ETV Bharat / entertainment

ಉದಯಪುರ ತಲುಪಿದ ಚೋಪ್ರಾ - ಚಡ್ಡಾ ಕುಟುಂಬ: ವರ ಕುದುರೆ ಏರಲ್ಲ, ದೋಣಿಯಲ್ಲಿ ಎಂಟ್ರಿ ಕೊಡಲಿದ್ದಾರೆ ರಾಘವ್​​ - ಪರಿಣಿತಿ ರಾಘವ್​ ವಿಡಿಯೋ

Chopra Chadha family reached Udaipur: ಅದ್ಧೂರಿ ಮದುವೆಗಾಗಿ ಚೋಪ್ರಾ ಚಡ್ಡಾ ಕುಟುಂಬಸ್ಥರು ರಾಜಸ್ಥಾನಕ್ಕೆ ತಲುಪಿದ್ದಾರೆ.

Parineeti Raghav wedding
ಪರಿಣಿತಿ ರಾಘವ್​ ಮದುವೆ
author img

By ETV Bharat Karnataka Team

Published : Sep 22, 2023, 3:56 PM IST

ರಾಜಕೀಯ ಮುಖಂಡ ರಾಘವ್ ಚಡ್ಡಾ ಹಾಗೂ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಜೋಡಿಯ ಅದ್ಧೂರಿ ವಿವಾಹ ಸಖತ್​ ಸದ್ದು ಮಾಡುತ್ತಿದೆ. ಮದುವೆಗೆ ಇನ್ನೊಂದೆ ದಿನ ಬಾಕಿ ಇದೆ. ನಾಳೆ ಮುದುವೆ ಮುನ್ನದ ಕಾರ್ಯಕ್ರಮಗಳು ನಡೆದರೆ, ನಾಡಿದ್ದು ಪ್ರೇಮಪಕ್ಷಿಗಳು ಹಸೆಮಣೆ ಏರಲಿದ್ದಾರೆ. ಈಗಾಗಲೇ ಮದುವೆ ಮುನ್ನದ ಸಂಭ್ರಮಗಳು ಶುರುವಾಗಿವೆ. ವಧು, ವರ ಬೆಳಗ್ಗೆಯೇ ರಾಜಸ್ಥಾನ ತಲುಪಿದ್ದಾರೆ. ಚೋಪ್ರಾ ಮತ್ತು ಚಡ್ಡಾ ಕುಟುಂಬಸ್ಥರು ಈಗಾಗಲೇ ಉದಯಪುರಕ್ಕೆ ಆಗಮಿಸಿದ್ದಾರೆ. ಇಬ್ಬರ ಕುಟುಂಬಸ್ಥರು ಉದಯಪುರಕ್ಕೆ ಆಗಮಿಸುತ್ತಿರುವ ಹಲವು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.

ನಟಿ ಪರಿಣಿತಿ ಚೋಪ್ರಾ ಪೋಷಕರಾದ ಪವನ್ ಮತ್ತು ರೀನಾ ಚೋಪ್ರಾ ದಂಪತಿ ಇಂದು ಉದಯಪುರ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ನಟಿಯ ತಾಯಿ ಬ್ಲ್ಯೂ ಕುರ್ತಾ ಧರಿಸಿ ಕಾಣಿಸಿಕೊಂಡರು. ತಂದೆ ಕಂಪ್ಲೀಟ್​ ಬ್ಲ್ಯಾಕ್​ ಡ್ರೆಸ್​​, ಸನ್​ಗ್ಲಾಸ್​ ಧರಿಸಿ ಕಾಣಿಸಿಕೊಂಡರು. ವಧುವಿನ ಸಹೋದರ, ಶಿವಾಂಗ್ ಚೋಪ್ರಾ ಕೂಡ ಸಂಪೂರ್ಣ ಕಪ್ಪುಡುಗೆಯಲ್ಲಿ ಆಗಮಿಸಿದ್ದರು. ವಧು ವರ ಸೇರಿದಂತೆ ಕುಟುಂಬಸ್ಥರಿಗೂ ಏರ್​ಪೋರ್ಟ್​ ಬಳಿ ಭರ್ಜರಿ ಸ್ವಾಗತ ಕೋರಲಾಗಿದ್ದು, ಕುಟುಂಬಸ್ಥರು ಪಾಪರಾಜಿಗಳನ್ನು ಕಂಡು ನಸುನಕ್ಕರು.

