ETV Bharat / entertainment

'ಮೈ ನೇಮ್ ಈಸ್ ಲಖನ್' ಸಾಂಗ್ ಆನಂದಿಸಿದ ವಿದೇಶಿಗ - ಮೆಚ್ಚಿನ ನಟ ಅನಿಲ್​ ಕಪೂರ್​ ಎದುರಿದ್ದರೂ ಗುರುತಿಸದ ಅಭಿಮಾನಿ - ಅನಿಲ್ ಕಪೂರ್ ಅಭಿಮಾನಿ

ಭಾರತದ, ಭಾರತೀಯ ಸಿನಿಮಾಗಳ ಅಭಿಮಾನಿಯೊಬ್ಬನನ್ನು ಬಾಲಿವುಡ್ ನಟ ಅನಿಲ್ ಕಪೂರ್ ಜರ್ಮನಿಯಲ್ಲಿ ಭೇಟಿಯಾಗಿದ್ದಾರೆ. ಆದರೆ ಆ ವ್ಯಕ್ತಿ ತಮ್ಮ ಮೆಚ್ಚಿನ ನಟನನ್ನು ಗುರುತಿಸುವಲ್ಲಿ ವಿಫಲರಾಗಿದ್ದಾರೆ.

bollywood actor Anil kapoor
ಬಾಲಿವುಡ್ ನಟ ಅನಿಲ್ ಕಪೂರ್
author img

By

Published : Jul 28, 2023, 5:32 PM IST

ಜರ್ಮನಿ ಪ್ರವಾಸದ ವೇಳೆ ಬಾಲಿವುಡ್ ನಟ ಅನಿಲ್ ಕಪೂರ್ ವ್ಯಕ್ತಿಯೊಬ್ಬನನ್ನು ಭೇಟಿ ಮಾಡಿದ್ದಾರೆ. ಆ ವ್ಯಕ್ತಿ ಭಾರತದ ಮೇಲಿನ ತಮ್ಮ ಪ್ರೀತಿ ವ್ಯಕ್ತಪಡಿಸಿದ್ದಾರೆ. ಜೊತೆಗೆ ಭಾರತೀಯ ಸಿನಿಮಾ ಸಾಂಗ್​ ಅನ್ನು ಆನಂದಿಸಿದ್ದಾರೆ. ಈ ವಿಡಿಯೋವನ್ನು ಸ್ವತಃ ಅನಿಲ್​ ಕಪೂರ್​ ಶೇರ್ ಮಾಡಿದ್ದು, ಸೋಷಿಯಲ್​ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.

ಜರ್ಮನಿಯ ಮ್ಯೂನಿಚ್‌ (Munich) ನಲ್ಲಿ ವ್ಯಕ್ತಿಯೊಬ್ಬರು ಅನಿಲ್ ಕಪೂರ್​ ಅವರ 1989ರ 'ರಾಮ್ ಲಖನ್' ಸಿನಿಮಾದ ಜನಪ್ರಿಯ ಹಾಡು 'ಮೈ ನೇಮ್ ಈಸ್ ಲಖನ್' ಅನ್ನು ಕೇಳಿ ಆನಂದಿಸುತ್ತಿರುವ ವಿಡಿಯೋವನ್ನು ಸ್ವತಃ ನಟ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಈ ವ್ಯಕ್ತಿ ಬೀದಿಯಲ್ಲಿ ಕುಳಿತು ಜನಪ್ರಿಯ ಹಾಡನ್ನು ಆನಂದಿಸುತ್ತಿದ್ದು, ಅನಿಲ್​ ಕಪೂರ್​ ಆ ವ್ಯಕ್ತಿಯನ್ನು ಮಾತನಾಡಿಸಿದ್ದಾರೆ.

  • My all time party fav 🫣.. the iconic dance step of yours( dhina dhin dha😂😂)just gets multiplies in our group after 2-3 drinks🤣🤣🤣 pic.twitter.com/7stz5rHDMw

    — DP mohapatra 🇮🇳 (@DPmohapatra6) July 28, 2023 " class="align-text-top noRightClick twitterSection" data=" ">

ನಟ ಅನಿಲ್ ಕಪೂರ್​ ಆ ವ್ಯಕ್ತಿ ಬಳಿ, ಈ ಹಾಡು ನಿಮಗೆ ಎಲ್ಲಿಂದ ಸಿಕ್ಕಿತು? ನೀವು ಈ ಹಾಡನ್ನು ಆನಂದಿಸುತ್ತೀರಾ? ನೀವು ಎಲ್ಲಿಂದ ಬಂದಿದ್ದೀರಿ? ಎಂದು ಪ್ರಶ್ನಿಸಿದ್ದಾರೆ. ನಟನ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ವ್ಯಕ್ತಿ, ನಾನು ಟ್ರಾನ್ಸಿಲ್ವೇನಿಯಾ (Transylvania, Romania) ದಿಂದ ಬಂದಿದ್ದೇನೆ, ನಾನು ಭಾರತವನ್ನು ಪ್ರೀತಿಸುತ್ತೇನೆ ಎಂದು ತಿಳಿಸಿದ್ದಾರೆ. ಇದು ಬಾಲಿವುಡ್​ ನಟ ಅನಿಲ್ ಕಪೂರ್ ಅವರ ಹಾಡು ಎಂದು ಆ ಅಭಿಮಾನಿಗೆ ತಿಳಿದಿದೆ. ಆದ್ರೆ ಎದುರಿದ್ದ ಅನಿಲ್​ ಕಪೂರ್​ ಅವರನ್ನು ಗುರುತಿಸುವಲ್ಲಿ ಆ ವ್ಯಕ್ತಿ ವಿಫಲರಾದರು.

