ಬಾಲಿವುಡ್ ಚಿತ್ರರಂಗದ ಸೂಪರ್ ಸ್ಟಾರ್, ಹಿರಿಯ ಪ್ರಖ್ಯಾತ ನಟ, ಬಿಗ್ ಬಿ ಅಮಿತಾಭ್ ಬಚ್ಚನ್ ಅವರಿಗೆ 80ನೇ ಹುಟ್ಟುಹಬ್ಬದ ಸಡಗರ. ಕುಟುಂಬಸ್ಥರು, ಆತ್ಮೀಯರು ಸೇರಿದಂತೆ ಲಕ್ಷಾಂತರ ಸಂಖ್ಯೆಯ ಅಭಿಮಾನಿಗಳು ನೆಚ್ಚಿನ ನಟನಿಗೆ ಶುಭಾಶಯ ಕೋರಿದ್ದಾರೆ.
ಅಮಿತಾಭ್ ಬಚ್ಚನ್ ಅವರು ಅಕ್ಟೋಬರ್ 11, 1942ರಂದು ಅಲಹಾಬಾದ್ನಲ್ಲಿ ಸಾಮಾಜಿಕ ಕಾರ್ಯಕರ್ತೆ ತೇಜಿ ಬಚ್ಚನ್ ಮತ್ತು ಪ್ರಖ್ಯಾತ ಹಿಂದಿ ಕವಿ ಹರಿವಂಶ್ ರೈ ಬಚ್ಚನ್ ದಂಪತಿ ಪುತ್ರನಾಗಿ ಜನಿಸಿದರು. 1969ರಲ್ಲಿ ನಟನೆ ಮೂಲಕ ವೃತ್ತಿ ಜೀವನ ಆರಂಭಿಸಿ ಬಹು ಬೇಡಿಕೆಯ ನಟನಾಗಿ ಚಿತ್ರರಂಗದಲ್ಲಿ ಮಿಂಚಿದರು.
ಬಿಗ್ ಬಿ ಒಬ್ಬ ನಟನಷ್ಟೇ ಅಲ್ಲ, ಅವರು ತಮ್ಮ ಹಲವು ಚಲನಚಿತ್ರಗಳಿಗೆ ಹಾಡುಗಳನ್ನೂ ಹಾಡಿದ್ದಾರೆ. ಅನೇಕ ಸರ್ಕಾರಿ ಯೋಜನೆಗಳಿಗೆ ಜಾಹೀರಾತು ನೀಡುವ ಮೂಲಕ ಅದರ ಯಶಸ್ಸಿಗೂ ಕಾರಣೀಭೂತರಾಗಿದ್ದಾರೆ. ಜೊತೆಗೆ ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, 1984ರಲ್ಲಿ ಪದ್ಮಶ್ರೀ, 2001ರಲ್ಲಿ ಪದ್ಮಭೂಷಣ ಹಾಗೂ 2015ರಲ್ಲಿ ಪದ್ಮವಿಭೂಷಣ ಪ್ರಶಸ್ತಿಗಳನ್ನು ಪಡೆದಿದ್ದಾರೆ.
-
PVR & Film Heritage Foundation present the AB Film Festival. Celebrate Big B’s 80th birthday by going on a magical journey with curated handpicked classics that pay homage to the decorated actor’s illustrious career! 👑👑 pic.twitter.com/xNAfdd9xHJ
— P V R C i n e m a s (@_PVRCinemas) October 7, 2022 " class="align-text-top noRightClick twitterSection" data="
">PVR & Film Heritage Foundation present the AB Film Festival. Celebrate Big B’s 80th birthday by going on a magical journey with curated handpicked classics that pay homage to the decorated actor’s illustrious career! 👑👑 pic.twitter.com/xNAfdd9xHJ
— P V R C i n e m a s (@_PVRCinemas) October 7, 2022PVR & Film Heritage Foundation present the AB Film Festival. Celebrate Big B’s 80th birthday by going on a magical journey with curated handpicked classics that pay homage to the decorated actor’s illustrious career! 👑👑 pic.twitter.com/xNAfdd9xHJ
— P V R C i n e m a s (@_PVRCinemas) October 7, 2022
1969ರಲ್ಲಿ 'ಸಾತ್ ಹಿಂದುಸ್ತಾನಿ' ಚಿತ್ರದಲ್ಲಿ ಏಳು ಜನ ನಾಯಕರಲ್ಲಿ ತಾವೂ ಸಹ ಒಬ್ಬರಾಗಿ ತಮ್ಮ ವೃತ್ತಿಜೀವನ ಆರಂಭಿಸಿದರು. ಆದರೆ ಆರಂಭಿಕ ಅವಧಿಯಲ್ಲಿ ಬಚ್ಚನ್ ಅವರ ಅನೇಕ ಚಲನಚಿತ್ರಗಳಿಗೆ ಹೆಚ್ಚು ಬೇಡಿಕೆ ಇರಲಿಲ್ಲ. 1973ರ 'ಜಂಜೀರ್' ಚಿತ್ರದಲ್ಲಿ ಅಭಿನಯಿಸುವ ಮೂಲಕ ಬಾಲಿವುಡ್ನಲ್ಲಿ ಮನ್ನಣೆ ಪಡೆದರು. ಈ ಚಿತ್ರದಲ್ಲಿ ಅವರು ಇನ್ಸ್ಪೆಕ್ಟರ್ ವಿಜಯ್ ಖನ್ನಾ ಪಾತ್ರ ನಿರ್ವಹಿಸಿದ್ದರು. ಅಮಿತಾಬ್ ಈ ಚಿತ್ರಕ್ಕಾಗಿ 'ಆಂಗ್ರಿ ಯಂಗ್ ಮ್ಯಾನ್' ಪ್ರಶಸ್ತಿಯನ್ನು ಪಡೆದುಕೊಂಡರು.
