ETV Bharat / entertainment

ಮಕ್ಕಳು ತನಗಿಂತ ಉತ್ತಮ ವ್ಯಕ್ತಿಯನ್ನು ಬಾಳಸಂಗಾತಿಯಾಗಿ ಆರಿಸಿಕೊಳ್ಳಲಿ: ಅನನ್ಯಾ ಪಾಂಡೆ ತಂದೆ ಚಂಕಿ - ಅನನ್ಯಾ ಪಾಂಡೆ ತಂದೆ ಚಂಕಿ

ನಟ ಆದಿತ್ಯಾ ರಾಯ್​ ಕಪೂರ್​ ಮತ್ತು ಅನನ್ಯಾ ಪಾಂಡೆ ಡೇಟಿಂಗ್ ವದಂತಿಗಳ ಬಗ್ಗೆ ಚಂಕಿ ಪಾಂಡೆ ಪ್ರತಿಕ್ರಿಯಿಸಿದ್ದಾರೆ.

Chunky Panday reacts on ananya aditya dating rumours
ಆದಿತ್ಯಾ ಅನನ್ಯಾ ಡೇಟಿಂಗ್​ ಬಗ್ಗೆ ಚಂಕಿ ಪಾಂಡೆ ಪ್ರತಿಕ್ರಿಯೆ
author img

By

Published : Aug 4, 2023, 7:52 PM IST

ಕಳೆದ ಕೆಲ ಸಮಯದಿಂದ ಬಾಲಿವುಡ್​ ನಟ ಆದಿತ್ಯಾ ರಾಯ್​ ಕಪೂರ್​ ಮತ್ತು ಅನನ್ಯಾ ಪಾಂಡೆ ಡೇಟಿಂಗ್​ನಲ್ಲಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ. ಸಂದರ್ಶನವೊಂದರಲ್ಲಿ ನಟಿಯ ತಂದೆ ಚಂಕಿ ಪಾಂಡೆ (Chunky Panday) ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮಗಳ ಡೇಟಿಂಗ್​ ಬಗ್ಗೆ ಮಾತನಾಡಿದ ಹಿರಿಯ ನಟ, ಮನರಂಜನಾ ಉದ್ಯಮದಲ್ಲಿ ಡೇಟಿಂಗ್​ ವದಂತಿಗಳು ಅನಿವಾರ್ಯ ಅಂಶ ಎಂಬಂತಾಗಿದೆ. ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಟ- ನಟಿಯರ ಜೀವನದಲ್ಲಿ ಊಹಾಪೋಹಗಳು ಸಂಭವಿಸುತ್ತಸೇ ಇರುತ್ತವೆ ಎಂದು ತಿಳಿಸಿದ್ದಾರೆ.

ಆದಿತ್ಯಾ ಅನನ್ಯಾ ಕೆಮಿಸ್ಟ್ರಿ ಬಗ್ಗೆ ಪ್ರಶ್ನೆ ಎದುರಾದಾಗ, ಎಲ್ಲ ಸಹನಟರೊಂದಿಗೆ ತನ್ನ ಮಗಳ ಕೆಮಿಸ್ಟ್ರಿ ಚೆನ್ನಾಗಿಯೇ ವರ್ಕ್ ಆಗುತ್ತದೆ ಎಂದು ತಿಳಿಸಿದರು. 'ಸ್ಟೂಡೆಂಟ್​ ಆಪ್​ ದಿ ಇಯರ್ 2' ನಲ್ಲಿ ಟೈಗರ್​ ಶ್ರಾಫ್​, 'ಪತಿ ಪತ್ನಿ ಔರ್​ ವೋ' ಚಿತ್ರದಲ್ಲಿ ಕಾರ್ತಿಕ್​ ಆರ್ಯನ್​ ಅವರಂತಹ ಹೆಸರುಗಳನ್ನು ಉಲ್ಲೇಖಿಸಿ ಸಹನಟರೊಂದಿಗೆ ಮಗಳ ಕೆಮಿಸ್ಟ್ರಿ ಚೆನ್ನಾಗಿಯೇ ವರ್ಕ್​ ಔಟ್​ ಆಗುತ್ತದೆ ಎಂದು ಹೇಳಿದರು. ಆ ನಟರೆಲ್ಲರೂ ಮಗಳೊಂದಿಗೆ ಅದ್ಭುತವಾಗೇ ಕಾಣುತ್ತಾರೆ. ಸಹ ನಟರನ್ನು ಪ್ರಶಂಸಿಸುವ ವಿಚಾರವಾಗಿ, ಚಿತ್ರರಂಗದಲ್ಲಿ ಉತ್ತಮ ಪ್ರಯಾಣ ನಡೆಸುತ್ತಿರುವ ವಿಚಾರವಾಗಿ ಮಾತನಾಡಿ ಪುತ್ರಿಯನ್ನು ಶ್ಲಾಘಿಸಿದರು.

