ETV Bharat / entertainment

World Bollywood Day 2023: ಜಾಗತಿಕವಾಗಿ ಛಾಪು ಮೂಡಿಸಿರುವ ಭಾರತೀಯ ಸಿನಿ ಉದ್ಯಮದಲ್ಲಿ ಬಾಲಿವುಡ್​ ಪಾತ್ರ

ಬಾಲಿವುಡ್​​ ಗಡಿ ದಾಟಿ ಜಗತ್ತಿನಾದ್ಯಂತ ಪ್ರೇಕ್ಷಕರನ್ನು ತಲುಪುತ್ತಿದೆ. ಬಾಲಿವುಡ್​​ ಸಿನಿಮಾಗಳು ಕೇವಲ ಭಾರತೀಯ ಸಮುದಾಯದಲ್ಲಿ ಮಾತ್ರವಲ್ಲದೇ, ಭಾರತೀಯೇತರ ಪ್ರೇಕ್ಷಕರಿಂದಲೂ ಮೆಚ್ಚುಗೆ ಪಡೆದಿವೆ.

Celebrating the global phenomenon of Indian cinema

author img

By ETV Bharat Karnataka Team

Published : Sep 23, 2023, 5:58 PM IST

ಬೆಂಗಳೂರು: ಸೆಪ್ಟೆಂಬರ್​​ 23 ಅನ್ನು ವಿಶ್ವ ಬಾಲಿವುಡ್​ ದಿನವಾಗಿ ಆಚರಿಸಲಾಗುವುದು. ಈ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತೀಯ ಸಿನಿಮಾದ ಛಾಪು ಮೂಡಿಸುವ ಸಿನಿ ಉದ್ಯಮಕ್ಕೆ ಗೌರವ ಸಲ್ಲಿಸಲಾಗುವುದು. ಬಾಲಿವುಡ್​ ಭಾರತೀಯ ಸಿನಿ ಉದ್ಯಮದಲ್ಲಿ ಒಂದಾಗಿದ್ದು, ಜಾಗತಿಕವಾಗಿ ಅಭಿಮಾನಿಗಳನ್ನು ಹೊಂದಿದೆ. ತಮ್ಮದೇ ಆದ ವಿಶಿಷ್ಟ ಶೈಲಿಯ ಕಥೆ, ಅದ್ಬುತ ಸಂಗೀತ, ನೃತ್ಯದಿಂದ ಜಗತ್ತಿನ ಸಿನಿ ಅಭಿಮಾನಿಗಳನ್ನು ಸೆಳೆದಿದೆ.

ಬಾಲಿವುಡ್​ ಇತಿಹಾಸ: ಬಾಲಿವುಡ್​ ಬಾಂಬೆಯ ಪೋರ್ಟ್‌ಮ್ಯಾಂಟಿಯೊ ಮತ್ತು ಹಾಲಿವುಡ್​​ 20ರ ದಶಕದಲ್ಲಿ ಉದಯವಾಯಿತು. 1913ರಲ್ಲಿ ಭಾರತದ ಮೊದಲ ಕಥಾ ಚಿತ್ರ ರಾಜಾ ಹರಿಶ್ಚಂದ್ರ ಬಿಡುಗಡೆಯಾಯಿತು. ಇದು ಭಾರತದ ಸಿನಿಮಾದ ಹುಟ್ಟಿಗೆ ದೊಡ್ಡ ಮೈಲಿಗಲ್ಲು, ಹಿಂದಿ ಭಾಷೆಯ ಮೊದಲ ಕಲರ್​ ಸಿನಿಮಾ ಎಂದರೆ ಕಿಸನ್​ ಕನ್ಯಾ ಆಗಿದ್ದು, ಇದು 1937ರಲ್ಲಿ ಬಿಡುಗಡೆಯಾಯಿತು. ಈ ಮೂಲಕ ಬಾಲಿವುಡ್ ಸಾಂಪ್ರದಾಯಿಕ ಭಾರತೀಯ ಕಲಾ ಪ್ರಕಾರಗಳ ಅಂಶಗಳನ್ನು ಸೇರಿಸಿಕೊಂಡು, ಆಧುನಿಕ ಕಥೆ ಹೇಳುವ ತಂತ್ರಗಳನ್ನು ಅಳವಡಿಸಿಕೊಂಡು ಬಾಲಿವುಡ್​​ ವಿಕಸನಗೊಂಡಿತು

ಜಾಗತಿಕವಾಗಿ ಶ್ರೀಮಂತಿಕೆ: ಬಾಲಿವುಡ್​​ ಗಡಿ ದಾಟಿ ಜಗತ್ತಿನಾದ್ಯಂತ ಪ್ರೇಕ್ಷಕರನ್ನು ತಲುಪುತ್ತಿದೆ. ಬಾಲಿವುಡ್​​ ಸಿನಿಮಾಗಳು ಕೇವಲ ಭಾರತೀಯ ಸಮುದಾಯದಲ್ಲಿ ಮಾತ್ರವಲ್ಲದೇ, ಭಾರತೀಯೇತರ ಪ್ರೇಕ್ಷಕರಿಂದಲೂ ಮೆಚ್ಚುಗೆ ಪಡೆದಿದೆ.

