ETV Bharat / entertainment

'ಚಂದ್ರಮುಖಿ 2' ಹೊಸ ಟ್ರೇಲರ್​ ರಿಲೀಸ್: ಸಿನಿಪ್ರೇಮಿಗಳಲ್ಲಿ ಹೆಚ್ಚಿದ ಕುತೂಹಲ, ಸೆಪ್ಟೆಂಬರ್‌ನಲ್ಲಿ ತೆರೆಗೆ - Kangana Ranaut

Chandramukhi 2 New trailer: ಕಂಗನಾ ಅಭಿನಯದ ಬಹುನಿರೀಕ್ಷಿತ ಚಂದ್ರಮುಖಿ 2 ಸಿನಿಮಾದ ಹೊಸ ಟ್ರೇಲರ್ ಬಿಡುಗಡೆಯಾಗಿದೆ. ಈ ಚಿತ್ರದ ಕಥೆ ಏನು, ಬಿಡುಗಡೆ ಯಾವಾಗ ಎಂಬೆಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

Chandramukhi 2 New trailer
ಚಂದ್ರಮುಖಿ 2 ಹೊಸ ಟ್ರೇಲರ್
author img

By ETV Bharat Karnataka Team

Published : Sep 24, 2023, 7:01 AM IST

'ಬಾಲಿವುಡ್​ ಕ್ವೀನ್' ಕಂಗನಾ ರಣಾವತ್​ ಅಭಿನಯದ ಮುಂದಿನ ಬಹುನಿರೀಕ್ಷಿತ ಸಿನಿಮಾದ ಹೆಸರೇ ಚಂದ್ರಮುಖಿ 2. ಇದರ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಚಿತ್ರತಂಡ ಈ ನಿಟ್ಟಿನಲ್ಲಿ ಪ್ರಚಾರ ಕಾರ್ಯಾರಂಭಿಸಿದೆ. ಚಿತ್ರದ ಹೊಸ ಟ್ರೇಲರ್​ ರಿಲೀಸ್ ಆಗಿದೆ. ಇದು ಮೊದಲನೇ ಟ್ರೇಲರ್​​ಗಿಂತ ಹೆಚ್ಚು ಕುತೂಹಲಕಾರಿಯಾಗಿದೆ ಅಂತಿದಾರೆ ಅಭಿಮಾನಿಗಳು.

  • " class="align-text-top noRightClick twitterSection" data="">

ಸಿನಿಮಾದಲ್ಲಿ ಪ್ರಮುಖ ಪಾತ್ರಗಳಾದ ಚಂದ್ರಮುಖಿ ಮತ್ತು ಪ್ರಮುಖ ನಾಯಕ ವೆಟ್ಟಿಯಾನ್ ಅವರನ್ನೊಳಗೊಂಡ ಸೀನ್​​ಗಳಿವೆ. ಆ್ಯಕ್ಷನ್, ಭಯ, ಹಾಸ್ಯ ಸೇರಿ ನಾನಾ ರಸಭಾವಗಳನ್ನು ಟ್ರೇಲರ್ ಒಳಗೊಂಡಿದೆ. ಪಿ.ವಾಸು ನಿರ್ದೇಶನದ ಸಿನಿಮಾ ಪ್ರೇಕ್ಷಕರ ತುಡಿತ ಹೆಚ್ಚಿಸಿದೆ. ಕಂಗನಾ ರಣಾವತ್ ಅವರು​​ ನೃತ್ಯಗಾರ್ತಿ ಚಂದ್ರಮುಖಿ ಪಾತ್ರ ಮಾಡಿದ್ದಾರೆ. ರಾಘವ್​​ ಲಾರೆನ್ಸ್ ರಾಜ ವೆಟ್ಟಿಯಾನ್ ಪಾತ್ರ ನಿರ್ವಹಿಸಿದ್ದಾರೆ.