ಮಗಳ ಬಾಯ್​ ಫ್ರೆಂಡ್ಸ್ ಅನ್ನು ರಿಜೆಕ್ಟ್​ ಮಾಡುವ ಅಗತ್ಯವಿಲ್ಲ. ಅವರೇ ತಮ್ಮ ಬಾಳಸಂಗಾತಿಯನ್ನು ಆಯ್ದುಕೊಳ್ಳುತ್ತಾರೆ ಎಂದು ಹಾಸ್ಯಚಟಾಕಿ ಹಾರಿಸಿದರು. ಅಲ್ಲದೇ ತಮ್ಮ ಮಕ್ಕಳಿಗೆ (ಅನನ್ಯಾ ಮತ್ತು ರೈಸಾ) ಸಲಹೆ ನೀಡಿರುವ ವಿಚಾರವನ್ನೂ ಬಹಿರಂಗಪಡಿಸಿದರು. ನಿಮ್ಮ ಬಾಳ ಸಂಗಾತಿಯಾಗುವವರು ತನಗಿಂತ ಉತ್ತಮವಾಗಿರಬೇಕೆಂದು ಚಂಕಿ ಪಾಂಡೆ ಅವರು ತಮ್ಮ ಮಕ್ಕಳಿಗೆ ಸಲಹೆ ನೀಡಿದ್ದಾರೆ.

2023ರಲ್ಲಿ ಆದಿಪುರುಷ್​ ನಟಿ ಕೃತಿ ಸನೋನ್​​ ಆಯೋಜಿಸಿದ್ದ ದಿವಾಲಿ ಪಾರ್ಟಿಯಲ್ಲಿ ಆದಿತ್ಯಾ ಅನನ್ಯಾ ಜೋಡಿಯಾಗಿ ಕಾಣಿಸಿಕೊಂಡು ಗಮನ ಸೆಳೆದರು. ಅಲ್ಲಿಂದ ಈ ಜೋಡಿ ಡೇಟಿಂಗ್​ನಲ್ಲಿದ್ದಾರೆ ಎಂಬ ವದಂತಿಗಳು ಆರಂಭವಾಯಿತು. ಇತ್ತೀಚೆಗೆ ಪೋರ್ಚುಗಲ್​ನ ಲಿಸ್ಬನ್​ನಿಂದ ಫೋಟೋ, ವಿಡಿಯೋಗಳು ವೈರಲ್​ ಆದವು. ವಿದೇಶ ಪ್ರವಾಸ, ಜೋಡಿಯ ಆತ್ಮೀಯ ಫೋಟೋಗಳು ವದಂತಿಗಳಿಗೆ ತುಪ್ಪ ಸುರಿದಂತಿತ್ತು.

ಇದನ್ನೂ ಓದಿ: ರೂಮರ್​ ಬಾಯ್​ಫ್ರೆಂಡ್​ ವೇದಾಂತ್ ಜೊತೆ ಕಾಜೋಲ್​​ ಪುತ್ರಿ - ಟ್ರೋಲಿಗರ ಆಟ ಶುರು!

ಇನ್ನೂ ನಟರ ಸಿನಿಮಾಗಳನ್ನು ನೋಡೋದಾದ್ರೆ, ನಟಿ ಅನನ್ಯಾ ಪಾಂಡೆ ಕೊನೆಯದಾಗಿ ಲೈಗರ್​ ಸಿನಿಮಾದಲ್ಲಿ ಕಾಣಿಸಿಕೊಂಡರು. ವಿಜಯ್​ ದೇವರಕೊಂಡ ಜೊತೆಗೆ ತೆರೆ ಹಂಚಿಕೊಂಡಿದ್ದರು. ನಟಿಯ ಮುಂದಿನ ಸಿನಿಮಾ ಡ್ರೀಮ್​ ಗರ್ಲ್ 2. ಆಯುಷ್ಮಾನ್​ ಖುರಾನಾ ಜೊತೆ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಅಲ್ಲದೇ, ವಿಕ್ರಮಾದಿತ್ಯ ಮೋಟ್ವಾನೆ ಅವರ ಕ್ರಂಟ್ರೋಲ್​ ಸಿನಿಮಾದಲ್ಲೂ ಕಾಣಿಸಿಕೊಳ್ಳಲಿದ್ದಾರೆ. ನಟ ಆದಿತ್ಯಾ ರಾಯ್​ ಕಪೂರ್​​ ಕೊನೆಯದಾಗಿ ಡಿಸ್ನಿ ಪ್ಲಸ್ ಹಾಟ್​ ಸ್ಟಾರ್​ನಲ್ಲಿ ಪ್ರಸಾರವಾದ ದಿ ನೈಟ್​ ಮ್ಯಾನೇಜರ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಮುಂದೆ ನಟಿ ಸಾರಾ ಅಲಿ ಖಾನ್​ ಜೊತೆ ಮೆಟ್ರೋ ಇನ್​ ದಿನೋ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: Valatty: ಮಲಯಾಳಂನ ವಾಲಟ್ಟಿ ನೋಡಿದಿರಾ? ಅಬ್ಬಬ್ಬಾ, 1 ಸಿನಿಮಾದಲ್ಲಿ 100ಕ್ಕೂ ಹೆಚ್ಚು ಶ್ವಾನಗಳು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.