ETV Bharat / entertainment

ಮತ್ತೆ ಟ್ರೋಲ್​ಗೆ ಗುರಿಯಾದ ನಟಿ ದೀಪಿಕಾ : ಬಿಕಿನಿ ನಂತರ ಚಪ್ಪಲಿ ಫೋಟೋ ವೈರಲ್​

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಕಿಕೊಂಡಿರುವ ಸ್ಯಾಂಡಲ್‌ಗಳ ಬಗ್ಗೆ ವಿವಾದ ಎದ್ದಿದೆ. 2019ರಲ್ಲಿ ತೆಗೆಸಿಕೊಂಡಿದ್ದ ಹಳೆ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

controversy-over-deepika-padukone-saffron-sandals
ನಟಿ ದೀಪಿಕಾಗೆ ಬಿಡದ ಕೇಸರಿ ವಿವಾದ: ಬಿಕಿನಿ ನಂತರ ಚಪ್ಪಲಿ ಫೋಟೋ ವೈರಲ್​
author img

By

Published : Jan 12, 2023, 3:55 PM IST

Updated : Jan 12, 2023, 4:28 PM IST

ನವದೆಹಲಿ: ಕೇಸರಿ ಬಣ್ಣದ ವಿಚಾರವಾಗಿ ಬಾಲಿವುಡ್​ ಖ್ಯಾತ ನಟಿ ದೀಪಿಕಾ ಪಡುಕೋಣೆ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದಾರೆ. ಬಹು ನಿರೀಕ್ಷಿತ ಪಠಾಣ್‌ ಚಿತ್ರದಲ್ಲಿ ದೀಪಿಕಾ ಕೇಸರಿ ಬಣ್ಣ ತುಂಡುಡುಗೆ ಧರಿಸಿದ್ದು ದೊಡ್ಡ ಮಟ್ಟದ ವಿವಾದ ಎಬ್ಬಿಸಿತ್ತು. ಇದೀಗ ದೀಪಿಕಾ ಹಾಕಿಕೊಂಡಿರುವ ಕೇಸರಿ ಬಣ್ಣದ ಸ್ಯಾಂಡಲ್‌ಗಳ ಬಗ್ಗೆ ವಿವಾದ ಪ್ರಾರಂಭವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​ ಮಾಡಲಾಗುತ್ತಿದೆ.

