ETV Bharat / entertainment

ಪ್ರೇಮಿಗಳ ದಿನಕ್ಕೆ ಗಿಫ್ಟ್​​ ಕೊಟ್ಟ ತುಪ್ಪದ ಬೆಡಗಿ; ರಿಲೀಸ್​ ಆಯ್ತು ರಾಗಿಣಿಯ ಫಸ್ಟ್​ ಬಾಲಿವುಡ್​ ಆಲ್ಬಂ ಸಾಂಗ್​ - ಬಾಲಿವುಡ್​​ನ ಪ್ರಖ್ಯಾತ ನೃತ್ಯ ನಿರ್ದೇಶಕ ವಿಷ್ಣು ದೇವ

ಮೊಟ್ಟ ಮೊದಲ ಬಾರಿಗೆ ರಾಗಿಣಿ ದ್ವಿವೇದಿ ಸಿಂಗಲ್ ಆಲ್ಬಂ ಸಾಂಗ್​ನಲ್ಲಿ ಅಭಿನಯಿಸಿದ್ದು ವ್ಯಾಲೆಂಟೈನ್ಸ್ ಡೇ ಸ್ಪೆಷಲ್​ ಅಭಿಮಾನಿಗಳಿಗಾಗಿ ಸಾಂಗ್​ ರಿಲೀಸ್​ ಮಾಡಿದ್ದಾರೆ.

Ragini Dwivedi
ರಾಗಿಣಿ ದ್ವಿವೇದಿ
author img

By

Published : Feb 14, 2023, 12:11 PM IST

ಬೆಂಗಳೂರು: ಕನ್ನಡ, ತೆಲುಗು, ತಮಿಳು,‌ ಮಲಯಾಳಂ ಹಾಗು ಹಿಂದಿ ಭಾಷೆಯಲ್ಲಿ ತನ್ನ ಗ್ಲ್ಯಾಮರ್ ಜೊತೆಗೆ ಅಭಿನಯದಿಂದ ಶೈನ್ ಆಗುತ್ತಿರುವ ನಟಿ ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ. ಕ್ಲಾಸ್ ಹಾಗು ಮಾಸ್ ಹೀರೋಯಿನ್ ಆಗಿ ಸಿಲ್ವರ್ ಸ್ಕ್ರೀನ್ ಮಿಂಚುತ್ತಿರುವ ರಾಗಿಣಿ ದ್ವಿವೇದಿ ಸಾರೀ ಕರ್ಮ ರಿಟರ್ನ್, ಬಾಲಿವುಡ್ ಸಿನಿಮಾ ಸೇರಿದಂತೆ ಬ್ಯಾಕ್ ಟು ಬ್ಯಾಕ್ ಚಿತ್ರಗಳನ್ನು ಮಾಡ್ತಾ ಇದ್ದು ಪ್ರೇಮಿಗಳ ದಿನಕ್ಕೆ ಪ್ರೀತಿಸುವ ಅಭಿಮಾನಿಗಳಿಗೆ ಸ್ಪೆಷಲ್ ರೊಮ್ಯಾಂಟಿಕ್ ಹಾಡುವೊಂದನ್ನು ನೀಡಿದ್ದಾರೆ.

ಹೌದು​ ರಾಗಿಣಿ ಸಿನಿಮಾಗಳ ಜೊತೆಗೆ ಬಾಲಿವುಡ್ ಹಿಂದಿ ಆಲ್ಬಂ ಸಾಂಗ್ ವೊಂದರಲ್ಲಿ ನಟಿಸುತ್ತಿದ್ದಾರೆ ಅಂತಾ ಹೇಳಲಾಗಿತ್ತು. ಇದೀಗ ಈ ಸೋನಿಯೇ ಎಂಬ ಹಾಡು ಈಗ ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಮೂಡಿ ಬಂದಿದ್ದು. ಪ್ರೇಮಿಗಳ ದಿನದ ಅಂಗವಾಗಿ ಕನ್ನಡ ಆಲ್ಬಂ ಸಾಂಗ್ ರಿಲೀಸ್ ಮಾಡಲಾಗಿದೆ. ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಅನೇಕ ಆಲ್ಬಂ ಸಾಂಗ್ ಗಳು ಬಂದಿವೆ. ಆದರೆ ರಾಗಿಣಿ ದ್ವಿವೇದಿ ಅಭಿನಯಿಸಿರೋ ಈ ಆಲ್ಬಂನಲ್ಲಿ ಪಂಜಾಬಿ ಶೈಲಿಯ ಪ್ಲೇವರ್ ಇರೋದು ವಿಶೇಷ. ಬಾಲಿವುಡ್​​ನ ಪ್ರಖ್ಯಾತ ನೃತ್ಯ ನಿರ್ದೇಶಕ ವಿಷ್ಣು ದೇವ ಹಾಡನ್ನು ಹಾಡುವ ಮೂಲಕ ಕ್ಯಾಚೀ ಟ್ಯೂನ್ ಹಾಕಿದ್ದಾರೆ.

