ಮುಂಬೈ: ಅಕ್ಷಯಕುಮಾರ್ ತಮ್ಮ ಫಿಟ್ನೆಸ್ ಬಗ್ಗೆ ಹೆಚ್ಚು ಕಾಳಜಿ ವಹಿಸುವ ನಟರಲ್ಲಿ ಒಬ್ಬರು. ತಮ್ಮ 54ನೇ ವರ್ಷದಲ್ಲಿಯೂ ಫಿಟ್ ಆಂಡ್ ಫೈನ್ ಆಗಿರುವ ಇವರು ಬೆಳಿಗ್ಗೆ 4 ಗಂಟೆಗೆ ಏಳುವುದರ ಜೊತೆಗೆ ತಮ್ಮ ದೈನಂದಿನ ವ್ಯಾಯಾಮಗಳನ್ನು ಪೂರೈಸದೆ ದಿನ ಆರಂಭಿಸುವುದೇ ಇಲ್ಲ.
ಇತ್ತೀಚಿಗೆ ಮುಂಬೈ ಪೊಲೀಸರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಕ್ಷಯ ಕುಮಾರ್ ಬೆಳ್ಳಂಬೆಳಗ್ಗೆ ಸೈಕ್ಲಿಂಗ್ ಮಾಡಿ ಗಮನ ಸೆಳೆದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.
ಸದ್ಯ ಅಕ್ಷಯ್ ಕುಮಾರ್ ಬತ್ತಳಿಕೆಯಲ್ಲಿ ಹಲವು ಸಿನಿಮಾಗಳಿವೆ. ಇವರ ನಟನೆಯ ರಕ್ಷಾ ಬಂಧನ್ ಆಗಸ್ಟ್ 11ಕ್ಕೆ ಬಿಡುಗಡೆಯಾಗಲಿದೆ. ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ.
ಇದನ್ನೂ ಓದಿ :ನೋಡಿ: 'ಬೈರಾಗಿ' ಶಿವಣ್ಣ, ಪೃಥ್ವಿ ಅಂಬರ್ ಜೊತೆ ಡಾಲಿ ಧನಂಜಯ್ ವಿಶೇಷ ಸಂದರ್ಶನ