ETV Bharat / entertainment

ಶಾರುಖ್ ಜನ್ಮದಿನಕ್ಕೆ ಮೆರುಗು ಕೊಟ್ಟ ಬುರ್ಜ್​ ಖಲೀಫಾ.. - ಪಠಾನ್ ಸಿನಿಮಾ

ಶಾರುಖ್ ಖಾನ್ ಅವರ ಹುಟ್ಟುಹಬ್ಬಕ್ಕೆ ಬುರ್ಜ್​ ಖಲೀಫಾ ವಿಶೇಷ ರೀತಿಯಲ್ಲಿ ವಿಷ್ ಮಾಡಿದೆ. ತನ್ನ ಇನ್​​ಸ್ಟಾಗ್ರಾಂನಲ್ಲಿ ಶುಭಾಶಯದ ವಿಡಿಯೋ ಹಂಚಿಕೊಂಡಿದೆ.

shah rukh khan
ಶಾರುಖ್ ಖಾನ್
author img

By

Published : Nov 3, 2022, 4:28 PM IST

Updated : Nov 3, 2022, 7:12 PM IST

ದುಬೈ : ಬಾಲಿವುಡ್ ಮೆಗಾಸ್ಟಾರ್ ಶಾರುಖ್ ಖಾನ್ ತಮ್ಮ 57 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇವರ ಜನ್ಮದಿನಕ್ಕೆ ವಿಶೇಷ ಮೆರುಗು ಕೊಟ್ಟದ್ದು ಬುರ್ಜ್​ ಖಲೀಫಾ. ವಿಶ್ವದ ಅತೀ ಎತ್ತರದ ಕಟ್ಟಡವೊಂದು ವಿಶೇಷ ರೀತಿಯಲ್ಲಿ ವಿಷ್ ಮಾಡಿದೆ. ದುಬೈನ ಐಕಾನಿಕ್ ಗಗನಚುಂಬಿ ಕಟ್ಟಡ ಬುರ್ಜ್ ಖಲೀಫಾ ಶುಭಾಶಯ ಕೋರಿದೆ. ತನ್ನ ಇನ್​​ಸ್ಟಾಗ್ರಾಂ ಖಾತೆಯಲ್ಲಿ ಶುಭಾಶಯದ ವಿಡಿಯೋ ಹಂಚಿಕೊಂಡಿದೆ.

"ಹ್ಯಾಪಿ ಬರ್ತ್‌ಡೇ ಶಾರುಖ್. ನಾವು ನಿಮ್ಮನ್ನು ಪ್ರೀತಿಸುತ್ತೇವೆ" ಎಂದು ಹೇಳಿದೆ. ಅವರ 1995 ರ ಐಕಾನಿಕ್ ಚಿತ್ರ 'ದಿಲ್‌ವಾಲೆ ದುಲ್ಹೇನಿಯಾ ಲೇ ಜಾಯೇಂಗೆ' ಯ 'ತುಜೆ ದೇಖಾ' ಟ್ರ್ಯಾಕ್ ಆ ಸಂದರ್ಭದಲ್ಲಿ ಹೊರ ಹೊಮ್ಮಿತು. ಈ ಚಿತ್ರ ಮತ್ತು ವಿಡಿಯೋ ನೋಡಿದ ಎಸ್ ಆರ್ ಕೆ ಅಭಿಮಾನಿಗಳು ಖುಷಿಪಟ್ಟರು. ಸಾಕಷ್ಟು ಕಮೆಂಟ್​​​ಗಳ ಮಹಾಪೂರವೇ ಹರಿದು ಬಂದಿತ್ತು. ದಾಖಲೆಯ ಪ್ರಕಾರ ಎಸ್ ಆರ್ ಕೆ ಬುರ್ಜ್​ ಖಲೀಫಾದಲ್ಲಿ ಕಾಣಿಸಿಕೊಂಡಿದ್ದು ಐದನೇ ಬಾರಿ.

ಇವೆಲ್ಲದರ ನಡುವೆ ಶಾರುಖ್ ನಾಲ್ಕು ವರ್ಷಗಳ ನಂತರ 'ಪಠಾನ್' ಮೂಲಕ ಬೆಳ್ಳಿತೆರೆಯತ್ತ ಮುಖ ಮಾಡಿದ್ದಾರೆ. ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರ ಜನವರಿ 25, 2023ರಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಇದಲ್ಲದೇ ರಾಜ್ ಕುಮಾರ್ ಹಿರಾನಿ ಅವರ ಮುಂಬರುವ ಚಿತ್ರ ಡುಂಕಿ ಮತ್ತು ದಕ್ಷಿಣ ನಿರ್ದೇಶಕ ಅಟ್ಲೀ ಅವರ ಆಕ್ಷನ್ ಥ್ರಿಲ್ಲರ್ ಚಿತ್ರ ಜವಾನ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಶಾರುಖ್ ಖಾನ್ ಹುಟ್ಟುಹಬ್ಬಕ್ಕೆ ವಿಕ್ಕಿ ಸ್ಪೆಷಲ್ ವಿಶ್​

Last Updated : Nov 3, 2022, 7:12 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.