ETV Bharat / entertainment

'ಬ್ಲಿಂಕ್' ರೀ ರೆಕಾರ್ಡಿಂಗ್ ಕಂಪ್ಲೀಟ್​​: ದಿಯಾ ಖ್ಯಾತಿಯ ದೀಕ್ಷಿತ್ ಶೆಟ್ಟಿ ಅಭಿನಯದ ಸಿನಿಮಾ ಆಗಸ್ಟ್​​ನಲ್ಲಿ ತೆರೆಗೆ - Blink movie

ಬ್ಲಿಂಕ್ ಚಿತ್ರದ ಆರ್ಕೆಸ್ಟ್ರಾ ಸೆಷನ್ ಭಾಗದ ರೀ ರೆಕಾರ್ಡಿಂಗ್ ಕೊಚ್ಚಿ ಸ್ಟುಡಿಯೋದಲ್ಲಿ ಪೂರ್ಣಗೊಂಡಿದ್ದು, ಆಗಸ್ಟ್ ತಿಂಗಳಲ್ಲಿ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ತಯಾರಿ ನಡೆಸುತ್ತಿದೆ.

Blink movie re-recording complete
'ಬ್ಲಿಂಕ್' ರೀ ರೆಕಾರ್ಡಿಂಗ್ ಕಂಪ್ಲೀಟ್
author img

By

Published : Jun 24, 2023, 4:01 PM IST

ಟೈಟಲ್​​, ಟೀಸರ್​ ಮೂಲಕ ಸ್ಯಾಂಡಲ್​ವುಡ್​ನಲ್ಲಿ ಸದ್ದು ಮಾಡುತ್ತಿರುವ ಸಿನಿಮಾ 'ಬ್ಲಿಂಕ್'. ದಿಯಾ ಹಾಗೂ ದಸರಾ ಸಿನಿಮಾ ಖ್ಯಾತಿಯ ನಟ ದೀಕ್ಷಿತ್ ಶೆಟ್ಟಿ ಮುಖ್ಯಭೂಮಿಕೆಯಲ್ಲಿರೋ ಸಿನಿಮಾದಲ್ಲಿ ಚೈತ್ರಾ ಜೆ ಆಚಾರ್ ಹಾಗೂ ಮಂದಾರ ಬಟ್ಟಲಹಳ್ಳಿ ನಾಯಕಿಯರು. ತಾರಾಬಳಗ, ಟೈಟಲ್​​ನಿಂದಲೇ ಗಾಂಧಿನಗರದಲ್ಲಿ ಸದ್ದು ಮಾಡುತ್ತಿರುವ 'ಬ್ಲಿಂಕ್' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ.

ಈ ಚಿತ್ರದ ಆರ್ಕೆಸ್ಟ್ರಾ ಸೆಷನ್ ಭಾಗದ ರೀ ರೆಕಾರ್ಡಿಂಗ್ ಕೊಚ್ಚಿ ಸ್ಟುಡಿಯೋದಲ್ಲಿ ಪೂರ್ಣಗೊಂಡಿದೆ. ಟರ್ಕಿ, ಅರೇಬಿಕ್, ಪಾಕಿಸ್ತಾನದ ರುಬಾಬ್ ಇನ್ಸ್ಟ್ರುಮೆಂಟ್ ಬಳಸಿ ರೀ-ರೆಕಾರ್ಡಿಂಗ್ ಮಾಡಿರೋದು ವಿಶೇಷ. ನೋಡುಗರಿಗೆ ಹೊಸ ಅನುಭವ ನೀಡುವ ಉದ್ದೇಶದಿಂದ ಬ್ಲಿಂಕ್ ಸಿನಿಮಾ ಬಳಗ ಕಂಸಾಳೆ, ಜನಪದ ಗೀತೆ ಕಂಪನ್ನು ಸಿನಿಮಾದಲ್ಲಿ ಅಳವಡಿಸಿದೆ. ಇದು ಪ್ರೇಕ್ಷಕರಿಗೆ ಹೊಸ ಫ್ಲೇವರ್ ಕೊಡಲಿದೆ ಅನ್ನೋದು ಬ್ಲಿಂಕ್​​ ಚಿತ್ರತಂಡದ ಮಾತು.

ಮಿಡಲ್ ಕ್ಲಾಸ್ ಹುಡುಗನ ಕಥೆ: ಶ್ರೀನಿಧಿ ಬೆಂಗಳೂರು ಆ್ಯಕ್ಷನ್​ ಕಟ್​​ ಹೇಳಿರುವ ಚೊಚ್ಚಲ ಚಿತ್ರವಿದು. ಮಿಡಲ್ ಕ್ಲಾಸ್ ಹುಡುಗನ ಜೀವನದಲ್ಲಿ ನಡೆಯುವ ಅನಿರೀಕ್ಷಿತ ಘಟನೆಗಳು ಹೇಗೆ ಆವನ ಸುತ್ತ ಮುತ್ತಲಿನ ವಾತಾವರಣವನ್ನು ಬದಲಿಸುತ್ತದೆ ಎಂಬುದು ಈ ಕಥೆಯ ಸಾರಾಂಶ. Sci-Fi ಶೈಲಿಯಲ್ಲಿ ಮೂಡಿಬರುತ್ತಿರುವ ಬ್ಲಿಂಕ್ ಚಿತ್ರ ದೀಕ್ಷಿತ್ ಶೆಟ್ಟಿ, ಮಂದಾರ ಬಟ್ಟಲಹಳ್ಳಿ ಹಾಗೂ ಚೈತ್ರ ಜೆ ಆಚಾರ್ ನಟಿಸುತ್ತಿದ್ದು, ಮುಖ್ಯಪಾತ್ರಗಳಲ್ಲಿ ವಜ್ರಧೀರ್ ಜೈನ್ , ಗೋಪಾಲಕೃಷ್ಣ ದೇಶಪಾಂಡೆ, ಸುರೇಶ್ ಅನಗಳ್ಳಿ ಕಾಣಿಸಿಕೊಳ್ಳಲಿದ್ದಾರೆ.