ಚಂದ್ರಮುಖಿ 2 ಕಥೆಯೇನು?: ಚಂದ್ರಮುಖಿ 2 ವರ್ತಮಾನ ಮತ್ತು ಭೂತಕಾಲದ ಸನ್ನಿವೇಶಗಳ ಕಥಾ ಹಂದರ ಹೊಂದಿದೆ. ಕುಟುಂಬವೊಂದು ಅರಮನೆಯೊಳಗೆ ಪ್ರವೇಶಿಸುತ್ತದೆ. ಅಲ್ಲಿ ಚಂದ್ರಮುಖಿಯ ಆತ್ಮ ನೆಲೆಸಿದೆ ಎಂದು ಟ್ರೇಲರ್​ನಲ್ಲಿ ತೋರಿಸಲಾಗಿದೆ. ಚಂದ್ರಮುಖಿ ರಾಜ ವೆಟ್ಟಿಯಾನ್‌ನ ಮೆಚ್ಚಿನ ನರ್ತಕಿ. ಟ್ರೇಲರ್‌ನಾದ್ಯಂತ ಇಂಥ ಕುತೂಹಲಕಾರಿ ಅಂಶಗಳನ್ನು ನೀವು ಕಾಣಬಹುದು. ಸೇಡು ತೀರಿಸಿಕೊಳ್ಳುವ ಚಂದ್ರಮುಖಿಯ ಆತ್ಮದಿಂದ ಮುಂದೇನಾಗುತ್ತದೆ ಎಂಬುದೇ ಚಿತ್ರದ ತಿರುಳು. ನಿರ್ದೇಶಕ ಪಿ.ವಾಸು ಆ್ಯಕ್ಷನ್​ ಕಟ್​ ಹೇಳಿರುವ ಈ ಸಿನಿಮಾ ಭೂಲ್ ಭುಲೈಯ್ಯಾ ಚಿತ್ರವನ್ನು ನೆನಪಿಸುವಂತಿದೆ. ಆದಾಗ್ಯೂ, ಹಳೇ ಸಿನಿಮಾಗಳಿಗಿಂತ ಹೆಚ್ಚು ವಿಶೇಷತೆಗಳನ್ನು ಚಂದ್ರಮುಖಿ 2 ಒಳಗೊಂಡಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಮುಂಬೈನಲ್ಲಿ ಅಟ್ಲೀ - ಅಲ್ಲು ಅರ್ಜುನ್​ ಭೇಟಿ: ಇವರಿಬ್ಬರ ಕಾಂಬೋದಲ್ಲಿ ಬರಲಿದೆಯಾ ಸಿನಿಮಾ?!

ಚಂದ್ರಮುಖಿ 2 ಬಿಡುಗಡೆಗೆ ದಿನ ನಿಗದಿ: 2005 ರಲ್ಲಿ ಚಂದ್ರಮುಖಿ ಸಿನಿಮಾ ಬಿಡುಗಡೆಯಾಗಿತ್ತು. ಈ ಸಿನಿಮಾ ಪ್ರೇಕ್ಷರನ್ನು ಸೆಳೆಯುವಲ್ಲಿಯೂ ಸಫಲವಾಗಿತ್ತು. ಬಾಕ್ಸ್​ ಆಫೀಸ್​ ಸಂಖ್ಯೆ ಕೂಡ ಉತ್ತಮವಾಗಿತ್ತು. ದಕ್ಷಿಣ ಭಾರತ ಸಿನಿಮಾ ವಲಯದ ಸೂಪರ್‌​ಸ್ಟಾರ್​ ರಜನಿಕಾಂತ್​ ಮತ್ತು ಜ್ಯೋತಿಕಾ ಮುಖ್ಯಭೂಮಿಕೆ ನಟಿಸಿದ್ದ ಸಿನಿಮಾ ಸೂಪರ್​ ಹಿಟ್ ಆಗಿತ್ತು. ಮೊದಲ ಭಾಗ ತೆರೆಕಂಡು 18 ವರ್ಷಗಳ ಬಿಡುವಿನ​ ಬಳಿಕ ಇದೀಗ ಚಂದ್ರಮುಖಿ 2 ಬರುತ್ತಿದೆ. ಸಹಜವಾಗಿ ಅಭಿಮಾನಿಗಳಲ್ಲಿ ಕುತೂಹಲವನ್ನೂ ಮೂಡಿಸಿದೆ. ಚಂದ್ರಮುಖಿ 2 ಸೆಪ್ಟೆಂಬರ್​​ 28ಕ್ಕೆ ಚಿತ್ರಮಂದಿರಗಳಲ್ಲಿ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಕನ್ನಡ, ತೆಲುಗು, ತಮಿಳು, ಹಿಂದಿ, ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.

ಇದನ್ನೂ ಓದಿ: 'ಯಾರೂ ಮಿತಿ ಮೀರಬಾರದು': ಬಿಜೆಪಿ ಸಂಸದರಿಗೆ ಕಂಗನಾ ಕ್ಲಾಸ್

ಕಂಗನಾ ರಣಾವತ್​ ಕೈಯಲ್ಲಿ ಇನ್ನೂ ಎರಡು ಸಿನಿಮಾಗಳಿವೆ. ಸರ್ವೇಶ್ ಮೇವಾರ ಅವರ ತೇಜಸ್‌ ಸಿನಿಮಾ ಅಕ್ಟೋಬರ್ 20 ರಂದು ತೆರೆಕಾಣಲು ಸಜ್ಜಾಗಿದೆ. ಇನ್ನುಳಿದಂತೆ ಎಮರ್ಜೆನ್ಸಿ ನವೆಂಬರ್ 24 ರಂದು ಚಿತ್ರಮಂದಿರಗಳಲ್ಲಿ ರಿಲೀಸ್​ ಆಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.