ETV Bharat / entertainment

ಸೆಪ್ಟೆಂಬರ್‌ 1ರಂದು ಸಿನಿಮಾ ಪ್ರೇಮಿಗಳಿಗೆ 'ಕುಶಿ': ಸಮಂತಾ, ದೇವರಕೊಂಡಗೆ ಸಿಗುತ್ತಾ ಸಕ್ಸಸ್‌? - Vijay Deverakonda

Kushi movie: ಸಮಂತಾ ರುತ್​ ಪ್ರಭು ಹಾಗೂ ವಿಜಯ್ ದೇವರಕೊಂಡ ಅಭಿನಯದ ಕುಶಿ ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ.

Kushi movie
ಕುಶಿ ಸಿನಿಮಾ
author img

By ETV Bharat Karnataka Team

Published : Aug 30, 2023, 6:59 PM IST

ಟೈಟಲ್​​​ನಿಂದಲೇ ಸಿನಿಪ್ರೇಮಿಗಳಲ್ಲಿ ಕುತೂಹಲ ಹುಟ್ಟಿಸಿರುವ ಸಿನಿಮಾ 'ಕುಶಿ'. ದಕ್ಷಿಣ ಚಿತ್ರರಂಗದ ಬಹುಬೇಡಿಕೆಯ ಕಲಾವಿದರಾದ ಸಮಂತಾ ರುತ್​ ಪ್ರಭು ಹಾಗೂ ವಿಜಯ್ ದೇವರಕೊಂಡ ಮುಖ್ಯಭೂಮಿಕೆಯ ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಈಗಾಗಲೇ ಅನಾವರಣಗೊಂಡಿರುವ ಟ್ರೇಲರ್ ಹಾಗೂ ಹಾಡುಗಳು ಭರಪೂರ ಮೆಚ್ಚುಗೆ ಗಳಿಸಿವೆ. ಅಡ್ವಾನ್ಸ್ ಟಿಕೆಟ್​ ಬುಕಿಂಗ್​​ ಶುರುವಾಗಿದ್ದು, ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ.

'ಕುಶಿ' ಪ್ಯಾನ್ ಇಂಡಿಯಾ ಸಿನಿಮಾ. ತೆಲುಗು, ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ತೆರೆ ಕಾಣುತ್ತಿದೆ. ಮೈತ್ರಿ ಮೂವಿ ಬ್ಯಾನರ್ ಅಡಿಯಲ್ಲಿ ಈ ಸಿನಿಮಾವನ್ನು ಅದ್ಧೂರಿಯಾಗಿ ನಿರ್ಮಿಸಲಾಗಿದೆ. ಸಮಂತಾ ಹಾಗೂ ನಾಗಚೈತನ್ಯ ನಟಿಸಿದ್ದ 'ಮಜಿಲಿ' ಸಿನಿಮಾದ ನಿರ್ದೇಶಕ ಶಿವ ನಿರ್ವಾಣ ಆ್ಯಕ್ಷನ್ ಕಟ್ ಹೇಳಿದ್ದಾರೆ.

  • " class="align-text-top noRightClick twitterSection" data="">

ರೊಮ್ಯಾಂಟಿಕ್ ಲವ್ ಸ್ಟೋರಿ 'ಕುಶಿ'ಯಲ್ಲಿ ಜಯರಾಮ್, ಮುರಳಿ ಶರ್ಮಾ, ಲಕ್ಷ್ಮೀ, ಅಲಿ, ವೆನ್ನೆಲಾ ಕಿಶೋರ್, ರೋಹಿಣಿ ಸೇರಿದಂತೆ ಹಲವರಿದ್ದಾರೆ. ಹೇಷಂ ಅಬ್ದುಲ್ ವಹಾಬ್ ಸಂಗೀತ, ಜಿ.ಮುರಳಿ ಛಾಯಾಗ್ರಹಣ, ಪ್ರವೀಣ್ ಪುಡಿ ಸಂಕಲನವಿದೆ. ಸೆಪ್ಟೆಂಬರ್ 1ಕ್ಕೆ ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ತಮ್ಮ ಅಭಿನಯದ ಕೊನೆಯ ಸಿನಿಮಾಗಳಲ್ಲಿ ಕೊಂಚ ಹಿನ್ನೆಡೆ ಕಂಡಿರುವ ವಿಜಯ್ ದೇವರಕೊಂಡ ಮತ್ತು ಸಮಂತಾ ರುತ್​ ಪ್ರಭು ಅವರಿಗೆ 'ಕುಶಿ' ಕೊಡುತ್ತಾ ಎಂಬುದನ್ನು ಕಾದುನೋಡಬೇಕಿದೆ.

