ETV Bharat / entertainment

ಒಂದು ಮಿಲಿಯನ್​ಗೂ ಹೆಚ್ಚು ವೀಕ್ಷಣೆ ಕಂಡ ಬಾಂಡ್ ರವಿ ಸಿನಿಮಾ ಟೀಸರ್ - Bond Ravi release date

ಬಾಂಡ್ ರವಿ ಸಿನಿಮಾ ಟೀಸರ್ ರಿಲೀಸ್ ಆಗಿ 1 ಮಿಲಿಯನ್​ಗೂ ಹೆಚ್ಚು ಜನ‌ ನೋಡಿ ಫಿದಾ ಆಗಿದ್ದಾರೆ.

Bond Ravi movie teaser released
ಬಾಂಡ್ ರವಿ ಸಿನಿಮಾ ಟೀಸರ್ ರಿಲೀಸ್
author img

By

Published : Sep 27, 2022, 3:30 PM IST

Updated : Sep 27, 2022, 5:57 PM IST

ಪ್ರಿಮಿಯರ್ ಪದ್ಮಿನಿ‌ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಅಂಗಳದಲ್ಲಿ ಭರವಸೆ ಹುಟ್ಟಿಸಿರೋ ನಟ ಪ್ರಮೋದ್. ರತ್ನನ್ ಪ್ರಪಂಚದಲ್ಲಿ ಉಡಾಳ್ ಬಾಬು ಆಗಿ ಸಿನಿ ಪ್ರೇಕ್ಷಕರ ಮನಸೂರೆಗೊಂಡ ಪ್ರಮೋದ್ ಈಗ ಬಾಂಡ್ ರವಿಯಾಗಿ ತೆರೆ ಮೇಲೆ ಬರಲು ಸಜ್ಜಾಗಿದ್ದಾರೆ. ಹೌದು, ಸದ್ಯ ಬಾಂಡ್ ರವಿ ಸಿನಿಮಾ ಟೀಸರ್ ರಿಲೀಸ್ ಆಗಿ 1 ಮಿಲಿಯನ್​ಗೂ ಹೆಚ್ಚು ಜನ‌ ನೋಡಿ ಫಿದಾ ಆಗಿದ್ದಾರೆ. ಪ್ರಮೋದ್ ಖಡಕ್ ಅಂಡ್ ಮಾಸ್ ಆ್ಯಕ್ಟಿಂಗ್ ಎಲ್ಲರ ಗಮನ ಸೆಳೆಯುತ್ತಿದೆ.

ಬಾಂಡ್ ರವಿ ಸಿನಿಮಾ ಟೀಸರ್ ಪತ್ರಕರ್ತರಿಂದ ಬಿಡುಗಡೆಯಾಗಿದ್ದು ವಿಶೇಷ. ಇದಕ್ಕೆ ಕಾರಣ ನಟ ಪ್ರಮೋದ್. ನಾನು ಶೈನ್ ಆಗಿಲ್ಲದೇ ಇದ್ದಾಗಿನಿಂದಲೂ ನನ್ನನ್ನು ಸಪೋರ್ಟ್ ಮಾಡಿಕೊಂಡು ಬಂದವರು ಪತ್ರಕರ್ತರು. ಎಂಟು ವರ್ಷದಿಂದ ನನ್ನ ಪ್ರತಿ ಹೆಜ್ಜೆಯಲ್ಲಿ ಮಾಧ್ಯಮ ಮಿತ್ರರ ಬೆಂಬಲ ಬಹಳ ದೊಡ್ಡದು ಎಂದಿದ್ದಾರೆ ನಟ ಪ್ರಮೋದ್. ಈ ಹಿನ್ನೆಲೆ ಈ ಚಿತ್ರದ ಟೀಸರ್ ಅನ್ನು ಪತ್ರಕರ್ತ ಮಿತ್ರರೇ ಬಿಡುಗಡೆ ಮಾಡಿದ್ದಾರೆ.

