ETV Bharat / entertainment

ಚೆನ್ನೈನಲ್ಲಿ ಬ್ರಹ್ಮಾಸ್ತ್ರ ​ಸಿನಿಮಾ ಪ್ರಚಾರ - ದಕ್ಷಿಣ ಭಾರತದ ಆಹಾರ ಸವಿದ ರಣ್​​ಬೀರ್ ಕಪೂರ್ - ಬ್ರಹ್ಮಾಸ್ತ್ರ ಭಾಗ 1 ಶಿವ

ಬಾಲಿವುಡ್​​ ಸೂಪರ್‌ಸ್ಟಾರ್ ರಣ್​​ಬೀರ್ ಕಪೂರ್ ಅವರು ನಿರ್ದೇಶಕ ಎಸ್ ಎಸ್ ರಾಜಮೌಳಿ ಮತ್ತು ನಟ ನಾಗಾರ್ಜುನ ಅವರೊಂದಿಗೆ ದಕ್ಷಿಣ ಭಾರತದ ಆಹಾರವನ್ನು ಸವಿದಿದ್ದಾರೆ.

Brahmastra movie promotion Bollywood actor Ranbir Kapoor enjoys South Indian food
ದಕ್ಷಿಣ ಭಾರತದ ಆಹಾರ ಸವಿದ ರಣ್​​ಬೀರ್ ಕಪೂರ್
author img

By

Published : Aug 24, 2022, 4:26 PM IST

Updated : Aug 24, 2022, 5:14 PM IST

ಬಾಲಿವುಡ್​​ ಸೂಪರ್‌ಸ್ಟಾರ್ ರಣ್​​ಬೀರ್ ಕಪೂರ್ ಬ್ರಹ್ಮಾಸ್ತ್ರ ಸಿನಿಮಾದ ಕಾರ್ಯಕ್ರಮಕ್ಕಾಗಿ ಚೆನ್ನೈಗೆ ಆಗಮಿಸಿದ್ದಾರೆ. ನಿರ್ದೇಶಕ ಎಸ್ ಎಸ್ ರಾಜಮೌಳಿ ಮತ್ತು ನಟ ನಾಗಾರ್ಜುನ ಅವರೊಂದಿಗೆ ದಕ್ಷಿಣ ಭಾರತದ ಆಹಾರವನ್ನು ಸೇವಿಸಿದ್ದಾರೆ.

ಬಾಲಿವುಡ್​ ನಟಿ ಆಲಿಯಾ ಭಟ್ ಮತ್ತು ರಣ್​​ಬೀರ್ ಕಪೂರ್ ಜೋಡಿಯಾಗಿ ನಟಿಸಿರುವ ಬಹು ನಿರೀಕ್ಷಿತ ಬ್ರಹ್ಮಾಸ್ತ್ರ ​ಸಿನಿಮಾ ಸೆಪ್ಟೆಂಬರ್​ 9ರಂದು ಅದ್ಧೂರಿಯಾಗಿ ದೇಶಾದ್ಯಂತ ಬಿಡುಗಡೆ ಆಗಲಿದೆ. ಬ್ರಹ್ಮಾಸ್ತ್ರ ​ಸಿನಿಮಾ ಪ್ರಚಾರ ಕಾರ್ಯಕ್ರಮ ಹಿನ್ನೆಲೆ ರಾಜಮೌಳಿ, ನಾಗಾರ್ಜುನ, ರಣ್​​ಬೀರ್ ಕಪೂರ್ ಚೆನ್ನೈಗೆ ಆಗಮಿಸಿದ್ದಾರೆ. ಈ ವೇಳೆ ಮೂವರೂ ದಕ್ಷಿಣ ಭಾರತದ ಆಹಾರ ಸೇವಿಸಿ ಆನಂದಿಸಿದ್ದಾರೆ.

Brahmastra movie promotion Bollywood actor Ranbir Kapoor enjoys South Indian food
ದಕ್ಷಿಣ ಭಾರತದ ಆಹಾರ ಸವಿದ ರಣ್​​ಬೀರ್ ಕಪೂರ್

ಬ್ರಹ್ಮಾಸ್ತ್ರ ಭಾಗ 1 ಶಿವ ಭಾರತೀಯ ಪುರಾಣಗಳಲ್ಲಿ ಆಳವಾಗಿ ಬೇರೂರಿರುವ ಪರಿಕಲ್ಪನೆಗಳು, ಕಥೆಗಳಿಂದ ಸ್ಫೂರ್ತಿ ಪಡೆದ ಸಿನಿಮಾ. ಅಯಾನ್‌ ಮುಖರ್ಜಿ ನಿರ್ದೇಶನದ ಈ ಚಿತ್ರವನ್ನು ಎಸ್.ಎಸ್ ರಾಜಮೌಳಿ ತಮಿಳು, ತೆಲುಗು, ಕನ್ನಡ, ಮಲಯಾಳಂನಲ್ಲಿ ನಿರ್ಮಿಸಿ ಪ್ರಸ್ತುತಪಡಿಸಲಿದ್ದಾರೆ. ಸ್ಟಾರ್ ಸ್ಟುಡಿಯೋಸ್, ಧರ್ಮ ಪ್ರೊಡಕ್ಷನ್ಸ್, ಪ್ರೈಮ್ ಫೋಕಸ್ ಮತ್ತು ಸ್ಟಾರ್‌ಲೈಟ್ ಪಿಕ್ಚರ್ಸ್ ನಿರ್ಮಿಸಿರುವ ಈ ಸಿನಿಮಾ ಸೆಪ್ಟೆಂಬರ್ 9 ರಂದು ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಸೇರಿ 5 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ: ಬಾಲಿವುಡ್​ ಬ್ಯೂಟಿ​ ಆಲಿಯಾ ಭಟ್​ಗೂ ತಟ್ಟಿದ ಬಾಯ್ಕಾಟ್​ ಬಿಸಿ

ಒಂದೆಡೆ ಬ್ರಹ್ಮಾಸ್ತ್ರ ​ಸಿನಿಮಾ ಪ್ರಚಾರ ಜೋರಾಗಿ ನಡೆಯುತ್ತಿದ್ದರೆ ಮತ್ತೊಂದೆಡೆ ​ಸಿನಿಮಾ ನೋಡದಂತೆ ಸಾಮಾಜಿಕ ಜಾಲತಾಣದಲ್ಲಿ ಟ್ವಿಟರ್​​ ಅಭಿಯಾನ ಆರಂಭಿಸಲಾಗಿದೆ. ನಟಿ ಆಲಿಯಾ ಭಟ್ ಇತ್ತೀಚೆಗೆ ನೀಡಿದ ಹೇಳಿಕೆಗೆ ನೆಟಿಜನ್‌ಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆಲಿಯಾ ಭಟ್​ ಜೊತೆಗೆ ಬ್ರಹ್ಮಾಸ್ತ್ರಕ್ಕೆ ಬಾಯ್ಕಾಟ್​ ಬಿಸಿ ತಾಗಿದೆ. ಆದರೆ ಚಿತ್ರತಂಡ ಆಶಾಭಾವನೆಯೊಂದಿಗೆ ಪ್ರಚಾರ ಕಾರ್ಯಕ್ರಮಗಳನ್ನು ನಡೆಸುತ್ತಿದೆ.

Last Updated : Aug 24, 2022, 5:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.