ETV Bharat / entertainment

ರಶ್ಮಿಕಾ ರಣ್​ಬೀರ್​ ಜೋಡಿಯ ಅನಿಮಲ್​ ಸಿನಿಮಾದಲ್ಲಿ ಬಾಬಿ ಡಿಯೋಲ್​ ವಿಲನ್​​: ಫಸ್ಟ್ ಲುಕ್​ ರಿಲೀಸ್​ - ಅನಿಲ್​ ಕಪೂರ್​

Bobby Deol First Look From Animal: ಬಹುನಿರೀಕ್ಷಿತ ಅನಿಮಲ್​​ ಸಿನಿಮಾದಿಂದ ನಟ ಬಾಬಿ ಡಿಯೋಲ್​ ಅವರ ಮೊದಲ ನೋಟ ಹೊರಬಿದ್ದಿದೆ.

Bobby Deol First Look
ಬಾಬಿ ಡಿಯೋಲ್ ಫಸ್ಟ್ ಲುಕ್​
author img

By ETV Bharat Karnataka Team

Published : Sep 26, 2023, 4:45 PM IST

ಬಾಲಿವುಡ್​​ ನಟ ರಣ್​​ಬೀರ್ ಕಪೂರ್ ಹಾಗೂ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಸ್ಕ್ರೀನ್​ ಶೇರ್ ಮಾಡಿರುವ ಮೊದಲ ಸಿನಿಮಾ 'ಅನಿಮಲ್'​. ಗ್ಯಾಂಗ್‌ಸ್ಟರ್ ಕಥೆಯನ್ನಾಧರಿಸಿದ ಈ ಸಿನಿಮಾ ಈ ವರ್ಷದ ಕೊನೆಯಲ್ಲಿ ಬಿಡುಗಡೆಗೊಳ್ಳಲು ಸಜ್ಜಾಗುತ್ತಿದೆ.

ಬಾಬಿ ಡಿಯೋಲ್ ಫಸ್ಟ್ ಲುಕ್​: ಸಿನಿಮಾ ಶೀರ್ಷಿಕೆಯಿಂದಲೇ ಹೆಚ್ಚು ಗಮನ ಸೆಳೆದಿದೆ. ಡಿಫ್ರೆಂಟ್​​ ಟೈಟಲ್​ ಹೊಂದಿರುವ ಈ ಚಿತ್ರದ ಬಿಡುಗಡೆ ದಿನಾಂಕ ಸಮೀಪಿಸುತ್ತಿದ್ದಂತೆ, ಚಿತ್ರತಂಡ ಪ್ರಚಾರ ಪ್ರಾರಂಭಿಸಿದೆ. ಹಂತ ಹಂತವಾಗಿ ಸಿನಿಮಾ ನಟರ ಫಸ್ಟ್​ ಲುಕ್​ ಅನಾವರಣಗೊಳಿಸುವ ಮೂಲಕ ಪ್ರೇಕ್ಷಕರ ಕುತೂಹಲ ಹೆಚ್ಚು ಮಾಡುತ್ತಿದೆ. ನಾಯಕ ನಟ ರಣ್​​ಬೀರ್ ಕಪೂರ್​​, ನಾಯಕ ನಟಿ ರಶ್ಮಿಕಾ ಮಂದಣ್ಣ ಮತ್ತು ಪ್ರಮುಖ ಪಾತ್ರ ನಿರ್ವಹಿಸಿರುವ ಅನಿಲ್ ಕಪೂರ್ ಅವರ ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡಿದ ಚಿತ್ರ ತಯಾರಕರೀಗ ಮತ್ತೋರ್ವ ಪ್ರಮುಖ ಪಾತ್ರಧಾರಿ ಬಾಬಿ ಡಿಯೋಲ್ ಅವರ ಫಸ್ಟ್ ಲುಕ್​ ರಿಲೀಸ್​ ಮಾಡಿದೆ.

'ಅನಿಮಲ್ ಕಾ ಎನಿಮಿ'.... ಅನಿಮಲ್ ಚಿತ್ರತಂಡ ಇಂದು ನಟ ಬಾಬಿ ಡಿಯೋಲ್​ ಅವರ ಫಸ್ಟ್ ಲುಕ್​ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. 'ಅನಿಮಲ್ ಕಾ ಎನಿಮಿ' (ಅನಿಮಲ್​ ಚಿತ್ರದ ಖಳನಾಯಕ) ಎಂದು ಬಿಂಬಿಸಲಾದ ಫಸ್ಟ್ ಲುಕ್​ ಪೋಸ್ಟರ್​​ನಲ್ಲಿ ಬಾಬಿ ರಗಡ್​ ಲುಕ್​ ಬೀರಿದ್ದಾರೆ. ನೀಲಿ ಸೂಟ್‌ನಲ್ಲಿರುವ ನಟ ಬಾಬಿ ಡಿಯೋಲ್​​ ಅವರ ಮುಖ ರಕ್ತಸಿಕ್ತವಾಗಿದೆ. ಚಿತ್ರದಲ್ಲಿ ನಟ ಖಳನಾಯಕನ ಪಾತ್ರ ನಿರ್ವಹಿಸಿದ್ದಾರೆ.

