ETV Bharat / entertainment

ಕ್ಯಾಸಿನೋ ಆಡಲು ಗೋವಾಕ್ಕೆ ಕರೆದೊಯ್ದು ಮೋಸ ಆರೋಪ.. ವೀರೇಂದ್ರ ವಿರುದ್ಧ ಎಫ್​ಐಆರ್​ - Complaint against veerendra pappi

ಕ್ಯಾಸಿನೋಗೆ ಸಂಬಂಧಿಸಿದ ಆರೋಪಡಿ ವೀರೇಂದ್ರ ಅಲಿಯಾಸ್ ಪಪ್ಪಿ ವಿರುದ್ಧ ದೂರು ದಾಖಲಾಗಿದೆ.

Complaint against son-in-law of actor Doddanna
ದೊಡ್ಡಣ್ಣನ ಅಳಿಯನ ವಿರುದ್ಧ ದೂರು
author img

By

Published : Nov 16, 2022, 7:41 PM IST

Updated : Nov 16, 2022, 8:35 PM IST

ದಾವಣಗೆರೆ: ಕ್ಯಾಸಿನೋ ಆಡಿಸುವ ನೆಪದಲ್ಲಿ ಹಣ ಪಡೆದು ವಂಚನೆ ಮಾಡಿರುವ ಆರೋಪದಡಿ ಹಿರಿಯ ನಟ ದೊಡ್ಡಣ್ಣ ಅವರ ಅಳಿಯ ವೀರೇಂದ್ರ ಅಲಿಯಾಸ್ ಪಪ್ಪಿ ವಿರುದ್ಧ ಇಲ್ಲಿನ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಾವಣಗೆರೆಯ ವೆಂಕಟೇಶ್ ಎಂಬ ಯುವಕನಿಗೆ ವಂಚನೆ ಮಾಡಿರುವ ಆರೋಪ ಸಂಬಂಧ ಎಫ್ಐಆರ್ ದಾಖಲಾಗಿದೆ. ಕಿರಣ್, ಚೇತನ್, ಸೂರಜ್ ಕುಟ್ಟಿ, ಚಿತ್ರದುರ್ಗದ ವೀರೇಂದ್ರ ಅಲಿಯಾಸ್ ಪಪ್ಪಿ ವಿರುದ್ಧ ದೂರು ದಾಖಲಾಗಿದೆ. ಕಿರಣ್ ಮತ್ತು ಚೇತನ್ ಎಂಬುವರು ಪೊಲೀಸರ ವಶದಲ್ಲಿದ್ದಾರೆ. ಸೂರಜ್ ಕುಟ್ಟಿ ಮತ್ತು ವೀರೇಂದ್ರ ಪಪ್ಪಿ ತಲೆಮರೆಸಿಕೊಂಡಿದ್ದಾರೆ.

ಎಸ್ಪಿ ಸಿಬಿ ರಿಷ್ಯಂತ್

ಗೋವಾದಲ್ಲಿ ಕ್ಯಾಸಿನೋ ಪ್ರವೇಶಕ್ಕೆ ಹಣ ಪಡೆದು ವಂಚನೆ ಮಾಡುತ್ತಿದ್ದರು ಎನ್ನುವ ಅಂಶವನ್ನು ಎಸ್ಪಿ ರಿಷ್ಯಂತ್ ಬಹಿರಂಗಪಡಿಸಿದ್ದಾರೆ. ವಶಕ್ಕೆ ಪಡೆದಿರುವ ಇಬ್ಬರು ಆರೋಪಿಗಳಿಂದ 7 ಲಕ್ಷ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ. ತನಿಖೆ ಮುಂದುವರಿದಿದೆ ಎಂದು ಎಸ್ಪಿ ಸಿಬಿ ರಿಷ್ಯಂತ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಮಹಿಳೆಯನ್ನು ಲೈಂಗಿಕತೆಗೆ ಪೀಡಿಸಿದ ಆರೋಪ: ಒಪ್ಪದ್ದಕ್ಕೆ ವ್ಯಕ್ತಿಯಿಂದ ಕೊಲೆ

Last Updated : Nov 16, 2022, 8:35 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.