ETV Bharat / entertainment

ಸಲಾರ್​ ಸ್ಪೆಷಲ್​​​​: ಪ್ರಭಾಸ್​, ಪೃಥ್ವಿರಾಜ್ ಸುಕುಮಾರನ್​​​, ಶ್ರುತಿ ಹಾಸನ್​ ಚಿಟ್​ ಚಾಟ್​ ನೋಡಿ - salaar Chit Chat

ಹೊಂಬಾಳೆ ಫಿಲ್ಮ್ಸ್ 'ಸಲಾರ್' ಸಿನಿಮಾ ನಟ-ನಟಿಯರ ಚಿಟ್​ ಚಾಟ್ ವಿಡಿಯೋ ಹಂಚಿಕೊಂಡಿದೆ.

salaar team Chit Chat
ಸಲಾರ್​ ಟೀಮ್​ ಚಿಟ್​ ಚಾಟ್
author img

By ETV Bharat Karnataka Team

Published : Jan 18, 2024, 10:50 AM IST

'ಕೆಜಿಎಫ್' ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಆ್ಯಕ್ಷನ್​ ಕಟ್​ ಹೇಳಿರುವ 'ಸಲಾರ್' ಇತ್ತೀಚೆಗೆ ತೆರೆಗೆ ಬಂದಿತ್ತು. ಪ್ಯಾನ್​ ಇಂಡಿಯಾ ಸ್ಟಾರ್​ ಪ್ರಭಾಸ್​ ಅಭಿನಯದ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಾಕ್ಸ್​ ಆಫೀಸ್​ ಅಂಕಿಅಂಶಗಳಿಂದಲೂ ಸಿನಿಮಾ ಎಲ್ಲರ ಹುಬ್ಬೇರಿಸಿದೆ. ಇದೀಗ ಚಿತ್ರತಂಡ​​ ಎಕ್ಸ್‌ಕ್ಲೂಸಿವ್​ ಚಿಟ್​ ಚಾಟ್​ ವಿಡಿಯೋ ಹಂಚಿಕೊಂಡಿದೆ.

ಸಲಾರ್​ ಟೀಮ್​ ಚಿಟ್​ ಚಾಟ್: ದಕ್ಷಿಣ ಚಿತ್ರರಂಗದ ಬಹುಬೇಡಿಕೆಯ ತಾರೆಯರಾದ ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್ ಅಮೋಘ ಅಭಿನಯದಿಂದ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಸಕ್ಸಸ್ ಸೆಲೆಬ್ರೇಶನ್​ ಕೂಡ ನಡೆದಿತ್ತು. ಈ ಹಿನ್ನೆಲೆಯಲ್ಲಿ ನಟಿ ಶ್ರುತಿ ಹಾಸನ್ ತಮ್ಮ ಸಹನಟರಾದ ಪ್ರಭಾಸ್ ಮತ್ತು ಪೃಥ್ವಿರಾಜ್​​ ಸುಕುಮಾರನ್​​ ಅವರನ್ನು ಸಂದರ್ಶಿಸಿದ್ದಾರೆ.

"ಹೌದು, ಎಲ್ಲರೂ ನಿಮ್ಮನ್ನು ರೆಬೆಲ್ ಸ್ಟಾರ್ ಎಂದು ಏಕೆ ಕರೆಯುತ್ತಾರೆ" ಎಂದು ಶ್ರುತಿ ಪ್ರಶ್ನಿಸಿದಾಗ, ನಕ್ಕ ಪ್ರಭಾಸ್, "ನನ್ನ ಅಂಕಲ್​ ರೆಬೆಲ್ ಸ್ಟಾರ್. ಹಾಗಾಗಿ ನನ್ನನ್ನು ರೆಬೆಲ್​ ಸ್ಟಾರ್​​ ಎಂದು ಕರೆಯುತ್ತಾರೆ" ಎಂದರು. ನಂತರ, "ಈ ಸಿನಿಮಾದಲ್ಲಿ ನನಗೆ ಪೃಥ್ವಿರಾಜ್ ಜೊತೆ ಯಾವುದೇ ಸೀನ್ ಇಲ್ಲ. ನಿಮ್ಮ ಜೊತೆ ಕೆಲವು ಸೀನ್​ಗಳಿವೆ. ನಿಮ್ಮಿಬ್ಬರ (ಪ್ರಭಾಸ್-ಪೃಥ್ವಿರಾಜ್) ನಡುವೆ ಹಲವು ಸೀನ್​ಗಳಿವೆ" ಎಂದಾಗ, ಪ್ರಭಾಸ್ ಕೂಡಲೇ ಕೌಂಟರ್ ಕೊಟ್ಟರು. "ಹೌದು, ನಿಮಗಿಂತ ಪೃಥ್ವಿರಾಜ್ ಜೊತೆ ಹೆಚ್ಚು ದೃಶ್ಯಗಳಿವೆ" ಎಂದು ಹೇಳಿ ನಕ್ಕರು. ಇದಕ್ಕೆ ಶ್ರುತಿ ಹಾಸನ್ ಚಿತ್ರದಲ್ಲಿ "ರೊಮ್ಯಾನ್ಸ್​​​ಗಿಂತ ಬ್ರೋಮ್ಯಾನ್ಸ್" ಇದೆ ಎಂದು ಕಾಲೆಳೆದರು.

ಇದನ್ನೂ ಓದಿ: ತಿಂಗಳಾಂತ್ಯಕ್ಕೆ 3 ಸಿನಿಮಾ ಘೋಷಿಸಲಿರುವ ಶಾರುಖ್ ಖಾನ್‌

ಚಿಟ್​ ಚಾಟ್​ನಲ್ಲಿ ಪ್ರಭಾಸ್ ಮತ್ತು ಪೃಥ್ವಿರಾಜ್ 'ಸಾಲಾರ್' ಸಿನಿಮಾ ಮತ್ತು ಪ್ರಶಾಂತ್ ನೀಲ್ ಮೇಕಿಂಗ್ ಬಗ್ಗೆ ಕುತೂಹಲಕಾರಿ ವಿಷಯಗಳನ್ನು ಹೇಳಿದರು. ಶ್ರುತಿ ಸಹನಟರ ಮೇಲೆ ಹೊಗಳಿಕೆಯ ಸುರಿಮಳೆಗೈದರು. ಸಿನಿಮಾ ನಿರ್ಮಾತೃ ಹೊಂಬಾಳೆ ಫಿಲ್ಮ್ಸ್ ಈ ಚಿಟ್​ ಚಾಟ್​ ಅನ್ನು ಎರಡು ಭಾಗಗಳಲ್ಲಿ ರಿಲೀಸ್ ಮಾಡಿದೆ. ಇದನ್ನು ನೋಡಿದ ಅಭಿಮಾನಿಗಳು ಸಿನಿಮಾ ಪ್ರಮೋಷನ್ ವಿನೂತನವಾಗಿ ನಡೆಯುತ್ತಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್ ಮಿಡ್‌ ವೀಕ್‌ ಎಲಿಮಿನೇಶನ್​​​​​​: ಕಣ್ಣೀರು ಸುರಿಸಿ ಮನೆಯಿಂದ ಹೊರನಡೆದ ತನಿಷಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.