ನಟಿ ದೀಪಿಕಾಗೆ ಬಿಡದ ಕೇಸರಿ ವಿವಾದ
ನಟಿ ದೀಪಿಕಾಗೆ ಬಿಡದ ಕೇಸರಿ ವಿವಾದ

ಇದನ್ನೂ ಓದಿ: ಬೇಷರಮ್​ ರಂಗ್ ವಿವಾದ: 'ಪಠಾಣ್' ಬಾಯ್ಕಾಟ್​ಗೆ ದನಿಗೂಡಿಸಿದ ಸಾಧು ಸಂತರು

ಬಾಲಿವುಡ್ ನಟ ಶಾರುಖ್​ ಖಾನ್​ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಪಠಾಣ್‌ ಚಿತ್ರದ ಬೇಷರಮ್​ ರಂಗ್​ ಹಾಡಿನಲ್ಲಿ ಕೇಸರಿ ಬಣ್ಣದ ಬಿಕಿನಿ ಧರಿಸಿದ್ದು ಸಾಕಷ್ಟು ಕೋಲಾಹಲ ಎಬ್ಬಿಸಿತ್ತು. ಕೇಸರಿ ಬಣ್ಣವು ಹಿಂದೂಗಳು ಪೂಜ್ಯನೀಯ ಬಣ್ಣವಾಗಿದೆ. ಇಂತಹ ಬಣ್ಣದ ಬಿಕಿನಿ ತೊಟ್ಟಿರುವುದು ಹಿಂದೂ ಭಾವನೆಗಳನ್ನು ಘಾಸಿಗೊಳಿಸಿದೆ. ಹಿಂದೂಗಳಿಗೆ ಅಪಮಾನ ಮಾಡುವ ಉದ್ದೇಶದಿಂದಲೇ ಚಿತ್ರದಲ್ಲಿ ಕೇಸರಿ ಬಣ್ಣದ ಬಿಕಿನಿ ಬಳಕೆ ಮಾಡಲಾಗಿದೆ ಎಂಬೆಲ್ಲ ಆರೋಪಗಳು ಕೇಳಿ ಬಂದಿತ್ತು. ಅಲ್ಲದೇ, ಪಠಾಣ್​ ಚಿತ್ರವನ್ನು ಬಾಯ್ಕಾಟ್​ ಮಾಡಬೇಕೆಂಬ ಕೂಗು ಸಹ ಎದ್ದಿತ್ತು. ಇದರ ಬೆನ್ನಲ್ಲೆ ದೀಪಿಕಾ ಧರಿಸಿರುವ ಕೇಸರಿ ಬಣ್ಣದ ಚಪ್ಪಲಿಗಳ ಚಿತ್ರಗಳು ಮುನ್ನಲೆಗೆ ಬಂದಿದ್ದು, ಮತ್ತೆ ಟೀಕೆ - ಟಿಪ್ಪಣಿ ಶುರುವಾಗಿದೆ.

ನಟಿ ದೀಪಿಕಾಗೆ ಬಿಡದ ಕೇಸರಿ ವಿವಾದ
ನಟಿ ದೀಪಿಕಾಗೆ ಬಿಡದ ಕೇಸರಿ ವಿವಾದ

ಏನಿದು ದೀಪಿಕಾ ಚಪ್ಪಲಿ ವಿವಾದ?: ನಟಿ ದೀಪಿಕಾ ಪಡುಕೋಣೆ ನೀಲಿ ಮತ್ತು ಬಿಳಿ ಗೆರೆಗಳ ಪ್ಯಾಂಟ್ ಶೂಟ್ ಧರಿಸಿ ಕೇಸರಿ ಬಣ್ಣದ ಚಪ್ಪಲಿ ಹಾಕಿಕೊಂಡಿರುವ ಹಳೆ ಪೋಟೋವೊಂದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಫೋಟೋವನ್ನು ಶೇರ್ ಮಾಡುವ ಮೂಲಕ ಟ್ರೋಲರ್‌ಗಳು ತಮ್ಮ ಪೇಜ್​ಗಳಲ್ಲಿ ಟ್ರೋಲ್ ಮಾಡುತ್ತಿದ್ದಾರೆ. ಪಠಾಣ್ ಚಿತ್ರದಲ್ಲಿನ ಕೇಸರಿ ಬಣ್ಣ ವಿವಾದದ ಬಗ್ಗೆ ದೀಪಿಕಾ ಪಡುಕೋಣೆ ಅವರನ್ನು ಬಹಿಷ್ಕರಿಸುವಂತೆ ಕರೆ ನೀಡುತ್ತಿರುವ ವಿಚಾರವನ್ನೂ ಈ ಫೋಟೋದ ಸುತ್ತ ಎಳೆದು ತರಲಾಗುತ್ತಿದೆ.

ನಟಿ ದೀಪಿಕಾಗೆ ಬಿಡದ ಕೇಸರಿ ವಿವಾದ
ನಟಿ ದೀಪಿಕಾಗೆ ಬಿಡದ ಕೇಸರಿ ವಿವಾದ

2019ರ ಫೋಟೋ, ಈಗ ವೈರಲ್​: ಅಸಲಿ ವಿಷಯ ಏನೆಂದರೆ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಚಪ್ಪಲಿ ಹಾಕಿಕೊಂಡಿರುವ ಫೋಟೋ ಇತ್ತೀಚಿನದಲ್ಲ. 2019ರಲ್ಲಿ ಫ್ರಾನ್ಸ್‌ನಲ್ಲಿ ದೀಪಿಕಾ ತೆಗೆದುಕೊಂಡ ಫೋಟೋ ಇದಾಗಿದೆ. ಇದೀಗ ಪಠಾಣ್‌ ಚಿತ್ರದ ಕೇಸರಿ ಉಡುಗೆ ವಿವಾದಕ್ಕೆ ನಾಲ್ಕು ವರ್ಷಗಳ ಹಳೆಯ ಚಿತ್ರವನ್ನು ಲಿಂಕ್ ಮಾಡುವ ಮೂಲಕ ದೀಪಿಕಾ ಪಡುಕೋಣೆ ಅವರನ್ನು ಟ್ರೋಲ್ ಮಾಡಲಾಗುತ್ತಿದೆ.

