ETV Bharat / entertainment

ಅಕ್ಷಯ್ ಕುಮಾರ್ ಸಿನಿಮಾಗಳು ಫೇಲ್ಯೂರ್.. ಇದಕ್ಕೆ ನಾನೇ ಕಾರಣ, ಬದಲಾವಣೆ ಅಗತ್ಯ ಎಂದ ಸೂಪರ್ ಸ್ಟಾರ್ - ಕಟ್‌ಪುಟ್ಲಿ ಟ್ರೈಲರ್ ಬಿಡುಗಡೆ

ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಇತ್ತೀಚಿನ ಚಿತ್ರಗಳಾದ ಬಚ್ಚನ್ ಪಾಂಡೆ, ಸಾಮ್ರಾಟ್ ಪೃಥ್ವಿರಾಜ್ ಮತ್ತು ರಕ್ಷಾ ಬಂಧನ್ ಚಿತ್ರತಂಡದ ನಿರೀಕ್ಷೆ ಹುಸಿಯಾಗಿಸಿದೆ. ಸಿನಿಮಾಗಳು ಯಶಸ್ವಿಯಾಗದ ಹಿನ್ನೆಲೆ ಕೆಲ ಬದಲಾವಣೆಗಳನ್ನು ಮಾಡಬೇಕಾಗಿದೆ ನಟ ಅಕ್ಷಯ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Bollywood actor Akshay Kumar
ಬಾಲಿವುಡ್ ಸೂಪರ್‌ಸ್ಟಾರ್ ಅಕ್ಷಯ್ ಕುಮಾರ್
author img

By

Published : Aug 21, 2022, 6:58 PM IST

ಬಾಲಿವುಡ್ ಸೂಪರ್‌ಸ್ಟಾರ್ ಅಕ್ಷಯ್ ಕುಮಾರ್ ಅವರ ಇತ್ತೀಚಿನ ಚಿತ್ರಗಳಾದ ಬಚ್ಚನ್ ಪಾಂಡೆ, ಸಾಮ್ರಾಟ್ ಪೃಥ್ವಿರಾಜ್ ಮತ್ತು ರಕ್ಷಾ ಬಂಧನ್ ಚಿತ್ರತಂಡದ ನಿರೀಕ್ಷೆ ಹುಸಿಯಾಗಿಸಿದೆ. ಸಿನಿಮಾಗಳು ಯಶಸ್ವಿಯಾಗದ ಹಿನ್ನೆಲೆ ಕೆಲ ಬದಲಾವಣೆಗಳನ್ನು ಮಾಡಬೇಕಾಗಿದೆ ನಟ ಅಕ್ಷಯ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮುಂಬೈನಲ್ಲಿ ಇತ್ತೀಚೆಗೆ ನಡೆದ ಕಟ್‌ಪುಟ್ಲಿ ಟ್ರೈಲರ್ ಬಿಡುಗಡೆ (cuttputlli) ಕಾರ್ಯಕ್ರಮದಲ್ಲಿ ನಟ ಅಕ್ಷಯ್ ಕುಮಾರ್ ಅವರೊಂದಿಗೆ ರಕುಲ್ ಪ್ರೀತ್ ಸಿಂಗ್, ಸರ್ಗುನ್ ಮೆಹ್ತಾ, ಚಂದ್ರಚೂರ್ ಸಿಂಗ್, ಜಾಕಿ ಭಗ್ನಾನಿ, ದೀಪಶಿಖಾ ಮತ್ತು ರಂಜಿತ್ ತಿವಾರಿ ಸೇರಿ ಚಿತ್ರತಂಡ ಉಪಸ್ಥಿತರಿದ್ದರು. ಈ ವೇಳೆ ಅಕ್ಷಯ್ ಕುಮಾರ್ ಸಿನಿಮಾಗಳು ಫೇಲ್ಯೂರ್ ಆದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.

ತಮ್ಮ ಕೆಲ ಚಿತ್ರಗಳು ಯೋಜಿಸಿದಂತೆ ಕಾರ್ಯನಿರ್ವಹಿಸಲಿಲ್ಲ ಮತ್ತು ಕಟ್‌ಪುಟ್ಲಿ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆಗಲಿರುವ ಕುರಿತು ಮಾತನಾಡಿ, "ಚಲನಚಿತ್ರಗಳು ನಿರೀಕ್ಷಿಸಿದಂತೆ ಕಾರ್ಯನಿರ್ವಹಿಸುತ್ತಿಲ್ಲ, ಇದು ನಮ್ಮ ತಪ್ಪು, ಇದು ನನ್ನ ತಪ್ಪು. ನಾನು ಬದಲಾವಣೆಗಳನ್ನು ಮಾಡಬೇಕಾಗಿದೆ, ಪ್ರೇಕ್ಷಕರು ಏನನ್ನು ಬಯಸುತ್ತಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ನಾನು ಬದಲಾವಣೆಗಳನ್ನು ಮಾಡಲು ಬಯಸುತ್ತೇನೆ. ಬೇರೆ ಯಾರನ್ನೂ ದೂಷಿಸಬೇಕಾಗಿಲ್ಲ, ಸೋಲಿಗೆ ದೂಷಿಸಬೇಕಾಗಿರುವುದು ನನ್ನನ್ನು ಮಾತ್ರ" ಎಂದು ಅಕ್ಷಯ್ ಕುಮಾರ್ ಬಾಕ್ಸ್ ಆಫೀಸ್ ವೈಫಲ್ಯದ ಬಗ್ಗೆ ಅಭಿಪ್ರಾಯ ಹಂಚಿಕೊಂಡರು.

ಇದನ್ನೂ ಓದಿ: ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಗೆ ಸಜ್ಜಾದ ಅಕ್ಷಯ್ ಕುಮಾರ್ ಅಭಿನಯದ ಕಟ್‌ಪುಟ್ಲಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.