ETV Bharat / entertainment

ಅಭಿನಯ ಚಕ್ರವರ್ತಿ ಸುದೀಪ್​ಗೆ ಬ್ಯಾಟ್​ ಗಿಫ್ಟ್​​ ಕೊಟ್ಟ ಕ್ರಿಕೆಟರ್​ ಜೋಸ್​ ಬಟ್ಲರ್​! - ಜೋಸ್ ಬಟ್ಲರ್ ಬ್ಯಾಟ್

ಪ್ರಸಕ್ತ ಸಾಲಿನ ಐಪಿಎಲ್​​ನಲ್ಲಿ ಬ್ಯಾಟಿಂಗ್​ನಲ್ಲಿ ಅಬ್ಬರಿಸಿದ ಇಂಗ್ಲೆಂಡ್ ಬ್ಯಾಟರ್​ ಜೋಸ್ ಬಟ್ಲರ್​, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​​ ಅವರಿಗೆ ವಿಶೇಷ ಉಡುಗೊರೆ ನೀಡಿದ್ದಾರೆ.

cricketer jos buttler giffted bat to actor kiccha sudeep

author img

By

Published : Jun 10, 2022, 12:25 PM IST

2022ರ ಇಂಡಿಯನ್​ ಪ್ರೀಮಿಯರ್ ಲೀಗ್​​ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಬ್ಯಾಟರ್​ ಜೋಸ್​ ಬಟ್ಲರ್​ ಅಬ್ಬರಿಸಿ ಬೊಬ್ಬೆರಿದ ವಿಚಾರ ಎಲ್ಲರಿಗೂ ಗೊತ್ತಿದೆ. ಪ್ರಸಕ್ತ ಸಾಲಿನ ಆವೃತ್ತಿಯಲ್ಲಿ ಅತಿ ಹೆಚ್ಚು ರನ್​​​ಗಳಿಕೆ ಮಾಡಿ, ಆರೆಂಜ್​ ಕ್ಯಾಪ್​ ಪಡೆದುಕೊಂಡಿದ್ದಾರೆ. ಇದರ ಮಧ್ಯೆ ಸ್ಯಾಂಡಲ್​​​ವುಡ್​​ನ ಅಭಿನಯ ಚಕ್ರವರ್ತಿ ಸುದೀಪ್​​​ ಅವರಿಗೆ ವಿಶೇಷ ಗಿಫ್ಟ್​ ನೀಡಿ, ಕನ್ನಡಿಗರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಕ್ರಿಕೆಟ್ ಮೇಲೆ ಹೆಚ್ಚಿನ ಪ್ರೀತಿ ಹೊಂದಿರುವ ಸುದೀಪ್​ ಈಗಾಗಲೇ ಸಿಸಿಎಲ್, ಕೆಪಿಎಲ್​​​​​ನಲ್ಲಿ ನಾಯಕತ್ವ ಜವಾಬ್ದಾರಿ ನಿರ್ವಹಿಸಿದ್ದಾರೆ. ಅವರಿಗೆ ಇಂಗ್ಲೆಂಡ್​ ಕ್ರಿಕೆಟ್ ತಂಡದ ಸ್ಫೋಟಕ ಬ್ಯಾಟರ್​ ಬಟ್ಲರ್​​ ಬ್ಯಾಟ್​ವೊಂದನ್ನ​ ಉಡುಗೊರೆಯಾಗಿ ನೀಡಿದ್ದಾರೆ. 2022ರ ಐಪಿಎಲ್​​ನಲ್ಲಿ ತಾವು ಬಳಕೆ ಮಾಡಿರುವ ಬ್ಯಾಟ್​​ ಅನ್ನ ಸುದೀಪ್​​​ ಅವರಿಗೆ ಉಡುಗೊರೆಯಾಗಿ ನೀಡಿದ್ದು, ಅದರ ಮೇಲೆ ಸಹಿ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಟ್ವಿಟರ್​​ನಲ್ಲಿ ನಟ ಸುದೀಪ್​​ ವಿಡಿಯೋ ಪೋಸ್ಟ್​ ಮಾಡಿದ್ದಾರೆ.

ಬ್ಯಾಟ್ ಸಿಗಲು ಸಹಾಯ ಮಾಡಿದ ರಾಜಸ್ಥಾನ ರಾಯಲ್ಸ್ ತಂಡದ ಆಟಗಾರ ಕನ್ನಡಿಗ ಕೆ.ಸಿ.ಕಾರ್ಯಪ್ಪ ಹಾಗೂ ರಾಜಸ್ಥಾನ ರಾಯಲ್ಸ್ ತಂಡಕ್ಕೂ ಧನ್ಯವಾದ ಸಲ್ಲಿಸಿರುವ ಕಿಚ್ಚ ಸುದೀಪ್​, ನಿಜಕ್ಕೂ ನನಗೆ ತುಂಬಾ ಅಚ್ಚರಿಯಾಯಿತು. ನಿಜಕ್ಕೂ ಇದನ್ನು ನಿರೀಕ್ಷೆ ಮಾಡಿರಲಿಲ್ಲ. ಇದನ್ನ ಸಾಧ್ಯವಾಗಿಸಿದ ನನ್ನ ಸ್ನೇಹಿತ ಕೆಸಿ ಕಾರ್ಯಪ್ಪಗೂ ಥ್ಯಾಂಕ್ಸ್ ಹೇಳುತ್ತೇನೆ. ಆದರೆ, ಈ ವಿಡಿಯೋ ವಿಶೇಷವಾಗಿ ಜೋಸ್ ಬಟ್ಲರ್ ಸಲುವಾಗಿ. ವೈಯಕ್ತಿಕವಾಗಿ ನೀವು ಸಹಿ ಮಾಡಿರುವ ಬ್ಯಾಟ್​ ನನಗೆ ನೀಡಿರುವುದಕ್ಕೆ ಥ್ಯಾಂಕ್ಸ್​ ಎಂದು ಹೇಳಿಕೊಂಡಿದ್ದಾರೆ. ಕಿಚ್ಚ ಸುದೀಪ್​ ತಮ್ಮ ಮುಂದಿನ ಚಿತ್ರ ವಿಕ್ರಾಂತ್ ರೋಣ ಬಿಡುಗಡೆ ತಯಾರಿಯಲ್ಲಿದ್ದು, ತಮಗೆ ಸಮಯ ಸಿಕ್ಕಾಗಲೆಲ್ಲ ಕ್ರಿಕೆಟ್​ ಆಡುತ್ತಿರುತ್ತಾರೆ.

2022ರ ಐಪಿಎಲ್​​ನಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನ ಫೈನಲ್​ಗೆ ಕರೆದೊಯ್ಯುವಲ್ಲಿ ಜೋಸ್ ಬಟ್ಲರ್ ಯಶಸ್ವಿಯಾಗಿದ್ದರು. ತಾವು ಆಡಿರುವ ಒಟ್ಟು 15 ಪಂದ್ಯಗಳಿಂದ 718ರನ್​​​ಗಳಿಕೆ ಮಾಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.