ರಣ್ಬೀರ್ ಕಪೂರ್ ಮತ್ತು ಆಲಿಯಾ ಭಟ್ ಜೊತೆಯಾಗಿ ನಟಿಸಿರುವ 'ಬ್ರಹ್ಮಾಸ್ತ್ರ' ಶುಕ್ರವಾರದಂದು ವಿಶ್ವಾದ್ಯಂತ 8,913 ಸ್ಕ್ರೀನ್ಗಳಲ್ಲಿ ಬಿಡುಗಡೆ ಆಗಿದೆ. ಬಹಿಷ್ಕಾರದ ಬಿಸಿ, ಸೌತ್ ಸಿನಿಮಾ ಇಂಡಸ್ಟ್ರಿಯ ಅಬ್ಬರ, ನಟ-ನಟಿಯ ವಿವಾದಾತ್ಮಕ ಹೇಳಿಕೆ ಎಫೆಕ್ಟ್ ಚಿಂತೆಯ ನಡುವೆಯೇ ಸಿನಿಮಾ ರಿಲೀಸ್ ಆಗಿ ಮೊದಲ ದಿನವೇ ಬಾಕ್ಸ್ ಆಫೀಸ್ ಉಡೀಸ್ ಮಾಡಿದೆ.
- " class="align-text-top noRightClick twitterSection" data="
">
ಬ್ರಹ್ಮಾಸ್ತ್ರ ಸಿನಿಮಾ ತನ್ನ ಮೊದಲ ದಿನದಂದು ಜಗತ್ತಿನೆಲ್ಲೆಡೆ 75 ಕೋಟಿ ರೂ. ಸಂಗ್ರಹಿಸಿದೆ ಎಂದು ಚಿತ್ರ ತಯಾರಕರು ಇಂದು ತಿಳಿಸಿದ್ದಾರೆ. ಜೂನಿಯರ್ ಎನ್ಟಿಆರ್ ಹಾಗೂ ರಾಮ್ ಚರಣ್ ಅಭಿನಯದ ಆರ್ಆರ್ಆರ್ ಸಿನಿಮಾ ಮೊದಲ ದಿನ 20 ಕೋಟಿ ಗಳಿಕೆ ಮಾಡಿತ್ತು. ಸ್ವತಃ ರಣ್ಬೀರ್ ಕಪೂರ್ ಅಭಿನಯದ ಸಂಜು ಚಿತ್ರ 34.75 ಕೋಟಿ ಗಳಿಸಿತ್ತು. ಇದೀಗ ಬ್ರಹ್ಮಾಸ್ತ್ರ 75 ಕೋಟಿ ಕಲೆಕ್ಷನ್ ಮಾಡುವ ಮೂಲಕ ಎಲ್ಲಾ ದಾಖಲೆಗಳನ್ನೂ ಹಿಂದಕ್ಕೆ ತಳ್ಳಿದೆ.
