ETV Bharat / entertainment

ಪತ್ನಿ ವಿರು​ದ್ಧ ದೂರು ಕೊಟ್ಟ ಪತಿ - ನಟಿ ಶ್ರೀಲೀಲಾ ತಾಯಿ ಸ್ವರ್ಣಲತಾ ಮೇಲೆ ಎಫ್​ಐಆರ್ - actress Shreeleela

ಖ್ಯಾತ ನಟಿ ಶ್ರೀಲೀಲಾ ಸ್ವರ್ಣಲತಾ ವಿರುದ್ಧ ಅವರ ಪತಿ ಸುಭಾಕರ್ ರಾವ್ ದೂರು ನೀಡಿದ್ದಾರೆ. ಸ್ವರ್ಣಲತಾ ಅವರು ಬೀಗ ಒಡೆದು ಫ್ಲ್ಯಾಟ್​ಗೆ ಅಕ್ರಮವಾಗಿ ಪ್ರವೇಶ ಮಾಡಿದ್ದಾರೆ ಎಂದು ಸುಭಾಕರ್​ ಆರೋಪಿಸಿದ್ದಾರೆ.

Complaint lodged against actress Shreeleela mother Swarnalata
ನಟಿ ಶ್ರೀಲೀಲಾ ತಾಯಿ ಸ್ವರ್ಣಲತಾ ಮೇಲೆ ಎಫ್​ಐಆರ್
author img

By

Published : Oct 5, 2022, 3:19 PM IST

ಬೆಂಗಳೂರು: ಶ್ರೀಲೀಲಾ ಕನ್ನಡ ಮತ್ತು ತೆಲುಗು ಸಿನಿಮಾಗಳಲ್ಲಿ ಮಿಂಚುತ್ತಿರುವ ಖ್ಯಾತ ನಟಿ. ಆದರೆ, ತಾಯಿ ಸ್ವರ್ಣಲತಾ ಅವರ ಕಾರಣದಿಂದಲೇ ಆಗಾಗ ನೆಗೆಟಿವ್​​ ಆಗಿ ಸುದ್ದಿ ಆಗುತ್ತಿದ್ದಾರೆ. ಕೆಲ ದಿನಗಳ ಹಿಂದೆ ಅವರು ಅಲಯನ್ಸ್ ವಿವಿ ಆವರಣದಲ್ಲಿ ಗಲಾಟೆ ಮಾಡಿಕೊಂಡಿದ್ದರು. ಈಗ ಮತ್ತೆ ಕಿರಿಕ್​ ಆಗಿದ್ದು, ಪ್ರಕರಣ ಪೊಲೀಸ್​ ಠಾಣೆ ಮೆಟ್ಟಿಲೇರಿದೆ.

ಸ್ವರ್ಣಲತಾ ವಿರುದ್ಧ ಪತಿ ಸುಭಾಕರ್ ರಾವ್ ದೂರು ನೀಡಿದ್ದಾರೆ. ನನ್ನ ಮನೆ ಬೀಗ ಒಡೆದು ಅಕ್ರಮವಾಗಿ ಪ್ರವೇಶ ಮಾಡಿದ್ದಾರೆ ಎಂದು ಆಡುಗೋಡಿ ಠಾಣೆಗೆ ನೀಡಿದ ದೂರಿನಲ್ಲಿ ಸುಭಾಕರ್ ರಾವ್ ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ನಟಿ ಶ್ರೀಲೀಲಾ ಪೋಷಕರ ನಡುವಿನ ವಿಚ್ಛೇದನ ಅರ್ಜಿ ನ್ಯಾಯಾಲಯದಲ್ಲಿದೆ. ಈ ದಂಪತಿ 20 ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.

ಬೆಂಗಳೂರಿನ ಕೋರಮಂಗಲದ ಅಪಾರ್ಟ್​​​ಮೆಂಟ್ ​​ಒಂದರಲ್ಲಿ ಪತಿ ಸುಭಾಕರ್ ರಾವ್ ಅವರ ಫ್ಲ್ಯಾಟ್ ಇದೆ. ಅದನ್ನು ಸ್ವರ್ಣಲತಾಗೆ ಸುಭಾಕರ್ ಅವರೇ ನೀಡಿದ್ದರು. ಆದರೆ, ಇಬ್ಬರ ನಡುವೆ ಮನಸ್ತಾಪ ಆದ ಹಿನ್ನೆಲೆ ಆ ಫ್ಲ್ಯಾಟ್​ಗೆ ಸುಭಾಕರ್ ಬೀಗ ಹಾಕಿದ್ದರು. ಅಕ್ಟೋಬರ್​ 3ರಂದು ಸ್ವರ್ಣಲತಾ ಅವರು ಬೀಗ ಒಡೆದು ಫ್ಲ್ಯಾಟ್​ಗೆ ಅಕ್ರಮವಾಗಿ ಪ್ರವೇಶ ಮಾಡಿದ್ದಾರೆ ಎಂದು ಸುಭಾಕರ್​ ಆರೋಪಿಸಿದ್ದಾರೆ. ಈ ಕುರಿತು ಆಡುಗೋಡಿ ಠಾಣೆ ಪೊಲೀಸರು ಎಫ್​ಐಆರ್ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಮತ್ತೆ ಅಲಯನ್ಸ್ ವಿವಿಗೆ ಅಕ್ರಮವಾಗಿ ನುಗ್ಗಿದ ಮಧುಕರ್ ಅಂಗೂರ್: ಪ್ರಕರಣ ದಾಖಲು

ಅಲಯನ್ಸ್ ವಿಶ್ವವಿದ್ಯಾಲಯದ ವಿವಾದಕ್ಕೆ ಸಂಬಂಧಿಸಿದಂತೆ ಆನೇಕಲ್ ಪೊಲೀಸರು ಸ್ವರ್ಣಲತಾ ವಿರುದ್ಧ ಪ್ರಕರಣ ದಾಖಲಿಸಿದ್ದರು. ಆಕೆಯನ್ನು ಪ್ರಕರಣದಲ್ಲಿ ಎರಡನೇ ಆರೋಪಿ ಎಂದು ಹೆಸರಿಸಲಾಗಿದ್ದು, ಸದ್ಯ ಜಾಮೀನಿನ ಮೇಲೆ ಹೊರಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.