  • " class="align-text-top noRightClick twitterSection" data="">

'ಗೀತಾ ಬ್ಯಾಂಗಲ್ ಸ್ಟೋರ್' ಚಿತ್ರದ ಮೂಲಕ ಸ್ಯಾಂಡಲ್​​ವುಡ್​ಗೆ ನಾಯಕ ನಟನಾಗಿ ಎಂಟ್ರಿ ಕೊಟ್ಟ ಪ್ರಮೋದ್ ‘ಮತ್ತೆ ಉದ್ಭವ', ‘ಪ್ರೀಮಿಯರ್ ಪದ್ಮಿನಿ' ಹಾಗೂ ‘ರತ್ನನ್ ಪ್ರಪಂಚ’ ಸಿನಿಮಾಗಳಲ್ಲಿ ತಮ್ಮ ವಿಶೇಷ ಅಭಿನಯದ ಮೂಲಕ ಅಪಾರ ಮನ್ನಣೆ ಗಳಿಸಿಕೊಂಡಿದ್ದಾರೆ. ಇದೀಗ ‘ಬಾಂಡ್ ರವಿ’ ಸಿನಿಮಾ ಕೂಡ ಭರವಸೆ ಹುಟ್ಟಿಸಿದೆ. ಪಂಚಿಂಗ್ ಹಾಗೂ ಮಾಸ್ ಡೈಲಾಗ್​ಗಳು ಟೀಸರ್​ನಲ್ಲಿ ಗಮನ ಸೆಳೆದಿದ್ದು, ಸಿನಿಮಾ ಮೇಲಿನ ಕ್ಯೂರಿಯಾಸಿಟಿ ಹೆಚ್ಚಿಸಿದೆ.

ಈ ಬಗ್ಗೆ ನಟ ಪ್ರಮೋದ್ ಮಾತನಾಡಿ, ನಾನು ಈ ಸಿನಿಮಾವನ್ನು ತುಂಬಾ ಮೆಚ್ಚಿ ಇಷ್ಟಪಟ್ಟು ಮಾಡಿದ್ದೇನೆ. ಈ ಸಿನಿಮಾ ಮೇಲೆ ನಂಬಿಕೆಯಿದೆ. ಸಿನಿಮಾ ಗೆದ್ದೇ ಗೆಲ್ಲುತ್ತೆ ಅನ್ನೋ ಬಲವಾದ ನಂಬಿಕೆ ಕೂಡ ನನಗಿದೆ. ಅಷ್ಟು ಒಳ್ಳೆಯ ಕಂಟೆಂಟ್, ಕಥೆ ಸಿನಿಮಾದಲ್ಲಿದೆ. ಈ ಸಿನಿಮಾ ಮೂಲಕ ನಾನು ಕೂಡ ದೊಡ್ಡ ಮಟ್ಟದಲ್ಲಿ ಗೆಲುವು ಕಾಣುತ್ತೇನೆ ಎಂದು ಭರವಸೆಯ ಮಾತುಗಳನ್ನಾಡಿದರು.

ಸಿನಿಮಾ ಬಗ್ಗೆ ಅಪಾರ ಭರವಸೆ ಇದೆ: ಸಂಗೀತ ನಿರ್ದೇಶಕ ಮನೋಮೂರ್ತಿ ಮಾತನಾಡಿ, ನನಗೂ ಈ ಸಿನಿಮಾ ಬಗ್ಗೆ ಅಪಾರ ಭರವಸೆ ಇದೆ. ಮುಂಗಾರು ಮಳೆ ಕೂಡ ಹೀಗೆ ಆರಂಭವಾಗಿದ್ದು, ದೊಡ್ಡ ಹಿಟ್ ಆಯ್ತು. ಈ ಸಿನಿಮಾ ಕೂಡ ಸೂಪರ್ ಹಿಟ್ ಆಗುತ್ತದೆ. ಪ್ರಮೋದ್ ಮತ್ತು ಕಾಜಲ್ ಕುಂದರ್ ಇಬ್ಬರೂ ಅಮೋಘವಾಗಿ ಅಭಿನಯಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಚಿತ್ರದ ನಟಿ ಕಾಜಲ್ ಕುಂದರ್ ಮಾತನಾಡಿ, ನನ್ನ ಮೇಲೆ ನಂಬಿಕೆ ಇಟ್ಟು ಒಳ್ಳೆಯ ಪಾತ್ರವನ್ನು ಕೊಟ್ಟಿದ್ದಕ್ಕೆ ಚಿತ್ರತಂಡಕ್ಕೆ ತುಂಬಾ ಧನ್ಯವಾದಗಳು. ನನ್ನ ಪಾತ್ರಕ್ಕೆ ನ್ಯಾಯ ಒದಗಿಸಿದ್ದೇನೆ ಎಂಬ ನಂಬಿಕೆ ಇದೆ. ಪ್ರಮೋದ್ ಅವರ ಜೊತೆ ನಟಿಸಿದ್ದು ತುಂಬಾ ಖುಷಿ ಕೊಟ್ಟಿದೆ ಎಂದರು.

Bond Ravi movie teaser released
ಬಾಂಡ್ ರವಿ ಸಿನಿಮಾ ನಟ ನಟಿ.