-
You all painted cinema halls #Kesariya with your fiery love for #Brahmastra!🔥
— Dharma Productions (@DharmaMovies) September 10, 2022 " class="align-text-top noRightClick twitterSection" data="
Thank you for this love♥️
Book your tickets now -
BMS - https://t.co/qDufXPK4SQ
Paytm - https://t.co/vXZR7oqNLT pic.twitter.com/DzfNNkd2iv
">You all painted cinema halls #Kesariya with your fiery love for #Brahmastra!🔥
— Dharma Productions (@DharmaMovies) September 10, 2022
Thank you for this love♥️
Book your tickets now -
BMS - https://t.co/qDufXPK4SQ
Paytm - https://t.co/vXZR7oqNLT pic.twitter.com/DzfNNkd2ivYou all painted cinema halls #Kesariya with your fiery love for #Brahmastra!🔥
— Dharma Productions (@DharmaMovies) September 10, 2022
Thank you for this love♥️
Book your tickets now -
BMS - https://t.co/qDufXPK4SQ
Paytm - https://t.co/vXZR7oqNLT pic.twitter.com/DzfNNkd2iv
ಚಿತ್ರ ನಿರ್ಮಾಣಕ್ಕೆ ಒಂಬತ್ತು ವರ್ಷಗಳ ಸುದೀರ್ಘ ಸಮಯ ತೆಗೆದುಕೊಳ್ಳಲಾಗಿದೆ. 400 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದೆ. ಮೊದಲ ದಿನ 25 ಕೋಟಿ ರೂ. ಗಳಿಸಬಹುದು ಎಂಬುದು ಒಂದು ಅಂದಾಜಾಗಿತ್ತು. ಆದರೆ ಮೊದಲ ದಿನದ ಕಲೆಕ್ಷನ್ ನಿರೀಕ್ಷೆಗೂ ಮೀರಿದೆ. ಪ್ರೊಡಕ್ಷನ್ ಬ್ಯಾನರ್‌ಗಳಾದ ಸ್ಟಾರ್ ಸ್ಟುಡಿಯೋಸ್ ಮತ್ತು ಧರ್ಮ ಪ್ರೊಡಕ್ಷನ್ಸ್ ಈ ಬಗ್ಗೆ ಮಾಹಿತಿ ಹಂಚಿಕೊಂಡು ಹರ್ಷ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಬ್ರಹ್ಮಾಸ್ತ್ರ ಚಿತ್ರ ವಿಮರ್ಶೆ: ರಣಬೀರ್ ಕಪೂರ್ ಆಲಿಯಾ ಭಟ್ ನಟನೆಯ ಬಹುನಿರೀಕ್ಷಿತ ಸಿನಿಮಾ ಬಗ್ಗೆ ಪ್ರೇಕ್ಷಕರ ಮಾತು
ಅಯಾನ್ ಮುಖರ್ಜಿ ನಿರ್ದೇಶನದ 'ಬ್ರಹ್ಮಾಸ್ತ್ರ ಭಾಗ 1 ಶಿವ' ಭಾರತೀಯ ಪುರಾಣಗಳಲ್ಲಿ ಆಳವಾಗಿ ಬೇರೂರಿರುವ ಪರಿಕಲ್ಪನೆಗಳು, ಕಥೆಗಳಿಂದ ಸ್ಫೂರ್ತಿ ಪಡೆದ ಸಿನಿಮಾ ಆಗಿದೆ. ಚಿತ್ರದಲ್ಲಿ ರಣ್ಬೀರ್, ಆಲಿಯಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರೆ ಅಮಿತಾಬ್ ಬಚ್ಚನ್, ನಾಗಾರ್ಜುನ್ ಮತ್ತು ಮೌನಿ ರಾಯ್ ಕೂಡ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಚಿತ್ರವನ್ನು ಎಸ್.ಎಸ್ ರಾಜಮೌಳಿ ತಮಿಳು, ತೆಲುಗು, ಕನ್ನಡ, ಮಲಯಾಳಂನಲ್ಲಿ ಹಂಚಿಕೆದಾರರಾಗಿ ಕೆಲಸ ಮಾಡುತ್ತಿದ್ದಾರೆ. ಸ್ಟಾರ್ ಸ್ಟುಡಿಯೋಸ್, ಧರ್ಮ ಪ್ರೊಡಕ್ಷನ್ಸ್, ಪ್ರೈಮ್ ಫೋಕಸ್ ಮತ್ತು ಸ್ಟಾರ್‌ಲೈಟ್ ಪಿಕ್ಚರ್ಸ್ ನಿರ್ಮಿಸಿರುವ ಈ ಸಿನಿಮಾ ಇಂದು ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಸೇರಿ 5 ಭಾಷೆಗಳಲ್ಲಿ ಭರ್ಜರಿಯಾಗಿ ರಿಲೀಸ್ ಆಗಿದೆ. ಚಿತ್ರತಂಡ ಭರ್ಜರಿ ಪ್ರಚಾರ ನಡೆಸಿತ್ತು. ಬಿಡುಗಡೆಗೂ ಮುನ್ನ ಹಲವು ಸವಾಲುಗಳನ್ನು ಎದುರಿಸಿತ್ತು.