ಮುಂಬೈ: ಬಾಲಿವುಡ್ ನಟಿಯರಾದ ರಾಖಿ ಸಾವಂತ್ ಮತ್ತು ಶೆರ್ಲಿನ್ ಚೋಪ್ರಾ ನಡುವಿನ ವಾಕ್ಸಮರ ಮುಂದುವರೆದಿದ್ದು, ಇಬ್ಬರೂ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾರೆ. ರಾಖಿ ಸಾವಂತ್ ವಕೀಲ ಫಲ್ಗುಣಿ ಬ್ರಹ್ಮಭಟ್ ಅವರು ತನ್ನ ಆಕ್ಷೇಪಾರ್ಹ ವಿಡಿಯೋ ಹರಿಬಿಡುವ ಜೊತೆಗೆ ಅವಾಚ್ಯ ಶಬ್ದಗಳನ್ನು ಬಳಸಿದ್ದಾರೆ ಎಂದು ಚೋಪ್ರಾ ಆರೋಪಿಸಿದ್ದಾರೆ.
ಮತ್ತೊಂದೆಡೆ, ರಾಖಿ ಸಾವಂತ್ ಓಶಿವಾರಾ ಪೊಲೀಸ್ ಠಾಣೆಯಲ್ಲಿ ಶೆರ್ಲಿನ್ ಚೋಪ್ರಾ ವಿರುದ್ಧ ದೂರು ದಾಖಲಿಸಿದ್ದಾರೆ. ಅಷ್ಟೇ ಅಲ್ಲದೇ, ಶೆರ್ಲಿನ್ ತನ್ನ ಬಾಯ್‌ಫ್ರೆಂಡ್‌ಗಳನ್ನು ಬದಲಾಯಿಸುತ್ತಿರುತ್ತಾಳೆ ಎಂದು ರಾಖಿ ವಿಡಿಯೋದಲ್ಲಿ ಹೇಳಿದ್ದರು. ನವೆಂಬರ್ 6 ರಂದು ಯುಟ್ಯೂಬ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ ಈ ಕುರಿತಾದ ವಿಡಿಯೋವನ್ನು ಶೆರ್ಲಿನ್ ಅಪ್ಲೋಡ್ ಮಾಡಿದ್ದು, ನನ್ನ ವೈಯಕ್ತಿಕ ಬದುಕಿನ ಕುರಿತು ಮಾತನಾಡಿದ್ದಾರೆ. ಇದು ನನ್ನ ಜೀವನದ ಮೇಲೆ ಪರಿಣಾಮ ಬೀರಿದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಓಶಿವಾರ ಪೊಲೀಸರು ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ: ತನ್ನನ್ನು ದ್ವೇಷಿಸುವವರ ಬಗ್ಗೆ ಮನಸ್ಸು ಮುರಿದುಕೊಂಡ ರಶ್ಮಿಕಾ ಮಂದಣ್ಣ: ಹೇಳಿದ್ದೇನು ಗೊತ್ತೇ?