ಈ ಆಲ್ಬಂ ಹಾಡಿನಲ್ಲಿ ರಾಗಿಣಿ ದ್ವಿವೇದಿ ತಮ್ಮ ಪಾತ್ರಕ್ಕೆ ಸಾಕಷ್ಟು ಮೇಕ್ ಓವರ್ ಮಾಡಿಕೊಂಡಿರೋದು ಗೊತ್ತಾಗುತ್ತೆ. ಫಿಟ್ನೆಸ್ ಹಾಗು ಬ್ಯೂಟಿ ಬಗ್ಗೆ ಹೆಚ್ಚು ಒತ್ತು ಕೊಟ್ಟಿರುವ ತುಪ್ಪದ ಬೆಡಗಿ ಬಳುಕುವ ಬಳ್ಳಿಯಂತೆ ಕಾಣಿಸಿಕೊಂಡಿರೋದು ಅಭಿಮಾನಿಗಳ ಮತ್ತಷ್ಟು ಸಂತಸ ತಂದಿದೆ. ಲಹರಿ ಸಂಸ್ಥೆ ಈ ಆಲ್ಬಂ ರಿಲೀಸ್ ಮಾಡಿದ್ದು, ಟಗರು, ಸಲಗ ಸಿನಿಮಾವನ್ನು ನಿರ್ಮಾಣ ಮಾಡಿದ್ದ, ಕೆ.ಪಿ ಶ್ರೀಕಾಂತ್ ಈ ಆಲ್ಬಂ ಹಾಡನ್ನ ನಿರ್ಮಾಣ ಮಾಡಿದ್ದಾರೆ. ಮುಂಬೈ ಸ್ಟುಡಿಯೋವೊಂದರಲ್ಲಿ ಅದ್ಧೂರಿ ಸೆಟ್ಟುಗಳನ್ನು ಹಾಕಿ ಈ ಆಲ್ಬಂ ಹಾಡನ್ನು ಚಿತ್ರೀಕರಣ ಮಾಡಲಾಗಿದೆ.

  • " class="align-text-top noRightClick twitterSection" data="">

ಮೊದಲ ಸಿಂಗಲ್​ ಆಲ್ಬಂ: ಇನ್ನು ರಾಗಿಣಿ ದ್ವಿವೇದಿ ಸಿನಿ ಬದುಕಿನಲ್ಲಿ ಗಮನಿಸಬಹುದಾದರೆ ಸಾಕಷ್ಟು ಸ್ಪೆಷಲ್ ಹಾಡುಗಳ ಲಿಸ್ಟ್​ ಸಿಗುತ್ತದೆ. ಆದರೆ ಈ ಆಲ್ಬಂ ಹಾಡು ರಾಗಿಣಿಗೆ ತುಂಬಾ ಸ್ಪೆಷಲ್ ಸಾಂಗ್​ ಅಂತಾ ಹೇಳಬಹುದು. ‌ಈ ನ್ಯೂ ಸಾಂಗ್​ ಮೂಲಕ ತಮ್ಮ ಅಭಿಮಾನಿಗಳ ದಿಲ್ ಕದ್ದಿದ್ದಾರೆ. ಜೊತೆಗೆ ರಾಗಿಣಿ ಇಲ್ಲಿವರೆಗೂ ಒಂದೇ ಒಂದು ಸಿಂಗಲ್ ಆಲ್ಬಂನಲ್ಲಿ ಕಾಣಿಸಿಕೊಂಡಿಲ್ಲ. ಇದೇ ಮೊದಲ ಬಾರಿಗೆ ಈ ಆಲ್ಬಂ ಹಾಡಿನಲ್ಲಿ ಅಭಿನಯಿಸಿರೋದು ತುಪ್ಪದ ಬೆಡಗಿಯ ಸಿನಿಮಾ ಕೆರಿಯರ್ ನಲ್ಲಿ ನೆನಪಿನಲ್ಲಿ ಉಳಿಯುವ ಹಾಡು ಇದಾಗುವ ಎಲ್ಲಾ ಲಕ್ಷಣಗಳು ಕಾಣ್ತಾ ಇದೆ. ಸದ್ಯ ಪ್ರೇಮಿಗಳ ದಿನಕ್ಕೆ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಈ ಆಲ್ಬಂ ಹಾಡು ಸಖತ್ ಸದ್ದು ಮಾಡುತ್ತಿದೆ.

ಇದನ್ನೂ ಓದಿ; ಜೂಲಿಯಟ್​ 2 ಚಿತ್ರದ ಮತ್ತೊಂದು ಹಾಡು ಬಿಡುಗಡೆ: ಕೋಟಿ ಜನರ ಮನಮುಟ್ಟಿದ ತಾಯಿ ಹಾಡು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.