ETV Bharat / entertainment

Upendra ಬರ್ತ್​ಡೇಗೆ 'ಬುದ್ಧಿವಂತ 2' ಟೀಸರ್​ ಜೊತೆ ರಿಲೀಸ್​ ಡೇಟ್​ ಅನೌನ್ಸ್​; ವಿಭಿನ್ನ ಅವತಾರದಲ್ಲಿ ರಿಯಲ್​ ಸ್ಟಾರ್​​! - ಈಟಿವಿ ಭಾರತ ಕನ್ನಡ

ರಿಯಲ್​ ಸ್ಟಾರ್​ ಉಪೇಂದ್ರ ಹುಟ್ಟು ಹಬ್ಬದಂದು 'ಬುದ್ಧಿವಂತ 2' ಸಿನಿಮಾದ ಟೀಸರ್​ ಮತ್ತು ಬಿಡುಗಡೆ ದಿನಾಂಕ ಘೋಷಣೆಯಾಗಲಿದೆ.

upendra
ಉಪೇಂದ್ರ
author img

By

Published : Jul 1, 2023, 7:06 PM IST

ವಿಭಿನ್ನ ಚಿತ್ರಗಳನ್ನು ನಿರ್ದೇಶನ ಮಾಡಿ ನಟಿಸುತ್ತಾ ಕನ್ನಡ ಚಿತ್ರರಂಗದ ರಿಯಲ್​ ಸ್ಟಾರ್​ ಎಂದೇ ಫೇಮಸ್​ ಆಗಿರುವ ನಟ ಉಪೇಂದ್ರ. ಸ್ಯಾಂಡಲ್​ವುಡ್​ಗೆ ಈಗಾಗಲೇ ಅನೇಕ ಸೂಪರ್​ ಹಿಟ್​ ಸಿನಿಮಾಗಳನ್ನು ನೀಡಿರುವ ಕೀರ್ತಿ ಇವರಿಗೆ ಸಲ್ಲುತ್ತದೆ. 'ಕಬ್ಜ' ಸೂಪರ್​ ಹಿಟ್​ ಆದ ಬಳಿಕ ಉಪೇಂದ್ರ ಮುಂದಿನ ಸಿನಿಮಾದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲವಿತ್ತು. ಅದಕ್ಕೆ ಉತ್ತರವಾಗಿ 'ಬುದ್ಧಿವಂತ' ಮತ್ತೆ ಬಂದಿದ್ದಾರೆ.

ಹೌದು. ಕನ್ನಡದಲ್ಲಿ ಅನೇಕ ಸಿನಿಮಾಗಳು ಸೂಪರ್​ ಹಿಟ್​ ಆಗಿವೆ. ಆ ಸಾಲಿನಲ್ಲಿ ಉಪೇಂದ್ರ ನಟನೆಯ 'ಬುದ್ಧಿವಂತ' ಕೂಡ ಒಂದು. ಇದೀಗ ಈ ಸಿನಿಮಾದ ಸೀಕ್ವೆಲ್​ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ. 2008 ರಲ್ಲಿ ಬಿಡುಗಡೆಯಾದ 'ಬುದ್ಧಿವಂತ' ಸಿನಿಮಾ ಸೂಪರ್ ಹಿಟ್ ಆಗಿತ್ತು. ಇದೀಗ 'ಬುದ್ಧಿವಂತ 2' ಚಿತ್ರ ತಯಾರಾಗುತ್ತಿದೆ. ಉಪೇಂದ್ರ ಅವರ ಹುಟ್ಟುಹಬ್ಬದಂದೇ ಸಿನಿಮಾದ ಟೀಸರ್​ ಹಾಗೂ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಚಿತ್ರತಂಡ ಅನೌನ್ಸ್​ ಮಾಡಲಿದೆ.

'ಬುದ್ಧಿವಂತ'ನಂತೆ ಸೀಕ್ವೆಲ್​ ಹಿಟ್​ ಆಗುತ್ತಾ? 'ನಾನವನಲ್ಲ ನಾನವನಲ್ಲ' ಎಂಬ ಡೈಲಾಗ್ ಕೇಳಿದೊಡನೆ ನೆನಪಾಗುವುದು ಉಪೇಂದ್ರ. 'ಬುದ್ಧಿವಂತ' ಚಿತ್ರದ ಈ ಡೈಲಾಗ್ ಇಂದಿಗೂ ಭಾರೀ ಫೇಮಸ್. ರಮಾನಾಥ್ ಋಗ್ವೇದಿ ನಿರ್ದೇಶನದ ಈ ಸಿನಿಮಾ 2008 ರಲ್ಲಿ ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿತ್ತು. ಇದೀಗ 'ಬುದ್ಧಿವಂತ 2' ಸಿನಿಮಾ ಬರುತ್ತಿದೆ. ಸುಮಾರು 15 ವರ್ಷಗಳ ನಂತರ ಈ ಚಿತ್ರದ ಸೀಕ್ವೆಲ್​ ತೆರೆ ಕಾಣಲಿದೆ. ಈಗಾಗಲೇ ಶೂಟಿಂಗ್​ ಮುಗಿಸಿರುವ ಈ ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ.

