ETV Bharat / entertainment

ಬಿಪಾಶಾ ಬಸು ಹುಟ್ಟುಹಬ್ಬ..ವಿಶೇಷವಾಗಿ ಶುಭ ಕೋರಿದ ಪತಿ ಕರಣ್​ ಸಿಂಗ್​ ಗ್ರೋವರ್ - ಬಿಪಾಶಾ ಬಸು ಲೇಟೆಸ್ಟ್ ನ್ಯೂಸ್

ಹುಟ್ಟುಹಬ್ಬದ ಖುಷಿಯಲ್ಲಿ ಬಿಪಾಶಾ ಬಸು - 44ನೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಬಾಲಿವುಡ್ ನಟಿ ಬಿಪಾಶಾ ಬಸು - ನಟಿಗೆ ಶುಭಾಶಯಗಳ ಮಹಾಪೂರ - ವಿಶೇಷವಾಗಿ ಶುಭ ಕೋರಿದ ಕರಣ್​ ಸಿಂಗ್​ ಗ್ರೋವರ್​.

Bipasha Basu
ನಟಿ ಬಿಪಾಶಾ ಬಸು ದಂಪತಿ
author img

By

Published : Jan 7, 2023, 2:54 PM IST

Updated : Jan 7, 2023, 3:03 PM IST

ಬಾಲಿವುಡ್ ನಟಿ ಬಿಪಾಶಾ ಬಸು ಹುಟ್ಟುಹಬ್ಬದ ಸಂತಸದಲ್ಲಿದ್ದಾರೆ. 44 ಜನ್ಮ ದಿನ ಆಚರಿಸಿಕೊಳ್ಳುತ್ತಿರುವ ಮಾದಕ ನೋಟದ ನಟಿಗೆ ಕುಟುಂಬಸ್ಥರು, ಆತ್ಮೀಯರು, ಚಿತ್ರರಂಗದವರು ಸೇರಿದಂತೆ ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ. ಈ ವರ್ಷ ಬಿಪಾಶಾ ಬಸು ತಮ್ಮ ಪುತ್ರಿಯೊಂದಿಗೆ ಬರ್ತ್​​ ಡೇ ಸೆಲೆಬ್ರೇಟ್ ಮಾಡಿಕೊಳ್ಳುತ್ತಿರೋದು ವಿಶೇಷ.

Bipasha Basu
ನಟಿ ಬಿಪಾಶಾ ಬಸು

ಕರಣ್​ ಸಿಂಗ್​ ಗ್ರೋವರ್​ ಪೋಸ್ಟ್: ಪತ್ನಿ ಬಿಪಾಶಾ ಬಸು ಜನ್ಮದಿನಕ್ಕೆ ಕರಣ್​ ಸಿಂಗ್​ ಗ್ರೋವರ್​ ವಿಶೇಷವಾಗಿ ಶುಭಕೋರಿದ್ದಾರೆ. ಸುಂದರ ಫೋಟೋವೊಂದನ್ನು ಹಂಚಿಕೊಂಡಿರುವ ಅವರು, "ನನ್ನ ಪ್ರಿಯೆ, ನಿಮಗೆ ಜನ್ಮದಿನದ ಶುಭಾಶಯಗಳು. ನಿಮ್ಮ ಜೀವನದ ಪ್ರತಿ ಕ್ಷಣವೂ ಸಂತೋಷದಿಂದ ತುಂಬಿರಲಿ. ಪ್ರತಿ ದಿನವೂ ನಿಮ್ಮ ಬೆಳಕು ಮತ್ತಷ್ಟು ಪ್ರಕಾಶಮಾನವಾಗಿ ಬೆಳಗಲಿ. ನಿಮ್ಮ ಎಲ್ಲಾ ಕನಸುಗಳು ನನಸಾಗಲಿ. ಇಡೀ ವರ್ಷದಲ್ಲಿ ಇಂದು ನನಗೆ ಸಂಪೂರ್ಣವಾಗಿ ಅತ್ಯುತ್ತಮ ದಿನವಾಗಿದೆ. ನಾನು ಹೇಳಲು ಸಾಧ್ಯವಾಗುವುದಕ್ಕಿಂತ ಹೆಚ್ಚು ನಿನ್ನನ್ನು ಪ್ರೀತಿಸುತ್ತೇನೆ. ಜನ್ಮದಿನದ ಶುಭಾಶಯಗಳು ನನ್ನ ಪ್ರೀತಿಯ ಬೇಬಿ ಪ್ರಿಯೆ, ನೀನೇ ನನ್ನ ಸರ್ವಸ್ವ" ಎಂದು ಬರೆದುಕೊಂಡಿದ್ದಾರೆ.

