ETV Bharat / entertainment

ಸೆಲೆಬ್ರಿಟಿ ಎಂಬ ಕಾರಣಕ್ಕೆ ಅನಗತ್ಯ ದೌರ್ಜನ್ಯ ಸಲ್ಲದು; ಬಾಂಬೆ ಹೈಕೋರ್ಟ್​​ - ಅನಗತ್ಯ ಕಿರುಕುಳ ನೀಡಬಾರದು

ನಟ ಸಲ್ಮಾನ್​ ಖಾನ್​ ಮತ್ತು ಆತನ ಬಾಡಿಗಾರ್ಡ್​ ತಮಗೆ ಬೆದರಿಕೆ ಹಾಕಿದ್ದಾರೆ ಎಂಬ ಪತ್ರಕರ್ತ ಅಶೋಕ್​ ಪಾಂಡೆ ಸಲ್ಲಿಸಿದ್ದ ದೂರನ್ನು ಹೈ ಕೋರ್ಟ್​ ವಜಾಗೊಳಿಸಿದೆ.

HC quashes 2019 case against Salman Khan: He shall not be subjected to unnecessary oppression

author img

By

Published : Apr 12, 2023, 1:59 PM IST

ಮುಂಬೈ: 2019ರ ಪತ್ರಕರ್ತನೊಂದಿಗೆ ನಟ ಸಲ್ಮಾನ್​ ಖಾನ್​​ ಅನುಚಿತ ವರ್ತನೆ ತೋರಿದ ಪ್ರಕರಣವನ್ನು ಬಾಂಬೆ ಹೈ ಕೋರ್ಟ್​ ರದ್ದುಗೊಳಿಸಿದೆ. ಸೆಲಿಬ್ರಿಟಿ ಎಂಬ ಕಾರಣಕ್ಕೆ ನ್ಯಾಯಾಂಗ ಪ್ರಕ್ರಿಯೆಯ ಮೂಲಕ ಅನಗತ್ಯ ಕಿರುಕುಳ ನೀಡಬಾರದು ಎಂದು ಇದೇ ವೇಳೆ ಕೋರ್ಟ್​ ತಿಳಿಸಿದೆ. ನಟ ಸಲ್ಮಾನ್​ ಖಾನ್​ ಮತ್ತು ಅವರ ಬಾಡಿಗಾರ್ಡ್​​ ನವಾಜ್​ ಶೇಖ್​ಗೆ ಕೆಳ ನ್ಯಾಯಲಯ ನೀಡಿದ್ದ ಸಮನ್ಸ್​ ಪ್ರಕ್ರಿಯೆಯನ್ನು ಮಾರ್ಚ್​ 30ರಂದು ನ್ಯಾಯಮೂರ್ತಿ ಭಾರತಿ ಡಾಂಗ್ರೆ ರದ್ದುಗೊಳಿಸಿದರು. ಈ ಆದೇಶ ಮಂಗಳವಾರ ಲಭಿಸಿದ್ದು, ಇದರಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಕಾರ್ಯವಿಧಾನದ ಆದೇಶ ಅನುಸರಿಸಲು ವಿಫಲವಾಗಿದೆ ಎಂದು ಹೈಕೋರ್ಟ್ ಗಮನಿಸಿದೆ.

ಆರೋಪಿ ಜನಪ್ರಿಯ ನಟ ಎಂಬ ಕಾರಣಕ್ಕೆ ನ್ಯಾಯಾಲಯದ ಪ್ರಕ್ರಿಯೆ ಅಡಿ ಕಿರುಕುಳ ನೀಡಬಾರದು. ದೂರುದಾರರು ಉದ್ದೇಶ ಪೂರ್ವಕವಾಗಿ ಈ ಪ್ರಕರಣವನ್ನು ಬಳಸಿಕೊಂಡಿದ್ದಾರೆ. ನಟ ಎಂಬ ಕಾರಣಕ್ಕೆ ದೂರುದಾರರಿಂದ ಅನಗತ್ಯ ದಬ್ಬಾಳಿಕೆಗೆ ಒಳಗಾಗಬಾರದು. ದೂರಿನಿಂದಾಗಿ ಸಿನಿಮಾ ನಟ ಅವಮಾನಕ್ಕೆ ಒಳಗಾಗಬಹುದು ಎಂದು ಅವರು ಭಾವಿಸಿದ್ದಾರೆ ಎಂದು ನ್ಯಾಯಾಲಯ ತಿಳಿಸಿದೆ. ನಟ ಸಲ್ಮಾನ್​ ಖಾನ್​ ಮತ್ತು ಶೇಖ್​ ದೂರು ಸಲ್ಲಿಕೆಯ ದುರುಪಯೋಗ ಆಗಿದ್ದು, ಅವರಿಗೆ ನ್ಯಾಯ ನೀಡುವ ಉದ್ದೇಶದಿಂದ ಈ ದೋಷಾರೋಪಣೆಯ ಆದೇಶವನ್ನು ರದ್ದುಗೊಳಿಸುವುದು ಸೂಕ್ತ ಎಂದು ನ್ಯಾಯಾಲಯ ಭಾವಿಸಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಅರ್ಜಿದಾರರ ವಿರುದ್ಧ ಕ್ರಮವನ್ನು ಮುಂದುವರಿಸಿದರೆ ಅದು ಅನ್ಯಾಯವಾಗುತ್ತದೆ. ತನ್ನ ಆರೋಪಗಳನ್ನು ಪರಿಶೀಲಿಸಲು ಮ್ಯಾಜಿಸ್ಟ್ರೇಟ್ ಮೊದಲು ದೂರುದಾರನ ಹೇಳಿಕೆಯನ್ನು ದಾಖಲಿಸಿಕೊಳ್ಳಬೇಕು ಎಂದು ಹೈಕೋರ್ಟ್ ಹೇಳಿದೆ. ಕೆಳ ನ್ಯಾಯಾಲಯವು ಸಮನ್ಸ್ ನೀಡುವಾಗ ಕ್ರಿಮಿನಲ್ ಪ್ರೊಸೀಜರ್ ಕೋಡ್ ಡಿಯಲ್ಲಿ ನಿಗದಿಪಡಿಸಿದ ಕಾರ್ಯವಿಧಾನವನ್ನು ಬದಿಗೊತ್ತಿದೆ ಎಂದು ಇದೇ ವೇಳೆ ಉಲ್ಲೇಖಿಸಿದೆ.