ಕಳೆದ ದಶಕದಲ್ಲಿ ಬಾಲಿವಡ್​ ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ತಲುಪಿದ್ದು, ಅನೇಕ ಸಿನಿಮಾಗಳು ಸಾಗರಾದಾಚೆಗೆ ಕೂಡ ಬಾಕ್ಸ್​​ ಆಫೀಸ್​ನಲ್ಲಿ ಯಶಸ್ಸು ಕಂಡಿವೆ. 'ಪಠಾಣ್​', 'ಗದಾರ್​ 2', 'ಜವಾನ್'​ ಮತ್ತು 'ದಂಗಲ್'​ನಿಂದ ಸಿನಿಮಾಗಳು ಅಮೆರಿಕ, ಕೆನಡಾ, ಬ್ರಿಟನ್​​, ಆಸ್ಟ್ರೇಲಿಯಾದಂತಹ ದೇಶದಲ್ಲಿ ಬಾಲಿವುಡ್​ ಸಿನಿಮಾ ಪ್ರೇಕ್ಷಕರನ್ನು ಸೆಳೆಯುವಂತೆ ಮಾಡಿವೆ.

ವಿದೇಶಗಳಲ್ಲಿ ಹೆಚ್ಚು ಗಳಿಕೆ ಮಾಡಿದ ಸಿನಿಮಾಗಳು

ಜರ್ಮನಿ: ಇರ್ಫಾನ್​ ಖಾನ್​ ಅವರ 'ಲಂಚ್​ ಬಾಕ್ಸ್'​​ ಭಾರತದ ಬಾಕ್ಸ್​​ ಆಫೀಸ್​ನಲ್ಲಿ ಸಾಧಾರಣ ಯಶಸ್ಸು ಕಂಡಿದ್ದರೂ ಜರ್ಮನಿಯಲ್ಲಿ ಅತಿ ಹೆಚ್ಚು ಗಳಿಕೆಯನ್ನು ಮಾಡಿತ್ತು. ಈ ಚಿತ್ರ ಜರ್ಮನ್​ನಲ್ಲಿ 1,709.663 ಡಾಲರ್​ ಸಂಪಾದಿಸಿತ್ತು.

ಚೀನಾ: 'ದಂಗಲ್'​ ಸಿನಿಮಾ ಚೀನಾದಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಚಿತ್ರ. ಚೀನಾದಲ್ಲಿ ಈ ಸಿನಿಮಾ 216,200,000 ಡಾಲರ್​ ಸಂಪಾದಿಸಿತ್ತು. ಇದಕ್ಕೆ ಮುನ್ನ ತೆರೆಕಂಡ ಅಮೀರ್​ ಖಾನ್​ ಅವರ '3 ಈಡಿಯಟ್ಸ್'​​, 'ಗಜನಿ', 'ತಾರೇ ಜಮೀನ್​ ಪರ್'​ ಮತ್ತು 'ಪಿಕೆ' ಚಿತ್ರಗಳು ಚೀನಾದಲ್ಲಿ ಹೊಸ ಅಲೆ ಎಬ್ಬಿಸಿದ್ದು ಸುಳ್ಳಲ್ಲ.

ರಷ್ಯಾ: ರಷ್ಯಾ ದೇಶದಲ್ಲಿ ನಟ ಶಾರುಖ್​​ ಖಾನ್​ಗೆ ದೊಡ್ಡ ಅಭಿಮಾನಿ ಬಳಗವಿದೆ. ಇಲ್ಲಿ ಬಿಡುಗಡೆಯಾದ ಮೈ ನೇಮ್​​ ಇಸ್​ ಖಾನ್​ ಚಿತ್ರ 161,064 ಡಾಲರ್​ ಗಳಿಸಿತ್ತು.

ಪಾಕಿಸ್ತಾನ್​​: ಇಲ್ಲಿ ಭಾರತೀಯ ಆ್ಯಕ್ಷನ್​ ಕ್ರೈಂ ಚಿತ್ರ 'ರೇಸ್​ 3' ಸಿನಿಮಾ 2,732,969 ಡಾಲರ್​ ಅನ್ನು ಬಾಚಿಕೊಂಡಿತ್ತು.

ಆರ್ಥಿಕತೆ ಪರಿಣಾಮ: ಬಾಲಿವುಡ್​ ಸಿನಿಮಾ ಭಾರತೀಯ ಆರ್ಥಿಕತೆ ಮತ್ತು ಜಾಗತಿಕ ಸಿನಿಮಾ ಉದ್ಯಮಕ್ಕೆ ಮಹತ್ವದ ಕೊಡುಗೆ ನೀಡುತ್ತಿದೆ. ಬಾಲಿವುಡ್​ ಸಿನಿಮಾ ಉದ್ಯಮ ವರ್ಷಕ್ಕೆ 1 ಸಾವಿರ ಚಿತ್ರಗಳನ್ನು ತಯಾರಿಸುತ್ತದೆ. 2020 ಡಿಲೊಯಟ್​​ ಅಧ್ಯಯನ ಪ್ರಕಾರ, ಭಾರತೀಯ ಸಿನಿಮಾ ಉದ್ಯಮ 16.5 ಡಾಲರ್​ ಬಿಲಿಯನ್​ ಆರ್ಥಿಕತೆ ಹೊಂದಿದೆ. ಇದು 8,40,000 ಜನರಿಗೆ ಉದ್ಯೋಗ ನೀಡುತ್ತಿದೆ.

ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರಭಾವ: ಬಾಲಿವುಡ್​​ ಸಿನಿಮಾ ಭಾರತ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಮಾಜಿಕ ಮತ್ತು ಸಾಂಸ್ಕೃತಿಕತೆ ಮೇಲೆ ಪರಿಣಾಮ ಬೀರುತ್ತದೆ. ಬಾಲಿವುಡ್​ ಕೆಲವು ಚಿತ್ರಗಳು ಸಾಮಾಜಿಕ ಕಳಕಳಿ, ಲಿಂಗ, ಜಾತಿ ತಾರತಮ್ಯ ಮತ್ತು ಬಡತನದ ಮೇಲೆ ಬೆಳಕು ಚೆಲ್ಲಿದೆ. 'ದಂಗಲ್'​, 'ಪಿಂಕ್'​, 'ಟಾಯ್ಲೆಟ್​ ಏಕ್​ ಪ್ರೇಮ್​ ಕಥಾ' ನಂತಹ ಕೆಲವು ಸಿನಿಮಾಗಳು ಸಮಾಜದಲ್ಲಿನ ಸವಾಲುಗಳ ಗಮನವನ್ನು ಸೆಳೆದಿದೆ.

ಬಾಲಿವುಡ್​ ಭವಿಷ್ಯ: ಇತ್ತೀಚಿನ ಚಿನದಲ್ಲಿ ತಂತ್ರಜ್ಞಾನದ ಸುಧಾರಣೆಗೆ ನಾವು ಸಾಕ್ಷಿಯಾಗಿದ್ದೇವೆ. ಕಥೆ ಹೇಳುವ ತಂತ್ರವೂ ಹೊಸ ಆಯಾಮ ಪಡೆದಿದೆ. ಬಾಲಿವುಡ್​ ಇಂತಹ ಅಭಿವೃದ್ಧಿಯನ್ನು ಸದಾ ಅನುಕರಿಸಿದೆ. ವಿಷ್ಯುವಲ್​​ ಎಫೆಕ್ಟ್​​ಗಳು ಕಥೆ ಹೇಳುವ ತಂತ್ರಕ್ಕೆ ಹೊಸ ಆಯಾಮ ನೀಡುತ್ತದೆ. ಕೆಲವು ಅಂತಾರಾಷ್ಟ್ರೀಯ ಸಹಯೋಗಗಳು ಕೂಡ ಬಾಲಿವುಡ್​ ನಿರ್ಮಾಣದಲ್ಲಿ ಭವಿಷ್ಯದಲ್ಲಿ ಸ್ಪಷ್ಟ ಆಕಾರ ನೀಡಲಿದೆ.

ವಿಶ್ವ ಬಾಲಿವುಡ್​ ದಿನವನ್ನು ಬಾಲಿವುಡ್​ ಸೃಷ್ಟಿಸಿರುವ ಮ್ಯಾಜಿಕ್​ ಅಲೆಯ ಆಚರಿಸುವ ದಿನವಾಗಿದೆ. ಈ ದಿನದಂದು ಚಿತ್ರ ಪ್ರದರ್ಶನ, ನೃತ್ಯ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ ಬಾಲಿವುಡ್​ ಉದಯದ ಕುರಿತು ಕೆಲವು ಚರ್ಚೆಗಳನ್ನು ನಡೆಸಲಾಗುವುದು. ಜೊತೆಗೆ ತಮ್ಮ ನೆಚ್ಚಿನ ಬಾಲಿವುಡ್ ನೆನಪುಗಳನ್ನು ಹಂಚಿಕೊಳ್ಳಲು ಅಭಿಮಾನಿಗಳು ಸೇರಿ ತಮ್ಮ ನೆಚ್ಚಿನ ನಟರು, ನಿರ್ದೇಶಕರು, ಸಂಗೀತಗಾರರು ಮತ್ತು ನೃತ್ಯ ಸಂಯೋಜಕರಿಗೆ ಗೌರವ ಸಲ್ಲಿಸುತ್ತಾರೆ.

ಇದನ್ನೂ ಓದಿ: '₹100 ಕೋಟಿ ಸಾಮಾನ್ಯವಾಗ್ಬಿಟ್ಟಿದೆ, ನಮ್ಮ ಗಮನ ₹1,000 ಕೋಟಿ ಮೇಲಿರಲಿ': ಸಲ್ಮಾನ್ ಖಾನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.