2019ರಲ್ಲಿ ಫ್ರಾನ್ಸ್‌ನಲ್ಲಿ 72ನೇ ಕಾನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆಯೋಜಿಸಲಾಗಿತ್ತು. ಈ ಚಲನಚಿತ್ರೋತ್ಸವದ ಸಂದರ್ಭದಲ್ಲಿ ಬಾಲಿವುಡ್ ನಟಿ ನೀಲಿ ಮತ್ತು ಬಿಳಿ ಗೆರೆಗಳ ಪ್ಯಾಂಟ್ ಶೂಟ್‌ನಲ್ಲಿ ಕೇಸರಿ ಬಣ್ಣದ ಸ್ಯಾಂಡಲ್‌ನೊಂದಿಗೆ ಫೋಟೋ ಶೂಟ್ ಮಾಡಿಸಿದ್ದರು. ಈಗ ಕೇಸರಿ ಬಣ್ಣದ ಚಪ್ಪಲಿ ಧರಿಸಿರುವ ಚಿತ್ರ ಬಹಿರಂಗವಾಗಿದೆ ಎಂದು ಸುದ್ದಿ ಸಂಸ್ಥೆಯಾದ ಪಿಟಿಐ ಫ್ಯಾಕ್ಟ್ ಚೆಕ್‌ ತಿಳಿಸಿದೆ.

ನಟಿ ದೀಪಿಕಾಗೆ ಬಿಡದ ಕೇಸರಿ ವಿವಾದ
ನಟಿ ದೀಪಿಕಾಗೆ ಬಿಡದ ಕೇಸರಿ ವಿವಾದ

ಸಂಕುಚಿತ ದೃಷ್ಟಿಕೋನ ಎಂದಿದ್ದ ಶಾರುಖ್: ಕೇಸರಿ ಬಣ್ಣದ ಧರಿಸಿನ ವಿಚಾರವಾಗಿ ಪಠಾಣ್​ ಚಿತ್ರವನ್ನು ಬಾಯ್ಕಾಟ್​ ಮಾಡಬೇಕೆಂಬ ಕರೆ ಕುರಿತಾಗಿ ಈ ಹಿಮದೆ ನಟ ಶಾರುಖ್​ ಖಾನ್​ ಪ್ರತಿಕ್ರಿಯಿಸಿ, ಸಾಮಾಜಿಕ ಜಾಲತಾಣವು ಒಂದು ನಿರ್ದಿಷ್ಟ ಸಂಕುಚಿತ ದೃಷ್ಟಿಕೋನದಿಂದ ನಡೆಸಲ್ಪಡುತ್ತಿದೆ. ಜೊತೆಗೆ ಮಾನವ ಸ್ವಭಾವವನ್ನು ಅದರ ಕೀಳು ಸ್ವಭಾವಕ್ಕೆ ಸೀಮಿತಗೊಳಿಸುತ್ತಿದ್ದು, ನಕಾರಾತ್ಮಕತೆ ಹೆಚ್ಚಿಸುತ್ತಿದೆ. ಜಗತ್ತು ಏನೇ ಮಾಡಿದರೂ ನಮ್ಮಂತಹ ಜನರು ಸಕಾರಾತ್ಮಕವಾಗಿಯೇ ಉಳಿಯುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬೇಷರಮ್​ ರಂಗ್ ವಿವಾದ: 'ಪಠಾಣ್​' ಬಾಯ್ಕಾಟ್​ ಬಗ್ಗೆ ಮೌನ ಮುರಿದ ಶಾರುಖ್ ಖಾನ್

Last Updated : Jan 12, 2023, 4:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.