ETV Bharat / entertainment

ಕಪಾಳ ಮೋಕ್ಷ ಪ್ರಕರಣ: ವಿಲ್ ಸ್ಮಿತ್ ತಮ್ಮ ನಿಜ ಸ್ವರೂಪ ಬಹಿರಂಗ ಪಡಿಸಿದರು - ಹ್ಯಾಸ ನಟ ಕ್ರಿಸ್​ ರಾಕ್​ - ವಿಲ್​ ಸ್ಮಿತ್ ಕಪಾಳ ಮೋಕ್ಷ ಪ್ರಕರಣ

ವಿಲ್ ಸ್ಮಿತ್ 30 ವರ್ಷಗಳ ಕಾಲ ಪರಿಪೂರ್ಣ ವ್ಯಕ್ತಿಯಾಗಿ ನಟಿಸುವಲ್ಲಿ ಯಶಸ್ವಿಯಾದರು. ಆದರೆ ಅವರು ಅಂದು ತಮ್ಮ ನಿಜವಾದ ಬಣ್ಣವನ್ನು ಬಹಿರಂಗಪಡಿಸಿದರು ಎಂದು ಕರಾಳ ನೆನಪಿನ ಬಗ್ಗೆ ಹಾಸ್ಯನಟ ಕ್ರಿಸ್ ರಾಕ್ ಹೇಳಿದರು.

Chris Rock calls out Will Smith at latest stand-up gig
ವಿಲ್ ಸ್ಮಿತ್ ತಮ್ಮ ನಿಜ ಸ್ವರೂಪವನ್ನು ಬಹಿರಂಬಪಡಿಸಿದರು: ಹ್ಯಾಸ ನಟ ಕ್ರಿಸ್​ ರಾಕ್​
author img

By

Published : Sep 3, 2022, 2:42 PM IST

ಪ್ರತಿಷ್ಠಿತ ಆಸ್ಕರ್ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭ ವೇದಿಕೆ ಮೇಲೆ ನಟ, ನಿರೂಪಕ ಕ್ರಿಸ್​ ರಾಕ್ ಅವರ ಕಪಾಳಕ್ಕೆ ನಟ ವಿಲ್​ ಸ್ಮಿತ್ ಹೊಡೆದ ಘಟನೆ ಸಾಕಷ್ಟು ಸುದ್ದಿಯಾಗಿದ್ದು, ಎಲ್ಲರಿಗೂ ಗೊತ್ತಿದೆ. ಈಗ ಈ ಘಟನೆ ಬಗ್ಗೆ ಹ್ಯಾಸ ನಟ ಕ್ರಿಸ್​ ಕರಾಳ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ.

ಬಹುದಿನಗಳ ಬಳಿಕ ಹ್ಯಾಸ ನಟ ಕ್ರಿಸ್​ ರಾಕ್​ ತಮ್ಮ ಸಹವರ್ತಿ ಡೇವ್ ಚಾಪೆಲ್ ಸ್ಟ್ಯಾಂಡ್ - ಅಪ್ ಗಿಗ್‌ನಲ್ಲಿ ಕಾಣಿಸಿಕೊಂಡರು. ಗಿಗ್​ ಕಾರ್ಯಕ್ರಮದಲ್ಲಿ ನಟ ವಿಲ್​ ಸ್ಮಿತ್​ನಿಂದ ಕಪಾಳಮೋಕ್ಷಗೊಂಡ ಬಗ್ಗೆ ತನ್ನ ವ್ಯಾಪಕ ಭಾವನೆಗಳನ್ನು ಕ್ರಿಸ್​ ರಾಕ್​ ಹಂಚಿಕೊಂಡರು.

ಆ ಘಟನೆಯಿಂದ ನಿಮಗೆ ನೋವಾಗಿದೆಯಾ ಎಂದು ಗಿಗ್​ ಕಾರ್ಯಕ್ರಮದಲ್ಲಿ ಚಾಪೆಲ್​ ಅವರು ಕ್ರಿಸ್​ ರಾಕ್​ಗೆ ಪ್ರಶ್ನಿಸಿದ್ದಾರೆ. ಅದೊಂದು ಉತ್ತಮವಾದ ಹಾಸ್ಯ. ಆದರೆ, ಆ ಹಾಸ್ಯದಿಂದ ಅವರು ಕುಪಿತಗೊಂಡು ನನ್ನನ್ನು ನಿಂದಿಸಿದರು. ಬಳಿಕ ಎಲ್ಲರ ಎದುರಿಗೆ ನನಗೆ ಕಪಾಳಮೋಕ್ಷ ಮಾಡಿದರು.

ವಿಲ್ ಸ್ಮಿತ್​ ಅವರು 30 ವರ್ಷಗಳ ಕಾಲ ನಟನೆ ಮಾಡಿದ್ದು, ಅಂದು ನಿಜ ಸ್ವರೂಪ ಹೊರ ಬಿದ್ದಿದೆ. ಅವರು ಸಹ ಎಲ್ಲರಂತೆ ತೋರಿಸಿಕೊಟ್ಟರು. ಪರಿಣಾಮಗಳು ಏನೇ ಇರಲಿ.. ಅವರು ಮತ್ತೆ ತಮ್ಮ ಮುಖವಾಡ ಹಾಕುವುದಿಲ್ಲ. ಅವನ ನಿಜವಾದ ಮುಖ ಉಸಿರಾಡಲು ಬಿಡುವುದಿಲ್ಲ ಎಂದು ನಾನು ಭಾವಿಸುತ್ತೇನೆ ಅಂತಾ ರಾಕ್​ ಹೇಳಿದರು.