ಕುಶಿ ರನ್​ ಟೈಮ್​​ 2 ಗಂಟೆ 43 ನಿಮಿಷ. ಅಂದರೆ ಒಟ್ಟು 163 ನಿಮಿಷಗಳು. ಮೊದಲ ಭಾಗ 1 ಗಂಟೆ 19 ನಿಮಿಷ ಇದ್ದರೆ, ಎರಡನೇ ಭಾಗ 1 ಗಂಟೆ 24 ನಿಮಿಷ ಇರಲಿವೆ. ಅಡ್ವಾನ್ಸ್ ಟಿಕೆಟ್​ ಬುಕಿಂಗ್ ಸಕಾರಾತ್ಮಕವಾಗಿದ್ದು, ಸಿನಿಮಾ ಉತ್ತಮ ಓಪನಿಂಗ್​ ಪಡೆಯಲಿದೆ ಎಂಬುದು ಸಿನಿ ಪಂಡಿತರ ಅಭಿಪ್ರಾಯ.

ಇದನ್ನೂ ಓದಿ: Raksha Bandhan: ರಕ್ಷಾಬಂಧನ ಆಚರಿಸಿದ ರಿಷಬ್​ ಶೆಟ್ಟಿ ಮಕ್ಕಳು - ಅಣ್ಣ ತಂಗಿಯ​ ಕ್ಯೂಟ್​ ಫೋಟೋಗಳಿಲ್ಲಿವೆ

ಸಮಂತಾ ರುತ್​ ಪ್ರಭು ದಕ್ಷಿಣ ಚಿತ್ರರಂಗದ ಬಹುಬೇಡಿಕೆಯ ನಟಿ. ನಟಿಯ ಕೊನೆಯ ಸಿನಿಮಾ ಶಾಕುಂತಲಂ ಹೇಳಿಕೊಳ್ಳುವಷ್ಟು ಸದ್ದು ಮಾಡಲಿಲ್ಲ. ಕುಶಿ ಮತ್ತು ಸಿಟಾಡೆಲ್​ ಶೂಟಿಂಗ್​​ ಪೂರ್ಣಗೊಳಿಸಿರುವ ನಟಿ ಸದ್ಯ ಯಾವುದೇ ಹೊಸ ಸಿನಿಮಾ ಘೋಷಿಸಿಲ್ಲ. ಇದಕ್ಕೆ ಬದಲಾಗಿ ಆರೋಗ್ಯ ಚೇತರಿಕೆಗೆ ಸಮಯ ಮೀಸಲಿಟ್ಟಿದ್ದಾರೆ. ಹಾಗಾಗಿ ಸದ್ಯ ನಟಿಗೆ ಗೆಲುವಿನ 'ಕುಶಿ'ಯ ಅವಶ್ಯಕತೆ ಇದೆ. ಅನಾರೋಗ್ಯದ ವಿರುದ್ಧ ಹೋರಾಡುತ್ತಿದ್ದರೂ ಸಿನಿಮಾ ಪ್ರಚಾರದಲ್ಲಿ ತೊಡಗಿದ್ದಾರೆ. ಕುಶಿ ಎಷ್ಟರ ಮಟ್ಟಿಗೆ ಪ್ರೇಕ್ಷಕರನ್ನು ರಂಜಿಸಲಿದೆ ಅನ್ನೋದು ಇನ್ನೇನು ಕೆಲವೇ ದಿನಗಳಲ್ಲಿ ತಿಳಿಯಲಿದೆ.

ಇದನ್ನೂ ಓದಿ: Jawan Grand Event: ತಮಿಳು ನೆಲದಲ್ಲಿ ಕಿಂಗ್​ ಖಾನ್​ ಶಾರುಖ್​ ಹವಾ -​ ವಿಡಿಯೋ ನೋಡಿದ್ರಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.