ಬಾಲಿವುಡ್ನ ಹ್ಯಾಂಡ್ಸಮ್ ಹಂಕ್ ಹೃತಿಕ್ ರೋಷನ್. ವಯಸ್ಸು 50ರ ಸಮೀಪದಲ್ಲಿದ್ದರೂ ಕಣ್ಣಲ್ಲಿ ಯುವಕನ ನೋಟ. ಕಟ್ಟುಮಸ್ತಾದ ಮೈಕಟ್ಟು ಹೊಂದಿರುವ ಈ ನಟ ಅದೆಷ್ಟೋ ಯುವಕರಿಗೆ ಸ್ಫೂರ್ತಿ. ಫಿಟ್ನೆಸ್ ಐಕಾನ್ ಹೃತಿಕ್ ರೋಷನ್ ಅವರಂತೆ ಸದೃಢ ಮೈಕಟ್ಟು ಹೊಂದಲು ಅದೆಷ್ಟೋ ಯುವಕರು ಪ್ರಯತ್ನಿಸುತ್ತಾರೆ.
ಹೃತಿಕ್ ರೋಷನ್ ಫೋಟೋ ಶೇರ್: ಅಭಿಮಾನಿಗಳಿಗಾಗಿ ಬಾಲಿವುಡ್ ಡ್ಯಾನ್ಸಿಂಗ್ ಸ್ಟಾರ್ ಹೃತಿಕ್ ರೋಷನ್ ಆಗಾಗ್ಗೆ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ನಟ ಹಂಚಿಕೊಂಡಿರುವ ಹೊಸ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಜಾಗ ಗಿಟ್ಟಿಸಿಕೊಂಡಿವೆ. ಹೌದು, ಮೊಹೆಂಜೋದಾರೋ ಸಿನಿಮಾ ನಟ ತಮ್ಮ ಸಿಕ್ಸ್ ಪ್ಯಾಕ್ ಪ್ರದರ್ಶಿಸುವ ಶರ್ಟ್‌ಲೆಸ್ ಬ್ಲ್ಯಾಕ್ ಆ್ಯಂಡ್ ವೈಟ್ ಫೋಟೋ ಶೇರ್ ಮಾಡಿದ್ದಾರೆ. ತಾವು ಹಂಚಿಕೊಂಡಿದ ಪೊಸ್ಟ್ಗೆ 'ಫಿನಿಶ್ ಲೈನ್ ನೋಡಲು ಸಾಧ್ಯವಿಲ್ಲ' (Can’t see the finish line) ಎಂದು ಬರೆದುಕೊಂಡಿದ್ದಾರೆ.
ಗೆಳತಿ ಸಬಾ ಅಜಾದ್ ಪ್ರತಿಕ್ರಿಯೆ ಏನು? ಬಹುಬೇಡಿಕೆಯ ನಟ ಹಂಚಿಕೊಂಡ ಪೋಸ್ಟ್ ಸಾಕಷ್ಟು ಮೆಚ್ಚುಗೆ ಪಡೆದಿದೆ. ಅಭಿಮಾನಿಗಳು ಫೈಯರ್ ಮತ್ತು ರೆಡ್ ಹಾರ್ಟ್ ಎಮೋಜಿ ಮೂಲಕ ತಮ್ಮ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಗೆಳತಿ ಸಬಾ ಅಜಾದ್ ಕೂಡ ನಟನ ಫೋಟೋಗೆ ಅಭಿಮಾನಿಗಳಂತೆ ಫೈಯರ್ ಆ್ಯಂಡ್ ಹಾರ್ಟ್ ಎಮೋಜಿ ಹಾಕಿದ್ದಾರೆ. ಉಳಿದಂತೆ ಚಿತ್ರರಂಗದ ಹಲವರು ಈ ಫೋಟೋವನ್ನು ಇಷ್ಟಪಟ್ಟಿದ್ದಾರೆ.