ಪತ್ನಿ ಜಡಾ ಪಿಂಕೆಟ್ ಬಗ್ಗೆ ಕ್ರಿಸ್​ ರಾಕ್ ಗೇಲಿ ಮಾಡಿದ್ದಕ್ಕೆ ಕೋಪಗೊಂಡಿದ್ದ ವಿಲ್​ ಸ್ಮಿತ್ ವೇದಿಕೆ ಮೇಲೆಯೇ ಕಪಾಳಕ್ಕೆ ಬಾರಿಸಿದ್ದರು. ಆದರೆ, ವಿಲ್​ ಸ್ಮಿತ್ ವರ್ತನೆ ಬಗ್ಗೆ ಪರ ಮತ್ತು ವಿರೋಧವಾದ ಹೇಳಿಕೆಗಳು ಕೇಳಿ ಬಂದಿದ್ದವು. ವೇದಿಕೆಗೆ ತೋರಿದ ಅಗೌರವ ಎಂದು ಕೆಲವರು ಬೇಸರ ವ್ಯಕ್ತಪಡಿಸಿದರು. ಅತ್ಯುತ್ತಮ ನಟ ಪ್ರಶಸ್ತಿ ಸ್ವೀಕರಿಸಿ ಭಾಷಣ ಮಾಡಿದಾಗಲೂ ವಿಲ್​ ಸ್ಮಿತ್ ಕ್ಷಮೆಯಾಚಿಸಿರಲಿಲ್ಲ. ಬಳಿಕ ಈ ಘಟನೆ ಬಗ್ಗೆ ಇನ್​​​​ಸ್ಟಾಗ್ರಾಂ ಪೋಸ್ಟ್​ ಮಾಡಿರುವ ವಿಲ್ ಸ್ಮಿತ್, ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದರು.

ಹಿಂಸಾಚಾರವು ಎಲ್ಲ ರೀತಿಯಿಂದಲೂ ವಿಷಕಾರಿ ಮತ್ತು ವಿನಾಶಕಾರಿಯಾಗಿದೆ. ಅಲ್ಲದೇ, ಆಸ್ಕರ್ ಅಕಾಡೆಮಿ ಪ್ರಶಸ್ತಿ ಸಮಾರಂಭದ ವೇದಿಕೆ ಮೇಲೆ ನಾನು ತೋರಿದ ವರ್ತನೆ ಸ್ವೀಕಾರಾರ್ಹವಲ್ಲ ಹಾಗೂ ಅದನ್ನು ಕ್ಷಮಿಸಲಾಗದು. ಹದ್ದು ಮೀರಿದ ವರ್ತನೆಯಾಗಿ ನಾನು ತಪ್ಪು ಮಾಡಿದ್ದೇನೆ ಎಂದು ಹಾಲಿವುಡ್​​ ನಟ ಹೇಳಿಕೊಂಡಿದ್ದರು.

ಹ್ಯಾಸವು ಒಂದು ಭಾಗ ನಿಜ. ಆದರೆ, ಪತ್ನಿ ಜಡಾ ಅವರ ವೈದ್ಯಕೀಯ ಸ್ಥಿತಿಯ ಬಗೆಗಿನ ಹ್ಯಾಸ ನನಗೆ ಸಹಿಸಲಾಗಲಿಲ್ಲ. ಹೀಗಾಗಿ ಭಾವನಾತ್ಮಕವಾಗಿ ಪ್ರತಿಕ್ರಿಯಿಸಬೇಕಾಗಿತ್ತು. ಈ ಬಗ್ಗೆ ನಾನು ಸಾರ್ವಜನಿಕವಾಗಿ ಕ್ಷಮೆಯಾಚಿಸಲು ಬಯಸುತ್ತೇನೆ. ಈ ಘಟನೆಯಿಂದ ನಾನೂ ಮುಜುಗರಕ್ಕೊಳಗಾಗಿದ್ದೇನೆ. ನಾನು ಮನುಷ್ಯನಾಗಲು ಬಯಸುತ್ತೇನೆ. ಪ್ರೀತಿ ಮತ್ತು ದಯೆಯ ಈ ಜಗತ್ತಿನಲ್ಲಿ ಹಿಂಸೆಗೆ ಜಾಗವಿಲ್ಲ ಎಂದೂ ವಿಲ್ ಸ್ಮಿತ್ ಬರೆದುಕೊಂಡಿದ್ದರು.

ಇದನ್ನೂ ಓದಿ: ಶೀಘ್ರದಲ್ಲೇ ತಂದೆಯಾಗಲಿರುವ ಧ್ರುವ ಸರ್ಜಾ.. ನೋಡಿ ಪ್ರೇರಣಾ ಬೇಬಿ ಬಂಪ್ ಫೋಟೋಶೂಟ್

ಆಸ್ಕರ್-2022ರ ಕಾರ್ಯಕ್ರಮದಲ್ಲಿ ಹಾಸ್ಯನಟ ಕ್ರಿಸ್ ರಾಕ್​ಗೆ ಕಪಾಳಮೋಕ್ಷ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಲಿವುಡ್ ನಟ ವಿಲ್​ಸ್ಮಿತ್ ಅವರನ್ನು 10 ವರ್ಷಗಳ ಕಾಲ ಅಕಾಡೆಮಿಯ ಎಲ್ಲ ಈವೆಂಟ್‌ಗಳಿಗೆ ನಿಷೇಧಿಸಲು ಅಕಾಡೆಮಿ ಆಫ್ ಮೋಷನ್ ಪಿಕ್ಚರ್ಸ್ ಆರ್ಟ್ಸ್ ಆ್ಯಂಡ್ ಸೈನ್ಸಸ್​ನ ಆಡಳಿತ ಮಂಡಳಿ ನಿರ್ಧರಿಸಿರುವುದು ಗೊತ್ತಿರುವ ಸಂಗತಿ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.