ನಟ ಸಲ್ಮಾನ್​ ಖಾನ್​ ಮತ್ತು ಆತನ ಬಾಡಿಗಾರ್ಡ್​ ತಮಗೆ ಬೆದರಿಕೆ ಹಾಕಿ, ಅವಮಾನಿಸಿದ್ದಾರೆ ಎಂಬ ದೂರನ್ನು ಪತ್ರಕರ್ತ ಅಶೋಕ್​ ಪಾಂಡೆ ಸಲ್ಲಿಸಿದ್ದರು. ಇದರ ಅನುಸಾರ ಮಾರ್ಚ್​ 22ರಂದು ನಟ ಸಲ್ಮಾನ್​ ಖಾನ್​ ಮತ್ತು ಆತನ ಬಾಡಿಗಾರ್ಡ್​ ನವಾಜ್​ ಶೇಖ್​​ಗೆ ಏಪ್ರಿಲ್​ 2, 2022ರಂದು ಹಾಜರಾಗುವಂತೆ ಮ್ಯಾಜಿಸ್ಟ್ರೇಟ್​ ನ್ಯಾಯಾಲಯ ಸಮನ್ಸ್​ ಜಾರಿ ಮಾಡಿತ್ತು. ಈ ಹಿನ್ನೆಲೆ ಈ ಸಮನ್ಸ್​ ಪ್ರಶ್ನಿಸಿ, ಸಲ್ಮಾನ್​ ಖಾನ್​ ಹೈ ಕೋರ್ಟ್​ ಮೊರೆ ಹೋಗಿದ್ದರು. ಏಪ್ರಿಲ್​ 5, 2022ರಲ್ಲಿ ಈ ಸಮನ್ಸ್​ಗೆ ಹೈಕೋರ್ಟ್​ ತಡೆಯಾಜ್ಞೆ ನೀಡಿತ್ತು.

ಏನಿದು ಪ್ರಕರಣ: ನಟ ಸಲ್ಮಾನ್​ ಖಾನ್​ ಮುಂಬೈ ನಗರದಲ್ಲಿ ಸೈಕಲ್​ ರೈಡ್​ ಮಾಡುವಾಗ, ನಟ ಮತ್ತು ಆತನ ಬಾಡಿಗಾರ್ಡ್​ ಶೇಖ್​ ತನ್ನನ್ನು ಅವಮಾನಿಸಿ, ಹಲ್ಲೆ ನಡೆಸಿದ್ದು, ಬೆದರಿಕೆ ಹಾಕಿದ್ದಾರೆ ಎಂದು ಏಪ್ರಿಲ್​ 2019ರಲ್ಲಿ ಪತ್ರಕರ್ತ ಪಾಂಡೆ ದೂರು ಸಲ್ಲಿಸಿದ್ದರು. ಈ ದೂರಿನ ಕುರಿತು ಅರ್ಜಿ ಸಲ್ಲಿಸಿದ್ದ ನಟ ಸಲ್ಮಾನ್​ ಖಾನ್​ ತಾವು ಘಟನೆ ವೇಳೆ ಪಾಂಡೆಗೆ ಏನನ್ನು ಹೇಳಿಲ್ಲ ಎಂದಿದ್ದರು.

ಆದರೆ, ಮೆಟ್ರೋಪಾಲಿಟನ್​ ಮ್ಯಾಜಿಸ್ಟ್ರೇಟ್​ ​ ಆರ್​ಆರ್​ ಖಾನ್​ ನಟನ ವಿರುದ್ದ ಸಮನ್ಸ್​ ಜಾರಿ ಮಾಡಿದ್ದರು. ಪೊಲೀಸ್​ ವರದಿಯಲ್ಲಿ ಭಾರತೀಯ ದಂಡ ಸಂಹಿತೆಯ ಅಡಿ ಸೆಕ್ಷನ್ 504 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಅಪರಾಧಗಳು ಎಂದು ವಿವರಿಸಿತು

ಇದನ್ನೂ ಓದಿ: ವಯಸ್ಸಿನ ಮಿತಿ ಮರೆಯಬೇಡಿ; ಮಲೈಕಾ ಫೋಟೋಗೆ ನೆಟ್ಟಿಗರ ಕೆಂಗಣ್ಣು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.