ಖ್ಯಾತ ನಿರ್ದೇಶಕ, ನಟ ಹಾಗೂ ಸ್ಟಾರ್ ಕೊರಿಯೋಗ್ರಾಫರ್ ರಾಘವ ಲಾರೆನ್ಸ್ ಮತ್ತು ಬಾಲಿವುಡ್ ನಟಿ ಕಂಗನಾ ರಣಾವತ್ ನಟನೆಯ ಬಹುನಿರೀಕ್ಷಿತ ಚಿತ್ರ 'ಚಂದ್ರಮುಖಿ 2'. ಹಿರಿಯ ನಿರ್ದೇಶಕ ಪಿ. ವಾಸು ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದ ಟ್ರೇಲರ್ ಇದೀಗ ಬಿಡುಗಡೆಯಾಗಿದೆ. ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಿರ್ಮಾಣ ಸಂಸ್ಥೆ ಲೈಕಾ ಬತ್ತಳಿಕೆಯ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದೆ. ಚಿತ್ರದಲ್ಲಿ ರಾಘವ ಲಾರೆನ್ಸ್ ವೆಟ್ಟೈಯನ್ ರಾಜನಾಗಿ ಕಾಣಿಸಿಕೊಂಡಿದ್ದಾರೆ. ಚಂದ್ರಮುಖಿಯಾಗಿ ಕಂಗನಾ ರಣಾವತ್ ನಟಿಸಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಟ್ರೇಲರ್ ಲಿಂಕ್ ಹಂಚಿಕೊಂಡಿರುವ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್, "ಸಲೀಸಾಗಿ ನಮ್ಮ ಗಮನವನ್ನು ಕದಿಯುವ ಸೌಂದರ್ಯ ಮತ್ತು ಭಂಗಿ! ಚಂದ್ರಮುಖಿಯಿಂದ ಚಂದ್ರಮುಖಿ 2 ಆಗಿ. ಕಂಗನಾ ರಣಾವತ್ ಅವರ ಸೌಂದರ್ಯದ ಮೊದಲ ನೋಟವನ್ನು ಪ್ರಸ್ತುತಪಡಿಸಲಾಗುತ್ತಿದೆ. ಈ ಗಣೇಶ ಚತುರ್ಥಿಯಂದು ತಮಿಳು, ಹಿಂದಿ, ತೆಲುಗು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಚಂದ್ರಮುಖಿ ಬಿಡುಗಡೆಯಾಗಲಿದೆ" ಎಂದು ಬರೆದುಕೊಂಡಿದೆ.
- " class="align-text-top noRightClick twitterSection" data="">
ಟ್ರೇಲರ್ನಲ್ಲಿ, ಕಂಗನಾ ರಣಾವತ್ ಸಾಂಪ್ರದಾಯಿಕ ನೋಟದಲ್ಲಿ ಮೋಡಿ ಮಾಡಿದ್ದಾರೆ. ಹಾರರ್ ಕಮ್ ಕಾಮಿಡಿ ಚಿತ್ರದಲ್ಲಿ ಮೊದಲ ಬಾರಿಗೆ ಕಂಗನಾ ನಟಿಸುತ್ತಿದ್ದು, ರಾಜನ ಆಸ್ಥಾನದಲ್ಲಿನ ನರ್ತಕಿಯಾಗಿ ಕಾಣಿಸಿಕೊಂಡಿದ್ದಾರೆ. ಸೌಂದರ್ಯ, ನಟನೆ ಮತ್ತು ನೃತ್ಯಕ್ಕೆ ಹೆಸರಾಗಿರುವ ನೃತ್ಯಗಾರ್ತಿಯ ಪಾತ್ರವನ್ನು ಕಂಗನಾ ನಿರ್ವಹಿಸಿದ್ದಾರೆ. ಟ್ರೇಲರ್ ಸಖತ್ ಹಾರರ್ ಆಗಿ ತೋರಿಸಲಾಗಿದೆ. ಭಯಾನಕವಾಗಿ ಸನ್ನಿವೇಶಗಳನ್ನು ತೋರಿಸಲಾಗಿದ್ದು, ಸಿನಿಮಾ ಮೇಲೆ ಕುತೂಹಲ ಮತ್ತಷ್ಟು ಹೆಚ್ಚುವಂತೆ ಮಾಡಿದೆ.
