ETV Bharat / entertainment

Deepika Padukone: ಫ್ಯಾಷನ್ ಐಕಾನ್​ ದೀಪಿಕಾ ಪಡುಕೋಣೆ ಏರ್​ಪೋರ್ಟ್​ ನೋಟಕ್ಕೆ ಫ್ಯಾನ್​ ಫಿದಾ - ಪ್ರಾಜೆಕ್ಟ್ ಕೆ

ನಟಿ ದೀಪಿಕಾ ಪಡುಕೋಣೆ ಏರ್​ಪೋರ್ಟ್​ ಲುಕ್ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

deepika padukone airport look
ದೀಪಿಕಾ ಪಡುಕೋಣೆ ಏರ್​ಪೋರ್ಟ್​ ಲುಕ್
author img

By

Published : Jul 11, 2023, 4:10 PM IST

Updated : Jul 11, 2023, 4:21 PM IST

ದೀಪಿಕಾ ಪಡುಕೋಣೆ ಬಾಲಿವುಡ್​ನ ಪ್ರತಿಭಾನ್ವಿತ ನಟಿ. ಪ್ರಾಜೆಕ್ಟ್ ಕೆ ಸಿನಿಮಾ ವಿಚಾರವಾಗಿ ಬಹುಬೇಡಿಕೆ ನಟಿ ಸುದ್ದಿಯಲ್ಲಿದ್ದಾರೆ. ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಹೆಜ್ಜೆ ಹಾಕಿರುವ ದೀಪಿಕಾ ಪಡುಕೋಣೆ ಇದೀಗ ಸ್ಯಾನ್ ಡಿಯಾಗೋ ಕಾಮಿಕ್ ಕಾನ್ (SDCC) ವೇದಿಕೆಯಲ್ಲಿ ಮಿಂಚು ಹರಿಸಲು ಸಜ್ಜಾಗುತ್ತಿದ್ದಾರೆ.

ಹೀಗೆ ಹಲವು ವಿಷಯಗಳಿಂದ ಸುದ್ದಿಯಲ್ಲಿರುವ ನಟಿ ಇಂದು ಬೆಳಗ್ಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಪಾಪರಾಜಿಗಳ ಇನ್​ಸ್ಟಾಗ್ರಾಮ್​ ಖಾತೆ ದೀಪಿಕಾ ಪಡುಕೋಣೆ ಅವರ ಏರ್​ಪೋರ್ಟ್ ವಿಡಿಯೋವನ್ನು ಶೇರ್ ಮಾಡಿದೆ. ಓಂ ಶಾಂತಿ ಓಂ ನಟಿ ನೇರಳೆ ಬಣ್ಣದ ದಿರಿಸಿನಲ್ಲಿ ಎಲ್ಲರನ್ನೂ ಬೆರಗುಗೊಳಿಸಿದ್ದಾರೆ.

ಆನ್​ಲೈನ್​ ಪ್ಲಾಟ್​ಫಾರ್ಮ್​​​ನಲ್ಲಿ ಸದ್ದು ಮಾಡುತ್ತಿರುವ ವಿಡಿಯೋದಲ್ಲಿ, ದೀಪಿಕಾ ಪಡುಕೋಣೆ ತಮ್ಮ ಕಾರಿನಿಂದಿಳಿದು ಏರ್​ಪೋರ್ಟ್​​ಗೆ ಹೋಗುತ್ತಿರುವುದನ್ನು ಕಾಣಬಹುದು. ಮುಂಬೈ ವಿಮಾನ ನಿಲ್ದಾಣದ ವಿಡಿಯೋ ಇದು. ನೇರಳೆ ಬಣ್ಣದ ಬಟ್ಟೆಯಲ್ಲಿ ಫ್ಯಾಷನ್​ ಐಕಾನ್​ ಕಾಣಿಸಿಕೊಂಡಿದ್ದಾರೆ. ಎಂದಿನಂತೆ ವಿಭಿನ್ನ ಶೈಲಿ ಬಟ್ಟೆ, ಬಟ್ಟೆಗೆ ತಕ್ಕ ಬೂಟುಗಳು, ಸನ್​​ಗ್ಲಾಸ್​​, ಸ್ಟೈಲಿಶ್​ ಬ್ಯಾಗ್​ ಮೂಲಕ ತಮ್ಮ ನೋಟ ಪೂರ್ಣಗೊಳಿಸಿಕೊಂಡರು.

ದೀಪಿಕಾ ಅವರು ವಿಮಾನ ನಿಲ್ದಾಣದೊಳಗೆ ಸಾಗುತ್ತಿದ್ದಂತೆ ಅಲ್ಲೇ ನಿಂತಿದ್ದ ಪಾಪರಾಜಿಗಳನ್ನು ನೋಡಿ ಮುಗುಳ್ನಗೆ ಬೀರಿದರು. ಬಳಿಕ ಕ್ಯಾಮರಾಗಳ ಕಣ್ಣೊಳಗೆ ಸೆರೆಯಾಗಲು, ಪರ್ಫೆಕ್ಟ್​ ಪೋಸ್ ನೀಡಿದರು. ಪಠಾಣ್​ ನಟಿ ಏರ್‌ಪೋರ್ಟ್ ಲುಕ್‌ನಲ್ಲಿ ಎಂದಿನಂತೆ ಸುಂದರವಾಗಿ ಕಾಣುತ್ತಿದ್ದು, ಈ ಪೋಸ್ಟ್ ಶೇರ್ ಆದ ತಕ್ಷಣ ಅಭಿಮಾನಿಗಳು ಕಾಮೆಂಟ್ ವಿಭಾಗದಲ್ಲಿ ಬ್ಯುಸಿಯಾದರು. ನಟಿಯ ಗುಣಗಾನದ ಕಾಮೆಂಟ್​ಗಳ ಜೊತೆಗೆ, ಫೈಯರ್​ ಮತ್ತು ಹಾರ್ಟ್ ಎಮೋಜಿಗಳು ಸಹಜವಾಗಿ ಕಾಮೆಂಟ್ ವಿಭಾಗದಲ್ಲಿ ತುಂಬಿದ್ದವು.

