ETV Bharat / entertainment

ಸಲ್ಮಾನ್​ ಖಾನ್​ ಜನ್ಮದಿನ: ನುಗ್ಗಿಬಂದ ಅಭಿಮಾನಿಗಳ ಮೇಲೆ ಪೊಲೀಸ್ ಲಾಠಿ ಚಾರ್ಜ್​ - ಸಲ್ಲು ಅಭಿಮಾನಿಗಳ ಮೇಲೆ ಲಾಠಿಚಾರ್ಜ್​

ಸಲ್ಮಾನ್​ ಖಾನ್​ಗೆ ಜನ್ಮದಿನದ ಸಂಭ್ರಮ- ಮನೆ ಮುಂದೆ ಜಮಾಯಿಸಿದ್ದ ಅಭಿಮಾನಿಗಳ ಮೇಲೆ ಲಾಠಿಚಾರ್ಜ್​- ಜೀವ ಬೆದರಿಕೆ ಹಿನ್ನೆಲೆ ನಿವಾಸಕ್ಕೆ ಬಿಗಿಭದ್ರತೆ

salman-khan-birthday
ಅಭಿಮಾನಿಗಳ ಮೇಲೆ ಪೊಲೀಸ್ ಲಾಠಿಚಾರ್ಜ್​
author img

By

Published : Dec 28, 2022, 11:21 AM IST

ಸಲ್ಮಾನ್​ ಖಾನ್​ ಜನ್ಮದಿನ: ನುಗ್ಗಿಬಂದ ಅಭಿಮಾನಿಗಳ ಮೇಲೆ ಪೊಲೀಸ್ ಲಾಠಿ ಚಾರ್ಜ್​

ಮುಂಬೈ(ಮಹಾರಾಷ್ಟ್ರ): ಬಾಲಿವುಡ್​ ಬ್ಯಾಚುಲರ್​ ಸಲ್ಮಾನ್​ಖಾನ್​ಗೆ ನಿನ್ನೆ 57 ರ ಜನ್ಮದಿನದ ಸಂಭ್ರಮ. ಸಿನಿಮಾ ತಾರೆಯರು ಅಲ್ಲದೇ, ಅಭಿಮಾನಿಗಳು ನಟನಿಗೆ ಶುಭಾಶಯ ಕೋರಿದ್ದಾರೆ. ತಮ್ಮ ನೆಚ್ಚಿನ ನಟನಿಗೆ ಅಭಿಮಾನಿಗಳು ಶುಭ ಕೋರಲು ಸಲ್ಲು ನಿವಾಸದ ಮುಂದೆ ಜಮಾಯಿಸಿದ್ದರು. ಸಾವಿರಾರು ಜನರು ಏಕಕಾಲಕ್ಕೆ ನುಗ್ಗಿ ಬಂದ ಕಾರಣ ಪೊಲೀಸರು ನಿಯಂತ್ರಿಸಲು ಹೈರಾಣಾದರು. ಚದುರಿಸಲು ಲಾಠಿಚಾರ್ಜ್​ ಮಾಡಿದ್ದಾರೆ.

ಬಾಲಿವುಡ್​ ಬ್ಯಾಡ್​ ಬಾಯ್​ಗೆ ಶುಭಾಶಯ ಕೋರಲು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮುಂಬೈನ ನಿವಾಸದ ಮುಂದೆ ಜಮಾಯಿಸಿದ್ದರು. ಮನೆಯ ಬಾಲ್ಕನಿಯ ಮೇಲೆ ಸಲ್ಮಾನ್​ ಖಾನ್​ ಬಂದು ಅಭಿಮಾನಿಗಳತ್ತ ಕೈ ಬೀಸಿದರು. ಈ ವೇಳೆ ಘೋಷಣೆ ಕೂಗುತ್ತ ಅಭಿಮಾನಿಗಳು ನಿಗದಿತ ಪ್ರದೇಶದಿಂದ ಮುಂದೆ ಬಂದರು. ಅಲ್ಲಿದ್ದ ಪೊಲೀಸರು ನಿಯಂತ್ರಿಸಲು ಯತ್ನಿಸಿದರೂ, ನುಗ್ಗಿ ಬಂದ ಕಾರಣ ಲಾಠಿ ಚಾರ್ಜ್​ ಮಾಡಲಾಗಿದೆ.

ನಟನಿಗೆ ಜೀವ ಬೆದರಿಕೆ: ಪಂಜಾಬ್​ ಗಾಯಕನ ಹತ್ಯೆಯ ಬಳಿಕ ಸಲ್ಮಾನ್​ ಖಾನ್​ಗೆ ಅದೇ ಗುಂಪಿನಿಂದ ಜೀವ ಬೆದರಿಕೆ ಹಾಕಲಾಗಿದೆ. ನಟನ ನಿವಾಸಕ್ಕೆ ಪತ್ರವನ್ನೂ ರವಾನಿಸಲಾಗಿದೆ. ಹೀಗಾಗಿ ಬಿಗಿಭದ್ರತೆ ನೀಡಲಾಗಿದೆ. ಜನ್ಮದಿನದ ಹಿನ್ನೆಲೆ ಅಭಿಮಾನಿಗಳು ಶುಭಾಶಯ ಕೋರಲು ಹೆಚ್ಚಿನ ಸಂಖ್ಯೆಯಲ್ಲಿ ಬರುವ ಕಾರಣ ನಿವಾಸದಲ್ಲಿ ಭದ್ರತೆ ಹೆಚ್ಚಿಸಲಾಗಿತ್ತು.

ಓದಿ: 57ನೇ ವಸಂತಕ್ಕೆ ಕಾಲಿಟ್ಟ ಬಾಲಿವುಡ್​ ಬ್ಯಾಚುಲರ್​ ಸಲ್ಮಾನ್​ ಖಾನ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.