Bipasha Basu
ನಟ ಕರಣ್​ ಸಿಂಗ್​ ಗ್ರೋವರ್ - ನಟಿ ಬಿಪಾಶಾ ಬಸು

ಈ ಪೋಸ್ಟ್ ಹೊರಬೀಳುತ್ತಿದ್ದಂತೆ ಈ ಜೋಡಿಯ ಅಭಿಮಾನಿಗಳು ಕಾಮೆಂಟ್​ ವಿಭಾಗದಲ್ಲಿ ನಟಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ. ಬಿಪಾಶಾ ಬಸು ಕೂಡ ಪ್ರತಿಕ್ರಿಯಿಸಿದ್ದು, "ನೀವು ನನ್ನ ಜೀವನದ ಅತ್ಯಂತ ದೊಡ್ಡ ಉಡುಗೊರೆ ಮತ್ತು ಈಗ ನಮ್ಮ ಹೆಣ್ಣು ಮಗು ದೇವಿ ಕೂಡ. ನನ್ನನ್ನು ತುಂಬಾ ಪ್ರೀತಿಸಿದ್ದಕ್ಕಾಗಿ ಧನ್ಯವಾದಗಳು" ಎಂದು ಬರೆದಿದ್ದಾರೆ.

ಮಾಡೆಲಿಂಗ್​ ಬಳಿಕ ಸಿನಿರಂಗಕ್ಕೆ ಎಂಟ್ರಿ: ಮಾಡೆಲಿಂಗ್​ ಕ್ಷೇತ್ರದಲ್ಲಿ ಕೆಲಸ ಮಾಡಿ ಯಶಸ್ಸು ಕಂಡ ನಂತರ ಬಾಲಿವುಡ್​ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಬಳಿಕ ಯಶಸ್ವಿ ನಟಿಯಾಗಿ ಹೊರಹೊಮ್ಮಿದ್ದು, ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ದೆಹಲಿ ಮೂಲದ ಬಿಪಾಶಾ ಬಸು ಬೆಳೆದದ್ದು ಕೋಲ್ಕತ್ತಾದಲ್ಲಿ. 1996ರಲ್ಲಿ ಸೂಪರ್​ ಮಾಡೆಲ್​ ಸ್ಪರ್ಧೆಯಲ್ಲಿ ಗೆದ್ದು ಮಾಡಲಿಂಗ್​ ಕ್ಷೇತ್ರಕ್ಕೆ ಕಾಲಿಟ್ಟರು. ಕೃಷ್ಣ ಸುಂದರಿಯಾದ ಇವರು ಆರಂಭದಲ್ಲಿ ಸ್ವಲ್ಪ ಟೀಕೆಗಳಿಗೆ ಒಳಗಾದರು. ಆದರೆ ಬಳಿಕ ಅವರ ಸಿನಿ ಜರ್ನಿ ಸಕ್ಸಸ್ ಮಾತ್ರ ರೋಮಾಂಚಕ.

ಸುಮಾರು 50 ಸಿನಿಮಾಗಳಲ್ಲಿ ನಟನೆ: 2001ರಲ್ಲಿ ಅಜನಬಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಇವರು ಈ ಸಿನಿಮಾದ ನೆಗಟಿವ್​ ರೋಲ್​ಗೆ ಫಿಲ್ಮ್​ ಫೇರ್​ ಪ್ರಶಸ್ತಿ ಕೂಡ ಗೆದ್ದರು. ಬಳಿಕ ಹಾರರ್​, ಥ್ರಿಲ್ಲರ್​ ಚಿತ್ರಗಳಲ್ಲಿ ಅಭಿನಯಿಸಿದರು. ಇವರ ನಟನೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ ಮತ್ತು ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಬಿಪಾಶಾ ಬಸು ಸಿನಿಮಾಗಳು: ರಾಝ್​, ರಾಝ್​​ 3, ಅಲೋನ್​​, ಜಿಸ್ಮ್​, ರೇಸ್​, ಧೂಮ್​-2, ಅಜನಬಿ, ಪ್ಲೇಯರ್ಸ್, ನೋ ಎಂಟ್ರಿ, ಹಮ್​ಶಕಲ್​, ಓಂಕಾರ, ಧಮ್​ ಮಾರೋ ಧಮ್, ಬರ್​ಸಾತ್, ಆತ್ಮ, ಆಲ್​ ದಿ ಬೆಸ್ಟ್ ನಂತಹ ಹಿಟ್​ ಸೇರಿದಂತೆ ಸುಮಾರು 50 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಹಿಂದಿ ಮಾತ್ರವಲ್ಲದೇ ಬೆಂಗಾಲಿ, ತೆಲುಗು ಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ.