ವಿಡಿಯೋಗೆ ಪ್ರತಿಕ್ರಿಯಿಸಿದ ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು, "ರಾಣಿ" ಎಂದು ಕರೆದಿದ್ದಾರೆ. ಇನ್ನೊಬ್ಬರು ನಟಿಯ ನಗುವಿಗೆ ಮೆಚ್ಚುಗೆ ಸೂಚಿಸಿದ್ದಾರೆ. ಅಭಿಮಾನಿಯೋರ್ವರು ಮೆಚ್ಚುಗೆಯ ಮಳೆ ಸುರಿಸಿ, "ಅವರು ಯಾವಾಗಲೂ ಸೊಗಸಾಗಿ, ಸರಿಯಾಗಿ, ಸುಂದರವಾಗಿ ಮತ್ತು ಪರಿಪೂರ್ಣವಾಗಿ ಕಂಗೊಳಿಸುತ್ತಾರೆ" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: OMG 2 Teaser: ಅಕ್ಷಯ್​ ಕುಮಾರ್ ಅಭಿನಯದ ಓ ಮೈ ಗಾಡ್ 2 ಟೀಸರ್​ ಅನಾವರಣ

ಪ್ರಾಜೆಕ್ಟ್ ಕೆ ನಟಿ ದೀಪಿಕಾ ಪಡುಕೋಣೆ ಅಭಿನಯದ ಬಹುನಿರೀಕ್ಷಿತ ಸಿನಿಮಾ. ಅವರು ಕೊನೆಯದಾಗಿ ಪಠಾಣ್​ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಆ ಚಿತ್ರದ ಹಾಡೊಂದರಲ್ಲಿ ನಟಿ ತೊಟ್ಟ ಬಟ್ಟೆ ವಿಚಾರ ವಿವಾದಕ್ಕೊಳಗಾಗಿತ್ತು. ಹಲವು ಟೀಕೆಗಳ ನಡುವೆಯೇ ತೆರೆಕಂಡ ಈ ಸಿನಿಮಾ ಅಭೂತಪೂರ್ವ ಯಶಸ್ಸನ್ನು ಕಂಡಿತು. ಶಾರುಖ್​ ಖಾನ್​ ಜೊತೆ ತೆರೆ ಹಂಚಿಕೊಂಡ ಈ ಸಿನಿಮಾ ಸಾವಿರ ಕೋಟಿ ರೂ. ಸಂಪಾದಿಸುವಲ್ಲಿ ಯಶಸ್ವಿ ಆಯಿತು. ಇದೀಗ ಪ್ರಾಜೆಕ್ಟ್ ಕೆ ಸಿನಿಮಾ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಸ್ಯಾನ್ ಡಿಯಾಗೋ ಕಾಮಿಕ್ ಕಾನ್ (SDCC) ಗ್ಲೋಬಲ್​ ಈವೆಂಟ್​​ನಲ್ಲಿ ಚಿತ್ರತಂಡ ಭಾಗಿಯಾಗಲಿದೆ. ದೀಪಿಕಾ, ಕಮಲ್ ಹಾಸನ್, ಪ್ರಭಾಸ್ ಮತ್ತು ನಿರ್ದೇಶಕ ನಾಗ್ ಅಶ್ವಿನ್ ಈ ಸ್ಯಾನ್ ಡಿಯಾಗೋ ಕಾಮಿಕ್-ಕಾನ್‌ನಲ್ಲಿ ಭಾಗಿಯಾಗಲಿದ್ದಾರೆ. ಅಮಿತಾಭ್ ಬಚ್ಚನ್ ಮತ್ತು ದಿಶಾ ಪಟಾನಿ ಕೂಡ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಾಗ್ ಅಶ್ವಿನ್ ನಿರ್ದೇಶನದ ಬಹುಭಾಷಾ ಚಲನಚಿತ್ರ ಬಿಗ್​ ಬಜೆಟ್​ನಲ್ಲಿ ತಯಾರಾಗುತ್ತಿದೆ.

ಇದನ್ನೂ ಓದಿ: ಸೌಂದರ್ಯ ಸ್ಪರ್ಧೆಯ ಕಿರೀಟ ಮುಡಿಗೇರಿಸಿಕೊಂಡ ತೃತೀಯಲಿಂಗಿ.. ಇತಿಹಾಸ ಸೃಷ್ಟಿಸಿದ ರಿಕ್ಕಿ

Last Updated : Jul 11, 2023, 4:21 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.