ETV Bharat / entertainment

ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ಇಲಿಯಾನಾ ಡಿಕ್ರೂಜ್​ - ಈಟಿವಿ ಭಾರತ ಕನ್ನಡ

ನಟಿ ಇಲಿಯಾನಾ ಡಿಕ್ರೂಜ್​​ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ತಿಳಿಸಿದ್ದಾರೆ.

Ileana D'Cruz
ನಟಿ ಇಲಿಯಾನಾ ಡಿಕ್ರೂಚ್
author img

By

Published : Apr 18, 2023, 1:35 PM IST

Updated : Apr 18, 2023, 2:06 PM IST

ಬಾಲಿವುಡ್​ ನಟಿ ಇಲಿಯಾನಾ​ ಡಿಕ್ರೂಜ್​ ಅವರು ಇಂದು ಮುಂಜಾನೆ ಸಿಹಿ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ. ಅವರು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಘೋಷಿಸಿದ್ದಾರೆ. ತಮ್ಮ ಇನ್​ಸ್ಟಾ ಖಾತೆಯಲ್ಲಿ ಎರಡು ಫೋಟೋಗಳನ್ನು ಹಂಚಿಕೊಂಡು, "ಶೀಘ್ರದಲ್ಲೇ ಬರಲಿದೆ. ನನ್ನ ಪುಟ್ಟ ಪ್ರಿಯತಮೆಯ ಭೇಟಿಗೆ ಕಾಯಲು ಸಾಧ್ಯವಿಲ್ಲ" ಎಂಬ ಶೀರ್ಷಿಕೆ ಬರೆದುಕೊಂಡು ಖುಷಿಯ ವಿಷಯವನ್ನು ತಿಳಿಸಿದ್ದಾರೆ. ಇದು ಅಭಿಮಾನಿಗಳನ್ನು ಆಶ್ಚರ್ಯಗೊಳಿಸಿದರೂ, ನಟಿಯ ಗುಡ್​ನ್ಯೂಸ್​ ಕೇಳಿ ಖುಷಿಯಾಗಿದ್ದಾರೆ.

ಮೊದಲ ಚಿತ್ರದಲ್ಲಿ ಬರ್ಫಿ ನಟಿ ಮಗುವಿನ ಬಟ್ಟೆಯನ್ನು ಪೋಸ್ಟ್​ ಮಾಡಿದ್ದು, ಅದರ ಮೇಲೆ 'ಅಡ್ವೆಂಚರ್​ ಬಿಗಿನ್ಸ್​' ಎಂಬ ಬರಹವಿದೆ. ಮತ್ತೊಂದು ಚಿತ್ರದಲ್ಲಿ, Mama ಎಂದು ಬರೆದಿರುವ ಒಂದು ಸುಂದರ ಪೆಂಡೆಂಟ್​ ಇದೆ. ನಟಿ ತಮ್ಮ ಮೊದಲ ಮಗುವಿನ ಬರುವಿಕೆಗಾಗಿ ಕಾಯುತ್ತಿದ್ದಾರೆ. ಆದರೆ ಅವರು ತಮ್ಮ ಸಂಗಾತಿಯ ಹೆಸರನ್ನು ಮಾತ್ರ ಬಹಿರಂಗಪಡಿಸಿಲ್ಲ. ಅವರು ಈ ಪೋಸ್ಟ್​ ಅಪ್​ಲೋಡ್​ ಮಾಡಿದ ಕೂಡಲೇ ಅಭಿಮಾನಿಗಳು ರೆಡ್​ ಹಾರ್ಟ್​ ಎಮೋಜಿ ಮತ್ತು ಅಭಿನಂದನಾ ಸಂದೇಶಗಳೊಂದಿಗೆ ಕಮೆಂಟ್​ ವಿಭಾಗವನ್ನು ತುಂಬಿದ್ದಾರೆ.

'ಅಭಿನಂದನೆಗಳು ಪ್ರಿಯೆ' ಎಂದು ಅಭಿಮಾನಿಯೊಬ್ಬರು ಕಮೆಂಟ್​ ಮಾಡಿದ್ದಾರೆ. ಮತ್ತೊಬ್ಬ ಅಭಿಮಾನಿ, 'ವಾವ್​ ಅಭಿನಂದನೆಗಳು ಆಲ್​ ದಿ ಬೆಸ್ಟ್​' ಎಂದು ಬರೆದಿದ್ದಾರೆ. ಒಬ್ಬ ಬಳಕೆದಾರ, 'ಹೇ, ಕಂಗ್ರಾಜುಲೇಷನ್ಸ್'​ ಎಂದಿದ್ದಾರೆ. ಮತ್ತೊಬ್ಬರು, 'ಓ ಮೈ ಗಾಡ್​! ಅಭಿನಂದನೆಗಳು' ಎಂದು ಪ್ರತಿಕ್ರಿಯಿಸಿದ್ದಾರೆ. ಮೊದಲಿನಿಂದಲೂ ಇಲಿಯಾನಾ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಅಷ್ಟೊಂದು ಮಾತನಾಡುವುದಿಲ್ಲ. ಅವರು ಕತ್ರಿನಾ ಕೈಫ್​​ ಸಹೋದರ ಸೆಬಾಸ್ಟಿಯನ್​ ಲಾರೆಂಟ್​ ಮಿಚ್ಚೆಲ್​ ಜೊತೆ ಡೇಟಿಂಗ್​ನಲ್ಲಿದ್ದಾರೆ ಎಂಬ ವದಂತಿಗಳಿದ್ದವು.

ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿ ನಡು ಬಳುಕಿಸಿದ ಊರ್ವಶಿ ರೌಟೇಲಾ: ಪಾಕ್​ ಕ್ರಿಕೆಟಿಗನ ಜತೆ ಡೇಟಿಂಗ್​ ವದಂತಿ..​ ಅಭಿಮಾನಿಗಳಿಂದ ಕಮೆಂಟ್​​

ಮಾಲ್ಡೀವ್ಸ್‌ನಲ್ಲಿ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಜೊತೆ ಸೆಬಾಸ್ಟಿಯನ್ ಮತ್ತು ಇಲಿಯಾನಾ ಕಾಣಿಸಿಕೊಂಡ ನಂತರ ಈ ಸುದ್ದಿಗಳು ಹುಟ್ಟಿಕೊಂಡಿದ್ದವು. ಆದರೆ ತಮ್ಮ ಸಂಬಂಧದ ಬಗ್ಗೆ ಅವರಿಬ್ಬರು ಈವೆರೆಗೂ ಅಧಿಕೃತಗೊಳಿಸಿಲ್ಲ. ಅದಕ್ಕೂ ಮೊದಲು ಛಾಯಾಗ್ರಾಹಕ ಆಂಡ್ರ್ಯೂ ನೀಬೋನ್​ ಅವರೊಂದಿಗೆ ಕೆಲ ವರ್ಷಗಳ ಕಾಲ ಡೇಟಿಂಗ್​ನಲ್ಲಿದ್ದರು.

ಅನ್​ಫೇರ್​ ಅಂಡ್​​​ ಲವ್ಲಿಯಲ್ಲಿ ಇಲಿಯಾನಾ: ಇನ್ನು ಇಲಿಯಾನಾ ಸಿನಿಮಾ ವಿಚಾರವಾಗಿ ಹೇಳುವುದಾದರೆ ಅವರು ಕೊನೆಯದಾಗಿ ದಿ ಬಿಗ್ ಬುಲ್ ನಲ್ಲಿ ಅಭಿಷೇಕ್ ಬಚ್ಚನ್ ಅವರೊಂದಿಗೆ ಕಾಣಿಸಿಕೊಂಡರು. ಈ ಚಿತ್ರವನ್ನು ನಿರ್ಮಾಪಕ ಕೂಕಿ ಗುಲಾಟಿ ನಿರ್ದೇಶಿಸಿದ್ದಾರೆ ಮತ್ತು ಅಜಯ್ ದೇವಗನ್ ನಿರ್ಮಿಸಿದ್ದಾರೆ.

ಅವರು ಮುಂದೆ ಅನ್​ಫೇರ್​ ಅಂಡ್​ ಲವ್ಲಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಲ್ವಿಂದರ್ ಸಿಂಗ್ ಜಂಜುವಾ ನಿರ್ದೇಶಿಸಿದ ಈ ಚಿತ್ರವು ಭಾರತದ ಫೇರ್ ಸ್ಕಿನ್‌ನ ಗೀಳಿನ ಮೇಲೆ ಕಾಮಿಕ್ ಟೇಕ್ ಆಗಿದೆ. ಈ ಚಿತ್ರವು ಹರಿಯಾಣದ ಹಿನ್ನೆಲೆಯಲ್ಲಿದೆ ಮತ್ತು ರಣದೀಪ್ ಹೂಡಾ ಅವರೊಂದಿಗೆ ನಟಿ ಇಲಿಯಾನಾ ಕಾಣಿಸಿಕೊಂಡಿದ್ದಾರೆ. ಚಿತ್ರತಂಡ ಇನ್ನೂ ಬಿಡುಗಡೆಯ ದಿನಾಂಕವನ್ನು ನಿಗದಿಪಡಿಸಿಲ್ಲ.

ಇದನ್ನೂ ಓದಿ: 'ಪ್ರೀತಿಸಲು ನನಗೆ ಸಮಯವಿಲ್ಲ': ಶೆಹನಾಜ್ ಜೊತೆ ಡೇಟಿಂಗ್​​ ವದಂತಿಗೆ ರಾಘವ್ ಪ್ರತಿಕ್ರಿಯೆ

Last Updated : Apr 18, 2023, 2:06 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.