ನಟಿ ಜಯ ಬಚ್ಚನ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರಿಗೆ ಅಭಿಷೇಕ್ ಬಚ್ಚನ್ ಮತ್ತು ಶ್ವೇತಾ ನಂದಾ ಎಂಬ ಇಬ್ಬರು ಮಕ್ಕಳಿದ್ದಾರೆ. ಮಾಜಿ ಭುವನ ಸುಂದರಿ ಐಶ್ವರ್ಯಾ ರೈ ಇವರ ಸೊಸೆ. ಅಭಿಷೇಕ್ - ಐಶ್ವರ್ಯಾ ಪುತ್ರಿ, ಮೊಮ್ಮಗಳು ಆರಾಧ್ಯ ಕೂಡ ಚಿಕ್ಕ ವಯಸ್ಸಿನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಹೆಸರು ಗಿಟ್ಟಿಸಿಕೊಂಡಿದ್ದಾಳೆ.
ಇದನ್ನೂ ಓದಿ: ರಾಜರತ್ನನ ಗಂಧದ ಗುಡಿ ಟ್ರೈಲರ್ ರಿಲೀಸ್: ಅಪ್ಪುನ ಅಪ್ಪು ಆಗೇ ನೋಡೋ ಭಾಗ್ಯ
-
T 4434 - Back to the Beginning .. with the films from where my journey began in cinema .. Don and Mili nearly fifty years since they were released .. Now showing in Cinema .. Hoping to see more classics back on the big screen ..
— Amitabh Bachchan (@SrBachchan) October 8, 2022 " class="align-text-top noRightClick twitterSection" data="
@shividungarpur @Fhf_Official pic.twitter.com/I22yf8hlsq
">T 4434 - Back to the Beginning .. with the films from where my journey began in cinema .. Don and Mili nearly fifty years since they were released .. Now showing in Cinema .. Hoping to see more classics back on the big screen ..
— Amitabh Bachchan (@SrBachchan) October 8, 2022
@shividungarpur @Fhf_Official pic.twitter.com/I22yf8hlsqT 4434 - Back to the Beginning .. with the films from where my journey began in cinema .. Don and Mili nearly fifty years since they were released .. Now showing in Cinema .. Hoping to see more classics back on the big screen ..
— Amitabh Bachchan (@SrBachchan) October 8, 2022
@shividungarpur @Fhf_Official pic.twitter.com/I22yf8hlsq
ಬಿಗ್ ಬಿ ಜನ್ಮ ದಿನ ಹಿನ್ನೆಲೆ ಪಿವಿಆರ್ ಸಿನಿಮಾಸ್ ಮತ್ತು ಫಿಲ್ಮ್ ಹೆರಿಟೇಜ್ ಫೌಂಡೇಶನ್ ಸೇರಿಕೊಂಡು ಶನಿವಾರದಿಂದ(ಅ.8) ಚಲನ ಚಿತ್ರೋತ್ಸವವನ್ನು ಹಮ್ಮಿಕೊಂಡಿದೆ. ಭಾರತದ 17 ನಗರಗಳಲ್ಲಿ ಬಿಗ್ ಬಿ ಅವರ ಸಿನಿಮಾಗಳು ಪ್ರದರ್ಶನಗೊಳ್ಳುತ್ತಿವೆ. ಅಕ್ಟೋಬರ್ 11ಕ್ಕೆ ಈ ಚಲನ ಚಿತ್ರೋತ್ಸವ ಮುಕ್ತಾಯಗೊಳ್ಳಲಿದೆ.
ಸೋಲೆ, ಚೆಹೆರೆ, ಜುಂಡ್, ಕಭಿ ಕುಷಿ ಕಭಿ ಘಮ್, ಮೊಹೋಬತೇ, ರನ್ ವೇ 34, ಪಿಂಕ್, ಗುಲಾಬೋ ಸಿತಾಬೋ, ಪಿಂಕು, ಶಮಿತಾಭ್, ಸರ್ಕಾರ 3, ಅಲಾದಿನ್, ಭೂತ್ ನಾತ್ ರಿಟರ್ನ್, ಭೂತ್ನಾಥ್, ನಿಶಬ್ಧ್, ಸತ್ಯಾಗ್ರಹ, ಹಭಿ ಅಲ್ವಿದಾ ನಾ ಕೆಹೆನಾ, ವೀರ್ ಝಾರಾ, ಬಂಟಿ ಔರ್ ಬಬ್ಲಿ, ದೀವಾರ್, ದೇವ್ ನಿನ್ನೆ ಬಿಡುಗಡೆ ಆಗಿರುವ ಗುಡ್ ಬೈ ಸೇರಿದಂತೆ ಸುಮಾರ್ 200 ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಮ್ಮ ಅತ್ಯುತ್ತಮ ಅಭಿನಯದ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.