ETV Bharat / entertainment

ರೈಲು ಅಪಘಾತ: ಯಶ್​​, ಚಿರಂಜೀವಿ, ಜೂ. ಎನ್‌ಟಿಆರ್ ಸೇರಿ ಸೆಲೆಬ್ರಿಟಿಗಳಿಂದ ಸಂತಾಪ! - ಕಿರಣ್ ಖೇರ್

ಒಡಿಶಾ ರೈಲು ಅಪಘಾತಕ್ಕೆ ಸೆಲೆಬ್ರಿಟಿಗಳು ಕಂಬನಿ ಮಿಡಿದಿದ್ದಾರೆ.

celebrities express grief over Odisha train accident
ಒಡಿಶಾ ರೈಲು ಅಪಘಾತಕ್ಕೆ ಸೆಲೆಬ್ರಿಟಿಗಳ ಕಂಬನಿ
author img

By

Published : Jun 3, 2023, 12:07 PM IST

Updated : Jun 3, 2023, 3:57 PM IST

ಭೀಕರ ರೈಲು ಅಪಘಾತಕ್ಕೆ ಭಾರತ ಸಾಕ್ಷಿಯಾಗುತ್ತಿದ್ದಂತೆ ವಿಶ್ವಾದ್ಯಂತ ಅಪಾರ ಸಂಖ್ಯೆಯ ಜನರು ಸಾವನ್ನಪ್ಪಿದವರಿಗೆ ಸಂತಾಪ ಸೂಚಿಸಿದ್ದಾರೆ. ಜನಪ್ರಿಯ ಸೆಲೆಬ್ರಿಟಿಗಳಾದ ಚಿರಂಜೀವಿ, ಜೂನಿಯರ್ ಎನ್‌ಟಿಆರ್ ಮತ್ತು ಕಿರಣ್ ಖೇರ್ ಕೂಡ ಒಡಿಶಾ ರೈಲು ದುರಂತದಲ್ಲಿ ಸಾವನಪ್ಪಿದವರ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಭೀಕರ ಘಟನೆಯ ಕುರಿತು ಪ್ರತಿಕ್ರಿಯಿಸಿದ ಚಿರಂಜೀವಿ, "ಒಡಿಶಾದಲ್ಲಿ ಸಂಭವಿಸಿದ ಕೋರಮಂಡಲ್ ಎಕ್ಸ್‌ಪ್ರೆಸ್ ಅಪಘಾತ ಮತ್ತು ಅಪಾರ ಜೀವಹಾನಿ ಬಗ್ಗೆ ಕೇಳಿ ಆಘಾತಕ್ಕೊಳಗಾಗಿದ್ದೇನೆ. ನನ್ನ ಹೃದಯವು ದುಃಖಿತ ಕುಟುಂಬಗಳ ಹತ್ತಿರ ಹೋಗಿದೆ. ಜೀವ ಉಳಿಸಲು ರಕ್ತದ ಘಟಕಗಳಿಗೆ ತುರ್ತು ಬೇಡಿಕೆಯಿದೆ ಎಂಬ ವಿಚಾರವನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ನಮ್ಮ ಎಲ್ಲಾ ಅಭಿಮಾನಿಗಳಿಗೆ ಮತ್ತು ಘಟನೆಯ ಹತ್ತಿರದ ಪ್ರದೇಶಗಳಲ್ಲಿರುವ ಜನರಿಗೆ ನನ್ನದೊಂದು ಮನವಿ, ಜೀವ ಉಳಿಸಲು ಸಾಧ್ಯವಿರುವ ಎಲ್ಲ ಸಹಾಯವನ್ನು ಮಾಡಿ'' ಎಂದು ಕೇಳಿಕೊಂಡಿದ್ದಾರೆ.

  • It’s difficult to describe in words how heart-wrenching the train tragedy of Odisha is. My deepest condolences to the families of the deceased and praying for the speedy recovery of those injured. Gratitude to the people who have come out in large numbers to help with rescue…

    — Yash (@TheNameIsYash) June 3, 2023 " class="align-text-top noRightClick twitterSection" data=" ">

ಯಶ್​ ಟ್ವೀಟ್: 'ಒಡಿಶಾದ ರೈಲು ದುರಂತ ಎಷ್ಟು ಹೃದಯ ವಿದ್ರಾವಕವಾಗಿದೆ ಎಂಬುದನ್ನು ಪದಗಳಲ್ಲಿ ವಿವರಿಸುವುದು ಕಷ್ಟ. ಮೃತರ ಕುಟುಂಬಗಳಿಗೆ ನನ್ನ ಆಳವಾದ ಸಂತಾಪ ಮತ್ತು ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಾಯ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಬಂದ ಜನರಿಗೆ ಕೃತಜ್ಞತೆಗಳು' ಎಂದು ಟ್ವೀಟ್ ಮಾಡಿದ್ದಾರೆ.

ಒಡಿಶಾದಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಿಂದ ತೀವ್ರ ದುಃಖವಾಗಿದೆ. ನನ್ನ ಆಲೋಚನೆಗಳು ಮತ್ತು ಪ್ರಾರ್ಥನೆಗಳು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ದುಃಖದಲ್ಲಿರುವ ಕುಟುಂಬಗಳೊಂದಿಗೆ ಇವೆ. ಈ ಕಷ್ಟದ ಸಮಯದಲ್ಲಿ ಅವರು ಶಕ್ತಿ ಕಂಡುಕೊಳ್ಳಲಿ. ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇವೆ ಎಂದು ನಟ ರಿಷಬ್​ ಶೆಟ್ಟಿ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

  • Saddened to hear about the disastrous train accident at Balasore in Odisha. My thoughts and prayers are with the bereaved families. I pray for speedy recovery of the injured. pic.twitter.com/eBbiggPx3p

    — Kirron Kher (@KirronKherBJP) June 3, 2023 " class="align-text-top noRightClick twitterSection" data=" ">

ಜೂನಿಯರ್ ಎನ್‌ಟಿಆರ್ ಪ್ರತಿಕ್ರಿಯಿಸಿ, "ಭೀಕರ ರೈಲು ಅಪಘಾತದಿಂದ ಸಂತ್ರಸ್ತರಾದ ಕುಟುಂಬಗಳು ಮತ್ತು ಅವರ ಪ್ರೀತಿಪಾತ್ರರಿಗೆ ಸಂತಾಪಗಳು. ಈ ವಿನಾಶಕಾರಿ ಘಟನೆಯಿಂದ ಪೀಡಿತ ಪ್ರತಿಯೊಬ್ಬ ವ್ಯಕ್ತಿಯೊಂದಿಗೆ ನನ್ನ ಆಲೋಚನೆಗಳು ಇವೆ. ಈ ಕಷ್ಟದ ಸಮಯದಲ್ಲಿ ಶಕ್ತಿ ಮತ್ತು ಬೆಂಬಲ ಅವರನ್ನು ಸುತ್ತುವರಿಯಲಿ" ಎಂದು ಬರೆದಿದ್ದಾರೆ.

  • Utterly shocked at the tragic Coromandel express accident in Orissa and the huge loss of lives! My heart goes out to the bereaved families.
    I understand there is an urgent demand for blood units to save lives. Appeal to all our fans and good samaritans in the nearby areas to…

    — Chiranjeevi Konidela (@KChiruTweets) June 3, 2023 " class="align-text-top noRightClick twitterSection" data=" ">

ನಟಿ, ರಾಜಕಾರಣಿ ಕಿರಣ್ ಖೇರ್ ಟ್ವೀಟ್ ಮಾಡಿದ್ದು, "ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿದ ರೈಲು ಅಪಘಾತದ ಬಗ್ಗೆ ಕೇಳಿ ದುಃಖವಾಯಿತು. ನನ್ನ ಆಲೋಚನೆಗಳು ಮತ್ತು ಪ್ರಾರ್ಥನೆಗಳು ದುಃಖಿತ ಕುಟುಂಬಗಳೊಂದಿಗೆ ಇವೆ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲು ನಾನು ಪ್ರಾರ್ಥಿಸುತ್ತೇನೆ" ಎಂದಿದ್ದಾರೆ.

  • Heartfelt condolences to the families and their loved ones affected by the tragic train accident. My thoughts are with each and every person affected by this devastating incident. May strength and support surround them during this difficult time.

    — Jr NTR (@tarak9999) June 3, 2023 " class="align-text-top noRightClick twitterSection" data=" ">

ರೈಲು ಹಳಿತಪ್ಪಿದ ಹಿನ್ನೆಲೆಯಲ್ಲಿ ಈ ದುರಂತ ಸಂಭವಿಸಿದ್ದು, ಒಡಿಶಾ ಸರ್ಕಾರ ಇಂದು ಶೋಕಾಚರಣೆ ಘೋಷಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

ನಟ ಸಲ್ಮಾನ್ ಖಾನ್ ಟ್ವೀಟ್ ಮಾಡಿದ್ದು, "ಅಪಘಾತದ ಬಗ್ಗೆ ಕೇಳಿ ದುಃಖವಾಗಿದೆ, ದೇವರು ಮೃತರ ಆತ್ಮಕ್ಕೆ ಶಾಂತಿ ನೀಡಲಿ. ಈ ದುರದೃಷ್ಟಕರ ಅಪಘಾತದಿಂದ ಗಾಯಗೊಂಡವರ ಕುಟುಂಬಗಳಿಗೆ ಶಕ್ತಿ ನೀಡಲಿ" ಎಂದು ಬರೆದಿದ್ದಾರೆ.

ಚಲನಚಿತ್ರ ನಿರ್ಮಾಪಕ ವಿವೇಕ್ ಅಗ್ನಿಹೋತ್ರಿ ಟ್ವೀಟ್​ ಮಾಡಿದ್ದು, "ದುರಂತ ಮತ್ತು ಅತ್ಯಂತ ನಾಚಿಕೆಗೇಡಿನ ಸಂಗತಿ. ಈ ಕಾಲದಲ್ಲಿ ಇಂಥಹ ದುರಂತ, 3 ರೈಲುಗಳು ಹೇಗೆ ಭಾಗಿಯಾಗಬಹುದು? ಇದಕ್ಕೆ ಉತ್ತರ ಏನು? ಎಲ್ಲಾ ಕುಟುಂಬಗಳಿಗೆ ನನ್ನ ಪ್ರಾರ್ಥನೆಗಳು. ಓಂ ಶಾಂತಿ" ಎಂದು ಬರೆದಿದ್ದಾರೆ.