ಇದನ್ನೂ ಓದಿ: 'ಚಂದ್ರಮುಖಿ 2' ನನ್ನ ಕರಿಯರ್ನ ಬೆಸ್ಟ್ ಸಿನಿಮಾವೆಂದ ಬಾಲಿವುಡ್ ಕ್ವೀನ್ ಕಂಗನಾ ರಣಾವತ್
18 ವರ್ಷಗಳ ಬಳಿಕ ಚಂದ್ರಮುಖಿ ಸೀಕ್ವೆಲ್: 2005 ರಲ್ಲಿ ಬಿಡುಗಡೆಯಾಗಿದ್ದ ಕ್ಲಾಸಿಕ್ ಸಿನಿಮಾ ಚಂದ್ರಮುಖಿ ಬಾಕ್ಸ್ ಆಫೀಸ್ನಲ್ಲಿ ಹೊಸ ದಾಖಲೆ ಸೃಷ್ಟಿಸಿತ್ತು. ಸೂಪರ್ಸ್ಟಾರ್ ರಜನಿಕಾಂತ್ ನಾಯಕನಾಗಿ ನಟಿಸಿದ್ದ ಈ ಚಿತ್ರ ಹಿಟ್ ಲೀಸ್ಟ್ ಸೇರಿತ್ತು. 18 ವರ್ಷದ ಬಳಿಕ ಚಂದ್ರಮುಖಿ ಸೀಕ್ವೆಲ್ ಬರುತ್ತಿದ್ದು, ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.
ಚಿತ್ರತಂಡ ಹೀಗಿದೆ.. ರಾಘವ ಲಾರೆನ್ಸ್, ಕಂಗನಾ ರಣಾವತ್ ಅಲ್ಲದೇ ಹಾಸ್ಯ ವಡಿವೇಲು, ಲಕ್ಷ್ಮೀ ಮೆನನ್, ಮಹಿಮಾ ನಂಬಿಯಾರ್, ರಾಧಿಕಾ ಶರತ್ ಕುಮಾರ್, ಸುರೇಶ್ ಮೆನನ್ ಸೇರಿದಂತೆ ದೊಡ್ಡ ತಾರಾಬಳಗವಿದೆ. ಲೈಕಾ ಪ್ರೊಡಕ್ಷನ್ಸ್ ಸಂಸ್ಥೆಯ ಒಡೆಯ ಸುಭಾಷ್ ಕರಣ್ ಬಹಳ ಅದ್ಧೂರಿಯಾಗಿ ಚಿತ್ರ ನಿರ್ಮಿಸಿದ್ದಾರೆ. ಆಸ್ಕರ್ ಪ್ರಶಸ್ತಿ ವಿಜೇತ ಎಂಎಂ ಕೀರವಾಣಿ ಸಂಗೀತ ನಿರ್ದೇಶನ, ಆರ್.ಡಿ ರಾಜಶೇಖರ್ ಛಾಯಾಗ್ರಹಣ, ಅಂಥೋನಿ ಸಂಕಲನ ಚಿತ್ರಕ್ಕಿದೆ.
ಸೆಪ್ಟಂಬರ್ 19 ರಂದು ರಿಲೀಸ್: 18 ವರ್ಷದ ಬಳಿಕ ಚಂದ್ರಮುಖಿ ಪಾರ್ಟ್ 2 ಬರುತ್ತಿದ್ದು, ಅಭಿಮಾನಿಗಳಲ್ಲಿ ನಿರೀಕ್ಷೆಯನ್ನು ಹೆಚ್ಚಿಸಿದೆ. ಚಿತ್ರವು ತೆಲುಗು, ತಮಿಳು, ಹಿಂದಿ, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಸೆಪ್ಟೆಂಬರ್ 19 ರಂದು ಗಣೇಶ್ ಚತುರ್ಥಿ ಸಲುವಾಗಿ ಸಿನಿಮಾ ತೆರೆ ಕಾಣಲಿದೆ. ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ಪಿ. ವಾಸು ಅವರ 65ನೇ ಚಿತ್ರವಿದು.
ಇದನ್ನೂ ಓದಿ: ಚಂದ್ರಮುಖಿ 2 ಶೂಟಿಂಗ್ನಲ್ಲಿ ಕಂಗನಾ ರಣಾವತ್: ಪ್ರಸಿದ್ಧ ನೃತ್ಯಗಾರ್ತಿ ಪಾತ್ರಕ್ಕೆ ಜೀವ ತುಂಬಲಿರುವ ನಟಿ