ಇದನ್ನೂ ಓದಿ: ಗೋಲ್ಡನ್ ಸ್ಟಾರ್ ಗಣೇಶ್ ಬರ್ತ್ ಡೇಗೆ ಸ್ಪೆಷಲ್ ಗಿಫ್ಟ್: ಕೃಷ್ಣಂ ಪ್ರಣಯ ಸಖಿ ಫಸ್ಟ್ ಲುಕ್ ಅನಾವರಣ

ಸದ್ಯ ಬಿಡುಗಡೆಯಾಗಿರುವ ಪೋಸ್ಟರ್​ನಲ್ಲಿ ಇದೇ ವರ್ಷ ಸೆಪ್ಟಂಬರ್​ನಲ್ಲಿ 'ಬುದ್ಧಿವಂತ 2' ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ. ಜೊತೆಗೆ ಚಿತ್ರತಂಡದಿಂದ ಮಾಹಿತಿ ಬಂದಿರುವಂತೆ ಈ ಸಿನಿಮಾದ ಟೀಸರ್​ ಮತ್ತು ಬಿಡುಗಡೆ ದಿನಾಂಕವನ್ನು ಉಪ್ಪಿ ಹುಟ್ಟುಹಬ್ಬದಂದು ಘೋಷಿಸಲಾಗುತ್ತದೆಯಂತೆ. ಈ ವಿಶೇಷ ದಿನಕ್ಕಾಗಿ ಸೆಪ್ಟಂಬರ್​ 18ರವರೆಗೆ ಕಾಯಬೇಕಿದೆ.

ಚಿತ್ರತಂಡ ಹೀಗಿದೆ.. ಚಿತ್ರದಲ್ಲಿ ಉಪೇಂದ್ರಗೆ ನಾಯಕಿಯರಾಗಿ ಮೇಘನಾ ರಾಜ್​ ಮತ್ತು 'ಪಂಚತಂತ್ರ' ಖ್ಯಾತಿಯ ಸೋನಾಲ್ ಮಾಂತೆರೋ ನಟಿಸುತ್ತಿದ್ದಾರೆ. ಶ್ರೀನಗರ ಕಿಟ್ಟಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಮಕ್, ಅಯೋಗ್ಯ, ಬೀರ್​​​​​ಬಲ್ ಸಿನಿಮಾಗಳ ಖ್ಯಾತಿಯ ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಸಂಸ್ಥೆಯ ಟಿ.ಆರ್​​​. ಚಂದ್ರಶೇಖರ್ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಸಾಕಷ್ಟು ನಿರ್ದೇಶಕರ ಜೊತೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಜಯರಾಮ್​ ಮಾಧವನ್​ ಈ ಚಿತ್ರಕ್ಕೆ ಆಕ್ಷನ್​ ಕಟ್​ ಹೇಳುತ್ತಿದ್ದಾರೆ.

ಈ ಸಿನಿಮಾದಲ್ಲಿ ನಟ ಉಪೇಂದ್ರ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ಖ್ಯಾತ ಗಾಯಕ ಗುರುಕಿರಣ್​ ಸಂಗೀತ ನೀಡಿದ್ದಾರೆ. ಎಸ್​. ನವೀನ್​ ಛಾಯಾಗ್ರಹಣ, ಕೆ.ಎಂ ಪ್ರಕಾಶ್​ ಸಂಕಲನ ಮತ್ತು ರವಿವರ್ಮ, ವಿಕ್ರಮ್​ ಸಾಹನ ನಿರ್ದೇಶನ ಚಿತ್ರಕ್ಕಿದೆ. 2023ರ ಬಹುನಿರೀಕ್ಷಿತ ಚಿತ್ರಗಳಲ್ಲಿ 'ಬುದ್ಧಿವಂತ 2' ಕೂಡ ಒಂದಾಗಿದೆ.

ಇದನ್ನೂ ಓದಿ: ಹೆಣಗಳ ರಾಶಿ ಮಧ್ಯೆ 'ಕ್ಯಾಪ್ಟನ್​ ಮಿಲ್ಲರ್': ಧನುಷ್​-ಶಿವಣ್ಣ ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ಗರಿಗೆದರಿದ ನಿರೀಕ್ಷೆ​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.