ವರನ ಕುಟುಂಬಸ್ಥರನ್ನು ಗಮನಿಸುವುದಾದರೆ, ರಾಘವ್​ ಚಡ್ಡಾ ಅವರ ತಾಯಿ ಅಲ್ಕಾ ಚಡ್ಡಾ ಪ್ರಿಂಟೆಡ್​​ ರೆಡ್​​ ಸೂಟ್‌ನಲ್ಲಿ ಸರಳವಾಗಿ ಕಾಣಿಸಿಕೊಂಡರು. ತಂದೆ ಸುನಿಲ್ ಚಡ್ಡಾ ಅವರು ಕಪ್ಪು ಕಾರ್ಗೋ ಪ್ಯಾಂಟ್‌, ಬಿಳಿ ಶರ್ಟ್ ಧರಿಸಿದ್ದರು. ವಿಮಾನ ನಿಲ್ದಾಣದಲ್ಲಿ ಬಂದು ಸೇರಿದ್ದ ಪಾಪರಾಜಿಗಳನ್ನು ಕಂಡು ಚಡ್ಡಾ ಮನೆಯವರು ಮುಗುಳ್ನಕ್ಕರು.

ಸಹಜವಾಗಿ ಕುದುರೆಯೇರಿ ವರನು ವಧು ಬಳಿ ತಲುಪುತ್ತಾರೆ. ಕುದುರೆ ಮೇಲೆ ವರ ಕುಳಿತಿದ್ದರೆ ಸುತ್ತಲೂ ಆಪ್ತರು ಮತ್ತು ಕುಟುಂಬಸ್ಥರು ಸೇರಿರುತ್ತಾರೆ. ಆದ್ರೆ ಈ ಮದುವೆಯಲ್ಲಿ ದೋಣಿಗಳಲ್ಲಿ ವರ ಮತ್ತು ಕುಟುಂಬಸ್ಥರ ಎಂಟ್ರಿ ಆಗಲಿದೆ. ಹೋಟೆಲ್​ ಲೀಲಾ ಪ್ಯಾಲೆಸ್​​ ಪಿಚೋಲಾ ಸರೋವರ ಮತ್ತು ಅರಾವಳಿ ಬೆಟ್ಟಗಳಿಂದ ಆವೃತವಾಗಿದೆ. ಸರೋವರದಲ್ಲಿ ರಾಯಲ್ ಬೋಟ್‌ಗಳ ಮೂಲಕ ವಧು ಪರಿಣಿತಿ ಚೋಪ್ರಾ ಇರುವ ವೇದಿಕೆಗೆ ರಾಘವ್​ ಚಡ್ಡಾ ತಲುಪಲಿದ್ದಾರೆ ಎಂಬ ಮಾಹಿತಿ ಇದೆ.

Chopra Chadha family
ದೋಣಿಯಲ್ಲಿ ಎಂಟ್ರಿ ಕೊಡಲಿದ್ದಾರೆ ರಾಘವ್​​

ಇದನ್ನೂ ಓದಿ: ರಾಜಸ್ಥಾನ ತಲುಪಿದ ರಾಗ್​ನೀತಿ: ದೆಹಲಿ ಏರ್​​ಪೋರ್ಟ್​​ನಲ್ಲಿ ಲವ್​ಬರ್ಡ್ಸ್ ಕಾಣಿಸಿಕೊಂಡಿದ್ದು ಹೀಗೆ- ವಿಡಿಯೋ

ಕುಟುಂಬ ಸದಸ್ಯರು, ಆಪ್ತ ಸ್ನೇಹಿತರ ಜೊತೆಗೆ, ಅರವಿಂದ್ ಕೇಜ್ರಿವಾಲ್, ಭಗವಂತ್ ಮಾನ್ ಸೇರಿದಂತೆ ಇತರೆ ರಾಜಕೀಯ ಮುಖಂಡರು ಮದುವೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವರದಿಗಳು ಹೇಳಿವೆ. ಇವರೊಂದಿಗೆ ಸಂಬಂಧಿ, ಗ್ಲೋಬಲ್​ ಐಕಾನ್​​ ಪ್ರಿಯಾಂಕಾ ಚೋಪ್ರಾ ಸೇರಿದಂತೆ ಹಲವು ಪ್ರಮುಖ ಬಾಲಿವುಡ್ ತಾರೆಯರು ಭಾಗವಹಿಸಲಿದ್ದಾರೆ. ಡಿಸೈನರ್ ಮನೀಶ್ ಮಲ್ಹೋತ್ರಾ, ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಮತ್ತು ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಸೇರಿದಂತೆ ಸೆಲೆಬ್ರಿಟಿಗಳು ಶನಿವಾರ ಉದಯಪುರಕ್ಕೆ ಆಗಮಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: '₹100 ಕೋಟಿ ಸಾಮಾನ್ಯವಾಗ್ಬಿಟ್ಟಿದೆ, ನಮ್ಮ ಗಮನ ₹1,000 ಕೋಟಿ ಮೇಲಿರಲಿ': ಸಲ್ಮಾನ್ ಖಾನ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.