ನಟ ಸೋನು ಸೂದ್ ತಮ್ಮ ಟ್ವಿಟರ್​ನಲ್ಲಿ ಬ್ರೋಕನ್ ಹಾರ್ಟ್ ಎಮೋಜಿಯೊಂದಿಗೆ ಅಪಘಾತದ ಚಿತ್ರವನ್ನು ಹಂಚಿಕೊಂಡಿದ್ದಾರೆ. ದುರಂತ ಎಂದು ನಟ ಮನೋಜ್ ಬಾಜಪೇಯಿ ಟ್ವೀಟ್ ಮಾಡಿದ್ದಾರೆ. ಇನ್​ಸ್ಟಾ ಸ್ಟೋರಿನಲ್ಲಿ ರಶ್ಮಿಕಾ ಮಂದಣ್ಣ ಸಂತಾಪ ಸೂಚಿಸಿದ್ದಾರೆ. ಒಡಿಶಾ ಘಟನೆ ಹೃದಯವಿದ್ರಾವಕ. ಇಹಲೋಕ ತ್ಯಜಿಸಿದವರಿಗೆ ನನ್ನ ಸಂತಾಪಗಳು, ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ ಅಂತಾ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ದೇಶವನ್ನೇ ಬೆಚ್ಚಿಬೀಳಿಸಿದ ಒಡಿಶಾ ರೈಲು ದುರಂತ: ಭೀಕರ ಸನ್ನಿವೇಶ ಫೋಟೋಗಳಲ್ಲಿ ಕಂಡಿದ್ದು ಹೀಗೆ!

ಕಳೆದ ಸಂಜೆ ನಡೆದ ಈ ಭೀಕರ ರೈಲು ಅಪಘಾತದಲ್ಲಿ ಕೊನೆಯುಸಿರೆಳೆದವರ ಸಂಖ್ಯೆ 261 (ಸದ್ಯದ ಮಾಹಿತಿ ಪ್ರಕಾರ). ಗಾಯಾಳುಗಳ ಸಂಖ್ಯೆ ಸರಿಸುಮಾರು 1,000. ಈ ಸಂಖ್ಯೆ ಮತ್ತಷ್ಟು ಏರುವ ಸಾಧ್ಯತೆ ಇದೆ. ಈ ಭೀಕರ ದುರಂತದ ದೃಶ್ಯ, ಫೋಟೋಗಳು ಜನರನ್ನು ಬೆಚ್ಚಿ ಬೀಳಿಸಿದೆ. ಇಡೀ ದೇಶವಾಸಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬಾಲಸೋರ್​ ರೈಲು ಅಪಘಾತ: ತುರ್ತು ಸಭೆ ಬಳಿಕ ದುರಂತ ಸ್ಥಳಕ್ಕೆ ಪ್ರಧಾನಿ ಮೋದಿ ಭೇಟಿ

2009ರ ಫೆಬ್ರವರಿ 13 ರಂದು ಸಹ ಇಂಥದ್ದೇ ದುರ್ಘಟನೆ ನಡೆದಿತ್ತು. ಅದು ಕೂಡ ಶುಕ್ರವಾರವೇ, ಕೋರಮಂಡಲ್​ ಎಕ್ಸ್​ಪ್ರೆಸ್ ರೈಲೇ ಆಗಿತ್ತು. ಹೌರಾದಿಂದ ಚೆನ್ನೈಗೆ ಹೊರಟಿದ್ದ ಕೋರಮಂಡಲ್​ ಎಕ್ಸ್​ಪ್ರೆಸ್​ ಹಳಿತಪ್ಪಿ ಅಪಘಾತಕ್ಕೆ ಒಳಗಾಗಿತ್ತು. ಹೌರಾದಿಂದ ಚೆನ್ನೈಗೆ ಹೊರಟಿದ್ದ ಕೋರಮಂಡಲ್​ ಎಕ್ಸ್​ಪ್ರೆಸ್ ಆ್ಯಕ್ಸಿಡೆಂಟ್​ ಆಗಿ 16 ಮಂದಿ ಸಾವನ್ನಪ್ಪಿದ್ದರು. 161 ಮಂದಿ ಗಾಯಗೊಂಡಿದ್ದರು. ಆದ್ರೆ ನಿನ್ನೆ ಸಂಜೆ ನಡೆದ ಈ ದುರ್ಘಟನೆಯಲ್ಲಿ ಕೊನೆಯುಸಿರೆಳೆದವರ ಸಂಖ್ಯೆ ಜನರ ಕಣ್ಣೀರಿಗೆ ಕಾರಣವಾಗಿದೆ.

Last Updated : Jun 3, 2023, 3:57 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.