ಚಿತ್ರದ ನಿರ್ದೇಶಕ ಪ್ರಜ್ವನಲ್ ಮಾತನಾಡಿ, ಇದು ನನ್ನ ಮೊದಲ ಸಿನಿಮಾ. ಸಿನಿಮಾ ಚೆನ್ನಾಗಿ ಮೂಡಿದೆ. ಒಂದೊಳ್ಳೆ ಸಿನಿಮಾ ಮಾಡಿದ ತೃಪ್ತಿ ನನಗಿದೆ. ಪ್ರಮೋದ್ ಅವರು ನನಗೆ ಸಿಕ್ಕಿದ್ದು ನನ್ನ ಅದೃಷ್ಟ. ಅವರು ವ್ಯಕ್ತಿಯಾಗಿ, ನಟನಾಗಿ ನನಗೆ ತುಂಬಾ ಸಪೋರ್ಟ್ ಮಾಡಿದ್ದಾರೆ. ನವೆಂಬರ್​ನಲ್ಲಿ ಸಿನಿಮಾ ಬಿಡುಗಡೆಗೆ ಪ್ಲ್ಯಾನ್ ಮಾಡಿದ್ದೇವೆ. ಖಂಡಿತ ಈ ಚಿತ್ರ ಎಲ್ಲರಿಗೂ ಇಷ್ಟವಾಗುತ್ತದೆ ಎಂದು ತಮ್ಮ ಸಿನಿಮಾ ಬಗ್ಗೆ ಮನದಾಳದ ಮಾತುಗಳನ್ನು ಹಂಚಿಕೊಂಡ್ರು.

ಬಾಂಡ್​ ರವಿ ಸಿನಿಮಾ ಸೂತ್ರದಾರ: ಬಾಂಡ್ ರವಿ ಆ್ಯಕ್ಷನ್ ಲವ್ ಸ್ಟೋರಿ ಸಿನಿಮಾ. ಚಿತ್ರರಂಗದಲ್ಲಿ ಹನ್ನೊಂದು ವರ್ಷಗಳಿಂದ ನಿರ್ದೇಶನ ವಿಭಾಗದಲ್ಲಿ ದುಡಿದ ಅನುಭವ ಇರುವ ಪ್ರಜ್ವಲ್ ಎಸ್.ಪಿ. ಬಾಂಡ್ ರವಿ ಸಿನಿಮಾ ಸೂತ್ರಧಾರ. ನರಸಿಂಹಮೂರ್ತಿ ಲೈಫ್ ಲೈನ್ ಫಿಲಂ ಬ್ಯಾನರ್ ಅಡಿ ಸಿನಿಮಾಗೆ ಬಂಡವಾಳ ಹೂಡಿದ್ದು, ಮಲ್ಲಿಕಾರ್ಜುನ್ ಕಾಶಿ ಹಾಗೂ ಝೇವಿಯರ್ ಫರ್ನಾಂಡಿಸ್ ಸಹ ನಿರ್ಮಾಪಕರ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಚಿತ್ರದಲ್ಲಿ ಅಪ್ಪು ಅಭಿಮಾನಿಯಾಗಿ ಪ್ರಮೋದ್ ನಟಿಸಿದ್ದು, ಇವರಿಗೆ ಜೋಡಿಯಾಗಿ ಕಾಜಲ್ ಕುಂದರ್ ತೆರೆ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಯುವ ದಸರಾದಲ್ಲಿ ಅಪ್ಪು ನಮನ.. ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ರಾಜರತ್ನನ ಪತ್ನಿ ಅಶ್ವಿನಿ

ಬೆಂಗಳೂರು, ಶಿವಮೊಗ್ಗ, ಕೊಡಚಾದ್ರಿ, ಕುದುರೆಮುಖ, ಉಡುಪಿ, ಮಂಗಳೂರು ಭಾಗಗಳಲ್ಲಿ ಬಾಂಡ್ ರವಿ ಸಿನಿಮಾ ಚಿತ್ರೀಕರಣ ನಡೆಸಲಾಗಿದೆ. ರವಿಕಾಳೆ, ಧರ್ಮ, ವಿಜಯ್ ಚೆಂಡೂರ್, ಶೋಭರಾಜ್ ಚಿತ್ರದ ತಾರಾ ಬಳಗದಲ್ಲಿದ್ದಾರೆ. ಕೆ.ಎಸ್. ಚಂದ್ರಶೇಖರ್ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ, ಸುನೀಲ್ ಮತ್ತು ದೇವ್ ಎನ್, ರಾಜ್ ಸಂಭಾಷಣೆ, ಮನೋಮೂರ್ತಿ ಸಂಗೀತ ಚಿತ್ರಕ್ಕಿದೆ.

Last Updated : Sep 27, 2022, 5:57 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.