ಹೃತಿಕ್ ರೋಷನ್ ಫೋಟೋ ವೈರಲ್: ಇನ್ನು ಸೋಷಿಯಲ್ ಮೀಡಿಯಾದಲ್ಲಿ ನಟನ ಫೋಟೋ ವೈರಲ್ ಆಗಿದೆ. ಅಭಿಮಾನಿಗಳು ಮೆಚ್ಚುಗೆಯ ಮಳೆ ಸುರಿಸಿದ್ದಾರೆ. ಹಾಟ್ ಎಂಬ ಕಾಮೆಂಟ್ ಹೆಚ್ಚಾಗಿದೆ. ಅಭಿಮಾನಿಯೋರ್ವರು ಪ್ರತಿಕ್ರಿಯಿಸಿ ಕಹೋ ನಾ ಪ್ಯಾರ್ ಹೈ 2 ಸಿನಿಮಾ ಮಾಡುವಂತೆ ಬೇಡಿಕೆ ಇಟ್ಟಿದ್ದಾರೆ. ಬೆಸ್ಟ್ ಬಾಡಿ ಇನ್ ಬಾಲಿವುಡ್ ಎಂದು ನೆಟ್ಟಿಗರೋರ್ವರು ಕಾಮೆಂಟ್ ಮಾಡಿದ್ದಾರೆ. ಮತ್ತೋರ್ವ ಸಾಮಾಜಿಕ ಜಾಲತಾಣ ಬಳಕೆದಾರರು ಪ್ರತಿಕ್ರಿಯಿಸಿ ಫೈಟರ್ ರೆಡಿ ಎಂದು ಬರೆದಿದ್ದಾರೆ.
ಇದನ್ನೂ ಓದಿ: ಶಾರುಖ್ 'ಜವಾನ್' ಭರ್ಜರಿ ಓಪನಿಂಗ್ ನಿರೀಕ್ಷೆ; ಫಸ್ಟ್ ಡೇ ಶೋಗೆ ಮಾರಾಟವಾದ ಟಿಕೆಟ್ಗಳೆಷ್ಟು?!
ನಟ ಹೃತಿಕ್ ರೋಷನ್ ಅವರ ಮುಂದಿನ ಬಹುನಿರೀಕ್ಷಿತ ಸಿನಿಮಾ 'ಫೈಟರ್'. ದೀಪಿಕಾ ಪಡುಕೋಣೆ ಮತ್ತು ಅನಿಲ್ ಕಪೂರ್ ಸಹ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಫೈಟರ್ ಸಿನಿಮಾದ ಮೋಷನ್ ಪೋಸ್ಟರ್ ಅನಾವರಣಗೊಳಿಸಿದ್ದಾರೆ. ಇಂಡಿಯನ್ ಏರ್ ಫೋರ್ಸ್ ಪೈಲಟ್ ಲುಕ್ ಕೊಟ್ಟಿದ್ದು, ಪೋಸ್ಟರ್ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ.
ಇದನ್ನೂ ಓದಿ: Box office battle: ಪಠಾಣ್ ದಾಖಲೆ ಮುರಿಯುವತ್ತ ಗದರ್ 2: ಓಎಂಜಿ 2 ಸಂಪಾದನೆ ಹೇಗಿದೆ?
ಮಂದಿನ ಗಣರಾಜ್ಯೋತ್ಸವದ ಮುನ್ನಾದಿನದಂದು ಫೈಟರ್ ಸಿನಿಮಾ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಹೌದು, ಬಿಗ್ ಸ್ಟಾರ್ ಕಾಸ್ಟ್ ಹೊಂದಿರುವ ಬಹುನಿರೀಕ್ಷಿತ ಸಿನಿಮಾ 2024 ರ ಜನವರಿ 25 ರಂದು ಅದ್ಧೂರಿಯಾಗಿ ತೆರೆಕಾಣಲಿದೆ. ಇದಲ್ಲದೇ, ಹೃತಿಕ್ ಬಳಿ ವಾರ್ 2 ಸಿನಿಮಾ ಕೂಡ ಇದೆ. ಬಹುಬೇಡಿಕೆ ನಟಿ ಕಿಯಾರಾ ಅಡ್ವಾಣಿ ಮತ್ತು ಆರ್ಆರ್ಆರ್ ಖ್ಯಾತಿಯ ಜೂನಿಯರ್ ಎನ್ಟಿಆರ್ ಕೂಡ ಇದ್ದಾರೆ.