Blink movie re-recording complete
ದೀಕ್ಷಿತ್ ಶೆಟ್ಟಿ ಅಭಿನಯದ 'ಬ್ಲಿಂಕ್' ಆಗಸ್ಟ್​​ನಲ್ಲಿ ತೆರೆಗೆ

ಅವಿನಾಶ್ ಶಾಸ್ತ್ರೀ ಛಾಯಾಗ್ರಹಣ, ಪ್ರಸನ್ನ ಕುಮಾರ್ ಸಂಗೀತ, ಸಂಜೀವ್ ಜಗೀರ್ದಾರ್ ಸಂಕಲನ ಚಿತ್ರಕ್ಕಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಬ್ಲಿಂಕ್ ಸಿನಿಮಾವನ್ನು ಆಗಸ್ಟ್ ತಿಂಗಳಲ್ಲಿ ರಿಲೀಸ್ ಮಾಡಲು ಚಿತ್ರತಂಡ ತಯಾರಿ ನಡೆಸುತ್ತಿದೆ. ಶೀಘ್ರದಲ್ಲಿಯೇ ವಿಶೇಷ ಹಾಡು ಬಿಡುಗಡೆ ಮಾಡಲು ಪ್ಲಾನ್ ಹಾಕಿಕೊಂಡಿದೆ. ಜನನಿ ಪಿಕ್ಚರ್ಸ್ ಅಡಿಯಲ್ಲಿ ರವಿಚಂದ್ರ ಎ.ಜೆ ಸಿನಿಮಾ ನಿರ್ಮಿಸುತ್ತಿದ್ದಾರೆ.

ಇದನ್ನೂ ಓದಿ: ಮದುವೆಯಾಗದಿದ್ದರೆ ಹೆಣ್ಣಿಗೆ ಅಸ್ತಿತ್ವ ಇಲ್ವೇ?: ಹೆಣ್ಣುಮಕ್ಕಳ ಮೂಕವೇದನೆಗೆ ದನಿಯಾದ 'ಅಮೃತಧಾರೆ'!

ಚೈತ್ರಾ ಜೆ ಆಚಾರ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇದಕ್ಕೂ ಮುನ್ನ ಮಹಿರಾ, ತಲೆದಂಡ, ಆ ದೃಶ್ಯ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. 90ರ ದಶಕದ ಸೆಮಿ ಮಾಡರ್ನ್​ ಹಳ್ಳಿ ಹುಡುಗಿಯಾಗಿ ಬ್ಲಿಂಕ್​​ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ದೇವಕಿ ಅರಸ್ ಆಗಿ ನಟಿಸಿರುವ ಇವರದ್ದು ಎಲ್ಲರೊಂದಿಗೆ ಬಹಳ ಬೇಗ ಕನೆಕ್ಟ್ ಆಗುವ ಪಾತ್ರ. ಕೆಲ ದಿನಗಳ ಹಿಂದೆ ಅವರ ಹುಟ್ಟುಹಬ್ಬದ ಹಿನ್ನೆಲೆ ದೇವಕಿ ಅರಸ್ ಪಾತ್ರದ ಸಣ್ಣ ಝಲಕ್ ರಿವೀಲ್ ಆಗಿತ್ತು. ಇದು ಸಿನಿಪ್ರಿಯರ ಕುತೂಹಲ ಹೆಚ್ಚಿಸಿತ್ತು. ಚಿತ್ರದಲ್ಲಿ ಆರು ಪ್ರಮುಖ ಪಾತ್ರಗಳು ಇರಲಿದ್ದು, ದೀಕ್ಷಿತ್ ಶೆಟ್ಟಿ, ಚೈತ್ರಾ ಜೆ ಆಚಾರ್ ಹಾಗೂ ಮಂದಾರ ಬಟ್ಟಲಹಳ್ಳಿ ಪಾತ್ರಗಳು ಗಮನ ಸೆಳೆಯಲಿದೆ. ಸಿನಿಮಾ ಬಿಡುಗಡೆಗಾಗಿ ಪ್ರೇಕ್ಷಕರು ಕಾತರರಾಗಿದ್ದಾರೆ.

ಇದನ್ನೂ ಓದಿ: ''ಸ್ವಾತಂತ್ರ್ಯ ಅಂದ್ರೆ ಕೊಡೋದಲ್ಲ, ಕಿತ್ತುಕೊಳ್ಳೋದು": ಕುತೂಹಲ ಮೂಡಿಸಿದ ಸ್ಪೈ ಟ್ರೇಲರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.