ಮೊದಲೇ ವರದಿಯಾದಂತೆ, ಅನಿಮಲ್ ಚಿತ್ರತಂಡ ಟೀಸರ್ ಅನ್ನು ಸೆಪ್ಟೆಂಬರ್ 28ಕ್ಕೆ ಅನಾವರಣಗೊಳಿಸಲಿದೆ. ಸೆಪ್ಟೆಂಬರ್ 28 ನಾಯಕ ನಟ ರಣ್​ಬೀರ್​ ಕಪೂರ್​ ಜನ್ಮದಿನ ಹಿನ್ನೆಲೆ ಅಂದು ಚಿತ್ರತಂಡ ಸ್ಪೆಷಲ್​ ಗಿಫ್ಟ್​ ನೀಡಲಿದೆ. ಇದಕ್ಕೂ ಮುನ್ನ ರಣ್​ಬೀರ್​ ಅವರ ಉಗ್ರನೋಟವುಳ್ಳ ಪೋಸ್ಟರ್​ ಅನ್ನು ಚಿತ್ರತಂಡ ಅನಾವರಣಗೊಳಿಸಿತ್ತು. ಅಂದಿನಿಂದ ಅಭಿಮಾನಿಗಳು ಮೆಚ್ಚಿನ ನಟನನ್ನು ಗ್ಯಾಂಗ್‌ಸ್ಟರ್ ಅವತಾರದಲ್ಲಿ ವೀಕ್ಷಿಸಲು ಕಾದು ಕುಳಿತಿದ್ದಾರೆ.

ಇದನ್ನೂ ಓದಿ: ಪೋಷಕರಾಗಿ ಭಡ್ತಿ ಪಡೆದ ಸ್ವರಾ ಭಾಸ್ಕರ್​ ಫಹಾದ್ ಅಹ್ಮದ್​ ದಂಪತಿ: ಹೆಣ್ಣು ಮಗುವಿನ ಹೆಸರೇನು ಗೊತ್ತೇ?

ಈಗಾಗಲೇ ನ್ಯಾಶನಲ್​ ಕ್ರಶ್​ ರಶ್ಮಿಕಾ ಮಂದಣ್ಣ ಬಾಲಿವುಡ್​ಗೆ ಪರಿಚಯವಾಗಿದ್ದಾರೆ. ರಣ್​​ಬೀರ್ ಕಪೂರ್ ಜೊತೆ ಇದೇ ಮೊದಲ ಬಾರಿಗೆ ತೆರೆ ಹಂಚಿಕೊಂಡಿದ್ದಾರೆ. ಸೆಪ್ಟೆಂಬರ್​ 23 ರಂದು ನಟಿಯ ಮೊದಲ ನೋಟ ಅನಾವರಣಗೊಂಡಿತ್ತು. ಗೀತಾಂಜಲಿ ಪಾತ್ರಧಾರಿ ರಶ್ಮಿಕಾ ಮಂದಣ್ಣ ಗೃಹಿಣಿ ನೋಟದಲ್ಲಿ ಕಾಣಿಸಿಕೊಂಡಿದ್ದರು. ಈ ಪೋಸ್ಟರ್​ ಅಭಿಮಾನಿಗಳ ನಿರೀಕ್ಷೆ, ಕುತೂಹಲ ಹೆಚ್ಚಿಸಿದೆ.

ಇದನ್ನೂ ಓದಿ: ಪ್ರಸಿದ್ಧ ನಟಿ ವಹೀದಾ ರೆಹಮಾನ್​ಗೆ 'ದಾದಾಸಾಹೇಬ್​ ಫಾಲ್ಕೆ ಪ್ರಶಸ್ತಿ' ಘೋಷಣೆ

ಅನಿಮಲ್ ಚಿತ್ರವನ್ನು ಆಗಸ್ಟ್‌ನಲ್ಲಿ ಬಿಡುಗಡೆಗೊಳಿಸಲು ನಿರ್ಧರಿಸಲಾಗಿತ್ತು. ಆದ್ರೆ ಸನ್ನಿ ಡಿಯೋಲ್‌ ಮುಖ್ಯಭೂಮಿಕೆಯ ಗದರ್ 2 ಮತ್ತು ಅಕ್ಷಯ್ ಕುಮಾರ್ ಅಭಿನಯದ ಓಎಂಜಿಒ 2ರ ಬಾಕ್ಸ್​ ಆಫೀಸ್​ ಫೈಟ್​ನಿಂದ ತಪ್ಪಿಸಿಕೊಳ್ಳಲು ಬಿಡುಗಡೆ ದಿನಾಂಕ ಮುಂದೂಡಲ್ಪಟ್ಟಿತು. ಇದೀಗ ಬಹುನಿರೀಕ್ಷಿತ ಸಿನಿಮಾ ಡಿಸೆಂಬರ್ 1 ರಂದು ತೆರೆಕಾಣಲು ಸಜ್ಜಾಗಿದೆ. ಹಿಂದಿ, ತೆಲುಗು, ತಮಿಳು, ಕನ್ನಡ, ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಅರ್ಜುನ್ ರೆಡ್ಡಿ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಈ ಸಿನಿಮಾವನ್ನು ಭೂಷಣ್ ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.