ಆರೋಗ್ಯಕರ ಜೀವನಶೈಲಿಗೆ ಹೆಸರುವಾಸಿ: ನಟನೆಯ ಹೊರತಾಗಿ ದೈಹಿಕ ಸಾಮರ್ಥ್ಯ ಮತ್ತು ಆರೋಗ್ಯಕರ ಜೀವನಶೈಲಿಗೆ ಹೆಸರುವಾಸಿಯಾಗಿದ್ದಾರೆ. 2005ರಿಂದ ಹಲವಾರು ಫಿಟ್‌ನೆಸ್ ವಿಚಾರವನ್ನು ಹಂಚಿಕೊಳ್ಳುತ್ತಾ ಬಂದಿದ್ದಾರೆ. ಆರೋಗ್ಯಕರ ಜೀವನ ನಡೆಸಲು ಅಭಿಮಾನಿಗಳನ್ನು ಪ್ರೇರೇಪಿಸುತ್ತಾ ಬಂದಿದ್ದಾರೆ. ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಆಗಾಗ್ಗೆ ತಮ್ಮ ಫಿಟ್‌ನೆಸ್ ಕ್ಷಣಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಈ ಮೂಲಕ ಬಾಲಿವುಡ್‌ನಲ್ಲಿ ತಾವು ಫಿಟ್‌ನೆಸ್‌ನ ರಾಣಿ ಎಂಬುದನ್ನು ಸಾಬೀತು ಪಡಿಸಿದ್ದಾರೆ.

ಇದನ್ನೂ ಓದಿ: ದುಬಾರಿ ರೆಡ್ ಲೆಹೆಂಗಾದಲ್ಲಿ ನಸುನಕ್ಕ ರಶ್ಮಿಕಾ​​.. ಕಿಕ್ಕೇರಿಸುವ ಕಿರಿಕ್​ ಬೆಡಗಿ

ವೈವಾಹಿಕ ಜೀವನ: 2015ರಲ್ಲಿ ಅಲೋನ್ ಸಿನಿಮಾ ಸಹನಟ ಕರಣ್​ ಸಿಂಗ್​ ಗ್ರೋವರ್​ ಅವರನ್ನು ಬಿಪಾಶಾ ಬಸು 2016ರಲ್ಲಿ ಮದುವೆ ಆದರು. ದಾಂಪತ್ಯ ಜೀವನ ಆರಂಭಿಸಿದ ಆರು ವರ್ಷಗಳ ಬಳಿಕ ಅಂದರೆ ಕಳೆದ ನವೆಂವರ್​ 12ರಂದು ಪೋಷಕರಾಗಿ ಬಡ್ತಿ ಪಡೆದಿದ್ದಾರೆ. ಬಿಪಾಶಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಮನೆಯಲ್ಲಿ ಸಂತಸ ನೆಲೆಸಿದೆ. ದಂಪತಿ ತಮ್ಮ ಮುದ್ದು ಮಗಳಿಗೆ ದೇವಿ ಬಸು ಸಿಂಗ್ ಗ್ರೋವರ್ ಎಂದು ನಾಮಕರಣ ಸಹ ಮಾಡಿದ್ದಾರೆ. ಸದ್ಯ ಸಿನಿಮಾ ಕ್ಷೇತ್ರದಿಂದ ದೂರ ಉಳಿದಿದ್ದರೂ ಹಲವು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಾ ಸುದ್ದಿಯಲ್ಲಿರುತ್ತಾರೆ. ಸೋಷಿಯಲ್​ ಮೀಡಿಯಾದಲ್ಲಿ ಸದಾ ಸಕ್ರಿಯವಾಗಿರುವ ಇವರು ಆಗಾಗ್ಗೆ ತಮ್ಮ ಫೋಟೋಗಳನ್ನು ಹಂಚಿಕೊಳ್ಳುತ್ತಾ, ಅಭಿಮಾನಿಗಳ ಸಂತಸಕ್ಕೆ ಕಾರಣರಾಗುತ್ತಾರೆ.

ಇದನ್ನೂ ಓದಿ: ಯಕ್ಷಗಾನದ ಸಿಂಹದ ಪಾತ್ರಕ್ಕಾಗಿ 8 ಕೆ.ಜಿ ತೂಕ ಹೆಚ್ಚಿಸಿಕೊಂಡಿದ್ದೇನೆ: ರೂಪೇಶ್ ಶೆಟ್ಟಿ

Last Updated : Jan 7, 2023, 3:03 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.