ETV Bharat / entertainment

ಕರಗ ಬಗ್ಗೆ ಅವಹೇಳನಕಾರಿ ಪದ ಬಳಕೆ ಆರೋಪ: 'ಹೆಡ್ ಬುಷ್' ವಿರುದ್ಧ ದೂರು - DOLLY HEAD BUSH MOVIE

'ಹೆಡ್ ಬುಷ್' ಸಿನಿಮಾದಲ್ಲಿ ಕರಗದ ಬಗ್ಗೆ ಅವಹೇಳನಕಾರಿ ಪದಗಳ ಬಳಕೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಕರಗ ಸಮಿತಿ ಅಧ್ಯಕ್ಷ ಸತೀಶ್ ನೇತೃತ್ವದಲ್ಲಿ ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಲಾಗಿದೆ.

'ಹೆಡ್ ಬುಷ್' ಸಿನಿಮಾ
'ಹೆಡ್ ಬುಷ್' ಸಿನಿಮಾ
author img

By

Published : Oct 26, 2022, 5:08 PM IST

ಬೆಂಗಳೂರು: ನಟ ಧನಂಜಯ್ ಅಭಿನಯಿಸಿ, ನಿರ್ಮಿಸಿರುವ 'ಹೆಡ್‌ ಬುಷ್‌' ಸಿನಿಮಾ ಬಿಡುಗಡೆಯಾಗಿ ಪ್ರದರ್ಶನ ಕಾಣುತ್ತಿದೆ. ಭೂಗತ ಲೋಕದಲ್ಲಿ ಸಕ್ರಿಯರಾಗಿದ್ದ ಜಯರಾಜ್ ಕಥೆ ಆಧರಿಸಿದ ಸಿನಿಮಾವನ್ನು ಇದೀಗ ವಿವಾದಗಳು ಸುತ್ತಿಕೊಂಡಿವೆ.

'ಹೆಡ್ ಬುಷ್' ಸಿನಿಮಾ ವಿರುದ್ಧ ದೂರು

ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು: ಚಿತ್ರದಲ್ಲಿ ಬೆಂಗಳೂರು ಕರಗದ ಬಗ್ಗೆ ಅವಹೇಳನಕಾರಿ ಪದಗಳ ಬಳಕೆ ಮಾಡಲಾಗಿದೆ. ಅಷ್ಟೇ ಅಲ್ಲದೇ ಸಂಪ್ರದಾಯಬದ್ಧ ದೈವಾಚರಣೆಯನ್ನು ಬೇಕಾಬಿಟ್ಟಿಯಾಗಿ ತೋರಿಸಿದ್ದಾರೆ ಎಂದು ವಹ್ನಿಕುಲ ಕ್ಷತ್ರಿಯ ಹಾಗೂ ತಿಗಳ ಸಮುದಾಯ ಆರೋಪಿಸಿದೆ. ಈ ಹಿನ್ನೆಲೆಯಲ್ಲಿ ಧರ್ಮರಾಯ ಸ್ವಾಮಿ ದೇವಸ್ಥಾನ ಸದ್ಯಸರು ಹಾಗೂ ಕರಗ ಸಮಿತಿ ಅಧ್ಯಕ್ಷ ಸತೀಶ್ ಅವರಿಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ.

ಭಾ ಮಾ ಹರೀಶ್ ನಿವಾಸಕ್ಕೆ ಭೇಟಿ: ದೀಪಾವಳಿ ಹಬ್ಬವಿರುವ ಕಾರಣ ಫಿಲ್ಮ್ ಚೇಂಬರ್​ಗೆ ರಜೆ ಇದೆ. ಹೀಗಾಗಿ, ವಿಜಯನಗರದಲ್ಲಿರುವ ಭಾ ಮಾ ಹರೀಶ್ ನಿವಾಸಕ್ಕೆ ಭೇಟಿ ನೀಡಿ ದೂರು ಸಲ್ಲಿಸಿದ್ದಾರೆ.

ಫಿಲ್ಮ್ ಚೇಂಬರ್ ಅಧ್ಯಕ್ಷ ಭಾ.ಮ.ಹರೀಶ್ ಮಾತನಾಡಿ, ಧರ್ಮರಾಯ ದೇವಸ್ಥಾನದಿಂದ ಮನವಿ ಕೊಟ್ಟಿದ್ದಾರೆ. ಹೆಡ್‌ಬುಷ್ ಚಿತ್ರದಲ್ಲಿ ತಿಗಳರ ಪೇಟೆ ಅಂತ ಹೇಳಿ ಬೇರೆ ಕಡೆ ಕರಗ ತೋರಿಸಿದ್ದಾರೆ ಎಂದಿದ್ದಾರೆ. ನಾನಿನ್ನೂ ಚಿತ್ರ ನೋಡಿಲ್ಲ. ಜುಜುಬಿ ಕರಗ ಎಂದಿದ್ದಾರಂತೆ, ಅದು ನೋವು ತಂದಿದೆ. ಶಿವಶಂಕರ್ ಅವರ ಬಗ್ಗೆ ಮಾತನಾಡಿರೋದು ನೋವು ತಂದಿದೆ ಎಂದು ದೂರಿನಲ್ಲಿ ತಿಳಿಸಿದ್ದಾಗಿ ಪ್ರತಿಕ್ರಿಯಿಸಿದರು.

ಇದನ್ನೂ ಓದಿ: ಹೆಡ್ ಬುಷ್ ಸಿನಿಮಾದ ಸುತ್ತ ವಿವಾದ: ವೀರಗಾಸೆ ಕಲಾವಿದರಿಗೆ ಅವಮಾನ ಆರೋಪ

ಖಂಡಿತವಾಗಿಯೂ ಆ ಚಿತ್ರ ತಂಡವನ್ನು ವಾಣಿಜ್ಯ ಮಂಡಳಿಗೆ ಕರೆಸುತ್ತೇನೆ. ಯಾವುದೇ ಒಂದು ಕುಲಕ್ಕೆ ಅವಮಾನ ಮಾಡುವಂತೆ ನಾವು ಚಿತ್ರ ಮಾಡೋದಿಲ್ಲ. ನಾಳೆ ಬೆಳಗ್ಗೆ 11:30 ಕ್ಕೆ ಚೇಂಬರ್‌ಗೆ ಹೆಡ್ ಬುಷ್ ಚಿತ್ರತಂಡವನ್ನು ಕರೆಯಿಸಿ ಸಮಸ್ಯೆ ಬಗೆಹರಿಸುವುದಾಗಿ ಅವರು ಭರವಸೆ ಕೊಟ್ಟಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.