  • Why didn't you tell him that you are the one only, The Anil Kapoor from India?

    — Apurv Agrahari 🇮🇳 (@ApurvAgrahari) July 27, 2023 " class="align-text-top noRightClick twitterSection" data=" ">

ಬಾಲಿವುಡ್ ನಟ ಅನಿಲ್ ಕಪೂರ್ ಟ್ವಿಟ್ಟರ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ''ಮಾರ್ಗದಲ್ಲಿ ಮುನ್ನಡೆಯುತ್ತಿದ್ದಾಗ ನನ್ನ ಹಳೇ ಕಾಲವನ್ನು ಭೇಟಿಯಾದೆ. ಈ ಐಕಾನಿಕ್ ಹಾಡು ಪ್ರಪಂಚದ ವಿವಿಧ ಭಾಗಗಳಲ್ಲಿ ಇನ್ನೂ ಪ್ರತಿಧ್ವನಿಸುತ್ತದೆ. ಮ್ಯೂನಿಚ್‌ನಲ್ಲಿ ಟ್ರಾನ್ಸಿಲ್ವೇನಿಯಾದ ಜೆಂಟಲ್​ಮ್ಯಾನ್​ನನ್ನು ಭೇಟಿಯಾದೆ" ಎಂದು ತಿಳಿಸಿದರು.

  • He likes india and you’re Mr. India.
    That’s why he couldn’t recognise you.
    😅

    — Aniket Jaiswal (@aniketjazz) July 27, 2023 " class="align-text-top noRightClick twitterSection" data=" ">

ಅನಿಲ್ ಕಪೂರ್ ಶೇರ್ ಮಾಡಿರುವ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ನೆಟಿಜನ್‌ಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ವಿಡಿಯೋದಲ್ಲಿರುವ ವ್ಯಕ್ತಿ ನಟನ ದೊಡ್ಡ ಅಭಿಮಾನಿಯಾಗಿದ್ದರೂ ಕೂಡ ಅವರನ್ನು ಗುರುತಿಸುವಲ್ಲಿ ವಿಫಲವಾಗಿದ್ದಾರೆ ಎಂಬ ಅಂಶ ಹಲವರ ಆಶ್ಚರ್ಯಕ್ಕೆ ಕಾರಣವಾಗಿದೆ.

ಇದನ್ನೂ ಓದಿ: RARKPK Release: ವಿಶ್ವಾದ್ಯಂತ 'ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ' ರಿಲೀಸ್: ಪ್ರೇಕ್ಷಕರೇನಂದ್ರು ಗೊತ್ತಾ?

ವಿಡಿಯೋಗೆ ಪ್ರತಿಕ್ರಿಯಿಸಿರುವ ಸಾಮಾಜಿಕ ಮಾಧ್ಯಮ ಬಳಕೆದಾರರೋರ್ವರು, "ನೀವು ಭಾರತದ ಅನಿಲ್ ಕಪೂರ್ ಎಂದು ಅವರಿಗೆ ಏಕೆ ಹೇಳಲಿಲ್ಲ?" ಎಂದು ಪ್ರಶ್ನಿಸಿದ್ದಾರೆ. ನೀವು ಅನಿಲ್ ಕಪೂರ್ ಎಂದು ಅವರಿಗೆಗೆ ಹೇಳಲು ಮರೆತಿದ್ದೀರಾ ಎಂದು ಮತ್ತೋರ್ವರು ಕಾಮೆಂಟ್​ ಮಾಡಿದ್ದಾರೆ. ಇನ್ನೊಬ್ಬರು ಕಾಮೆಂಟ್​ ಮಾಡಿ ಅವರು ಇಂಡಿಯಾವನ್ನು ಇಷ್ಟ ಪಡುತ್ತಾರೆ, ನೀವು ಮಿಸ್ಟರ್ ಇಂಡಿಯಾ, ಅದಕ್ಕಾಗಿಯೇ ಅವರು ನಿಮ್ಮನ್ನು ಗುರುತಿಸಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಮದುವೆ ಶಾಸ್ತ್ರಕ್ಕೆ ಹೆಸರು ಬದಲಾಯಿಸಿಕೊಂಡಿದ್ದ ಶಾರುಖ್​ - ಗೌರಿ: ಕಿಂಗ್​​ ಖಾನ್​ ಹೆಸರಲ್ಲಿದೆ ವಿಶೇಷತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.