವಕಾಶ ಕೊಡಿ- ದರ್ಶನ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.